Categories
ಅರೋಗ್ಯ ಆರೋಗ್ಯ ನ್ಯೂಸ್

1ದೇವಾರದಲ್ಲಿ ಹುಲ್ಲು ಬೆಳಯೋದಕ್ಕಿಂತ ವೇಗವಾಗಿ ತಲೆಕೂದಲು ಬೆಳಯುತ್ತೆ ಗ್ಯಾರೆಂಟಿ…! ಹೀಗೆ ಮಾಡಿ ಸಾಕು ..!

ಕೂದಲು ತುಂಬಾನೇ ಉದುರುತ್ತಿದ್ದರೆ ಅಥವಾ ಕೂದಲು ಬೇಗನೆ ಬೆಳೆಯುತ್ತಿಲ್ಲ ಅನ್ನುವುದಾದರೆ, ಅದಕ್ಕೆ ಸುಲಭವಾದ ಪ್ರಯತ್ನವನ್ನು ನೀವು ಮನೆಯಲ್ಲಿಯೇ ಮಾಡಿ, ಇದಕ್ಕಾಗಿ ಯಾವುದೋ ಶಾಂಪುಗಳನ್ನು ಎಣ್ಣೆಗಳನ್ನು ಹುಡುಕಿಕೊಂಡು ಹೋಗಬೇಡಿ, ನಾನು ಈ ದಿನ ತಿಳಿಸುವಂತಹ ಸುಲಭವಾದ ಮನೆ ಮದ್ದನ್ನು ಪಾಲಿಸಿದರೆ ಸಾಕು.

ನಿಮ್ಮ ಕೂದಲಿಗೆ ಸಂಬಂಧಪಟ್ಟ ಯಾವುದೇ ಸಮಸ್ಯೆಯಾಗಲಿ ಅಂದರೆ ಕೂದಲು ಉದುರುವುದು ಅಥವಾ ಕೂದಲು ಬೇಗನೆ ಬೆಳೆಯದೆ ಇರುವುದು ಕೂದಲು ಸ್ಪ್ಲಿಟ್ ಆಗುವುದು ಅಥವಾ ಹೊಟ್ಟಿನ ಸಮಸ್ಯೆ, ಇಂತಹ ಯಾವ ಸಮಸ್ಯೆಯೇ ಕಾಡುತ್ತಾ ಇರಲಿ ಅದಕ್ಕಾಗಿ ಈ ದಿನದ ಈ ಮನೆ ಮದ್ದು ನಿಮಗೆ ತುಂಬಾನೇ ಉಪಯುಕ್ತವಾಗಿದೆ.

ಹೌದು ಇತ್ತೀಚಿನ ದಿನಗಳಲ್ಲಿ ಆಹಾರ ಪದ್ಧತಿಯ ಬದಲಾವಣೆಯಿಂದಾಗಲಿ ಅಥವಾ ಧೂಳು ಮಣ್ಣು ಪ್ರದೂಷಣೆ ವಾತಾವರಣದಿಂದಾಗಿ, ಕೂದಲು ಉದುರುವುದು ಹೆಚ್ಚಾಗಿದೆ ಅಥವಾ ಇನ್ನು ಕೆಲವರಲ್ಲಿ ಕೂದಲು ಬೇಗನೆ ಬೆಳೆಯುವುದೇ ಇಲ್ಲ, ಇಂತಹ ಅವರು ಈ ಮನೆ ಮದ್ದನ್ನು ಪಾಲಿಸಬಹುದು. ಆದರೆ ಯಾವ ಅಡ್ಡ ಪರಿಣಾಮಗಳು ಕೂಡ ಇರುವುದಿಲ್ಲ ನೀವು ನಿಶ್ಚಿಂತೆಯಾಗಿ ಈ ಮನೆ ಮದ್ದನ್ನು ಪಾಲಿಸಬಹುದು.

ಈ ಮನೆ ಮಾತನ್ನು ಮಾಡಿಕೊಳ್ಳುವುದಕ್ಕಾಗಿ ಬೇಕಾಗಿರುವುದು ಕೇವಲ ಎರಡೇ ಪದಾರ್ಥಗಳು ಒಂದು ಈರುಳ್ಳಿ ಮತ್ತು ಎರಡನೆಯದ್ದು ಶುಂಠಿ. ನೀವು ಆಚೆ ಯಿಂದ ಹೋಗಿ ದುಬಾರಿಯಾದ ಪದಾರ್ಥಗಳನ್ನು ಕೊಂಡುಕೊಂಡು ಬರಬೇಕು ಅನ್ನುವ ಅವಶ್ಯಕತೆ ಇಲ್ಲ, ಸಾಮಾನ್ಯವಾಗಿ ಮನೆಯಲ್ಲಿಯೇ ಈರುಳ್ಳಿ ಮತ್ತು ಶುಂಠಿ ಪ್ರತಿಯೊಬ್ಬರೂ ಇಟ್ಟುಕೊಂಡಿರುತ್ತಾರೆ,

ಈ ಈರುಳ್ಳಿಯನ್ನು ಒಂದು ಮೀಡಿಯಂ ಗಾತ್ರದ ಈರುಳ್ಳಿಯನ್ನು ತೆಗೆದುಕೊಳ್ಳಿ ಮತ್ತು ಶುಂಠಿಯು ಕೂಡ ಒಂದೂವರೆ ಇಂಚಿನಷ್ಟು ಶುಂಠಿಯನ್ನು ತೆಗೆದುಕೊಳ್ಳಿ, ಈರುಳ್ಳಿಯನ್ನು ಸಣ್ಣದಾಗಿ ಕತ್ತರಿಸಿಕೊಂಡು ಮತ್ತು ಶುಂಠಿಯನ್ನು ಚೆನ್ನಾಗಿ ಮಣ್ಣು ಹೋಗುವವರೆಗೂ ಸ್ವಚ್ಛ ಪಡಿಸಿಕೊಳ್ಳಿ, ಆದರೆ ಶುಂಠಿಯ ಸಿಪ್ಪೆ ತೆಗೆಯುವ ಅವಶ್ಯಕತೆ ಇಲ್ಲ.

