Categories
ನ್ಯೂಸ್ ಭಕ್ತಿ

ಯಾವುದೇ ಕಾರಣಕ್ಕೂ ಈ ದಿಕ್ಕಿನಲ್ಲಿ ಮಲಗಬೇಡಿ …! ಹಾಗೇನಾದ್ರೂ ಮಾಡಿದ್ರೆ ಭಿಕ್ಷೆ ಬೇಡುವ ಸ್ಥಿತಿಗೆ ತಲುಪುತ್ತೀರಾ …!

ಮನುಷ್ಯನ ಜೀವನದಲ್ಲಿ ನಿದ್ರೆ ಎಂಬುದು ಅದೆಷ್ಟು ಅವಶ್ಯಕ ಅಂದರೆ ಈ ನಿದ್ರೆಯೂ ಮನುಷ್ಯನ ಒಂದು ಅವಿಭಾಜ್ಯ ಅಂಗವೇ ಆಗಿಬಿಟ್ಟಿದೆ. ಆದ ಕಾರಣ ಮನುಷ್ಯನು ಉತ್ತಮ ಆರೋಗ್ಯಕ್ಕಾಗಿ ದಿನದಲ್ಲಿ ಎಂಟು ಗಂಟೆಗಳ ಕಾಲ ಸುಖ ನಿದ್ರೆಯನ್ನು ಮಾಡುವುದು ಒಳ್ಳೆಯದು ಹಾಗೆ ಇದು ಅವನ ದೈನಂದಿನ ಚಟುವಟಿಕೆಯಲ್ಲಿ ಉತ್ಸಾಹದಿಂದ ಪಾಲ್ಗೊಳ್ಳಲು ಕೂಡ ಸಹಕರಿಸುತ್ತದೆ ಹೌದು ದಿನವಿಡೀ ಕೆಲಸ ಮಾಡಿ ಸುಸ್ತಾಗಿರುವ ದೇಹಕ್ಕೆ,

ವಿಶ್ರಾಂತಿ ಎಂಬುದು ದೊರೆಯದು ನಿದ್ರೆಯ ಸಮಯದಲ್ಲಿ ಈ ನಿದ್ರೆ ಸರಿಯಾಗಿ ಆಗದೇ ಇದ್ದಾಗ ನಮ್ಮ ಆರೋಗ್ಯದ ಮೇಲೆ ಇದು ಅಡ್ಡ ಪರಿಣಾಮವನ್ನು ಬೀರುವ ಸಾಧ್ಯತೆ ಇರುತ್ತದೆ ಹಾಗೆ ನಾವು ಮಾರನೆ ದಿವಸ ಎದ್ದಾಗ ದಿನವಿಡೀ ಕಿರಿಕಿರಿಯ ಅನುಭವವಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ ಆದ ಕಾರಣ ನಿದ್ರಿಸುವಾಗ ಪರಿಪೂರ್ಣ ನಿದ್ರೆ ಮಾಡುವುದು ಉತ್ತಮ ಹಾಗೂ ಆರೋಗ್ಯಕ್ಕೂ ಒಳ್ಳೆಯದು.

ಜ್ಯೋತಿಷ್ಯಶಾಸ್ತ್ರವು ಹೇಳುತ್ತದೆ ಮಲಗುವಾಗ ಮಲಗುವ ದಿಕ್ಕನ್ನು ಆಧರಿಸಿಯೂ ಕೂಡ ನಾವು ಕೆಲವೊಂದಿಷ್ಟು ವಿಚಾರಗಳನ್ನು ಪರಿಗಣಿಸಬೇಕಾಗುತ್ತದೆ ಹಾಗೆ ಈ ಒಂದು ವಿಚಾರವನ್ನು ವೈಜ್ಞಾನಿಕವಾಗಿಯೂ ಕೂಡ ದೃಢ ಪಡಿಸಲಾಗಿದ್ದು ಯಾವ ದಿಕ್ಕಿನಲ್ಲಿ ತಲೆಯನ್ನು ಹಾಕಿ ಮಲಗುವುದರಿಂದ ,

ಒಳ್ಳೆಯದು ಯಾವ ದಿಕ್ಕಿನಲ್ಲಿ ತಲೆಯನ್ನು ಹಾಕಿ ಮಲಗಬಾರದು ಎಂಬುದನ್ನು ಕೂಡ ನಾವು ತಿಳಿದುಕೊಂಡಿರುವುದು ಅತ್ಯವಶ್ಯಕವಾಗಿದೆ. ಹಾಗಾದರೆ ಇಂದಿನ ಮಾಹಿತಿಯಲ್ಲಿ ತಿಳಿಯೋಣ ಯಾವ ದಿಕ್ಕಿನಲ್ಲಿ ತಲೆಯನ್ನು ಇರಿಸಿ ಮಲಗುವುದರಿಂದ ಯಾವೆಲ್ಲ ಲಾಭಗಳು ಆಗುತ್ತದೆ ಎಂಬುದನ್ನು.

