ಪ್ರತಿನಿತ್ಯ ಕೋಳಿಮೊಟ್ಟೆಯನ್ನ ತಿನ್ನುವುದರಿಂದ ನಿಮ್ಮ ದೇಹದಲ್ಲಿ ಏನೆಲ್ಲಾ ಬದಲಾವಣೆ ಆಗುತ್ತೆ ಗೊತ್ತ ..!

251

ನಮ್ಮ ದೇಹಕ್ಕೆ ಅಗತ್ಯವಾಗಿ ಇರುವುದು ಅಂದರೆ ಶಕ್ತಿ. ನಮ್ಮ ಊಟ ಮಾಡುವುದು ನಮ್ಮ ದೇಹಕ್ಕೆ ಶಕ್ತಿ ನೀಡುವುದಕ್ಕಾಗಿ ಹಾಗಂತ ಯಾವುದ್ಯಾವುದೋ ಆಹಾರ ಪದಾರ್ಥಗಳನ್ನು ಸೇವನೆ ಮಾಡುವುದಕ್ಕೆ ಆಗುವುದಿಲ್ಲ ಹಾಗೆ ನಮ್ಮ ದೇಹಕ್ಕೆ ಬೇಕಾಗಿರುವ ಪೋಷಕಾಂಶಗಳನ್ನು ನೀಡದೆ ಇದ್ದಾಗ ಯಾವುದಾದರೂ ಕೊರತೆ ನಮ್ಮಲ್ಲಿ ಉಂಟಾಗುತ್ತದೆ. ಅದರಿಂದ ಇನ್ಯಾವುದಾದರೂ ಸಮಸ್ಯೆ ಉಂಟಾಗುತ್ತದೆ ಅದೇ ರೀತಿಯಲ್ಲಿ ನಮ್ಮ ದೇಹದಲ್ಲಿ ವಿಟಮಿನ್ಸ್ ಕೊರತೆಯಾದರೆ ಹೇಗೆ ಕಣ್ಣಿನ ದೃಷ್ಟಿಯ ಸಮಸ್ಯೆ ಕೂದಲು ಉದುರುವುದು ಇನ್ನೂ ನಾನಾ ತರಹದ ಸಮಸ್ಯೆಗಳು ಉಂಟಾಗುತ್ತದೆ,

ಅದೇ ರೀತಿಯಲ್ಲಿ ಅಯೋಡಿನ್ ಕೊರತೆ ಆದರೆ ಥೈರಾಯ್ಡ್ ಗ್ರಂಥಿಯಲ್ಲಿ ವ್ಯತ್ಯಾಸವಾಗಿ ಥೈರಾಯ್ಡ್ ಗ್ರಂಥಿಯಿಂದ ಹಾರ್ಮೋನ್ ಉತ್ಪಾದನೆ ಆಗುವುದಿಲ್ಲ. ಇದರಿಂದ ನಮ್ಮ ದೇಹದಲ್ಲಿ ಕೆಲವೊಂದು ಅನಾರೋಗ್ಯ ಸಮಸ್ಯೆಗಳು ಉಂಟಾಗುತ್ತದೆ ಅದನ್ನು ಹೈಪೋಥೈರಾಯಿಡಿಸಂ ಮತ್ತು ಹೈಪರ್ ಥೈರಾಯಿಡಿಸಂ ಅಂತ ಪರಿಗಣಿಸಲಾಗುತ್ತದೆ. ಆದಕಾರಣ ಯಾವ ಪೋಷಕಾಂಶದ ಕೊರತೆಯಾಗುವಂತಿಲ್ಲ. ನಮ್ಮ ದೇಹಕ್ಕೆ ಇದಕ್ಕಾಗಿ ಮಾಡಬೇಕಾಗಿರುವುದು ಏನು ಅಂದರೆ,

