ತಲೆಹೊಟ್ಟಿಗೆ ಅನೇಕ ರೀತಿಯ ಮನೆಯ ಔಷಧಿಗಳಿದೆ.ತುಂಬಾ ಜನರು ತಲೆಹೊಟ್ಟಿನ ಸಮಸ್ಯೆಯಿಂದ ಬಳಲುತ್ತಿರುತ್ತಾರೆ‌.ಇದಕ್ಕಾಗಿ ಸಾಕಷ್ಟು ಶಾಂಪು,ಹೇರ್ ಕಂಡೀಷನರ್ ಬಳಸಿ ಸಾಕಷ್ಟು ಹಣ ವ್ಯಯ ಮಾಡಿರುತ್ತಾರೆ.ಕೆಲವು ಔಷಧಿಗಳು ಎಲ್ಲರಿಗೂ ಕೆಲಸ ಮಾಡುವುದಿಲ್ಲ.ಇನ್ನೂ ಕೆಲವರಿಗೆ ಎಲ್ಲಾ ರೀತಿಯ ಔಷಧಿಗಳು ಕೆಲಸ ಮಾಡುತ್ತದೆ.

ಮನೆಯಲ್ಲಿ ತಯಾರಿಸಿದ ಮನೆಔಷಧಿಗಳನ್ನು ತಲೆ ಹೊಟ್ಟಿನ ಸಮಸ್ಯೆಗೆ ಬಳಸುವುದರಿಂದ ಯಾವುದೇ ಅಡ್ಡ ಪರಿಣಾಮಗಳಾಗುವುದಿಲ್ಲ.ತಪ್ಪದೇ ಈ ಮನೆಔಷಧಿಗಳನ್ನು ಮನೆಯಲ್ಲೇ ಮಾಡಿ ನೋಡಿ.ಇವುಗಳಿಂದ ಎಷ್ಟು ಉಪಯೋಗಗಳಿವೆ ಎಂದು ತಿಳಿಯೋಣ ಬನ್ನಿ.ಮೊದಲಿಗೆ ವಾರಕ್ಕೆ ಎರಡು ಬಾರಿ ನಿಂಬೆ ಹಣ್ಣಿನ ಸಿಪ್ಪೆಯನ್ನು ತೆಗೆದುಕೊಂಡು ಅದನ್ನು ತಲೆಗೆ ಚೆನ್ನಾಗಿ ಉಜ್ಜಿ ಒರೆಸಬೇಕು.ನಂತರ ಸ್ವಲ್ಪ ಸಮಯದ ನಂತರ ತಲೆಯನ್ನು ಸಾಬೂನಯ ಹಾಗೂ ನೀರನ್ನು ಹಾಕಿ ತೊಳೆಯಬೇಕು.ಎರಡನೆಯದಾಗಿ ಅಡುಗೆ ಒಪ್ಪನ್ನು ಸ್ವಲ್ಪ ನೀರಿನಲ್ಲಿ ಕರಗಿಸಿ ಆ ದ್ರವವನ್ನು ಉಪಯೋಗಿಸಿಕೊಂಡು ತಲೆಯನ್ನು ತೊಳೆಯುತ್ತಾ ಬಂದರೆ ತಲೆ ಹೊಟ್ಟು ಹೋಗುವುದಲ್ಲದೆ ತಲೆಕೂದಲು ಉದರುವ ಸಮಸ್ಯೆಗಳಿಂದ ಮುಕ್ತಿಹೊಂದಬಹುದು.

ಮೂರನೆದಾಗಿ ಮೂರು ದಿನ ಹಳೆಯ ಮೊಸರನ್ನು ಪ್ರಿಡ್ಜ ನಲ್ಲಿ ಇಟ್ಟಿರದ ಮೊಸರನ್ನು ತೆಗೆದುಕೊಳ್ಳಿ.ನಂತರ ಅದನ್ನು ತಲೆಗೆ ಅರ್ಧ ಗಂಟೆ ಬಿಡಬೇಕು ನಂತರ ಸೋಪ್ ಬಳಸಿ ತಲೆ ಸ್ವಚ್ಛಗೊಳಿಸಿದರೆ ತಲೆಹೊಟ್ಟಿನ ಸಮಸ್ಯೆ ದೂರಾಗುವುದು ಖಚಿತ.ನೆಲ್ಲಿಕಾಯಿ ಹಾಗೂ ಮೆಂತ್ಯೆ ಸಹ ತಲೆಹೊಟ್ಟಿನ ನಿವಾರಣೇ ಬಳಸಬಹುದು‌.ಒಂದು ಬಾರಿ ಔಷಧಿಯಿಂದ ತಲೆಯ ಹೊಟ್ಟನ್ನು ನಿಯಂತ್ರಿಸಿದ ನಂತರ ಮನೆಮದ್ದುಗಳನ್ನು ಬಳಸುವುದು ತುಂಬಾ ಒಳ್ಳೆಯದು.ಮೊಟ್ಟೆಯ ಬಿಳಿ ಭಾಗವನ್ನು ಹುಳಿ ಮೊಸರಿನೊಂದಿಗೆ ಬೆರೆಸಿ ತಲೆಗೆ ಹಚ್ಚಿ ಸ್ನಾನ ಮಾಡಿದರೆ ತಲೆಯ ಹೊಟ್ಟಿನ ಸಮಸ್ಯೆಯಿಂದ ದೂರಾಗಬಹುದು.

