Categories
ನ್ಯೂಸ್ ಭಕ್ತಿ

ಶಿವ ಹನುಮನ ನಡುವೆ ನಡೆದಿದ್ದ ಯುದ್ದದ ಬಗ್ಗೆ ನಿಮಗೆ ಗೊತ್ತಾ….! ಅದಕ್ಕೆ ಕಾರಣ ಇಲ್ಲಿದೆ

ರಾಮಾಯಣ ಅಂದರೆ ನಮಗೆ ರಾಮ ಲಕ್ಷ್ಮಣ ಸೀತೆ ವನವಾಸ ರಾಮ ಸೇತುವೆ ರಾವಣ ಲಂಕೆ ಇವುಗಳೇ ನೆನಪಾಗುತ್ತದೆ ಆದರೆ ರಾಮಾಯಣದಲ್ಲಿ ಶಿವ ಮತ್ತು ಹನುಮನ ನಡುವೆ ನಡೆಯುವ ಯುದ್ಧದ ಬಗ್ಗೆ ಸಾಕಷ್ಟು ಜನರಿಗೆ ತಿಳಿದಿರುವುದಿಲ್ಲ ರಾಮಾಯಣದಲ್ಲಿ ಶಿವ ಬರುತ್ತಾನೆಯೇ ಅಂತ ಅಂದುಕೊಳ್ತಾರೆ ಆದರೆ ಉತ್ತರ ರಾಮಾಯಣದಲ್ಲಿ ನಡೆದ ಈ ಒಂದು ಯುದ್ಧವು ಇಡೀ ಜಗತ್ತಿಗೆ ಏನನ್ನೋ ಸಾರಿತು .

ಅಂದರೆ ದೇವನೊಬ್ಬ ನಾಮ ಹಲವು ಎಂಬ ತತ್ವವನ್ನು ಸಾರಿತು ಹಾಗಾದರೆ ಈ ಯುದ್ಧವನ್ನು ಕುರಿತು ಇನ್ನಷ್ಟು ಮಾಹಿತಿಯನ್ನು ತಿಳಿಯೋಣ ಬನ್ನಿ ವೀಕ್ಷಕರ ಇಂದಿನ ಈ ಮಾಹಿತಿಯಲ್ಲಿ ಸಂಪೂರ್ಣ ಮಾಹಿತಿಯನ್ನು ತಿಳಿದು ಈ ಒಂದು ರಾಮಾಯಣ ಕಥೆಯನ್ನು ಪ್ರತಿಯೊಬ್ಬರಿಗೂ ಶೇರ್ ಮಾಡಿ.

ಹೌದು ಉತ್ತರ ರಾಮಾಯಣದಲ್ಲಿ ಬರುವ ಈ ಒಂದು ಯುದ್ಧ ಕಥೆ ಅನೇಕ ಜನರಿಗೆ ತಿಳಿದಿಲ್ಲ, ರಾಮನು ನಡೆಸಿದ ಅಶ್ವಮೇಧ ಯಾಗದಲ್ಲಿ ಹನುಮಂತ ಶತ್ರುಘ್ಞ ಜೊತೆ ಪುಷ್ಕಲ ಕೂಡ ಇದ್ದರು, ಈ ಪುಷ್ಕಲ ಭರತನ ಮಗ. ಅಶ್ವಮೇಧ ಯಾಗದಲ್ಲಿ ಹನುಮಂತ ನೊಂದಿಗೆ ತಾನು ಹೋಗುತ್ತೇನೆ ಎಂದು ಹಠ ಹಿಡಿದ ಪುಷ್ಕಲ ಹನುಮಾನ ಜೊತೆ ಹೊರಟು ನಿಂತನು ಈತ ಬಾಲಕನ ಆಗಿದ್ದರೂ ಬಹಳ ಶಕ್ತಿಶಾಲಿಯಾಗಿದ್ದ ಈ ಅಶ್ವಮೇಧ ಯಾಗದಲ್ಲಿ ಹನುಮನು ಪ್ರತಿ ರಾಜ್ಯಗಳನ್ನು ರಾಜಕುಮಾರರನ್ನು ಗೆಲ್ಲುತ್ತಾ ಬರುತ್ತಾನೆ.

ಅಶ್ವಮೇಧ ಯಾಗ ನಡೆಯುತ್ತಾ ಈ ಅಶ್ವ ವಿಂಧ್ಯಾ ಪರ್ವತ ಶ್ರೇಣಿಯ ಕಡೆ ನಡೆಯಿತು ಅಲ್ಲಿಯೇ ಇದ್ದ ದೇವಪುರ ಎಂಬ ರಾಜ್ಯಕ್ಕೆ ನಡೆದ ಈ ಅಶ್ವ ಆ ರಾಜ್ಯದ ರಾಜನಾದ ವೀರಮಣಿಯ ಮಗ ಅಶ್ವವನ್ನು ಕಟ್ಟಿ ಹಾಕಿದ್ದ ಇದನ್ನು ತಿಳಿದ ಹನುಮನು ರಾಜನೊಂದಿಗೆ ವಾಗ್ವಾದವನ್ನು ನಡೆಸಿ ರಾಮನ ಅಷ್ಟಕ್ಕೆ ಶರಣಾಗುವಂತೆ ಹೇಳಿದರು, ಆದರೆ ಈ ವೀರಮಣಿ ರಾಜನು ಶಿವನ ಪರಮ ಭಕ್ತನಾಗಿದ್ದು, ಅಶ್ವಕ್ಕೆ ಶರಣಾಗತಿಯಾಗಲು ಒಪ್ಪುವುದಿಲ್ಲ ನಂತರ ಹನುಮ ಯುದ್ಧವನ್ನು ಸಾರುತ್ತಾನೆ.

