Categories
ಅರೋಗ್ಯ ಆರೋಗ್ಯ ನ್ಯೂಸ್

ಈರುಳ್ಳಿ ತಿನ್ನುವ ಪ್ರತಿ ಗಂಡಸು ತಪ್ಪದೇ ನೋಡಬೇಕಾದ ವಿಚಾರ , ಇಲ್ಲ ಅಂದ್ರೆ ತುಂಬಾ ಮಿಸ್ ಆಗ್ತಿರಾ…!

ಸ್ನೇಹಿತರೇ ಸಾಮಾನ್ಯವಾಗಿ ದಿನನಿತ್ಯ ಅಡುಗೆಯಲ್ಲಿ ಬಳಸುವಂತೆ ಎಷ್ಟೊಂದು ಆಹಾರ ಪದಾರ್ಥಗಳ ಬೆಲೆ ನಮಗೆ ತಿಳಿದಿರುವುದಿಲ್ಲ ಮತ್ತು ಅವುಗಳ ಉಪಯೋಗಗಳು ಕೂಡ ನಮ್ಮ ಗಮನಕ್ಕೆ ಬಂದಿರುವುದಿಲ್ಲ ಆದರೆ ಅದನ್ನು ನಾವು ಪ್ರತಿನಿತ್ಯ ಬಳಸುತ್ತಿರುತ್ತೇವೆ ಕೆಲವೊಬ್ಬರು ಆ ಆಹಾರ ಪದಾರ್ಥಗಳನ್ನು ಕಂಡರೆ ಆಗುವುದಿಲ್ಲ ಎಂಬ ರೀತಿಯಲ್ಲಿ ಇರುತ್ತಾರೆ ಅವರಿಗೂ ಕೂಡ ಅವುಗಳ ಉಪಯೋಗ ಸ್ವಲ್ಪವೂ ತಿಳಿದಿರುವುದಿಲ್ಲ .

ಅಂಥದ್ದೇ ಒಂದು ಆಹಾರ ಪದಾರ್ಥ ಎಂದರೆ ಈರುಳ್ಳಿ ಈರುಳ್ಳಿಯನ್ನು ನೋಡಿದರೆ ಮೂಗು ಮುರಿಯುವವರೇ ಹೆಚ್ಚು ಏಕೆಂದರೆ ಅದನ್ನು ಕತ್ತರಿಸುವ ಆಗಿನಿಂದ ಹಿಡಿದು ಅದನ್ನು ತಿನ್ನುವವರೆಗೂ ಕೂಡ ಕಣ್ಣಿನಲ್ಲಿ ನೀರು ಭರಿಸುವಂತಹ ಒಂದು ತರಕಾರಿ ಈರುಳ್ಳಿ ಈ ಈರುಳ್ಳಿ ತಿನ್ನುವುದರಿಂದ ಇರುವಂತಹ ಉಪಯೋಗ ತಿಳಿದರೆ ಎಲ್ಲರೂ ಕೂಡ ಚಾಚೂ ತಪ್ಪದೆ ಪ್ರತಿನಿತ್ಯ ಈರುಳ್ಳಿಯನ್ನು ತಿನ್ನುತ್ತಾರೆ ಆದರೆ ಈ ಈರುಳ್ಳಿಯ ಬೆಲೆ ಕೆಲವೊಬ್ಬರಿಗೆ ತಿಳಿದಿರುವುದಿಲ್ಲ .

ಸಾಮಾನ್ಯವಾಗಿ ಕೆಲವೊಬ್ಬರು ತಮ್ಮ ಪ್ರತಿನಿತ್ಯ ಅಡುಗೆಯಲ್ಲಿ ಈರುಳ್ಳಿಯನ್ನು ಬಳಸುವುದು ಉಂಟು ಅದರಲ್ಲೂ ಕೂಡ ಹೆಚ್ಚಾಗಿ ಮಾಂಸಹಾರಿಗಳು ಈರುಳ್ಳಿಯನ್ನು ತಿನ್ನುತ್ತಾರೆ ಆದರೆ ತಿನ್ನುವ ಕಾರಣ ತಿಳಿದಿರುವುದಿಲ್ಲ ಕೆಲವೊಬ್ಬರು ಬಾಯಿ ವಾಸನೆ ಬರುತ್ತದೆ ಎಂಬ ಕಾರಣಕ್ಕೆ ಈರುಳ್ಳಿಯನ್ನು ತಿನ್ನುವುದನ್ನು ಬಿಟ್ಟಿರುತ್ತಾರೆ ಆದರೆ ಯಾವ ಕಾರಣಕ್ಕೆ ಈರುಳ್ಳಿಯನ್ನು ಪ್ರತಿನಿತ್ಯ ತಿನ್ನಬೇಕು.

ಎಂಬ ಅಂಶವನ್ನು ಯಾರೂ ಕೂಡ ಮನವರಿಕೆ ಮಾಡಿ ಕೊಟ್ಟಿರುವುದಿಲ್ಲ ಇದಕ್ಕೆ ಅನುಕೂಲವಾಗಲಿ ಎಂದು ಈ ದಿನ ನಾವು ಈರುಳ್ಳಿಯ ಉಪಯೋಗದ ಬಗ್ಗೆ ತಿಳಿಸಿಕೊಡುತ್ತೇವೆ ಈ ಕೆಲವೇ ಕೆಲವು ಉಪಯೋಗವನ್ನು ತಿಳಿದರೆ ಇನ್ನೂ ಎಷ್ಟು ಉಪಯೋಗ ಇದೆ ಎಂದು ಎಲ್ಲರೂ ಕೂಡ ಒಮ್ಮೆ ಹುಡುಕುವುದು ಖಂಡಿತ.