ದಾಸವಾಳ ಗಿಡವೂ ಬೀದಿಗೆ ಒಂದುಂತೆ ಇದ್ದೆ ಇರುತ್ತದೆ ಹಾಗಾಗಿ ಕೆಂಪು ದಾಸವಾಳದ ಎಲೆಗಳನ್ನು ತೆಗೆದುಕೊಂಡು ನೀರಿನಲ್ಲಿ ಚೆನ್ನಾಗಿ ತೊಳೆದು ಆ ಎಲೆಗಳನ್ನು ಅರೆದುಕೊಂಡು ತಲೆಗೆ ಹಚ್ಚಿ ಅರ್ಧ ಗಂಟೆಗಳ ಕಾಲ ಬಿಡಬೇಕು.ತದನಂತರ ಸ್ನಾನ ಮಾಡಬೇಕು‌.ಹೀಗೆ ಒಂದೆರೆಡು ಕಾಲಗಳ ಕಾಲ ಮಾಡುತ್ತಾ ಬಂದರೆ ತಲೆಯಲ್ಲಿನ ಹೊಟ್ಟು ಮಾಯವಾಗುವುದು ಖಚಿತ.ಕೊಬ್ಬರಿ ಎಣ್ಣೆಯಲ್ಲಿ‌ ಮೆಂತೆಯ ಬೀಜಗಳನ್ನು ನೆನೆಸಿಟ್ಟು ಅದನ್ನು ತಲೆಗ ಹಚ್ಚಿದರೆ ತಲೆಯು ತಂಪಾಗುತ್ತದೆ.

ಮೂರರಿಂದ ನಾಲ್ಕು ಗಂಟೆಗಳ ಸಮಯ ಮೆಂತೆ ಕಾಳುಗಳನ್ನು ನೀರನಲ್ಲಿ ನೆನೆಸಿ,ನೆನಸಿದ ಕಾಳುಗಳನ್ನು ಬೇವಿನ ಎಲೆಗೆ ಸೇರಿಸಿ.ಕೆಲವು ಹನಿ ನೀರನ್ನು ಹಾಕಿ ಅದನ್ನು ಪೇಸ್ಟ್ ಮಾಡಿರಿ.ಪೇಸ್ಟ ಮೃದುವಾಗಿ ಮಾಡಿಕೊಳ್ಳಿ ನಂತರ ಅದಕ್ಕೆ ನಿಂಬೆ ಹಾಗೂ ಮೊಸರು ಹಾಕಿರಿ.ಈ ಮಿಶ್ರಣವನ್ನು ತಲೆಗೆ ಹಾಕಿ‌ ಒಂದು ಗಂಟೆಗಳ ಕಾಲ ಬಿಡಿ.ನಂತರ ತೊಳೆಯಿರಿ.ವಾರಕ್ಕೆ ಎರಡು ಬಾರಿ ಈ ರೀತಿಯಾಗಿ ಮಾಡಿದರೆ ತಲೆಯ ಹೊಟ್ಟಿನಿಂದ ದೂರವಾಗಬಹುದು.ಒಂದು ಚಮಚದಷ್ಟು ಮೆಂತೆಯ ಕಾಳುಗಳನ್ನು ನೀರಿನಲ್ಲಿ ನೆನೆಸಿ ರಾತ್ರಿಯೇ ಇಡಬೇಕು.

ಬೆಳಿಗ್ಗೆ ಅದನ್ನು ಅರೆದು ಮಿಶ್ರಣ ತಯಾರಿಸಿ.ಇದಕ್ಕೆ ಲೋಳೆರಸದ ಒಂದು ತುಂಡನ್ನು ಸೇರಿಸಿ ಮತ್ತೊಂದು ಬಾರಿ ಪೇಸ್ಟ್ ಮಾಡಿಕೊಳ್ಳಬೇಕು.ಈ ಪೇಸ್ಟ್ ಅನ್ನು ತಲೆಗೆ ಹಚ್ವಿ ಇಪ್ಪತ್ತು ನಿಮಿಷದ ನಂತರ ತೊಳೆಯಿರಿ ಸಾಕು ತಲೆಯ ಹೊಟ್ಟು ನಿವಾರಣೆ ಆಗೋದು ಗ್ಯಾರೆಂಟಿ.

Leave a Reply

Your email address will not be published. Required fields are marked *