Categories
ಭಕ್ತಿ ಮಾಹಿತಿ ಸಂಗ್ರಹ

ಆಮೆಯ ಉಂಗುರವನ್ನು ಹೀಗೆ ಧರಿಸಿದರೆ ಯಾರಾದರೂ ಕೂಡ ಕೋಟ್ಯಧಿಪತಿಗಳು ಆಗಬಹುದು ..

ಆಮೆಯ ಉಂಗುರವನ್ನು ಧರಿಸುವುದಾದರೆ ಯಾಕೆ ಮತ್ತು ಆಮೆಯ ಉಂಗುರವನ್ನು ಧರಿಸುವುದರಿಂದ ಯಾವೆಲ್ಲ ಲಾಭಗಳನ್ನು ವ್ಯಕ್ತಿ ಪಡೆದುಕೊಳ್ಳಬಹುದು ಅನ್ನೋದನ್ನು ನಾವು ನಿಮಗೆ ಸಂಕ್ಷಿಪ್ತ ವಿವರವನ್ನು ನೀಡುತ್ತೆವೆ .

ಮತ್ತು ಆಮೆಯ ಉಂಗುರವನ್ನು ಯಾಕೆ ಹಾಕಬೇಕು ಮತ್ತು ಆಮೆಯ ಉಂಗುರವನ್ನು ಹೇಗೆ ಧರಿಸಬೇಕು ಅನ್ನೋದನ್ನು ಕೂಡ ನಾವು ಈ ಮಾಹಿತಿಯಲ್ಲಿ ತಿಳಿಯೋಣ.

ಸ್ನೇಹಿತರೇ ಮಾಹಿತಿಯನ್ನು ಪೂರ್ತಿಯಾಗಿ ಓದಿ ಮಾಹಿತಿ ಇಷ್ಟವಾಗಿದ್ದಲ್ಲಿ ತಪ್ಪದೇ ನಿಮ್ಮ ಗೆಳೆಯರಿಗೆ ಶೇರ್ ಮಾಡಿ ಮತ್ತು ಲೈಕ್ ಮಾಡಿ . ಇತ್ತೀಚಿನ ದಿನಗಳಲ್ಲಿ ಕೆಲವರು ಈ ಒಂದು ಆಮೆಯ ಉಂಗುರವನ್ನು ಧರಿಸುತ್ತಿದ್ದಾರೆ , ಆದರೆ ಇನ್ನು ಕೆಲವರು ಅದನ್ನು ಫ್ಯಾಷನ್ ಎಂದು ಹಾಕಿ ಕೊಳ್ಳುತ್ತಿರುತ್ತಾರೆ.

ಆದರೆ ಸ್ನೇಹಿತರೇ ಆಮೆಯ ಉಂಗುರವನ್ನು ಹಾಕಿಕೊಳ್ಳುವುದರ ಎಂದರೆ ಒಂದು ಕಾರಣ ಕೂಡ ಇರುತ್ತದೆ ಆ ಕಾರಣ ಏನು ಅಂದರೆ ಜಾತಕದಲ್ಲಿ ಶನಿಯ ಪ್ರಭಾವ ಹೆಚ್ಚಾಗಿರುವವರು ಈ ಒಂದು ಆಮೆಯ ಉಂಗುರವನ್ನು ಧರಿಸುವುದರಿಂದ ಅವರು ನಾನಾ ಪ್ರಯೋಜನಗಳನ್ನೂ ಪಡೆದುಕೊಳ್ಳಬಹುದು ಮತ್ತು ವ್ಯಕ್ತಿಯ ಅದೃಷ್ಟ ಇದರಿಂದ ಬದಲಾಗುತ್ತದೆ ಎಂದು ನಂಬಲಾಗಿದೆ .

ಆಮೆಯ ಉಂಗುರವನ್ನು ಚಿನ್ನದಲ್ಲಿ ಅಥವಾ ಬೆಳ್ಳಿಯಿಂದ ಮಾಡಿಸಿ ಹಾಕಿಕೊಳ್ಳಬೇಕು . ಆ ಒಂದು ಉಂಗುರದ ಮೇಲೆ ನವರತ್ನಗಳು ಇದ್ದಲ್ಲಿ ಇನ್ನೂ ಹೆಚ್ಚು ಇದರಿಂದ ಪ್ರಭಾವ ಬೀರುತ್ತದೆ ಅಂತ ಕೂಡ ನಂಬಲಾಗಿದೆ . ಜ್ಯೋತಿಷ್ಯಶಾಸ್ತ್ರದಲ್ಲಿ ಆಮೆಯನ್ನು ಮಂಗಳನಿಗೆ ಹೋಲಿಸುತ್ತಾರೆ ಮತ್ತು ಆಮೆಯ ಉಂಗುರವನ್ನು ಧರಿಸುವುದರಿಂದ ವ್ಯಕ್ತಿಯ ಅದೃಷ್ಟ ಬದಲಾಗುತ್ತದೆ ಅಂತ ಕೂಡ ನಂಬಲಾಗಿದೆ ಮತ್ತು ಅದೃಷ್ಟದ ಪ್ರತೀಕವಾಗಿರುವ ಈ ಒಂದು ಆಮೆಯ ಪ್ರತಿಮೆಯನ್ನು ದೇವಸ್ಥಾನಗಳಲ್ಲಿಯೂ ಕೂಡ ಇಡುತ್ತಾರೆ .

