Categories
ನ್ಯೂಸ್ ಭಕ್ತಿ

ಪೂರ್ವ ದಿಕ್ಕಿನಲ್ಲಿ ಕುಳಿತುಕೊಂಡು ಪಂಚಮುಖಿ ಜಪ ಮಾಲೆಯಿಂದ ಹೀಗೆ ಮಾಡಿದರೆ ನಿಮಗೆ ಬೆಟ್ಟದಷ್ಟು ಧೈರ್ಯ ಬಲ ಧನಪ್ರಾಪ್ತಿ

ಮನುಷ್ಯನ ಜೀವನದಲ್ಲಿ ಏಳಿಗೆ ಕಾಣಬೇಕಾದರೆ ಆತ ಯಾವುದೇ ಕೆಲಸವನ್ನು ಮುಂದಾಗಿ ಮಾಡಬೇಕಾದರೆ ಯಾವುದೇ ಸಾಧನೆಯನ್ನು ಮಾಡಬೇಕಾದರೆ ಅವನಲ್ಲಿ ಆತ್ಮವಿಶ್ವಾಸವೂ ಇರಬೇಕು ಈ ಆತ್ಮವಿಶ್ವಾಸದಿಂದಲೇ ಅವನು ಜೀವನದಲ್ಲಿ ಮುಂದೆ ಬರಲು ಸಾಧ್ಯ ಆ ಆತ್ಮವಿಶ್ವಾಸವಿದ್ದರೆ ಅವನು ಈ ಜಗತ್ತನ್ನು ಗೆಲ್ಲಲು ಸಾಧ್ಯ ಆದರೆ ಆತ್ಮ ವಿಶ್ವಾಸವೇ ಇಲ್ಲವಾದರೆ, ನಾವು ಯಾವುದೇ ಒಂದು ಕೆಲಸವನ್ನು ಶುರು ಮಾಡಬೇಕಾದರೆ,

ನಮಗೆ ಬೇಕಾಗಿರುವುದು ಹಣ ಆಸ್ತಿ ಅಥವಾ ಬೇರೇನೂ ಅಲ್ಲ ಯಾವುದೇ ಕೆಲಸವನ್ನು ಶುರು ಮಾಡಬೇಕಾದರೂ ಕೂಡ ನಮ್ಮಲ್ಲಿ ಮೊದಲು ಆತ್ಮವಿಶ್ವಾಸವಿರಬೇಕು ಆಗಲೇ ನಾವು ಆ ಕೆಲಸವನ್ನು ಎಷ್ಟೇ ಕಷ್ಟ ಬಂದರೂ ಎಷ್ಟೇ ಕಷ್ಟ ಆದರೂ ಮಾಡುತ್ತೇವೆ ಅನ್ನುವ ನಂಬಿಕೆ ಇರುವುದು ಆದ ಕಾರಣ ಜೀವನದಲ್ಲಿ ಆತ್ಮವಿಶ್ವಾಸ ವೆಂಬುದು ಇರಬೇಕು.

ಕೆಲವರು ಯಾವುದೇ ಕೆಲಸವನ್ನು ಮಾಡಬೇಕಾದರೂ ಮೊದಲಿಗೆ ಆಗುವುದಿಲ್ಲ ಅನ್ನುವ ಪದದಿಂದಲೇ ಶುರು ಮಾಡುತ್ತಾರೆ ಇದಕ್ಕೆ ಕಾರಣವೇನು ಅಂದರೆ ಅವನಲ್ಲಿರುವ ಆತ್ಮವಿಶ್ವಾಸದ ಕೊರತೆಯಿಂದ, ಹಾಗಾದರೆ ಆತ್ಮವಿಶ್ವಾಸವನ್ನು ಹೇಗೆ ವೃದ್ಧಿಸಿಕೊಳ್ಳುವುದು ಅಂತ ನೀವು ನಿಮ್ಮನ್ನು ಕೇಳಿಕೊಳ್ಳುತ್ತಾ ಇದ್ದರೆ ಅದಕ್ಕೂ ಕೂಡ ಪರಿಹಾರವಿದೆ ಈ ಆತ್ಮವಿಶ್ವಾಸ ವೆಂಬುದು ನಾವು ಅಂದು ಕೂಡಲೇ ಬಂದು ಬಿಡುವ ವಿಚಾರವಲ್ಲ ಈ ಆತ್ಮವಿಶ್ವಾಸವನ್ನು ನಾವು ಪಡೆದುಕೊಳ್ಳಬೇಕಾದರೆ ಅದಕ್ಕೂ ಕೂಡ ಶ್ರಮಿಸಬೇಕು ಶ್ರಮದಿಂದ ಈ ಆತ್ಮವಿಶ್ವಾಸ ಬೆಳೆಯುತ್ತದೆ.

