Categories
ಅರೋಗ್ಯ ಆರೋಗ್ಯ ನ್ಯೂಸ್

ಎದೆಯಲ್ಲಿ ಕಟ್ಟಿರುವ ಕಫ, ಶೀತ ಒಂದೇ ಕ್ಷಣದಲ್ಲಿ ಮಾಯಾ …! ಹಾಗಾದ್ರೆ ಹೀಗೆ ಮಾಡಿ …!

ಸ್ನೇಹಿತರೇ ಈಗಿನ ವಾತಾವರಣಕ್ಕೆ ಎಲ್ಲರಿಗೂ ಕೂಡ ಶೀತ ಕಫ ಎಂಬುದು ಸಾಮಾನ್ಯ ಆದರೆ ಈ ಸಮಸ್ಯೆಯಿಂದ ನಿವಾರಣೆಯನ್ನು ಹೊಂದುವುದೇ ಒಂದು ದೊಡ್ಡ ಸಮಸ್ಯೆಯಾಗಿದೆ ಏಕೆಂದರೆ ಎಷ್ಟೊಂದು ಜನರಿಗೆ ಶೀತ ಕಫ ಆರಂಭವಾಯಿತು ಎಂದರೆ ನಿದ್ದೆ ಮಾಡಲು ಕೂಡ ಸಾಧ್ಯವಾಗುವುದಿಲ್ಲ .

ಅದರಲ್ಲೂ ಕೂಡ ಈಗಿನ ಚಳಿಗಾಲದಲ್ಲಿ ಶೀತ ಸಾಮಾನ್ಯವಾಗಿ ಎಲ್ಲರಿಗೂ ಇರುತ್ತದೆ ಆದರೆ ಈ ಶೀತ ಕಫ ಎಂಬುದು ಎಲ್ಲ ವಯಸ್ಸಿನವರಲ್ಲೂ ಕೂಡ ಸಾಮಾನ್ಯವಾಗಿದೆ ಯಾವುದೇ ವಯಸ್ಸಿನವರಾದರೂ ಕೂಡ ಈ ಸಮಸ್ಯೆಯಿಂದ ಹೋಗ ಬರಲು ಬಳಲಿರುತ್ತಾರೆ.

ಆದರೆ ಈ ಸಮಸ್ಯೆಗೆ ಮುಕ್ತಿ ಎಲ್ಲರಿಗೂ ತಿಳಿದಿರುವುದಿಲ್ಲ ಸಣ್ಣ ಮಕ್ಕಳಿಗಾದರೆ ಸಿರಪ್ ಅನ್ನು ಬಳಸಿರುತ್ತಾರೆ ದೊಡ್ಡವರು ಮಾತ್ರೆಗಳನ್ನು ಪ್ರತಿನಿತ್ಯ ನುಂಗುತ್ತಿರುತ್ತಾರೆ ಆದರೆ ಇದರಿಂದ ಎಷ್ಟೊಂದು ಜನರಿಗೆ ಮುಕ್ತಿಯೇ ದೊರೆತಿರುವುದಿಲ್ಲ ಏಕೆಂದರೆ ಶೀತ ಆದರೆ ಕಫ ಸಾಮಾನ್ಯವಾಗಿ ನಮ್ಮ ಎದೆಯಲ್ಲಿ ಕಟ್ಟುತ್ತದೆ ಈ ದಿನ ನಾವು ಸುಲಭವಾಗಿ ನಮ್ಮ ದೇಹದಿಂದ ಕಫವನ್ನು ನಿವಾರಣೆ ಮಾಡಿಕೊಳ್ಳುವ ಒಂದು ಮನೆ ಮದ್ದನ್ನು ತಿಳಿಸಿಕೊಡುತ್ತೇವೆ.
ಇದು ಅತ್ಯಂತ ಸುಲಭವಾದ ಮನೆ ಮದ್ದು ಮತ್ತು ಯಾವುದೇ ವಯಸ್ಸಿನವರಾದರೂ ಕೂಡ ಇದನ್ನು ಬಳಸಬಹುದು.

ಇದರಿಂದ ಯಾವುದೇ ರೀತಿಯ ದಂತಹ ಅಡ್ಡ ಪರಿಣಾಮ ಇಲ್ಲದೇ ಇರುವುದನ್ನು ನಾವು ಗಮನಿಸಬಹುದಾಗಿದೆ ಏಕೆಂದರೆ ಇದು ನೈಸರ್ಗಿಕವಾದ ವಿಧಾನ ವಾಗಿರುವುದರಿಂದ ಇದರಿಂದ ಅಡ್ಡ ಪರಿಣಾಮ ಇಲ್ಲದೇ ಇರುವುದನ್ನು ನಾವು ಗಮನಿಸಬಹುದಾಗಿದೆ ಮೊದಲು ಇದಕ್ಕೆ ಬೇಕಾದ ಸಾಮಗ್ರಿಗಳ ಬಗ್ಗೆ ನೋಡೋಣ ಈರುಳ್ಳಿ ಶುಂಠಿ ತುಳಸಿ ಎಲೆಗಳು ಸ್ವಲ್ಪ ಅರಿಶಿಣ ಸ್ವಲ್ಪ ಜೇನು ತುಪ್ಪ ಸ್ವಲ್ಪ ಮೆಣಸಿನ ಪುಡಿ ಅಂದರೆ ಕಾಳುಮೆಣಸಿನ ಪುಡಿ ಇಷ್ಟು ಸಾಮಗ್ರಿಗಳನ್ನು ತೆಗೆದುಕೊಳ್ಳಿ.