ಇದೀಗ ಮಿಕ್ಸಿ ಜಾರಿನಲ್ಲಿ ಶುಂಠಿ ಮತ್ತು ಈರುಳ್ಳಿ ಎರಡನ್ನು ಚೆನ್ನಾಗಿ ರುಬ್ಬಿಕೊಂಡು, ಇದರ ರಸವನ್ನು ಸ್ಟೇನರ್ ನ ಸಹಾಯದಿಂದ ಅಥವಾ ಒಂದು ಬಟ್ಟೆಯ ಸಹಾಯದಿಂದ ತೆಗೆದುಕೊಳ್ಳಿ, ಇದೀಗ ರಸವನ್ನು ತೆಗೆದುಕೊಂಡ ನಂತರ ಒಂದು ಬಟ್ಟಲಿಗೆ ರಸವನ್ನು ತೆಗೆದುಕೊಂಡು ಕೂದಲಿನ ಪ್ರತಿಯೊಂದು ಭಾಗಕ್ಕೂ ಹಚ್ಚಿಕೊಳ್ಳಬೇಕು ಅಂದರೆ ಕೂದಲಿನ ಬುಡಕ್ಕೆ ಮೊದಲು ಈ ರಸವನ್ನು ಲೇಪಿಸಿಕೊಳ್ಳಬೇಕು ನಂತರ ರಸ ಉಳಿದರೆ ಮಾತ್ರ ಕೂದಲುಗಳಿಗೆ ಹಚ್ಚಿಕೊಳ್ಳಿ.

ನೀವು ಈ ರಸವನ್ನು ಲೇಪಿಸಿ ಕೊಳ್ಳುವಾಗ ಕೂದಲಿಗೆ ಹೆಚ್ಚಾಗಿ ಹಚ್ಚಿಕೊಳ್ಳುವ ಅವಶ್ಯಕತೆ ಇರುವುದಿಲ್ಲ ಹೆಚ್ಚಾಗಿ ಕೂದಲಿನ ಬುಡಕ್ಕೆ ಮಾತ್ರ ಹಚ್ಚಿಕೊಂಡರೆ ಸಾಕು. ಈ ಮನೆ ಮದ್ದು ನಿಜಕ್ಕೂ ನಿಮಗೆ ಕೂದಲು ಉದುರುವ ಸಮಸ್ಯೆ ಅನ್ನು ನಿವಾರಿಸುತ್ತದೆ ಮತ್ತು ಕೂದಲು ಚೆನ್ನಾಗಿ ಬೆಳೆಯುವುದಕ್ಕು ಸಹಕರಿಸುತ್ತದೆ.

ಈ ಮನೆ ಮೊದಲು ನೀವು ವಾರದಲ್ಲಿ ಮೂರು ಬಾರಿ ಪಾಲಿಸಬೇಕಾಗುತ್ತದೆ ಹೀಗೆ ನಾಲ್ಕು ವಾರಗಳವರೆಗೆ ಪಾಲಿಸಿ ನೋಡಿ, ಈ ಮನೆ ಮದ್ದು ನಿಜಕ್ಕೂ ನಿಮಗೆ ಎಷ್ಟು ಪ್ರಯೋಜನವನ್ನು ತಂದು ಕೊಡುತ್ತದೆ ಎಂದು ನೀವೇ ಕಾಣಬಹುದಾಗಿದೆ.

ಇಂದಿನ ಮಾಹಿತಿ ನಿಮಗೆ ಉಪಯುಕ್ತವಾಗಿ ಇದ್ದಲ್ಲಿ ತಪ್ಪದೇ ಮಾಹಿತಿಗೆ ಲೈಕ್ ಮಾಡಿ ಹಾಗೂ ಶೇರ್ ಮಾಡಿ ಮಾಹಿತಿಯ ಕೊನೆಯಲ್ಲಿ ನಿಮ್ಮ ಅನಿಸಿಕೆ ಅನ್ನು ತಪ್ಪದೇ ಕಾಮೆಂಟ್ ಮಾಡಿ, ಇನ್ನೂ ಅನೇಕ ಉಪಯುಕ್ತ ಮಾಹಿತಿಗಳಿಗಾಗಿ ಆರೋಗ್ಯಕ್ಕೆ ಸಂಬಂಧಪಟ್ಟ ವಿಚಾರಗಳನ್ನು ತಿಳಿದುಕೊಳ್ಳುವುದಕ್ಕಾಗಿ ನಮ್ಮ ಫೇಸ್ ಬುಕ್ ಪೇಜ್ ಅನ್ನು ಫಾಲೋ ಮಾಡಿ ಧನ್ಯವಾದ.

Leave a Reply

Your email address will not be published. Required fields are marked *