ರಾಮ ಬಂಟ ಹನುಮನ ಶಕ್ತಿಯನ್ನು ತಿಳಿದಿದ್ದ ವೀರಮಣಿ ರಾಜನು ಈಶ್ವರನ ಮೊರೆ ಹೋಗುತ್ತಾನೆ ಸಹಾಯವನ್ನು ಕೋರುತ್ತಾನೆ, ಸಾಕ್ಷಾತ್ ಶಿವನು ತನ್ನ ಭಕ್ತನಿಗಾಗಿ ತನ್ನ ಅಂಶವಾದ ವೀರಭದ್ರನನ್ನು ನದಿಯೊಂದಿಗೆ ಯುದ್ಧಕ್ಕೆ ಕಳುಹಿಸುತ್ತಾರೆ ಇದೀಗ ಹನುಮ ಮತ್ತು ಶಿವನ ಅಂಶವಾದ ವೀರಭದ್ರನ ನಡುವೆ ದೊಡ್ಡ ಕಾಳಗವೇ ನಡೆಯಿತು. ಈ ಯುದ್ಧವನ್ನು ತಣಿಸಲು ಸಾಕ್ಷಾತ್ ಪಾರ್ವತಿಯೇ ಭೂಮಿಗಿಳಿದು ಬಂದರೂ ಈ ಯುದ್ಧ ಮಾತ್ರ ನಿಂತಿರಲಿಲ್ಲ.

ವೀರಭದ್ರನ ಶಕ್ತಿಗೆ ಪುಷ್ಕಲ ಯುದ್ಧದಲ್ಲಿ ಸಾಯಬೇಕಾಯಿತು ಇದನ್ನು ತಿಳಿದ ಹನುಮನು ತನ್ನಲ್ಲಿ ಶಕ್ತಿ ಕುಂದಿದ್ದರು ಗ್ರಾಮ ಭಕ್ತಿಯಿಂದ ಯುದ್ಧವನ್ನು ಮುನ್ನಡೆಸುತ್ತಾನೆ ಕೊನೆಗೂ ಈ ಯುದ್ಧದಲ್ಲಿ ಹನುಮನೇ ಗೆಲ್ಲುತ್ತಾ ನಾಕ್ಸ್ ಇದನ್ನು ಕಂಡ ಸಾಕ್ಷಾತ್ ಈಶ್ವರನೇ ಪ್ರತ್ಯಕ್ಷನಾಗಿ ಹನುಮನ ರಾಮಭಕ್ತಿಗೆ ಮೆಚ್ಚುತ್ತಾರೆ, ನಂತರ ರಾಮ ಪ್ರತ್ಯಕ್ಷರಾಗಿ ತನ್ನ ಚೈತನ್ಯದಿಂದ ಈಶ್ವರನ ಅಂಶವಾದ ವೀರಭದ್ರನ ಕೋಪವನ್ನು ಥಣಿಸುತ್ತಾರೆ.

ಈ ಯುದ್ಧವು ಸಾಕ್ಷಾತ್ ಪರಮೇಶ್ವರನೇ ಆಟವಾಗಿದ್ದು ಇದು ಜಗತ್ತಿಗೆ ಸಾಗುವುದೆಂದರೆ ನಾಮ ಹಲವು ದೇವನೊಬ್ಬ ಎಂಬುದನ್ನು ಹಾಗಾದರೆ ಈ ಮಾಹಿತಿಯನ್ನು ಕುರಿತು ನಿಮ್ಮ ಅನಿಸಿಕೆ ಏನು ಎಂಬುದನ್ನು ತಪ್ಪದೇ ಕಾಮೆಂಟ್ ಮಾಡಿ ಮತ್ತು ಈ ಒಂದು ಕಥೆಯು ನೈಜ ಘಟನೆಯೋ ಅಥವಾ ಬರೀ ಕಥೆಯೋ ಎಂಬುದನ್ನು ನಾವು ಹೇಳುವುದಕ್ಕೆ ಆಗುವುದಿಲ್ಲ ಆದರೆ ಈ ಯುದ್ಧದ ಮಹತ್ವವನ್ನು ಮಾತ್ರ ನಾವು ತಿಳಿದುಕೊಳ್ಳಬೇಕಾಗಿದೆ ಅಷ್ಟೇ.

Leave a Reply

Your email address will not be published. Required fields are marked *