Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ಅಕ್ಕಿಯಿಂದ ಮಾಡಿದ ಗಂಜಿಯನ್ನ ಕುಡಿಯೋದ್ರಿಂದ ಯಾವ ಯಾವ ಆರೋಗ್ಯದ ಲಾಭಗಳನ್ನ ಪಡೀಬೋದು ಗೊತ್ತ

ಸಾಮಾನ್ಯವಾಗಿ ನಾವು ಗಮನಿಸಿರುತ್ತೆವೆ ಪೇಟೆ ಮಂದಿಗೂ ಹಳ್ಳಿ ಮಂದಿ ಇರುವ ಪ್ರಮುಖವಾದ ವ್ಯತ್ಯಾಸ ಅಂದರೆ ಅದು ಅವರ ಶಕ್ತಿ ಅವರ ಆರೋಗ್ಯ ಹೌದು ನಾವು ಹಳ್ಳಿ ಮಂದಿಯ ಬಗ್ಗೆ ಸುಮ್ಮನೆ ಹೇಳುವುದಲ್ಲ ಹಳ್ಳಿಮಂದಿ ತುಂಬ ಶಕ್ತಿಯುತವಾಗಿ ಇರುತ್ತಾರೆ ಅವರಿಗೆ ಎಷ್ಟು ಕೆಲಸ ಮಾಡಿದರೂ ಸುಸ್ತು ಆಗೋದಿಲ್ಲಾ, ಅಷ್ಟು ಶಕ್ತಿಯುತವಾಗಿರುತ್ತಾರೆ ಹಳ್ಳಿ ಮಂದಿ. ಇದಕ್ಕೆ ಕಾರಣ ಅಂದರೆ ಅವರು ಸೇವಿಸುವಂತಹ ಆಹಾರ ಪದ್ಧತಿಯು ಆಗಿರುತ್ತದೆ. ಇನ್ನು ಪೇಟೆ ಮಂದಿ ಬಗ್ಗೆ ಹೇಳಬೇಕೆಂದರೆ ಅವರು ಚಾಟ್ಸ್ ಬೇಕರಿ ಫುಡ್ ಪಿಜ್ಜಾ ಬರ್ಗರ್ ಅಂಥ ರುಚಿಯನ್ನು ಹುಡುಕಿ ಹೋಗ್ತಾರೆ .

ಆದರೆ ನಮ್ಮ ಹಳ್ಳಿ ಮಂದಿ ಮಾತ್ರ ಅವರ ಆರೋಗ್ಯವನ್ನು ಸದೃಢವಾಗಿಟ್ಟುಕೊಳ್ಳುವುದಕ್ಕಾಗಿ ಆಹಾರವನ್ನು ಸೇವಿಸುತ್ತಾರೆ. ಆಹಾರವನ್ನು ಔಷಧಿಯ ಕ್ರಮದಲ್ಲಿ ಸೇವಿಸುವ ಹಳ್ಳಿ ಮಂದಿಯ ಆರೋಗ್ಯ ಪದ್ಧತಿ ಹೇಗಿರುತ್ತದೆ ಅಂದರೆ ಅವರು ಸೇವಿಸುವ ಆಹಾರದಲ್ಲಿ ಅವರ ದೇಹಕ್ಕೆ ಬೇಕಾಗಿರುವ ಎಲ್ಲ ಪೋಷಕಾಂಶಗಳನ್ನು ಪಡೆದುಕೊಳ್ಳುತ್ತಾರೆ. ಅದರೆ ಪೇಟೆ ಮಂದಿ ಕೆಲವು ಪೋಷಕಾಂಶಗಳನ್ನ ಆರ್ಟಿಫಿಷಿಯಲಾಗಿ ತೆಗೆದುಕೊಳ್ತಾರೆ ಅಂದರೆ ಮಾತ್ರೆಯ ರೂಪದಲ್ಲಿ.

ಹಳ್ಳಿಯ ಮಂದಿಯ ಆರೋಗ್ಯ ಗುಟ್ಟು ಮುದ್ದೆ ಮತ್ತು ಗಂಜಿ ಅಂತ ಹೇಳಿದರೆ ತಪ್ಪಾಗಲಾರದು ನಾವು ಮುದ್ದೆಯ ಬಗ್ಗೆ ಎರಡನೆ ಮಾತೇ ಹೇಳುವುದೇ ಬೇಡ ಇದರ ಮಹತ್ವ ಬಹಳ ಅಪಾರವಾದದ್ದು ಇನ್ನು ಗಂಜಿ ಬಗ್ಗೆ ನಿಮಗೆ ಹೇಳಲೇಬೇಕು ಈ ಗಂಜಿ ಅನ್ನ ಸೇವನೆ ಮಾಡುವುದರಿಂದ ಬಹಳಷ್ಟು ಆರೋಗ್ಯಕರ ಲಾಭಗಳಿವೆ. ಇಂದಿಗೂ ಕೂಡ ಮಂದಿ ಗಂಜಿಯನ್ನು ಸವಿಸ್ತಾರೆ ಇದರಲ್ಲಿ ಬಹಳ ಆರೋಗ್ಯಕರ ಲಾಭಗಳಿವೆ. ಕೆಲವೊಂದು ಭಾಗದಲ್ಲಿ ಗಂಜಿಯನ್ನು ಒಂದೊಂದು ರೂಪದಲ್ಲಿ ಸೇವನೆ ಮಾಡ್ತಾರೆ ಕೆಲವರು ಗಂಜಿಯನ್ನು ಉಪ್ಪಿನಕಾಯಿಯ ಜೊತೆ ತಿಂದರೆ ಮಂಗಳೂರು ಮಂದೆ ಗಂಜಿಯನ್ನು ರುಚಿಯಾದ ಮೀನಿನ ಫ್ರೈ ನೊಂದಿಗೆ ಸೇವಿಸ್ತಾರೆ.

