Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ಅಗಸೆ ಬೀಜ ಸೇವನೆ ಮಾಡುವುದರಿಂದ ಆರೋಗ್ಯಕ್ಕೆ ಆಗುವ ಹಲವಾರು ಉಪಯೋಗಗಳು ಇಲ್ಲಿವೆ ..!

ಸಾಮಾನ್ಯವಾಗಿ ಹೆಚ್ಚಾಗಿ ಈ ಪದಾರ್ಥವನ್ನು ಉತ್ತರ ಕರ್ನಾಟಕ ಮಂದಿ ಬಳಸುತ್ತಾರೆ ಇದಕ್ಕಾಗಿಯೇ ಅವರ ಆರೋಗ್ಯ ಅಷ್ಟೊಂದು ಉತ್ತಮವಾಗಿದೆ ಮತ್ತು ಅವರ ಆರೋಗ್ಯದ ಗುಟ್ಟು ಈ ಪದಾರ್ಥವೆ ಅಂತ ಹೇಳಿದರೆ ತಪ್ಪಾಗುವುದಿಲ್ಲಾ. ಹೌದು ಅಗಸೆ ಬೀಜದ ಬಗ್ಗೆ ನಾವು ನಿಮಗೆ ತಿಳಿಸಿಕೊಡುತ್ತಾ ಇದ್ದೇವೆ ಈ ಅಗಸೆಬೀಜವನ್ನು ದಕ್ಷಿಣ ಕರ್ನಾಟಕ ಮಂದಿ ಅಷ್ಟಾಗಿ ಬಳಕೆ ಮಾಡುವುದಿಲ್ಲಾ ಮತ್ತು ಬೆರಳೆಣಿಕೆ ಜನಕ್ಕೆ ಮಾತ್ರ ಇದರ ಒಂದು ಮಹತ್ವ ತಿಳಿದಿದೆ. ಅಗಸೆಬೀಜವನ್ನು ನಾವು ಸೂಪರ್ ಫುಡ್ ಪಟ್ಟಿಯಲ್ಲಿ ನೋಡಬಹುದು. ಪ್ರಪಂಚದಲ್ಲಿಯೇ ಅತ್ಯಂತ ಉತ್ತಮವಾದ ಪೋಷಕಾಂಶ ಹೊಂದಿರುವಂತಹ ಪದಾರ್ಥಗಳು ಯಾವುವು ಎಂದು ಪಟ್ಟಿ ಮಾಡುತ್ತಾ ಹೋದರೆ ಅದರಲ್ಲಿ ಅಗಸೆ ಬೀಜ ಕೂಡ ಸೇರಿಕೊಳ್ಳುತ್ತದೆ.

ಅಷ್ಟೊಂದು ಪೋಷಕಾಂಶಗಳು ಈ ಅಗಸೆ ಬೀಜದಲ್ಲಿ ಇರುತ್ತದೆ ನೀವು ಇದನ್ನು ಹೇಗೆ ಸೇವಿಸಬೇಕು ಮತ್ತು ಹೇಗೆ ಸೇವಿಸುವುದರಿಂದ ನಿಮಗೆ ಉತ್ತಮ ಆರೋಗ್ಯಲಾಭಗಳು ದೊರೆಯುತ್ತವೆ ಅನ್ನೋದನ್ನು ತಿಳಿಯೋಣ ಈ ಮಾಹಿತಿಯ ಮುಖಾಂತರ. ಸಂಪೂರ್ಣವಾಗಿ ಮಾಹಿತಿಯನ್ನು ತಿಳಿಯಿರಿ ಹಾಗೆ ನೀವು ಕೂಡ ತಿಳಿದು ಬೇರೆ ಅವರಿಗೂ ಕೂಡ ಈ ಮಾಹಿತಿಯನ್ನು ಶೇರ್ ಮಾಡುವುದನ್ನು ಮರೆಯದಿರಿ.

ಅಗಸೆ ಬೀಜದ ಬಗ್ಗೆ ಹೇಳಬೇಕೆಂದರೆ ದೇಹಕ್ಕೆ ಬೇಕಾಗಿರುವಂತಹ, ಉತ್ತಮ ಆರೋಗ್ಯ ಪಡೆದುಕೊಳ್ಳುವುದಕ್ಕಾಗಿ ಯಾವೆಲ್ಲ ಪೋಷಕಾಂಶಗಳು ನಮ್ಮ ದೇಹಕ್ಕೆ ಅವಶ್ಯಕವಾಗಿರುತ್ತದೆ. ಈ ಎಲ್ಲಾ ಪೋಷಕಾಂಶಗಳು ಅಗಸೆ ಬೀಜಗಳಲ್ಲಿ ಇರುತ್ತದೆ ಇದನ್ನು ನಾವು ಸೇವನೆ ಮಾಡುತ್ತ ಬರುವುದರಿಂದ ಸಾಕಷ್ಟು ಅನಾರೋಗ್ಯ ಸಮಸ್ಯೆಗಳಿಂದ ನಾವು ದೂರ ಉಳಿಯಬಹುದು. ಇದರಲ್ಲಿರುವಂತಹ ಒಮೆಗಾ ತ್ರೀ ಫಾಟಿ ಅಂಶವು ಹೃದಯದ ಆರೋಗ್ಯವನ್ನು ಹೆಚ್ಚು ಮಾಡುತ್ತದೆ ಮತ್ತು ಕಣ್ಣಿಗೆ ಸಂಬಂಧಪಟ್ಟ ಸಮಸ್ಯೆಗಳನ್ನು ಕೂಡ ದೂರಮಾಡುತ್ತದೆ. ಕಣ್ಣಿಗೆ ಸಂಬಂಧಪಟ್ಟ ಸಮಸ್ಯೆಗಳು ಅಂದರೆ ದೃಷ್ಟಿಯ ಸಮಸ್ಯೆ ಅಥವಾ ಕಣ್ಣು ಉರಿ ಇಂತಹ ಸಮಸ್ಯೆಗಳನ್ನು ಪರಿಹಾರ ಮಾಡುತ್ತದೆ ಈ ಅಗಸೆ ಬೀಜ.

