ಮಕ್ಕಳಿಗೆ ದಿನ ಒಂದೊಂದು ಚಮಚ ಇದನ್ನ ಕುಡಿಸುತ್ತಾ ಬಂದ್ರೆ ಜ್ಞಾಪಕ ಶಕ್ತಿ ಹೆಚ್ಚಾಗಿ ಮುಂದೊಂದು ದಿನ ವಿಜ್ಞಾನಿಗಳಾಗುತ್ತಾರೆ…

146

ಮಕ್ಕಳಿಗೆ ಕೊಡುವ ಆಹಾರದಲ್ಲಿ ಇದೊಂದು ಪುಡಿಯನ್ನು ಮನೆಯಲ್ಲಿಯೇ ತಯಾರಿಸಿ ಮಕ್ಕಳಿಗೆ ಕೊಡುವ ಆಹಾರದ ಜೊತೆ ಮಿಶ್ರ ಮಾಡಿ ತಿನ್ನಿಸಿ, ಮಕ್ಕಳ ತೂಕದ ಜೊತೆಗೆ ಮೆದುಳಿನ ಸಾಮರ್ಥ್ಯ ವೂ ಕೂಡ ಹೆಚ್ಚುತ್ತದೆ…ನಮಸ್ಕಾರಗಳು ಪ್ರಿಯ ಓದುಗರೆ ಮಕ್ಕಳು ಮನೆಯಲ್ಲಿದ್ದರೆ ಆ ಮನೆ ಯ ವಾತಾವರಣವೇ ಚಂದ. ಅಕಸ್ಮಾತ್ ಮನೆಯಲ್ಲಿ ಇರುವ ಮಕ್ಕಳಿಗೆ ಅನಾರೋಗ್ಯ ಸಮಸ್ಯೆ ಉಂಟಾದರೆ ನೋವು ಮನೆಮಂದಿಗೆಲ್ಲಾ ಬೇಸರ ತರಿಸುತ್ತದೆ, ಮನೆಯಲ್ಲಿ ಇರುವ ಮಕ್ಕಳು ಯಾವಾಗ ಹುಷಾರಾಗುತ್ತಾರೆ ಯಾವಾಗ ಆರೋಗ್ಯವಂತರಾಗುತ್ತಾರೆ ಅಂತಾ ಯೋಚನೆ ಮಾಡ್ತ ಇರ್ತಾರೆ ಹಾಗಾಗಿ ಮಕ್ಕಳು ಹುಷಾರು ತಪ್ಪದೆ ಆರೋಗ್ಯಕರವಾಗಿ ಇರಬೇಕು ಸದಾ ಆ್ಯಕ್ಟಿವ್ ಆಗಿರಬೇಕು ಅನ್ನೋದಾದರೆ ಈ ಪುಡಿಯನ್ನು ಮನೆಯಲ್ಲೇ ಮಾಡಿ ಮಕ್ಕಳಿಗೆ ತಿನ್ನಲು ಕೊಡಿ.

ಹೌದು ಮಕ್ಕಳು ಆರೋಗ್ಯಕರವಾಗಿರಬೇಕು ಮೆದುಳಿನ ಸಾಮರ್ಥ್ಯ ಹೆಚ್ಚಬೇಕು ಮಕ್ಕಳು ಬುದ್ದಿವಂತರಾಗಬೇಕು ಮುಖ್ಯವಾಗಿ ಮಕ್ಕಳ ತೂಕ ಹೆಚ್ಚಬೇಕು ಅನ್ನುವುದಾದರೆ ಇದೊಂದು ಪುಡಿಯನ್ನು ಮನೆಯಲ್ಲೇ ಮಾಡಿ ಮಕ್ಕಳಿಗೆ ಆಹಾರ ನೀಡುವಾಗ ಅದರ ಜೊತೆ ಮಿಶ್ರ ಮಾಡಿ ಮಕ್ಕಳಿಗೆ ತಿನ್ನಿಸುವುದರಿಂದ ಮಕ್ಕಳ ತೂಕ ಹೆಚ್ಚುತ್ತದೆ, ಆರೋಗ್ಯಕರವಾಗಿ ಇರುತ್ತಾರೆ ಮತ್ತು ಮಕ್ಕಳು ಆರೋಗ್ಯಕರವಾಗಿದ್ದರೆ ಸದಾ ಆ್ಯಕ್ಟಿವ್ ಆಗಿರ್ತಾರೆ.

