Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ಆಗಾಗ ಕಣ್ಣು ನೋವು ಬರುತ್ತಾ ಇದೆಯಾ ಹಾಗಾದ್ರೆ ಈ ಮನೆ ಮದ್ದು ಬಳಕೆ ಮಾಡಿ ನೋಡಿ ..!

ಕಣ್ಣು ನೋವಿಗೆ ಹಲವಾರು ರೀತಿಯ ಕಾರಣಗಳು ಇರಬಹುದು ಆದರೆ ಕಣ್ಣು ಎಂಬ ಅಂಗ ನಮ್ಮ ದೇಹದಲ್ಲಿ ಅತ್ಯಂತ ಸೂಕ್ಷ್ಮವಾದದ್ದು, ಈ ಕಣ್ಣಿಗೆ ಒಮ್ಮೆ ಅನಾರೋಗ್ಯ ಸಮಸ್ಯೆ ಉಂಟಾದರೆ ಅಥವಾ ನಾವು ಕಣ್ಣಿನ ಬಗ್ಗೆ ಒಮ್ಮೆ ನಿರ್ಲಕ್ಷ್ಯತನ ತೋರಿದರೆ ಜೀವನದಲ್ಲಿಯೇ ಈ ಕಣ್ಣಿಗೆ ಸಂಬಂಧಪಟ್ಟ ಸಮಸ್ಯೆಗಳ ಪರಿಹಾರ ಮಾಡಿಕೊಳ್ಳುವುದಕ್ಕೆ ಸಾಧ್ಯವಾಗುವುದಿಲ್ಲ ಅಥವಾ ತುಂಬಾ ಕಷ್ಟ ಪಡಬೇಕಾಗುತ್ತದೆ ಕಣ್ಣಿನ ಆರೋಗ್ಯವನ್ನು ವೃದ್ಧಿಸಿಕೊಳ್ಳುವುದಕ್ಕಾಗಿ ಆದರೆ ಈ ಕಣ್ಣಿಗೆ ಸಂಬಂಧಪಟ್ಟಂತಹ ಕೆಲವೊಂದು ಚಿಕ್ಕಪುಟ್ಟ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವುದಕ್ಕಾಗಿ ನಾವು ಏನು ಮಾಡಬಹುದು .

ಯಾವ ಪರಿಹಾರದಿಂದ ಮತ್ತು ಮನೆ ಮದ್ದಿನಿಂದ ಈ ಕಣ್ಣಿಗೆ ಸಂಬಂಧಪಟ್ಟ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು ಅನ್ನುವ ಮಾಹಿತಿಯನ್ನು ನೀಡ್ತೇವೆ ಸಂಪೂರ್ಣವಾಗಿ ಲೇಖನವನ್ನು ತಿಳಿಯಿರಿ. ಹಾಗೆ ನಿಮಗೂ ಕೂಡ ಪದೇ ಪದೇ ಈ ಕಣ್ಣಿಗೆ ಸಂಬಂಧಪಟ್ಟ ಚಿಕ್ಕ ಪುಟ್ಟ ಸಮಸ್ಯೆಗಳು ಕಾಡುತ್ತಾ ಇದ್ದರೆ ಅದನ್ನು ಪರಿಹಾರ ಮಾಡಿಕೊಳ್ಳುವುದಕ್ಕಾಗಿ ಕೆಲವೊಂದು ಮನೆಮದ್ದುಗಳನ್ನು ತಿಳಿಸಿಕೊಡುತ್ತೇವೆ, ಈ ರೀತಿ ನೀವು ಪರಿಹಾರಗಳನ್ನು ಮಾಡಿಕೊಳ್ಳುವುದರಿಂದ ಅಥವಾ ಈ ವಿಧಾನವನ್ನು ನೀವು ಪ್ರತಿದಿನ ಪಾಲಿಸುವುದರಿಂದ ಕಣ್ಣಿಗೆ ಸಂಬಂಧಪಟ್ಟ ಸಮಸ್ಯೆಗಳು ಎದುರಾಗುವುದಿಲ್ಲಾ. ಇದರ ಜೊತೆಗೆ ಕಣ್ಣಿನ ಆರೋಗ್ಯವನ್ನು ಕೂಡ ಕಾಪಾಡಿಕೊಳ್ಳಬಹುದು.

ಕೆಂಪು ಮೂಲಂಗಿಯನ್ನು ನೋಡಿರುತ್ತೀರಾ ಕೆಂಪು ಮೂಲಂಗಿಯನ್ನು ಸೇವನೆ ಮಾಡುವುದರಿಂದ ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಇನ್ನೂ ಕಣ್ಣು ಪದೇಪದೆ ಉರಿಯುತ್ತಿದೆ ಅನ್ನುವವರು, ಅನ್ನದೊಂದಿಗೆ ಈರುಳ್ಳಿಯನ್ನು ಸೇವಿಸಬೇಕು ಅಂದರೆ ಊಟ ಮಾಡುವಾಗ ಈರುಳ್ಳಿಯನ್ನು ಸೇವನೆ ಮಾಡುವುದರಿಂದ ಕಣ್ಣು ಉರಿಯುವುದು ನಿವಾರಣೆ ಆಗುತ್ತದೆ.