ಅಗಸೆ ಬೀಜದಲ್ಲಿರುವ ನಾರಿನ ಅಂಶವು ನಮ್ಮ ತೂಕವನ್ನ ಕಡಿಮೆ ಮಾಡಲು ಸಹಕಾರಿಯಾಗಿರುತ್ತದೆ ಮತ್ತು ಇದರಲ್ಲಿರುವಂತಹ ಕಬ್ಬಿಣದ ಅಂಶವು ಪ್ರೋಟೀನ್ ಅಂಶವು ರಕ್ತವನ್ನು ಹೆಚ್ಚು ಮಾಡಿ ರಕ್ತಹೀನತೆ ಸಮಸ್ಯೆ ಅನ್ನೋ ದೂರಮಾಡುತ್ತದೆ ಅಷ್ಟೆಲ್ಲಾ ಸ್ತನ ಕ್ಯಾನ್ಸರ್ ರಕ್ತ ಕ್ಯಾನ್ಸರ್ ಅನ್ನು ಪರಿಹಾರ ಮಾಡುವ ಒಂದು ಪೋಷಕಾಂಶ ಈ ಅಗಸೆ ಬೀಜದಲ್ಲಿ ಇದೆ.

ಆಧುನಿಕ ಯುಗದಲ್ಲಿ ನಾವು ಪಾಲಿಸುವ ಆಹಾರ ಪದ್ದತಿಯಿಂದ ನಮ್ಮ ದೇಹಕ್ಕೆ ಯಾವ ಪೋಷಕಾಂಶಗಳು ಸರಿಯಾಗಿ ದೊರೆಯುತ್ತಿಲ್ಲಾ. ಆದ ಕಾರಣ ನಾವು ಈ ಅಗಸೆ ಬೀಜವನ್ನು ಸೇವನೆ ಮಾಡುವುದರಿಂದ, ಸೂಪರ್ ಫುಡ್ ಆದ ಈ ಅಗಸೆಬೀಜ ದೇಹಕ್ಕೆ ಒಳ್ಳೆಯ ಪೋಷಣೆಯನ್ನು ನೀಡಿ ಆರೋಗ್ಯವಂತರನ್ನಾಗಿಸುತ್ತದೆ. ಅಗಸೆ ಬೀಜವನ್ನು ನಾವು ಸೇವನೆ ಮಾಡುತ್ತ ಬರುವುದರಿಂದ ನಮಗೆ ಮುಂದಿನ ದಿನಗಳಲ್ಲಿ ರಕ್ತದ ಒತ್ತಡದ ಸಮಸ್ಯೆ ಕೂಡ ಕಾಡುವುದಿಲ್ಲಾ.

ಈ ಅಗಸೆಬೀಜವನ್ನು ಹೇಗೆ ಸೇವನೆ ಮಾಡಬೇಕು ಅಂದರೆ ಅಗಸೆ ಬೀಜವನ್ನು ಪುಡಿಮಾಡಿ ಹದಿನೈದು ನಿಮಿಷಗಳ ಒಳಗೆ ಇದನ್ನು ಸೇವನೆ ಮಾಡಬೇಕು. ಇಲ್ಲವಾದಲ್ಲಿ ಇದರಲ್ಲಿರುವಂತಹ ಕೆಲವೊಂದು ಮುಖ್ಯವಾದ ಗುಣಗಳನ್ನು ಇದು ಕಳೆದುಕೊಳ್ಳುತ್ತದೆ ಅಂದರೆ ಗಾಳಿಯಲ್ಲಿ ಲೀನವಾಗುತ್ತದೆ ಅಂತ ಕೆಲ ತಜ್ಞರು ಹೇಳಿದ್ದಾರೆ.

ಅಗಸೆ ಬೀಜವನ್ನು ಮೊಸರಿನೊಂದಿಗೆ ಸೇವಿಸಬಹುದು ಬಂದರೆ ಅಗಸೆ ಬೀಜವನ್ನು ಪುಡಿ ಮಾಡಿ ಅದರ ಹುಡಿಯನ್ನು ಮೊಸರಿನೊಂದಿಗೆ ಬೆರೆಸಿ ಅಥವಾ ಇದನ್ನು ಚಟ್ನಿಯ ರೂಪದಲ್ಲಿ ಕೂಡ ಸೇವಿಸಬಹುದು ಈ ವಿಧಾನದಲ್ಲಿ ನಾವು ಅಗಸೆಬೀಜದ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು ಈ ಅಗಸೆ ಬೀಜವನ್ನು ಪುಡಿ ಮಾಡಿದ ನಂತರ ಇದನ್ನು ನೀರಿಗೆ ಕೂಡ ಮಿಶ್ರಣ ಮಾಡಿ ನೀವು ಇದನ್ನು ಸೇವಿಸಬಹುದು.