ಉತ್ತಮವಾದ ಆಹಾರ ಪದ್ಧತಿಯನ್ನು ಪಾಲಿಸಿದರೆ ಸಾಕು ಯಾವ ಪೋಷಕಾಂಶಗಳ ಕೊರತೆ ಇಲ್ಲದೆ ಆರೋಗ್ಯ ಉತ್ತಮವಾಗಿರುತ್ತದೆ. ಏನೋ ಅಯೋಡಿನ್ ಕೊರತೆ ಅನ್ನು ಹೇಗೆ ಪರಿಹಾರ ಮಾಡಿಕೊಳ್ಳುವುದು ಅಂತ ಹೇಳ್ತೇವೆ. ಅಯೋಡಿನ್ ನಮ್ಮ ದೇಹಕ್ಕೆ ಅತ್ಯವಶ್ಯಕವಾಗಿ ಬೇಕಾಗಿರುವಂತಹದ್ದು. ಅದು ಹೇಗೆ ನಾವು ಕೆಲವೊಂದು ಹಣ್ಣುಗಳು ತರಕಾರಿಗಳನ್ನು ಸೇವಿಸಿದಾಗ ವಿಟಮಿನ್ಸ್ ಮತ್ತು ಖನಿಜಾಂಶಗಳನ್ನು ಪಡೆದುಕೊಳ್ಳುತ್ತೇವೆ, ಅದೇ ರೀತಿ ಕೆಲವೊಂದು ಆಹಾರ ಪದ್ದತಿಯನ್ನು ಸೇವನೆ ಮಾಡುವುದರಿಂದ ಅಯೋಡಿನ್ ಅಂಶವನ್ನು ಪಡೆದುಕೊಳ್ಳಬಹುದು.

ಅಯೋಡಿನ್ ಅಂಶವನ್ನು ಒಳಗೊಂಡಿರುವ ಆಹಾರ ಗಳು ಯಾವುವು ಅಂದರೆ ಹೆಚ್ಚಾಗಿ ಉಪ್ಪನ್ನು ಸೇವಿಸುವ ಮುಖಾಂತರ ನಮ್ಮ ದೇಹಕ್ಕೆ ಅಯೋಡಿನ್ ಕೊರತೆಯನ್ನು ನೀಗಿಸಬಹುದು. ಅದೇ ರೀತಿಯಲ್ಲಿ ಈ ಅಯೋಡಿನ್ ಅಂಶ ವನ್ನು ಮೊಟ್ಟೆಯನ್ನು ಸೇವಿಸುವ ಮುಖಾಂತರ ನಾವು ನಮ್ಮ ದೇಹಕ್ಕೆ ಒದಗಿಸಿಕೊಡಬಹುದು. ಹೌದು ಕೋಳಿ ಮೊಟ್ಟೆಯಲ್ಲಿ ಅಯೋಡಿನ್ ಅಂಶ ಇದೆ, ಆದಕಾರಣ ಹೈಪೋಥೈರಾಯ್ಡಿಸಂ ಹೈಪರ್ಥೈರಾಯ್ಡಿಸಂ ಅಥವಾ ಅಯೋಡಿನ್ ಕೊರತೆಯಿಂದ ಉಂಟಾಗುವ ಗಾಯಟ್ರ ಇಂತಹ ಎಲ್ಲ ಸಮಸ್ಯೆಗಳನ್ನು ಪರಿಹಾರ ಆಗುವುದಕ್ಕೆ ವೈದ್ಯರು ಸೂಚಿಸುವುದು ನಿಯಮಿತವಾಗಿ ಕೋಳಿಮೊಟ್ಟೆಗಳನ್ನು ಸೇವಿಸಿ ಮತ್ತು ಅಗತ್ಯಕ್ಕಿಂತ ಹೆಚ್ಚಾಗಿ ಉಪ್ಪನ್ನು ಸೇವಿಸಬೇಡಿ ಎಂದು.