ಮೊದಲನೆಯದಾಗಿ ಉತ್ತರ ದಿಕ್ಕು ಜ್ಯೋತಿಷ್ಯಶಾಸ್ತ್ರವು ತಿಳಿಸುವ ಹಾಗೆ ಉತ್ತರ ದಿಕ್ಕಿನಲ್ಲಿ ತಲೆಯನ್ನು ಹಾಕಿ ಮಲಗಬಾರದು ಹಾಗೆ ವೈಜ್ಞಾನಿಕವಾಗಿಯೂ ಕೂಡ ಇದನ್ನೇ ಹೇಳಲಾಗುತ್ತದೆ ಯಾಕೆ ಅಂದರೆ, ಭೂಮಿಯ ಗುರುತ್ವಾಕರ್ಷಣೆಯ ಉತ್ತರ ದಿಕ್ಕಿನಲ್ಲಿ ಹೆಚ್ಚಾಗಿದ್ದು ಈ ಉತ್ತರ ದಿಕ್ಕಿನಿಂದಲೇ ಗುರುತ್ವಾಕರ್ಷಣೆ ಮತ್ತು ಮ್ಯಾಗ್ನೆಟಿಕ್ ಪವರ್ ದಕ್ಷಿಣದ ಕಡೆ ಪಸರಿಸುತ್ತದೆ ಈ ಕಾರಣದಿಂದಾಗಿ ನಾವು ಉತ್ತರ ದಿಕ್ಕಿನಲ್ಲಿ ತಲೆಯನ್ನು ಹಾಕಿ ಮಲಗುವುದರಿಂದ ನಮ್ಮಲ್ಲಿರುವ ಶಕ್ತಿ ಕ್ಷೀಣಿಸುವ ದಲ್ಲದೆ ನೆಗೆಟಿವಿಟಿ ಹೆಚ್ಚುತ್ತದೆ ಎಂದು ಹೇಳಲಾಗುತ್ತದೆ.

ಇನ್ನು ದಕ್ಷಿಣ ದಿಕ್ಕಿನಲ್ಲಿ ಮನೆಯ ಹಿರಿಯರು ಅಂದರೆ ಮುಖ್ಯ ಸದಸ್ಯರು ದಕ್ಷಿಣ ದಿಕ್ಕಿನಲ್ಲಿ ತಲೆಯನ್ನು ಇರಿಸಿ ಮಲಗುವುದರಿಂದ ಮನೆಗೆ ಏಳಿಗೆಯಾಗುವುದಿಲ್ಲ ನಿಮ್ಮ ಕೆಲಸಗಳು ಕೂಡಾ ಚೆನ್ನಾಗಿ ಸಾಗುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರವೂ ತಿಳಿಸುತ್ತಿದೆ.

ಪೂರ್ವ ದಿಕ್ಕಿನಲ್ಲಿ ಹೆಚ್ಚಾಗಿ ವಿದ್ಯಾರ್ಥಿಗಳು ಕಲೆಯನ್ನು ಇಟ್ಟು ಮಲಗುವುದರಿಂದ ನೆನಪಿನ ಶಕ್ತಿ ವೃದ್ಧಿಸುತ್ತದೆ ಹಾಗೆ ಪಾಸಿಟಿವಿಟಿ ಎಂಬುದು ಈ ಪೂರ್ವ ದಿಕ್ಕಿನಲ್ಲಿ ತಲೆಯನ್ನು ಹಾಕಿ ಮಲಗುವುದರಿಂದ ಹೆಚ್ಚುತ್ತದೆ, ಆದ ಕಾರಣ ಮಲಗುವಾಗ ಯಾವ ದಿಕ್ಕಿನಲ್ಲಿ ತಲೆಯನ್ನು ಹಾಕಿ ಮಲಗುವುದು ಶ್ರೇಷ್ಠ ಅಂತ ನೀವು ಕೇಳುವುದಾದರೆ ಪೂರ್ವ ದಿಕ್ಕು ಶ್ರೇಷ್ಠ ದಿಕ್ಕು ತಲೆಯನ್ನು ಇರಿಸುವುದಕ್ಕೆ ಅಂತ ಹೇಳಲಾಗಿದೆ.

ಇನ್ನು ಪಶ್ಚಿಮ ದಿಕ್ಕಿನ ವಿಚಾರಕ್ಕೆ ಬಂದರೆ ಈ ದಿಕ್ಕಿನಲ್ಲಿ ತಲೆಯನ್ನು ಹಾಕುವುದು ಅಷ್ಟೊಂದು ಒಳ್ಳೆಯದೇನೂ ಅಲ್ಲ ಆದರೂ ಕೂಡ ಪಶ್ಚಿಮ ದಿಕ್ಕಿಗೆ ತಲೆಯನ್ನು ಹಾಕಿ ಮಲಗುವುದರಿಂದ ಸಾಲವಾದ ಸಮಸ್ಯೆ ನಿವಾರಣೆಯಾಗುವುದರ ಜೊತೆಗೆ ನಾವು ಅಂದುಕೊಂಡ ಕೆಲಸ ಕಾರ್ಯಗಳು ಕೈಗೊಳ್ಳುತ್ತದೆ ಎಂದು ಹೇಳಲಾಗಿದೆ. ಒಟ್ಟಾರೆಯಾಗಿ ಮನೆಯಲ್ಲಿ ಚಿಕ್ಕ ಮಕ್ಕಳು ವಿದ್ಯಾರ್ಥಿಗಳು ಪೂರ್ವ ದಿಕ್ಕಿನಲ್ಲಿ ತಲೆಯನ್ನು ಇರಿಸಿ ಮಲಗುವುದರಿಂದ ಒಳ್ಳೆಯದು ಹಾಗೆ ಮನೆಯ ಹಿರಿಯರು ದಕ್ಷಿಣ ದಿಕ್ಕಿಗೆ ತಲೆಯನ್ನು ಇರಿಸಿ ಮಲಗುವುದರಿಂದ ಸಾಲಬಾಧೆ ಸಮಸ್ಯೆ ಹಣಕಾಸಿನ ಸಮಸ್ಯೆಗಳು ಕಡಿಮೆ ಆಗುತ್ತಾ ಬರುತ್ತದೆ ಎಂದು ಹೇಳಲಾಗಿದೆ.

Leave a Reply

Your email address will not be published. Required fields are marked *