ಕಣ್ಣಿಗೆ ಸಂಬಂಧಪಟ್ಟ ಸೋಂಕುಗಳು ಪರಿಹಾರ ಆಗಬೇಕೆಂದರೆ ಮೊಸರಿನೊಂದಿಗೆ ಬಾಳೆಹಣ್ಣನ್ನು ಕಿವುಚಿ ತಿನ್ನಬೇಕು ಈ ರೀತಿ ಪರಿಹಾರ ಮಾಡಿಕೊಳ್ಳುವುದರಿಂದ ಕಣ್ಣಿಗೆ ಆಗಿರುವಂತಹ ಸೋಂಕು ಅಥವಾ ಕಣ್ಣು ನೋವು ನಿವಾರಣೆಯಾಗುತ್ತದೆ. ನೆಲ್ಲಿಕಾಯಿಯ ರಸವನ್ನು ಪ್ರತಿದಿನ ಸೇವನೆ ಮಾಡುವುದರಿಂದ ಕಣ್ಣಿನ ದೃಷ್ಟಿ ಚುರುಕಾಗುತ್ತದೆ ಮತ್ತು ಕಣ್ಣಿಗೆ ಸಂಬಂಧಪಟ್ಟ ಸಮಸ್ಯೆಗಳು ನಿವಾರಣೆಯಾಗುತ್ತದೆ.

ಇದರ ಜೊತೆಗೆ ನಾವು ಪ್ರತಿದಿನ ಬಾದಾಮಿಯನ್ನು ಸೇವಿಸಬಹುದು ಬಾದಾಮಿ ಸೇವಿಸುವುದರಿಂದ ಕೂಡ ಕಣ್ಣಿನ ದೃಷ್ಟಿಯನ್ನು ವೃದ್ಧಿಸಿಕೊಳ್ಳಬಹುದು. ಕೇವಲ ಆಹಾರ ಪದಾರ್ಥಗಳಿಂದ ಮಾತ್ರ ನಾವು ಕಣ್ಣಿನ ಆರೋಗ್ಯವನ್ನು ಗುರುತಿಸಿಕೊಳ್ಳುವುದಕ್ಕೆ ಸಾಧ್ಯವಾಗುವುದಿಲ್ಲ. ಕೆಲವೊಂದು ಉತ್ತಮವಾದ ಹವ್ಯಾಸಗಳನ್ನು ರೂಢಿಸಿಕೊಳ್ಳಬೇಕು ಅದೇನೆಂದರೆ ಹೆಚ್ಚಿನ ಸಮಯ ಕಂಪ್ಯೂಟರ್ ಲ್ಯಾಪ್ಟಾಪ್ ಮೊಬೈಲ್ ನೋಡುವುದು ಟಿವಿ ವೀಕ್ಷಣೆ ಮಾಡುವುದು ಮಾಡಬಾರದು ಮತ್ತು ರಾತ್ರಿ ಸಮಯದಲ್ಲಿ ನಿದ್ರೆ ಮಾಡುವಾಗ ಲೈಟ್ ಹಾಕಿ ಮಲಗುವುದು ಒಳ್ಳೆಯದಲ್ಲಾ.

ಬಿಸಿಲಿಗೆ ಹೋದಾಗ ಕಣ್ಣಿಗೆ ಹೆಚ್ಚು ಶಾಖ ಬೀಳುವ ಹಾಗೆ ನೋಡಿಕೊಳ್ಳಬಾರದು. ಅದಕಾರಣ ಆಚೆ ಹೋದಾಗ ಕೂಲಿಂಗ್ ಗ್ಲಾಸ್ ಹಾಕಿಕೊಳ್ಳುವುದು ಸನ್ ಗ್ಲಾಸ್ ಹಾಕಿಕೊಳ್ಳುವುದು ಒಳ್ಳೆಯದು. ಕಣ್ಣಿನ ಸುತ್ತ ಇರುವ ಸೂಕ್ಷ್ಮ ನರಗಳನ್ನು ನಾವು ಕಾಪಾಡಿಕೊಳ್ಳುವುದಕ್ಕಾಗಿ ಬಾದಾಮಿ ಎಣ್ಣೆಯಿಂದ ವಾರದಲ್ಲಿ 2ಬಾರಿಯಾದರೂ ಕಣ್ಣಿನ ಸುತ್ತ ನಿಧಾನವಾಗಿ ಮಸಾಜ್ ಮಾಡಿಕೊಳ್ಳಬೇಕು.

ಈ ಕೆಲವೊಂದು ಪರಿಹಾರಗಳನ್ನು ನೀವು ಮಾಡಿಕೊಳ್ಳಿ ಉತ್ತಮ ಆರೋಗ್ಯವನ್ನು ಪಡೆದುಕೊಳ್ಳಿ ಹಾಗೆ ಕ್ಯಾರೆಟ್ ಬೀಟ್ ರೂಟ್ ಸೇಬು ಹಣ್ಣು ಸೀಬೆಹಣ್ಣು ಹಸಿರು ಸೊಪ್ಪುಗಳನ್ನು ಆಹಾರದೊಂದಿಗೆ ಸೇವಿಸುವುದನ್ನು ಮರೆಯದಿರಿ. ಈ ಕೆಲವೊಂದು ಪರ್ಯಾಯ ಉತ್ತಮ ಆರೋಗ್ಯವನ್ನು ಪಡೆದುಕೊಳ್ಳಿ ಇವತ್ತಿನ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ತಪ್ಪದೆ ಲೈಕ್ ಮಾಡಿ ಕಾಮೆಂಟ್ ಮಾಡಿ ಶೇರ್ ಮಾಡಿ ಧನ್ಯವಾದ.