Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ಆಯಾಸ ಸುಸ್ತು ಇವುಗಳಿಗೆ ರಾಮಬಾಣ …! ಕೆಂಪು ಕಲ್ಲುಸಕ್ಕರೆ ಹೀಗೆ ಮಾಡಿ ತಿನ್ನಿ ಸಾಕು ..!

ಕಲ್ಲು ಸಕ್ಕರೆ ಇದೊಂದು ಸಿಹಿಯಾದ ಪದಾರ್ಥ ಸಾಮಾನ್ಯವಾಗಿ ಪ್ರತಿಯೊಬ್ಬರು ಅಂದುಕೊಂಡಿರುತ್ತಾರೆ ಸಕ್ಕರೆಯಂತೆ ಬೆಲ್ಲದಂತೆ ಈ ಕಲ್ಲು ಸಕ್ಕರೆಯೂ ಕೂಡ ಅಂತ, ಆದರೆ ನಿಮ್ಮ ಒಂದು ಅನಿಸಿಕೆ ತಪ್ಪು, ಈ ಸಕ್ಕರೆ ಮತ್ತು ಬೆಲ್ಲವನ್ನು ತಯಾರಿ ಮಾಡುವ ವಿಧಾನದಲ್ಲಿ ಈ ಕಲ್ಲು ಸಕ್ಕರೆಯನ್ನು ತಯಾರಿಸುವುದಿಲ್ಲ ,

ಸಾವಯವ ಪದ್ಧತಿಯಿಂದ ಈ ಕಲ್ಲು ಸಕ್ಕರೆಯನ್ನು ತಯಾರಿ ಮಾಡಲಾಗುತ್ತದೆ ಹಾಗೆಯೆ ಇದು ಆರೋಗ್ಯಕ್ಕೆ ಎಷ್ಟು ಉತ್ತಮ ಅಂದರೆ, ಸಕ್ಕರೆ ಮತ್ತು ಬೆಲ್ಲದಿಂದ ದೊರೆಯುವಂತಹ ಪೋಷಕಾಂಶಗಳಿಂದ ಈ ಕಲ್ಲು ಸಕ್ಕರೆಯಲ್ಲಿ ಅಡಗಿರುವ ಆರೋಗ್ಯಕರ ಲಾಭಗಳು ಅಗಾಧವಾದದ್ದು.

ಕಲ್ಲು ಸಕ್ಕರೆಯಲ್ಲಿ ಕೂಡ ಎರಡು ವಿಷವಿರುತ್ತದೆ, ಬಿಳಿ ಕಲ್ಲು ಸಕ್ಕರೆ ಮತ್ತು ಕೆಂಪು ಕಲ್ಲುಸಕ್ಕರೆ ಇದರಲ್ಲಿ ಔಷಧೀಯ ಗುಣವನ್ನು ಹೆಚ್ಚಾಗಿ ಹೊಂದಿರುವುದು ಕೆಂಪು ಕಲ್ಲು ಸಕ್ಕರೆ ಆಗಿದ್ದು, ಶ್ವಾಸಕೋಶಕ್ಕೆ ಸಂಬಂಧಪಟ್ಟ ಸಮಸ್ಯೆಗಳಿಂದ ನೀವೇನಾದರೂ ಬಳಲುತ್ತಾ ಇದ್ದರೆ ಅಥವಾ ಯಾವುದಾದರೂ ಮನೆ ಮುತ್ತನ್ನು ಮಾಡುತ್ತಾ ಇದ್ದರೆ ನೀವು ಈ ಕೆಂಪು ಕಲ್ಲು ಸಕ್ಕರೆಯನ್ನು ಬಳಸುವುದು ಉತ್ತಮ ಹಾಗೆ ತಲೆನೋವಿನಂತಹ ಸಮಸ್ಯೆಗೂ ಕೂಡ ಈ ಕಲ್ಲು ಸಕ್ಕರೆ ಶಮನವನ್ನು ನೀಡುತ್ತದೆ.