ಹಾಗಾದರೆ ಕೋಳಿಮೊಟ್ಟೆಯನ್ನು ಸೇವನೆ ಮಾಡುವುದರಿಂದ ಏನೆಲ್ಲಾ ಉಪಯೋಗಗಳನ್ನು ಪಡೆದುಕೊಳ್ಳಬಹುದು ಅಂತ ನೀವು ತಿಳಿದಿದ್ದೀರಾ. ಇದರ ಜತೆಗೆ ಅಯೋಡಿನ್ ಪಡೆದುಕೊಳ್ಳಬೇಕೆಂದರೆ ಕೋಳಿ ಮೊಟ್ಟೆಗಳನ್ನು ಸೇವಿಸಬೇಕು. ಕೋಳಿ ಮೊಟ್ಟೆಯಲ್ಲಿ ಸಾಕಷ್ಟು ಅಯೋಡಿನ್ ಇದೆ ಅದರ ನಮ್ಮ ದೇಹಕ್ಕೆ ಅಗತ್ಯವಾಗಿರುವುದು ಪುರುಷರಿಗೆ ಆದರೆ ನೂರ ಐವತ್ತು ಮಿಲಿ ಗ್ರಾಂ ಅಯೋಡಿನ್ ಅವಶ್ಯಕವಾಗಿದ್ದು ಮಹಿಳೆಯರಿಗೆ ಇನ್ನೂರ ಇಪ್ಪತ್ತು ಮಿಲಿಗ್ರಾಂ ಮತ್ತು ಗರ್ಭಿಣಿ ಸ್ತ್ರೀಯರಲ್ಲಿ ಇನ್ ನೂರ ತೊಂಬತ್ತು ಮಿಲಿ ಗ್ರಾಂ ಅಯೋಡಿನ್ ಅವಶ್ಯಕವಾಗಿರುತ್ತದೆ ಈ ಮೊಟ್ಟೆಯೊಂದನ್ನು ಸೇವಿಸಿದರೆ ಹನ್ನೆರೆಡು ಮೈಕ್ರೋ ಗ್ರಾಂನಷ್ಟು ಅಯೋಡಿನ್ ಅನ್ನು ಪಡೆದುಕೊಳ್ಳಬಹುದು.

ಆದಕಾರಣ ಪ್ರತಿದಿನ ಬೇಯಿಸಿದ ಮೊಟ್ಟೆಯನ್ನು ತಿನ್ನುತ್ತಾ ಬಂದರೆ ನಮ್ಮ ದೇಹಕ್ಕೆ ಬೇಕಾಗಿರುವಷ್ಟು ಅಯೊಡಿನ್ ದೊರೆಯುತ್ತದೆ. ಇದರ ಜೊತೆಗೆ ಕೋಳಿ ಮೊಟ್ಟೆ ಅನ್ನೋ ತಿನ್ನುವುದರಿಂದ ಥೈರಾಯ್ಡ್ ಗ್ರಂಥಿಯಿಂದ ಉತ್ಪತ್ತಿಯಾಗುವ ಹಾರ್ಮೋನ್ ಉತ್ತಮವಾಗಿ ದೇಹದಲ್ಲಿ ಬಿಡುಗಡೆಯಾಗಿ ದೇಹದಲ್ಲಿ ಮೆಟಬಾಲಿಸಮ್ ರೇಟ್ ಅನ್ನು ಹೆಚ್ಚು ಮಾಡುತ್ತದೆ ಇದರಿಂದ ಆರೋಗ್ಯ ಹೆಚ್ಚುತ್ತದೆ. ಪ್ರತಿಯೊಬ್ಬರು ಬೇಯಿಸಿದ ಮೊಟ್ಟೆ ಸೇವಿಸಿ ಉತ್ತಮ ಆರೋಗ್ಯವನ್ನು ಪಡೆದುಕೊಳ್ಳಿ. ಕೋಳಿ ಮೊಟ್ಟೆಯನ್ನು ಸೇವಿಸುವ ಮುಖಾಂತರ ಇನ್ನಷ್ಟು ಅರೋಗ್ಯಕರ ಲಾಭಗಳನ್ನು ಪಡೆದುಕೊಳ್ಳಿ ಧನ್ಯವಾದ.

LEAVE A REPLY

Please enter your comment!
Please enter your name here