ಈ ಪರಿಹಾರ ಮಾಡುವುದಕ್ಕೆ ಬೇಕಾಗಿರುವುದು ಏನು ಅಂದರೆ ಗೋಡಂಬಿ ಬಾದಾಮಿ ಮತ್ತು ಕೇಸರಿ ವಾಲ್ ನಟ್ ಜಾಯಿಕಾಯಿ.ಮೊದಲು ಸ್ವಲ್ಪ ತುಪ್ಪವನ್ನು ಹಾಕಿಕೊಂಡು ಅರ್ಧ ಬಟ್ಟಲಿನಷ್ಟು ಗೋಡಂಬಿಯನ್ನು ಹುರಿದುಕೊಳ್ಳಬೇಕು ಬಳಿಕ ಇದನ್ನು ಬೇರೆಕಡೆ ತೆಗೆದು ಇಟ್ಟುಕೊಂಡು ಇದಕ್ಕೆ ಬಾದಾಮಿಯನ್ನು ಹಾಕಿ ಸ್ವಲ್ಪ ಸಮಯ ಹುರಿದುಕೊಂಡ ಅದೇ ರೀತಿ ವಾಲ್ನಟ್ ಅನ್ನು ಕೂಡ ಕರೆದುಕೊಂಡು ಇಟ್ಟುಕೊಳ್ಳಬೇಕು. ಇದೇ ಸಮಯದಲ್ಲಿ ಸಣ್ಣ ಉರಿಯಲ್ಲೇ ಕೇಸರಿಯನ್ನು ಕೂಡ ಸ್ವಲ್ಪ ಸಮಯ ಬಾಡಿಸಿ ಇದೆಲ್ಲ ಮಿಶ್ರಣವನ್ನ ಪುಡಿ ಮಾಡಿಕೊಳ್ಳುವಾಗ ಜಾಯಿಕಾಯಿಯನ್ನು ಕೂಡ ಪುಡಿ ಮಾಡಿಟ್ಟುಕೊಂಡು ಈ ಮಿಶ್ರಣದೊಂದಿಗೆ ಮಿಶ್ರ ಮಾಡಿ ಎಲ್ಲವನ್ನೂ, ಸಣ್ಣಗೆ ಪುಡಿ ಮಾಡಿಟ್ಟುಕೊಳ್ಳಬೇಕು ಇದೀಗ ಮಕ್ಕಳಿಗೆ ನೀಡುವ ಹೆಲ್ತಿ ಪೌಡರ್ ತಯಾರಾಗಿದೆ. ಇದರಲ್ಲಿ ಎಂಥ ಪೋಷಕಾಂಶಗಳು ಅಡಗಿರುತ್ತವೆ ಅಂದರೆ ಮಕ್ಕಳ ತೂಕ ಹೆಚ್ಚುವುದರಿಂದ ಹಿಡಿದು ಇದರಿಂದ ಮಕ್ಕಳ ಬುದ್ಧಿ ಸಾಮರ್ಥ್ಯ ಹೆಚ್ಚುತ್ತದೆ ಮುಖ್ಯವಾಗಿ ಮೂಳೆಗಳು ಬಲಗೊಳ್ಳುತ್ತದೆ.

ಮಕ್ಕಳು ಆರೋಗ್ಯವಂತರಾಗಿರಬೇಕೆಂದರೆ ಅವರ ಭವಿಷ್ಯದಲ್ಲಿಯೂ ಕೂಡ ಯಾವುದೇ ಆರೋಗ್ಯ ಸಮಸ್ಯೆ ಕಾಡದೆ ಅವರ ರೋಗ ನಿರೋಧಕ ಶಕ್ತಿ ಹೆಚ್ಚ ಬೇಕು ಅಂದರೆ ತೂಕ ಅವರ ವಯಸ್ಸಿಗೆ ತಕ್ಕಷ್ಟು ಇರಬೇಕು ಸದಾ ಮಕ್ಕಳ ಆಕ್ಟೀವ್ ಆಗಿ ಇರಬೇಕು ಅಂದರೆ, ತಾಯಿಯ ಹಾಲು ಎಷ್ಟು ಮುಖ್ಯವೋ ಹಾಗೆ ನಾವು ಮಕ್ಕಳಿಗೆ ಆಚೆಯಿಂದ ಕೊಡುವ ಆಹಾರವೂ ಕೂಡ ಅಷ್ಟೆ ಮುಖ್ಯವಾಗಿರುತ್ತದೆ.

ಮಕ್ಕಳಿಗೆ 1 ವರುಷದಿಂದ ಅವರಿಗೆ ಕೆಲವೊಂದು ಆಹಾರಗಳನ್ನು ನೀಡಬಹುದು ಅದರಲ್ಲಿ ರಾಗಿ ಸರಿ ಅನ್ನ ಇನ್ನಿತರೆ ಸಿರಿಧಾನ್ಯಗಳಿಂದ ಮಾಡಿದ ಪುಡಿಯ ಸರಿ ಎಲ್ಲವನ್ನ ಕೊಡಬಹುದು. ಮಕ್ಕಳಿಗೆ ಯಾವುದೇ ಆಹಾರ ನೀಡಿದಾಗ ಮಕ್ಕಳಿಗೆ ಅಲರ್ಜಿ ಅಂತ ಆದರೆ ಒಮ್ಮೆ ವೈದ್ಯರ ಬಳಿ ತೋರಿಸಿ ಬಳಿಕ ಆಹಾರ ಪದಾರ್ಥವನ್ನು ಕೊಡುವುದೋ ಬೇಡವೋ ಅಂತ ತಿಳಿದು ಅಂತಹ ಆಹಾರ ಪದಾರ್ಥಗಳನ್ನು ಮುಂದು ವರಿಸಿ.

ಇಂದು ನಾವು ಮಾಡಿರುವ ಈ ಡ್ರೈ ಫ್ರೂಟ್ಸ್ ಪುಡಿಯನ್ನು ಮಕ್ಕಳಿಗೆ ಕೊಡುವುದರಿಂದ ಯಾವುದೇ ತರಹದ ಅಡ್ಡ ಪರಿಣಾಮಗಳು ಆಗುವುದಿಲ್ಲ ಹಾಗೂ ರಾಗಿ ಸರಿ ಮಾಡಿ ತಿನ್ನಿಸುವಾಗ ಅದರೊಟ್ಟಿಗೆ ಈ ಪುಡಿಯನ್ನು ಸ್ವಲ್ಪ ಮಿಶ್ರ ಮಾಡಿ ಕೊಡುವುದರಿಂದ ಮಕ್ಕಳಿಗೆ ಪುಷ್ಟಿ ದೊರೆಯುತ್ತದೆ ಮಕ್ಕಳ ಆರೋಗ್ಯ ವೃದ್ಧಿಸುತ್ತದೆ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಹಾಗೂ ಮಕ್ಕಳ ಮೂಳೆಗಳು ಬಲಗೊಳ್ಳುತ್ತದೆ.