ಮಾಂಸ ಪದಾರ್ಥಗಳಲ್ಲಿ ಅಧಿಕವಾಗಿ ಇರುವ ಈ ವಿಟಮಿನ್ ೧೨ ವಿಶೇಷವಾಗಿ ಈ ಕಲ್ಲು ಸಕ್ಕರೆಯಲ್ಲಿ ಇರುತ್ತದೆ, ಆದ ಕಾರಣ ನೀವು ತಪ್ಪದೆ ಚಿಕ್ಕ ಗಾತ್ರದ ಕಲ್ಲು ಸಕ್ಕರೆ ಯನ್ನಾದರೂ ಪ್ರತಿ ದಿನ ಊಟವಾದ ಬಳಿಕ ದಿನಕ್ಕೆ ಒಂದು ಬಾರಿಯಂತೆ, ಈ ಕಲ್ಲು ಸಕ್ಕರೆಯನ್ನು ಸೇವಿಸುತ್ತಾ ಬನ್ನಿ ಇದರಿಂದ ತಿಂದ ಆಹಾರ ಸಂಪೂರ್ಣವಾಗಿ ಜೀರ್ಣವಾಗುತ್ತದೆ ಜೊತೆಗೆ ಹೊಟ್ಟೆ ಉಬ್ಬರ ಅಥವಾ ವಾಕರಿಕೆ ಅಂತಹ ಸಮಸ್ಯೆ ದೂರವಾಗುತ್ತದೆ ಅಜೀರ್ಣತೆ ಯಿಂದ ಬರುವ ಪ್ರತಿಯೊಂದು ಸಮಸ್ಯೆಯನ್ನೂ ಕೂಡ ನಿವಾರಿಸುತ್ತದೆ ಈ ಕಲ್ಲು ಸಕ್ಕರೆ.

ಮಕ್ಕಳಿಗೆ ಸಕ್ಕರೆಯನ್ನು ಅಥವಾ ಬೆಲ್ಲವನ್ನು ನೀಡುವುದಕ್ಕಿಂತ ಮಕ್ಕಳಿಗೆ ಹಾಲಿನೊಂದಿಗೆ ಈ ಕೆಂಪು ಕಲ್ಲು ಸಕ್ಕರೆಯನ್ನು ಬೆರೆಸಿ ನೀಡುವುದರಿಂದ ಮಕ್ಕಳ ಬೆಳವಣಿಗೆ ಉತ್ತಮವಾಗಿ ಇರುತ್ತದೆ. ಅಷ್ಟೇ ಅಲ್ಲ ಈ ಕೆಂಪು ಕಲ್ಲು ಸಕ್ಕರೆಯಲ್ಲಿ ಉತ್ತಮವಾದ ವಿಟಮಿನ್ಸ್ಗಳು ನ್ಯೂಟ್ರಿಯಂಟ್ಸ್ ಗಳು ಹಾಗೆ ಒಳ್ಳೆಯ ಪೋಷಕಾಂಶಗಳು ಕೂಡ ಇದೆ, ಅದಕ್ಕಾಗಿಯೆ ಇದನ್ನು ಆಯುರ್ವೇದದಲ್ಲಿ ಕೂಡ ಹೆಚ್ಚಾಗಿ ಬಳಕೆ ಮಾಡ್ತಾರೆ.

ಕಲ್ಲು ಸಕ್ಕರೆಯನ್ನು ಅಜೀರ್ಣತೆ ಯನ್ನು ದೂರ ಮಾಡಿಕೊಳ್ಳುವುದಕ್ಕೆ ಬೆಳೆಸುವುದು ಒಂದು ವಿಧ ಆದರೆ ವಾಕರಿಕೆ ಬರುತ್ತಿದ್ದರೆ ವಾಂತಿಯ ಅನುಭವ ಆಗುತ್ತಿದ್ದರೆ ಅಂತಹ ಸಮಯದಲ್ಲಿ ಚಿಕ್ಕ ಗಾತ್ರದ ಕಲ್ಲು ಸಕ್ಕರೆಯನ್ನು ಬಾಯಿಯೊಳಗೆ ಹಾಕಿ ಚೀಪುವುದರಿಂದ ಈ ಎಲ್ಲಾ ರೀತಿಯ ಅನುಭವಗಳು ದೂರವಾಗುತ್ತದೆ.

