Categories
ಭಕ್ತಿ ಮಾಹಿತಿ ಸಂಗ್ರಹ

ಅದ್ಭುತ ಈ ದೇವಸ್ಥಾನದಲ್ಲಿರುವ ಮರಕ್ಕೆ ಬೀಗ ಕಟ್ಟಿ ನೋಡಿ ನಿಮ್ಮ ಎಲ್ಲ ಸಮಸ್ಯೆಗಳು ಒಂದೇ ತಿಂಗಳಲ್ಲಿ ಪರಿಹಾರ ಆಗುತ್ತದೆ!

ಎಲ್ಲರಿಗೂ ನನ್ನ ನಮಸ್ಕಾರಗಳು ಸ್ನೇಹಿತರೇ ಭಾರತ ದೇಶ ಎಂದರೆ ಸೌಹಾರ್ದತಾ ದೇಶ ಎಂದು ಇಲ್ಲಿ ಎಲ್ಲ ಧರ್ಮದವರು ಸೇರಿ ಎಲ್ಲ ಧರ್ಮದವರು ಒಂದೇ ಎಂದು ಒಟ್ಟಾಗಿ ಬಾಳುತ್ತಿದ್ದಾರೆ ಇನ್ನು ನಾವು ಭಾರತ ದೇಶದಲ್ಲಿ ಅನೇಕ ಧರ್ಮಗಳನ್ನು ಕಾಣಬಹುದಾಗಿದೆ .

ಸರ್ವ ಧರ್ಮದಲ್ಲಿಯೂ ಏಕತೆ ಕಾಣುವ ಒಂದೇ ಒಂದು ದೇಶ ಎಂದರೆ ಈ ಪ್ರಪಂಚದಲ್ಲಿ ಅದು ನಮ್ಮ ಭಾರತ ದೇಶ ಹೀಗೆ ಹೇಳಿಕೊಳ್ಳುವುದಕ್ಕೆ ನಮಗೆಲ್ಲರಿಗೂ ಹೆಮ್ಮೆ ಅನ್ನಿಸುತ್ತದೆ ಅಲ್ವಾ ಸ್ನೇಹಿತರೇ .

ಆದರೆ ಕೆಲವೊಂದು ಕಾರಣಗಳಿಂದ ಕೆಲವೊಂದು ಸಂದರ್ಭಗಳಲ್ಲಿ ಹಾಗೂ ಈಗಲೂ ಸಹ ಜನರು ಜಾತಿ ಭೇದವನ್ನು ಮಾಡಿ ಹೊಡೆದಾಡಿಕೊಳ್ಳುತ್ತಿದ್ದಾರೆ ಮೂರ್ಖರಾಗಿ ಜಾತಿ ಧರ್ಮಗಳ ಹಿಂದೆ ಹೋಗಿ ತಾವು ತಾವೇ ತಮ್ಮ ನೆಮ್ಮದಿಯನ್ನು ಕೆಡಿಸಿ ಕೊಂಡು ಸಮಾಜದಲ್ಲಿ ಶಾಂತಿಯನ್ನು ಕೆಡಿಸಿ ಜಾತಿ ಮತ ಧರ್ಮ ಎಂದು ಜಗಳವಾಡುತ್ತಾ ಇದ್ದಾರೆ ಸ್ನೇಹಿತರೇ ಇದೆಲ್ಲ ತಪ್ಪು ಎಂದು ಜನರಿಗೆ ಯಾವಾಗ ಅರಿವಾಗುತ್ತದೆಯೊ ಆಗ ಸಮಾಜದಲ್ಲಿ ನೆಮ್ಮದಿ ಶಾಂತಿಗಳು ನೆಲೆಸುತ್ತದೆ .

ಇಂತಹ ಸಂದರ್ಭದ ನಡುವೆಯೂ ಸಹ ಕರ್ನಾಟಕದ ರಾಜ್ಯ ಮಲೆನಾಡ ಬೀಡು ಕುವೆಂಪುರವರ ಬೀಡು ಎಂದು ಹೆಸರಾಗಿರುವ ಶಿವಮೊಗ್ಗ ಜಿಲ್ಲೆಯ ಹಣಗೆರೆ ಎಂಬ ಪುಟ್ಟ ಗ್ರಾಮದಲ್ಲಿ ಒಂದು ವಿಶೇಷವಾದ ದರ್ಗಾ ಮತ್ತು ದೇವಾಲಯವಿದೆ.

ಸ್ನೇಹಿತರ ಇಲ್ಲಿ ವಿಶೇಷ ಏನೆಂದರೆ ದರ್ಗಾದ ಒಳಗೆ ದೇವಸ್ಥಾನವಿರುವುದು ಇಲ್ಲಿ ಮುಸ್ಲಿಂ ಮತ್ತು ಹಿಂದೂಗಳು ಎರಡೂ ಧರ್ಮದವರು ಒಂದೇ ಎಂದು ತಿಳಿದು ಜೀವನ ನಡೆಸುತ್ತಿದ್ದಾರೆ ಸುಮಾರು ಐನೂರು ಜನಗಳನ್ನು ಹೊಂದಿರುವ ಈ ಗ್ರಾಮ ಈ ವಿಶೇಷತೆಗೆ ಹೆಸರುವಾಸಿಯಾಗಿದೆ ಮತ್ತು ಕಷ್ಟ ಬಂದವರು ಮನೆಯಲ್ಲಿ ಶಾಂತಿ ಇಲ್ಲದವರು ಮಾಟ ಮಂತ್ರಕ್ಕೆ ಒಳಗಾದವರು ಆರೋಗ್ಯ ಸಮಸ್ಯೆ ಇರುವವರು ಸಹ ಇಲ್ಲಿಗೆ ಬಂದು ಪೂಜೆ ಮಾಡಿಸಿಕೊಂಡು ಹೋಗುತ್ತಾರೆ .