ಗಂಜಿಯನ್ನು ಕುಡಿಯುವುದರಿಂದ ಆಗುವ ಲಾಭ ಅಂದರೆ ಈ ಗಂಜಿ ದಿನವಿಡೀ ಶಕ್ತಿಯುತವಾಗಿರಲು ಸಹಕರಿಸುವುದಲ್ಲದೆ ಸುಸ್ತು ನಿಶಕ್ತಿ ಬರೆದಿರುವ ಹಾಗೆ ನಮ್ಮ ಆರೋಗ್ಯವನ್ನು ಕಾಪಾಡುತ್ತದೆ. ಗಂಜಿಯಲ್ಲಿ ಕ್ಯಾಲ್ಶಿಯಂ ಅಂಶ ತುಂಬ ಇರುತ್ತದೆ. ಇದರಿಂದ ನಮಗೆ ಒಳ್ಳೆಯ ಪೋಷಕಾಂಶ ದೊರೆಯುವುದರೊಂದಿಗೆ ಮೂಳೆಗಳು ಬಲಗೊಳ್ಳುತ್ತವೆ ಮತ್ತು ದೇಹದ ಉಷ್ಣಾಂಶವನ್ನು ತಂಪಾಗಿಡುತ್ತದೆ ಅಷ್ಟೇ ಅಲ್ಲ ಗಂಜಿಯಲ್ಲಿ ವಿಟಮಿನ್ ಬಿ ಸಿಕ್ಸ್ ವಿಟಮಿನ್ ಬಿ ಟ್ವೆಲ್ವೆ ಪೋಷಕಾಂಶ ಆಯಿತು ಇದು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿಯಾಗಿರುತ್ತದೆ ಮತ್ತು ಸೌಂದರ್ಯವನ್ನು ವೃದ್ಧಿಸುತ್ತದೆ.

ಅಮೇರಿಕನ್ ನ್ಯೂಟ್ರಿಶಿಯನ್ ಅಸೋಸಿಯೇಶನ್ ಹೇಳಿರುವ ಹಾಗೆ ಗಂಜಿಯನ್ನು ನಾವು ಸೇವನೆ ಮಾಡುವುದರಿಂದ ಸದೃಢವಾದ ದೇಹ ವನ್ನು ಪಡೆದುಕೊಳ್ಳಬಹುದು ಹೆಚ್ಚು ಶಕ್ತಿಯನ್ನು ಪಡೆದುಕೊಳ್ಳಬಹುದು ಎಂದು ಹೇಳಲಾಗಿದ್ದು, ಮಲಬದ್ಧತೆಯು ದೇಹದ ಜಡತ್ವವನ್ನು ದೂರಮಾಡುವುದಕ್ಕೆ ಸಹಕಾರಿ ಈ ಗಂಜಿ ಮತ್ತು ಅಲ್ಸರ್ ನಂತಹ ಸಮಸ್ಯೆಯನ್ನು ಕೂಡ ಪರಿಹಾರ ಮಾಡುವ ಶಕ್ತಿ ಈ ಗಂಜಿಯಲ್ಲಿದೆ. ಅಲರ್ಜಿ ಸಮಸ್ಯೆ ನಿಮ್ಮನ್ನು ಕಾಡುತ್ತಾ ಇದ್ದಲ್ಲಿ ನೀವು ಗಂಜಿಯನ್ನು ಸೇವಿಸಿದರೆ ನಿಮಗೆ ಉತ್ತಮ ಆರೋಗ್ಯ ಲಭಿಸುತ್ತದೆ. ಈ ರೀತಿಯಾಗಿ ಗಂಜಿ ಅನ್ನ ತಿನ್ನುವುದರಿಂದ ನಾವು ಉತ್ತಮ ಆರೋಗ್ಯದೊಂದಿಗೆ ಸದೃಢ ದೇಹವನ್ನು ಕೂಡ ಪಡೆದುಕೊಳ್ಳಬಹುದಾಗಿದೆ ಈ ಮಾಹಿತಿ ನಿಮಗೆ ಉಪಯುಕ್ತವಾಗಿದ್ದಲ್ಲಿ ತಪ್ಪದೆ ಮಾಹಿತಿಗೆ ಒಂದು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗೂ ಶೇರ್ ಮಾಡಿ ಧನ್ಯವಾದ.