Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ಅಜೀರ್ಣ, ಮಾನಸಿಕ ಒತ್ತಡದಂತಹ ಸಮಸ್ಯೆಗಳಿಗೆ ಈ ದೊಡ್ಡಪತ್ರೆ ರಾಮಬಾಣ..!

ಹೌದು ಈ ದೊಡ್ಡಪತ್ರೆ ಮಾನಸಿಕ ಸಮಸ್ಯೆಗಳನ್ನು ಅಷ್ಟೇ ಅಲ್ಲಾ ಅಜೀರ್ಣದಂತಹ ಸಮಸ್ಯೆ ಗಳನ್ನು ಕೂಡ ಪರಿಹರಿಸುವಂತಹ ಒಂದು ಸಾಮರ್ಥ್ಯ ದೊಡ್ಡಪತ್ರೆ ಎಲೆ ಅಲ್ಲಿ ಇದೆ. ಈ ದೊಡ್ಡಪತ್ರೆ ಗಿಡ ಸಾಮಾನ್ಯವಾಗಿ ದೇವಸ್ಥಾನಗಳ ಬಳಿ ಬೆಳೆಸುವುದುಂಟು ಇನಾ ಹಳ್ಳಿ ಮಂದಿಯೇ ಕೆಲವರು ತಮ್ಮ ಮನೆಯ ಅಂಗಳದಲ್ಲಿ ದೊಡ್ಡಪತ್ರೆಯ ಗಿಡವನ್ನ ಬೆಳೆಸುತ್ತಾರೆ ಇದಕ್ಕೆ ಕಾರಣ ಅಂದರೆ ದೊಡ್ಡಪತ್ರೆ ಎಲೆಯನ್ನು ಸಾಕಷ್ಟು ಅನಾರೋಗ್ಯ ಸಮಸ್ಯೆಗಳನ್ನು ನಿವಾರಣೆ ಮಾಡಿಕೊಳ್ಳುವುದಕ್ಕೆ ಬಳಸಲಾಗುತ್ತಿತ್ತು ಮತ್ತು ನಾಟಿ ಔಷಧಿಯಲ್ಲಿ ಕೂಡಾ ದೊಡ್ಡಪತ್ರೆಯ ಎಲೆಯನ್ನು ಬಳಸುತ್ತಿದ್ದರು.

ಈ ದೊಡ್ಡಪತ್ರೆ ಎಲೆಯ ಬಗ್ಗೆ ಮತ್ತೊಂದು ವಿಚಾರವನ್ನು ಹೇಳಬೇಕೆಂದರೆ ನಿಮಗೆ ನೆನಪಿರಬಹುದು ನಿಮ್ಮ ಮನೆಯಲ್ಲಿ ಅಜ್ಜಿಯಂದಿರು ಇದ್ದರೆ ಅವರು ಕೂದಲನ್ನು ಪೋಷಣೆ ಮಾಡುವುದಕ್ಕಾಗಿ ದೊಡ್ಡಪತ್ರೆ ಎಲೆಗಳನ್ನು ಬಳಕೆ ಮಾಡ್ತಾ ಇದ್ರು ಗೊತ್ತಾ ಈ ದೊಡ್ಡಪತ್ರೆ ಎಲೆ ದೇಹಕ್ಕೆ ಬಹಳ ತಂಪು ಮತ್ತು ಕೂದಲು ಬೆಳೆಯುವ ಹಾಗೆ ಮಾಡುವುದರಲ್ಲಿ ದೊಡ್ಡಪತ್ರೆ ಎಲೆ ಹೆಚ್ಚು ಪ್ರಾಮುಖ್ಯತೆಯನ್ನು ಹೊಂದಿದೆ .

ದೊಡ್ಡಪತ್ರೆಯ ಎಲೆಯನ್ನು ಕಲ್ಲಿನ ಮೇಲೆಯೇ ಹರಿದು ಇದನ್ನ ನುಣ್ಣಗೆ ಪೇಸ್ಟ್ ಮಾಡಿಕೊಂಡು ಕೂದಲಿಗೆ ಲೇಪನ ಮಾಡಿಕೊಳ್ತಾ ಇದ್ರು ಇದಕ್ಕೆ ಬೇಕಾದರೆ ಗೋರಂಟಿ ಸೊಪ್ಪನ್ನು ಕೂಡ ಮಿಶ್ರಣ ಮಾಡಿ ಕೂದಲಿಗೆ ಲೇಪನ ಮಾಡಿಕೊಳ್ಳಬಹುದಾಗಿತ್ತು ಇದರಿಂದಲೇ ನಮ್ಮ ಹಿರಿಯರ ಕೂದಲು ಅಷ್ಟು ಚೆನ್ನಾಗಿ ಇರುತ್ತಿತ್ತು ಅಷ್ಟು ದಪ್ಪವಾಗಿ ಕಪ್ಪಾಗಿ ಇರುತ್ತಿತ್ತು.