ರಕ್ತಹೀನತೆ ಸಮಸ್ಯೆಯನ್ನು ಕೂಡ ದೂರ ಮಾಡುತ್ತದೆ ಅಷ್ಟೇ ಅಲ್ಲದೆ ಕಣ್ಣಿಗೆ ಸಂಬಂಧಪಟ್ಟ ದೃಷ್ಟಿ ಸಮಸ್ಯೆಯನ್ನು ಕೂಡ ದೂರ ಮಾಡುತ್ತದೆ ಈ ಕೆಲಸಕ್ಕೆ ಪ್ರತಿದಿನ ಒಂದು ಲೋಟ ನೀರಿಗೆ ಕಲ್ಲು ಸಕ್ಕರೆಯನ್ನು ಬೆರೆಸಿ ಕುಡಿಯುತ್ತಾ ಬರುವುದರಿಂದ ರಕ್ತಹೀನತೆ ಮಾತ್ರವಲ್ಲದೆ ಈ ದೃಷ್ಟಿ ಸಮಸ್ಯೆ ಕೂಡ ಪರಿಹಾರ ಆಗುತ್ತದೆ.

ದೇಹದ ಉಷ್ಣಾಂಶ ಹೆಚ್ಚಾಗಿದ್ದರೆ ಆ ಉಷ್ಣಾಂಶವನ್ನು ಸಮತೋಲನಕ್ಕೆ ತರುವುದಕ್ಕಾಗಿ ರಾತ್ರಿ ಒಂದು ಲೋಟ ನೀರಿಗೆ ಕೆಂಪು ಕಲ್ಲು ಸಕ್ಕರೆಯನ್ನು ಹಾಕಿ ಮಾರನೆ ದಿವಸ ಖಾಲಿ ಹೊಟ್ಟೆಯಲ್ಲಿ, ಈ ನೀರನ್ನು ಕುಡಿಯಬೇಕು ಇದರಿಂದ ದೇಹದ ಉಷ್ಣಾಂಶ ಸಮತೋಲನಕ್ಕೆ ಬರುತ್ತದೆ.

ಕೆಲವರು ಊಟವಾದ ಬಳಿಕ ಬಾಯಿಯನ್ನು ತೊಳೆಯುವ ಅಭ್ಯಾಸವನ್ನು ಹೊಂದಿರುವುದಿಲ್ಲ ಅಂತ ಅವರು ಹಲ್ಲು ನೋವಿನ ಸಮಸ್ಯೆಯಿಂದ ಅಥವಾ ಬಾಯಿಯಿಂದ ದುರ್ವಾಸನೆ ಬರುವ ಸಮಸ್ಯೆಯಿಂದ ಬಳಲುತ್ತಾ ಇರುತ್ತಾರೆ ಅಂತ ಅವರು ಊಟದ ಬಳಿಕ ಒಂದು ಚಿಕ್ಕ ಗಾತ್ರದ ಕಲ್ಲು ಸಕ್ಕರೆಯನ್ನು ತಿನ್ನುವುದರಿಂದ ಬಾಯಿಯೊಳಗೆ ಬ್ಯಾಕ್ಟೀರಿಯಾ ಉತ್ಪತ್ತಿ ಆಗುವುದಿಲ್ಲ ಮತ್ತು ಉಸಿರಿನಿಂದ ಬರುವ ದುರ್ವಾಸನೆ ಕೂಡ ನಿವಾರಣೆಯಾಗುತ್ತದೆ.

ಮಕ್ಕಳು ರಾತ್ರಿ ಮಲಗುವ ಮುನ್ನ ಒಂದು ಲೋಟ ಹಾಲಿಗೆ ಕಲ್ಲು ಸಕ್ಕರೆ ಪುಡಿಯನ್ನು ಬೆರೆಸಿ ಕುಡಿದು ಮಲಗುವುದರಿಂದ ನೆನಪಿನ ಶಕ್ತಿ ಹೆಚ್ಚುತ್ತದೆ ಮತ್ತು ಉಸಿರಿನ ತಾಜಾತನ ಹೆಚ್ಚುತ್ತದೆ ಕೂಡ. ಮೂಗಿನಿಂದ ರಕ್ತ ಬರುತ್ತಿದ್ದರೆ ಅಂಥವರು ಕೂಡಲೆ ಒಂದು ಲೋಟ ನೀರಿಗೆ ಕಲ್ಲು ಸಕ್ಕರೆ ಪುಡಿಯನ್ನು ಬೆರೆಸಿ ಕುಡಿಯುವುದರಿಂದ, ಮೂಗಿನಿಂದ ಆಗುವ ರಕ್ತಸ್ರಾವ ಕಡಿಮೆಯಾಗುತ್ತದೆ.