ಸಾಮಾನ್ಯವಾಗಿ ಊಟ ಆದ ನಂತರ ಈರುಳ್ಳಿಯನ್ನು ತಿನ್ನುವುದು ವಾಡಿಕೆ ಅದರಲ್ಲೂ ಕೂಡ ಮಾಂಸಾಹಾರ ತಿಂದ ನಂತರ ಇದು ಏಕೆ ಎಂದು ಗೊತ್ತೇ ಊಟ ಚೆನ್ನಾಗಿ ಜೀರ್ಣ ಆಗಲಿ ಎಂಬ ಕಾರಣಕ್ಕೆ ಊಟದಲ್ಲಿ ಮತ್ತು ಊಟ ಆದ ನಂತರ ಈರುಳ್ಳಿಯನ್ನು ತಿನ್ನುತ್ತಾರೆ ಇದು ನಮ್ಮ ದೇಹದ ಜೀರ್ಣಕ್ರಿಯೆಯನ್ನು ಉತ್ತಮಪಡಿಸುತ್ತದೆ ಅದರಲ್ಲೂ ಕೂಡ ಇತ್ತೀಚಿನ ಯುವಕ ಯುವತಿಯರಲ್ಲಿ ಕಾಡುತ್ತಿರುವ ಮತ್ತೊಂದು ದೊಡ್ಡ ಸಮಸ್ಯೆ ಎಂದರೆ ಕೂದಲು ಉದುರುವಿಕೆ ಈ ಸಮಸ್ಯೆ ಎಲ್ಲರಲ್ಲೂ ಕೂಡ ಇದೆ ಅದಕ್ಕೆ ಈರುಳ್ಳಿ ರಾಮಬಾಣ ಎಂದರೆ ತಪ್ಪಾಗುವುದಿಲ್ಲ.

ಈರುಳ್ಳಿ ರಸವನ್ನು ನಾವು ಹಚ್ಚುವ ಎಣ್ಣೆಯ ಜೊತೆಗೆ ಅಂದ್ರೆ ಕೋಕನೆಟ್ ಜೊತೆಗೆ ಮಿಕ್ಸ್ ಮಾಡಿಕೊಂಡು ತಲೆಗೆ ಹಚ್ಚಿ ಅದಾದ ನಂತರ ತಲೆ ತೊಳೆಯುವುದರಿಂದ ಕೂದಲು ಉದುರುವುದಕ್ಕೆ ರಾಮಬಾಣವಾಗಿ ಈರುಳ್ಳಿ ಕೆಲಸ ಮಾಡುತ್ತದೆ ಒಮ್ಮೆ ಪ್ರಯತ್ನಿಸಿ ಇದರ ಫಲಿತಾಂಶ ನಿಮಗೆ ತಿಳಿಯುತ್ತದೆ ಕೆಲವೊಬ್ಬರಿಗೆ ಕಿಡ್ನಿಯಲ್ಲಿ ಸ್ಟೋನ್ ಸಾಮಾನ್ಯವಾಗಿ ಇರುತ್ತದೆ ಈ ಈರುಳ್ಳಿಯನ್ನು ನಿಯಮಿತವಾಗಿ ತಿನ್ನುತ್ತಾ ,

ಬರುವುದರಿಂದ ಕಿಡ್ನಿಯಲ್ಲಿ ಕಲ್ಲು ಆಗುವ ಯಾವುದೇ ಸಾಧ್ಯತೆಗಳು ಇರುವುದಿಲ್ಲ ಆದರೆ ನಿಯಮಿತವಾಗಿ ತಿನ್ನುತ್ತಾ ಇರಬೇಕು ಅಷ್ಟೆ. ನೋಡಿದ್ರಲ್ಲ ಸ್ನೇಹಿತರೇ ಒಂದು ಸಾಮಾನ್ಯ ಈರುಳ್ಳಿಯನ್ನು ನಾವು ಅಡುಗೆಯಲ್ಲಿ ಬಳಸುತ್ತೇವೆ ಆದರೆ ಅದನ್ನು ಬಳಸುವುದರಿಂದ ಏನೆಲ್ಲಾ ಉಪಯೋಗ ಎಂದು ಈ ಉಪಯೋಗಗಳ ಅರಿವು ನಮಗಿರಬೇಕು ಅಷ್ಟೆ.

ಇಷ್ಟೇ ಅಲ್ಲ ಇನ್ನೂ ಅನೇಕ ಉಪಯೋಗಗಳನ್ನು ಈರುಳ್ಳಿ ಹೊಂದಿದೆ ಇದು ಕತ್ತರಿಸುವಾಗ ಕಣ್ಣಲ್ಲಿ ನೀರು ಬರುತ್ತದೆ ಎಂಬುದನ್ನು ಬಿಟ್ಟರೆ ನಮ್ಮ ಆರೋಗ್ಯಕ್ಕೆ ಹೆಚ್ಚು ನೀರಿನ ಅಂಶವನ್ನು ಕೂಡ ಈರುಳ್ಳಿ ಕೊಡುತ್ತದೆ ಸಾಧ್ಯವಾದಷ್ಟು ಇನ್ನು ಮುಂದೆ ಪ್ರತಿನಿತ್ಯ ಈರುಳ್ಳಿಯನ್ನು ಹೆಚ್ಚಾಗಿ ಬಳಸಿ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ ಧನ್ಯವಾದಗಳು.

Leave a Reply

Your email address will not be published. Required fields are marked *