ಈ ದರ್ಗಾದ ಒಳಗಡೆ ಭೂತರಾಯ ಚೌಡೇಶ್ವರಿ ಎಂಬ ದೇವಸ್ಥಾನವೂ ಇದೆ ಇನ್ನು ಈ ದರ್ಗಾಕ್ಕೆ ಐನೂರು ವರ್ಷಗಳ ಇತಿಹಾಸವೂ ಕೂಡ ಇದೇ ಮತ್ತೊಂದು ವಿಶೇಷವೇನೆಂದರೆ ಈ ದೇವಾಲಯದ ಆವರಣದಲ್ಲಿರುವ ಮರಕ್ಕೆ ನಮ್ಮ ಕಷ್ಟಗಳನ್ನು ಹೇಳಿಕೊಂಡು ಹರಕೆ ಮಾಡಿಕೊಂಡು ಈ ಮರಕ್ಕೆ ಬೀಗ ಕಟ್ಟಿದರೆ.

ಆ ಕಷ್ಟಗಳೆಲ್ಲ ನಿವಾರಣೆ ಆಗುತ್ತದೆ ಎಂದು ಸಹ ಇಲ್ಲಿಯ ಜನರು ಹೇಳುತ್ತಾರೆ ಇನ್ನೂ ಹೇಳಬೇಕೆಂದರೆ ಸ್ನೇಹಿತರೇ ದೇವಸ್ಥಾನದ ಆಚೆಯಲ್ಲಿ ಹಿಂದು ಮತ್ತು ಮುಸ್ಲಿಮರು ಅಂಗಡಿಗಳನ್ನು ಇಟ್ಟುಕೊಂಡು ವ್ಯಾಪಾರಗಳನ್ನು ಸಹ ಮಾಡುತ್ತಾರೆ ದರ್ಗಾ ಮತ್ತು ದೇವಸ್ಥಾನಕ್ಕೆ ಬಂದ ಭಕ್ತಾದಿಗಳು ಇಲ್ಲಿ ಪ್ರಸಾದವನ್ನು ತೆಗೆದುಕೊಳ್ಳಬಹುದು ಮತ್ತು ಸ್ನೇಹಿತರೇ ಇಲ್ಲಿಯ ಗ್ರಾಮದ ಜನರು ಯಾವ ಧರ್ಮದ ಜಗಳವಿಲ್ಲದೆ ಎಲ್ಲರೂ ಕೂಡಿ ಖುಷಿಯಿಂದ ಬಾಳುತ್ತಿದ್ದಾರೆ .

ನೀವು ಸಹ ಈ ಹಣಗೆರೆ ಗ್ರಾಮದಲ್ಲಿರುವ ದೇವಸ್ಥಾನ ಮತ್ತು ದರ್ಗಾಕ್ಕೆ ಭೇಟಿ ನೀಡಬೇಕೆಂದರೆ ಶಿವಮೊಗ್ಗ ಜಿಲ್ಲೆ ಗೆ ಬಂದಾಗ ನೀವು ಈ ಕ್ಷೇತ್ರಕ್ಕೆ ಹೋಗಬಹುದು ಶಿವಮೊಗ್ಗದಿಂದ ಮೂವತ್ತು ಕಿಲೋಮೀಟರ್ ದೂರದಲ್ಲಿರುವ ಈ ಗ್ರಾಮಕ್ಕೆ ಬಸ್ ಗಳ ವ್ಯವಸ್ಥೆ ಕೂಡ ಚೆನ್ನಾಗಿ ಇರುತ್ತದೆ ಇನ್ನು ನೀವು ರೈಲ್ವೆ ಮಾರ್ಗದಲ್ಲಿ ಬರುವುದಾದರೆ ಮೊದಲು ಶಿವಮೊಗ್ಗ ಜಿಲ್ಲೆಯ ರೈಲ್ವೆ ನಿಲ್ದಾಣಕ್ಕೆ ಬಂದು ಆ ನಂತರ ಬಸ್ ಮುಖಾಂತರ ಈ ದೇವಾಲಯಕ್ಕೆ ಹೋಗಬಹುದಾಗಿದೆ .

ನಿಮಗೆಲ್ಲರಿಗೂ ಈ ಮಾಹಿತಿ ಇಷ್ಟವಾಗಿದ್ದರೆ ಇದನ್ನು ನಿಮ್ಮ ಸ್ನೇಹಿತರ ಜೊತೆಗೂ ಸಹ ಹಂಚಿಕೊಳ್ಳಿ ಎಲ್ಲರಿಗೂ ಒಳ್ಳೆಯದಾಗಲಿ ಶುಭ ದಿನ ಶುಭವಾಗಲಿ ಧನ್ಯವಾದಗಳು ಸ್ನೇಹಿತರೇ .