ಮೊದಲು ಈರುಳ್ಳಿಯನ್ನು ಚೆನ್ನಾಗಿ ಕುಟ್ಟಬೇಕು ಇದನ್ನು ರೊಬ್ಬುವ ಬದಲು ಕಲ್ಲಿನಲ್ಲಿ ಕುಟ್ಟಬೇಕು ಅದಾದ ನಂತರ ಒಂದು ಬಟ್ಟಲಿಗೆ ಈ ಕುಟ್ಟಿದ ಈರುಳ್ಳಿಯ ರಸವನ್ನು ಹಿಂಡಿ ಕೊಳ್ಳಬೇಕು ಇದೇ ರೀತಿಯಲ್ಲಿ ಶುಂಠಿಯನ್ನು ಕೂಡ ಕುಟ್ಟಬೇಕು ಅದನ್ನು ಕೂಡ ಬೇರೆ ಬಟ್ಟಲಿಗೆ ರಸವನ್ನು ಹಿಂಡಿ ಕೊಳ್ಳಬೇಕು ಅದರ ಜೊತೆಯಲ್ಲಿ ತುಳಸಿ ಎಲೆಗಳನ್ನು ತೆಗೆದುಕೊಂಡು ಅದನ್ನು ಕೂಡ ಚೆನ್ನಾಗಿ ಕುಟ್ಟಿ ಅದರ ರಸವನ್ನು ಮತ್ತೊಂದು ಬಟ್ಟಲಿಗೆ ಹಾಕಿಕೊಳ್ಳಬೇಕು.

ಮತ್ತು ಮತ್ತೊಂದು ಬಟ್ಟಲನ್ನು ತೆಗೆದುಕೊಂಡು ಅದಕ್ಕೆ ಒಂದು ಚಮಚ ಈರುಳ್ಳಿ ರಸ ಒಂದು ಚಮಚ ಶುಂಠಿ ರಸ ಒಂದು ಚಮಚ ತುಳಸಿ ಎಲೆಗಳ ರಸ ಮೂರು ರಸವನ್ನು ಹಾಕಿ ಅದಕ್ಕೆ ಒಂದು ಚಮಚ ಜೇನುತುಪ್ಪ ಮತ್ತು ಒಂದು ಚಿಟಕ್ಕೆ ಅರಿಶಿಣವನ್ನು ಹಾಕಿ ಚೆನ್ನಾಗಿ ಕಲಕಬೇಕು ಅದಾದ ನಂತರ ಒಂದು ಚಿಟಕಿ ಕಾಳುಮೆಣಸಿನ ಪುಡಿಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಬೇಕು ಸಣ್ಣ ಮಕ್ಕಳಾದರೆ ಇದನ್ನು ಅರ್ಧ ಚಮಚ ಕೊಟ್ಟರೆ ಸಾಕು ದೊಡ್ಡವರಾದರೆ ಒಂದು ಚಮಚ ಸೇವಿಸಬೇಕು.

ಊಟ ತಿಂಡಿ ತಿನ್ನುವುದಕ್ಕೂ ಮೊದಲು ಇದನ್ನು ಸೇವಿಸಿದರೆ ಉತ್ತಮ ಇದರಿಂದ ಯಾವುದೇ ರೀತಿಯ ದಂತ ಅಡ್ಡ ಪರಿಣಾಮ ಇರುವುದಿಲ್ಲ ಮತ್ತು ಮೆಣಸು ಮತ್ತು ಜೇನುತುಪ್ಪವನ್ನು ಸಾಧ್ಯವಾದಷ್ಟು ಅವಶ್ಯಕತೆ ಇದ್ದರೆ ಮಾತ್ರ ಉಪಯೋಗಿಸಿ ಇಲ್ಲವಾದರೆ ಹಾಗೇ ಸೇವಿಸಲು ಪ್ರಯತ್ನಿಸಿ ಈ ಪದಾರ್ಥಗಳನ್ನು ನಾವು ದಿನನಿತ್ಯ ಬಳಸುತ್ತೇವೆ ಆದರೆ ಇದನ್ನು ಯಾವ ರೀತಿಯಲ್ಲಿ ಬಳಸಬೇಕು ಎಂಬ ವಿಧಾನ ನಮಗೆ ತಿಳಿದಿರುವುದಿಲ್ಲ ಈಗ ನಾವು ಹೇಳಿದಂತಹ ವಿಧಾನವನ್ನು ಬಳಸಿ ನಿಮ್ಮ ದೇಹದಲ್ಲಿ ಇರುವಂತಹ ಕಫವನ್ನು ತೊಲಗಿಸಲು ಈ ಮನೆ ಮದ್ದು ಹೆಚ್ಚು ಸಹಕಾರಿಯಾಗಿದೆ ಧನ್ಯವಾದಗಳು.

Leave a Reply

Your email address will not be published. Required fields are marked *