ಆಮೆಯ ಉಂಗುರವನ್ನು ಅಥವಾ ಹಾರವನ್ನು ಯಾಕೆ ಬಳಸಬೇಕು ಅಂತ ಹೇಳೋದಾದರೆ ಈ ಒಂದು ಆಮೆಯು ವಿಷ್ಣುವಿನ ಒಂದು ಅವತಾರ ವಾಗಿದೆ ಆ ಒಂದು ಅವತಾರಕ್ಕೆ ಕುರುಮಾ ಅಂತ ಕೂಡ ಹೇಳಲಾಗುತ್ತದೆ ಮತ್ತು ಕುರುಮಾ ಅಂದರೆ ಯಾವಾಗಲೂ ತುಂಬಿರುವಂತಹ ಆಯಸ್ಸು ಅನ್ನು ಮತ್ತು ದೈವತ್ವವನ್ನು ಪ್ರತಿಬಿಂಬಿಸುತ್ತದೆ .

ಶ್ರೀಹರಿಯ ಅವತಾರಗಳಲ್ಲಿ ಈ ಒಂದು ಕುರುಮ ಅವತಾರವೂ ಕೂಡ ಮುಖ್ಯವಾಗಿದ್ದು ಇದನ್ನು ಧರಿಸುವುದರಿಂದ ವ್ಯಕ್ತಿಯ ಅದೃಷ್ಟ ಬದಲಾಗುತ್ತದೆ ಮತ್ತು ಧನ ಪ್ರಾಪ್ತಿಯಾಗುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ . ಆಮೆಯು ಹೇಗೆ ಸುದೀರ್ಘವಾಗಿ ಬಾಳುತ್ತದೆಯೋ ಅದೇ ರೀತಿ ಆಮೆಯ ಉಂಗುರವನ್ನು ಅಥವಾ ಆಹಾರವನ್ನು ಧರಿಸುವುದರಿಂದ ವ್ಯಕ್ತಿಯ ಆಯಸ್ಸು ಕೂಡ ವೃದ್ಧಿಸುತ್ತದೆ ಎಂದು ನಂಬಲಾಗಿದೆ .

ಮತ್ತು ಆಮೆಯು ನೀರಿನ ಒಳಗೆ ಇರುವಂತಹ ಪ್ರಾಣಿಯಾಗಿರುವುದರಿಂದ ಆಮೆಯ ಉಂಗುರವನ್ನು ವ್ಯಕ್ತಿ ಧರಿಸುವುದರಿಂದ ಅವನ ಸುತ್ತಮುತ್ತಲೂ ಸಕಾರಾತ್ಮಕ ಶಕ್ತಿ ಹೆಚ್ಚಾಗಿ ಅವನ ಅದೃಷ್ಟ ಬದಲಾಗುತ್ತದೆ ಮತ್ತು ಅವನ್ನು ಜೀವನದಲ್ಲಿ ಇನ್ನೂ ಮೇಲ್ಮಟ್ಟಕ್ಕೆ ಹೋಗುತ್ತಾನೆ ಎಂದು ನಂಬಲಾಗಿದೆ .

ಯಾವ ವ್ಯಕ್ತಿಯ ಜಾತಕದಲ್ಲಿ ಶನಿ ಪ್ರಭಾವ ಹೆಚ್ಚಾಗುತ್ತಿದೆಯೋ ಅಂತಹವರ ಜೀವನದಲ್ಲಿ ಕೆಲಸ ಕಾರ್ಯಗಳಲ್ಲಿ ಹೆಚ್ಚು ಅಡೆತಡೆಗಳು ಆಗುತ್ತಿರುತ್ತದೆ ಅಂತಹವರು ಆಮೆಯ ಉಂಗುರವನ್ನು ಧರಿಸುವುದರಿಂದ ಅವರು ಹೆಚ್ಚು ಲಾಭವನ್ನು ಪಡೆದುಕೊಳ್ಳಬಹುದು ಮತ್ತು ನಿರುದ್ಯೋಗ ಸಮಸ್ಯೆ ಇರುವವರು ಈ ರೀತಿ ಆಮೆಯ ಉಂಗುರವನ್ನು ಧರಿಸುವುದರಿಂದ ಈ ಒಂದು ಸಮಸ್ಯೆಗೆ ಬೇಗನೇ ಪರಿಹಾರವನ್ನು ಕಂಡುಕೊಳ್ಳಬಹುದು .

ಆಮೆಯ ಉಂಗುರವನ್ನು ಧರಿಸುವುದರಿಂದ ಆ ವ್ಯಕ್ತಿಗೆ ತಾಳ್ಮೆ ಹೆಚ್ಚುತ್ತದೆ ಎಂದು ಹೇಳಲಾಗುವುದು ಮತ್ತು ಈ ಒಂದು ಆಮೆಯ ಉಂಗುರವನ್ನು ಧರಿಸಬೇಕು ಅನ್ನೋದಾದರೆ ಒಮ್ಮೆ ಅವರು ಅವರ ಜಾತಕಕ್ಕೆ ಹೊಂದುತ್ತದೆಯೋ ಅನ್ನೋದನ್ನು ಕೂಡ ಒಂದು ಬಾರಿ ಪರೀಕ್ಷಿಸಿಕೊಳ್ಳಬೇಕು .

ವ್ಯಕ್ತಿಯ ಜಾತಕದಲ್ಲಿ ಯಾವುದೇ ರೀತಿಯ ದೋಷವಿದ್ದರೂ ಕೂಡ ಅವರು ಆಮೆಯ ಉಂಗುರವನ್ನು ಧರಿಸುವುದರಿಂದ ಎಲ್ಲ ರೀತಿಯ ದೋಷವನ್ನು ಇದು ಶಾಂತಗೊಳಿಸುತ್ತದೆ ಅಂತ ಕೂಡ ನಂಬಲಾಗುವುದು.