ಶಾಸ್ತ್ರಗಳಲ್ಲೂ ಕೂಡ ಈ ದೊಡ್ಡಪತ್ರೆಯ ಎಲೆಯ ಉಲ್ಲೇಖವಿದೆ ದೊಡ್ಡಪತ್ರೆ ಕಾಯಿಯನ್ನು ಲಕ್ಷ್ಮೀದೇವಿಗೆ ನೈವೇದ್ಯ ಸಮರ್ಪಿಸುವುದರಿಂದ ತಾಯಿ ಪ್ರಸನ್ನಳಾಗುತ್ತಾಳೆ ಅಂತ ಶಾಸ್ತ್ರಗಳು ಕೂಡ ತಿಳಿಸುತ್ತದೆ. ಇನ್ನೂ ಈ ದೊಡ್ಡಪತ್ರೆಯ ಬಗ್ಗೆ ವೈಜ್ಞಾನಿಕವಾಗಿ ಹೇಳಬೇಕೆಂದರೆ ಇದರಲ್ಲಿ ಆ್ಯಂಟಿಆಕ್ಸಿಡೆಂಟ್ ಗಳು ಹೇರಳವಾಗಿದೆ. ನಾವು ವಾರಕ್ಕೆ ಒಮ್ಮೆ ಈ ದೊಡ್ಡಪತ್ರೆಯ ಪ್ರಯೋಜನವನ್ನು ಪಡೆದುಕೊಳ್ಳುತ್ತಾ ಬಂದರೆ ಸಾಕಷ್ಟು ಆರೋಗ್ಯಕರ ಲಾಭಗಳನ್ನು ನಾವು ಪಡೆದುಕೊಳ್ಳಬಹುದು.

ಇದರಲ್ಲಿ ಇರುವಂತಹ ಆ್ಯಂಟಿಆಕ್ಸಿಡೆಂಟ್ ಗಳು ರೋಗನಿರೋಧಕ ಶಕ್ತಿ ಅನ್ನು ಹೆಚ್ಚು ಮಾಡುತ್ತದೆ ಪ್ರತಿರೋಧಕ ಗುಣವನ್ನು ಹೆಚ್ಚು ಮಾಡುವುದಲ್ಲದೆ ಇನ್ನಷ್ಟು ಆರೋಗ್ಯಕರ ಲಾಭಗಳನ್ನು ದೊಡ್ಡಪತ್ರೆಯ ಎಲೆಯನ್ನು ನಾವು ಸೇವಿಸುವುದರಿಂದ ಪಡೆದುಕೊಳ್ಳಬಹುದಾಗಿದೆ. ಈ ದೊಡ್ಡಪತ್ರೆಯ ಎಲೆಯನ್ನು ಹಂಚಿನ ಮೇಲೆ ಹಾಕಿ ಇದರಿಂದ ರಸವನ್ನು ತೆಗೆದು ಇದನ್ನು ಗಾಯ ಆದ ಭಾಗಕ್ಕೆ ಲೇಪನ ಮಾಡಿಕೊಳ್ಳುವುದರಿಂದ ಗಾಯ ಬೇಗನೆ ನಿವಾರಣೆಯಾಗುತ್ತದೆ. ಅಷ್ಟೇ ಅಲ್ಲ ರಕ್ತಸ್ರಾವ ಕೂಡ ಕಡಿಮೆಯಾಗುತ್ತದೆ. ಈ ರೀತಿಯಾಗಿ ನಮ್ಮ ಪ್ರಕೃತಿಯಲ್ಲಿ ದೊರೆಯುವ ಈ ದೊಡ್ಡಪತ್ರೆ ಎಲೆ ನಮಗೆ ಆರೋಗ್ಯಕರ ಲಾಭಗಳನ್ನು ನೀಡುತ್ತದೆ ಮತ್ತು ಇನ್ನಷ್ಟು ಅನೇಕ ವಿರುದ್ಧ ಲಾಭಗಳನ್ನ ಕೂಡ ನೀಡಬಲ್ಲದು ಈ ದೊಡ್ಡಪತ್ರೆ ಎಲೆ.

ಇವತ್ತಿನ ಈ ಸಣ್ಣ ಮಾಹಿತಿ ನಿಮಗೆ ಉಪಯುಕ್ತವಾಗಿದ್ದಲ್ಲಿ ನೀವು ಕೂಡಾ ತಪ್ಪದೇ ನಿಮ್ಮ ಮನೆಯ ಮುಂದೆ ಜಾಗವಿದ್ದಲ್ಲಿ ಈ ದೊಡ್ಡಪತ್ರೆ ಗಿಡವನ್ನು ಬೆಳೆಸಿ ಇದು ವಾತಾವರಣವನ್ನು ಶುದ್ಧೀಕರಿಸುತ್ತದೆ ಮತ್ತು ಆದಷ್ಟು ಮರಗಳನ್ನು ಬೆಳೆಸಿ ವಾತಾವರಣವನ್ನು ಶುದ್ಧವಾಗಿ ಇರಿಸಿಕೊಳ್ಳಿ. ನಿಮಗೆ ಮಾಹಿತಿ ಉಪಯುಕ್ತವಾಗಿದ್ದಲ್ಲಿ ಇನ್ನೂ ಇಂತಹ ಅನೇಕ ಉಪಯುಕ್ತ ಮಾಹಿತಿಗಳನ್ನು ಪಡೆದುಕೊಳ್ಳುವುದಕ್ಕಾಗಿ ಹಾಗೂ ಆರೋಗ್ಯಕ್ಕೆ ಸಂಬಂಧಿಸಿದ ಅನೇಕ ವಿಚಾರಗಳನ್ನು ಪಡೆದುಕೊಳ್ಳುವುದಕ್ಕಾಗಿ ನಮ್ಮ ಫೇಸ್ ಬುಕ್ ಪೇಜ್ ಅನ್ನು ಫಾಲೋ ಮಾಡಿ ಶುಭದಿನ ಧನ್ಯವಾದ.