ಆತ್ಮವಿಶ್ವಾಸವನ್ನು ಪಡೆದುಕೊಳ್ಳಬೇಕಾದರೆ ನಾವು ನಮ್ಮ ಜೀವನದಲ್ಲಿ ಆಂಜನೇಯ ಸ್ವಾಮಿಯನ್ನು ಕುರಿತು ಧ್ಯಾನಿಸಬೇಕು ಅವನ ನಾಮ ಸ್ಮರಣೆಯನ್ನು ಮಾಡಬೇಕು ಹಾಗೆ ಆಂಜನೇಯ ಸ್ವಾಮಿ ಧೈರ್ಯಕ್ಕೆ ಪ್ರತೀಕ, ಆಂಜನೇಯ ಸ್ವಾಮಿಯೂ ಚಿರಂಜೀವಿ ಇವರ ಪೂಜೆ ಮಾಡುವುದರಿಂದ ಇವರನ್ನು ಜಪಿಸುವುದರಿಂದ ನಮ್ಮಲ್ಲಿ ಆತ್ಮವಿಶ್ವಾಸವೂ ಇಮ್ಮಡಿಯಾಗುತ್ತೆ ಧೈರ್ಯವೂ ಹೆಚ್ಚುತ್ತದೆ ಹಾಗೇ ಆಂಜನೇಯ ಸ್ವಾಮಿಯ ಈ ಒಂದು ಮಂತ್ರವನ್ನು ದಿನಕ್ಕೆ ನೂರಾ ಎಂಟು ಬಾರಿ ಪಠಿಸುತ್ತಾ ಬರುವುದರಿಂದ ನಮ್ಮಲ್ಲಿ ಅನೇಕ ಬದಲಾವಣೆಗಳು ಕೂಡ ಆಗುತ್ತದೆ.

ಆ ಒಂದು ಮಂತ್ರ ಹೀಗಿದೆ ” ಓಂ ಹೂಂ ಓಂ ಹೂಂ ಓಂ ಹನುಮತೆ ನಮಃ ” ಈ ಒಂದು ಮಂತ್ರವನ್ನು ದಿನಕ್ಕೆ ನೂರಾ ಎಂಟು ಬಾರಿ ಜಪಿಸಿ ಹಾಗಾದರೆ ಈ ಮಂತ್ರವನ್ನು ಹೇಗೆ ಜಪಿಸಬೇಕು ಯಾವಾಗ ಶಪಿಸಬೇಕು ಅಂದರೆ ಬೆಳಿಗ್ಗೆ ಸೂರ್ಯೋದಯದ ಸಮಯದಲ್ಲಿ ಪೂರ್ವ ದಿಕ್ಕಿನೆಡೆ ಮುಖ ಮಾಡಿ ಕುಳಿತು ಆಂಜನೇಯ ಸ್ವಾಮಿಯನ್ನು ಜಪಿಸಬೇಕು ಹಾಗೆ ಈ ಜಪಿಸುವ ವಿಧಾನವು ಹೇಗೆ ಅಂದರೆ ಜಪಮಣಿಯನ್ನು ಹಿಡಿದು ಜಪ ಮಾಣಿಯಲ್ಲಿ ಇರುವ ನೂರಾ ಎಂಟು ಮಣಿಗಳನ್ನು ಸ್ಪರ್ಶಿಸುತ್ತಾ ಇದನ್ನು ಎಣಿಸುತ್ತಾ ಆಂಜನೇಯ ಸ್ವಾಮಿ ನಾಮವನ್ನು ಸ್ಮರಿಸಬೇಕು ಹಾಗೆ ನಾವು ಈ ಮೇಲೆ ತಿಳಿಸಿದ ಮಂತ್ರವನ್ನು ಪಠಿಸಬೇಕು.

ಹೂಂ ಎಂದು ನಾವು ಅಂದಾಗ ನಮ್ಮ ಶ್ವಾಸಕೋಶದಿಂದ ಈ ಪದ ಹೊರ ಬರುತ್ತದೆ ಆಗ ನಮ್ಮಲ್ಲಿ ಪಾಸಿಟಿವ್ ಎನರ್ಜಿ ಹೆಚ್ಚುತ್ತದೆ ಹಾಗೇ ಜಪಮಣಿಯನ್ನು ಎಣಿಸುವಾಗ ನಮ್ಮ ಜೀವಕೋಶಗಳಿಗೆ ಒಂದು ರೀತಿಯ ಸಕಾರಾತ್ಮಕತೆ ಪಸರಿಸಿ ಇದು ಕೂಡ ನಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಲು ಸಹಕರಿಸುತ್ತದೆ. ಬೆಳಿಗ್ಗೆ ಎದ್ದು ಆಂಜನೇಯ ಸ್ವಾಮಿಯ ನಾಮಸ್ಮರಣೆ ಮಾಡುವುದರಿಂದ ಏಕಾಗ್ರತೆ ಹೆಚ್ಚುವುದಲ್ಲದೆ ನಮ್ಮ ಆರೋಗ್ಯವೂ ಕೂಡ ವೃದ್ಧಿಯಾಗುತ್ತದೆ.

ನಿಮ್ಮಲ್ಲಿಯೂ ಕೂಡ ಆತ್ಮವಿಶ್ವಾಸದ ಕೊರತೆ ಇದ್ದರೆ ಈಗಲೇ ಈ ಒಂದು ಪರಿಹಾರವನ್ನು ಕೈಗೊಳ್ಳಿ ನಿಮ್ಮ ಜೀವನದಲ್ಲಿ ನೀವು ಏನು ಬೇಕಾದರೂ ಸಾಧಿಸುವಷ್ಟು ಹುಮ್ಮಸ್ಸು ನಿಮ್ಮಲ್ಲಿ ಹೆಚ್ಚುತ್ತದೆ, ಈ ಮಾಹಿತಿಯನ್ನು ಕುರಿತು ನಿಮ್ಮ ಅನಿಸಿಕೆಯನ್ನು ನಮಗೆ ಕಾಮೆಂಟ್ ಮಾಡಿ ಧನ್ಯವಾದ.

Leave a Reply

Your email address will not be published. Required fields are marked *