Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ಆರೋಗ್ಯಕರವಾದ ಅಂಡಾಣು ಬಿಡುಗಡೆಗೆ ಮಾಡಿಕೊಳ್ಳುವುದಕ್ಕೆ ಮನೆ ಮದ್ದು ಔಷಧಿ ಬಳಸಿ ..!

ಆರೋಗ್ಯಕರವಾದ ಅಂಡಾಣು ಬಿಡುಗಡೆಗಾಗಿ ಈ ಆಹಾರಗಳನ್ನು ಸೇವಿಸಿ ಹೌದು ಕೆಲವರಿಗೆ ಮಕ್ಕಳಾಗದೆ ಇರುವುದಕ್ಕೆ ಕಾರಣ ಆರೋಗ್ಯಕರವಾದ ಅಂಡಾಣು ಬಿಡುಗಡೆ ಆಗದೆ ಇರುವುದು ಆಗಿರ ಬಹುದು. ಆದಕಾರಣ ನಾವು ಇಂದಿನ ಮಾಹಿತಿಯಲ್ಲಿ ಆರೋಗ್ಯಕರವಾದ ಅಂಡಾಣು ಬಿಡುಗಡೆಗಾಗಿ ನಾವು ಯಾವ ಆಹಾರ ಪದಾರ್ಥಗಳನ್ನು ಸೇವಿಸಿದರೆ ಉತ್ತಮ ಅಂತ ಹೇಳ್ತೇವೆ.

ಇದರ ಜೊತೆಗೆ ನೀವು ಈ ಕೆಲವೊಂದು ಆಹಾರಗಳನ್ನು ಸೇವಿಸುತ್ತಾ ಬರುವುದರಿಂದ ತಿಂಗಳು ಋತುಚಕ್ರ ಕೂಡ ಸರಿಯಾಗಿ ಆಗುತ್ತದೆ ಮತ್ತು ಆರೋಗ್ಯ ಕೂಡ ಉತ್ತಮವಾಗಿ ಇರುತ್ತದೆ. ಯಾಕೆ ಅಂದರೆ ಹೆಣ್ಣು ಮಕ್ಕಳಿಗೆ ತಿಂಗಳಿಗೆ ಸರಿಯಾಗಿ ಋತುಚಕ್ರ ನಡೆದರೆ, ಆರೋಗ್ಯ ಉತ್ತಮವಾಗಿ ಇರುತ್ತದೆ. ಹಾಗಾದರೆ ಆರೋಗ್ಯಕರವಾದ ಅಂಡಾಣು ಬಿಡುಗಡೆಗಾಗಿ ಈ ಕೆಲವೊಂದು ಆಹಾರ ಪದಾರ್ಥಗಳನ್ನು ನಿಮ್ಮ ಆಹಾರ ಪದ್ಧತಿಯಲ್ಲಿ ಮರೆಯದೆ ಅಳವಡಿಸಿಕೊಳ್ಳಿ.

ಮೊದಲನೆಯದಾಗಿ ಕಪ್ಪು ಎಳ್ಳು. ಸಾಮಾನ್ಯವಾಗಿ ಹೆಣ್ಣು ಮಕ್ಕಳು ಮೊದಲ ಬಾರಿಗೆ ಋತುಮತಿಯಾದಾಗ ಅವರಿಗೆ ಈ ಎಳ್ಳಿನ ಉಂಡೆಯನ್ನು ತಿನ್ನಲು ನೀಡ್ತಾರೆ. ಈ ಕಪ್ಪು ಎಳ್ಳನ್ನು ಸ್ವಚ್ಛ ಪಡಿಸಿ ಇದನ್ನು ನೆನೆಸಿ ಈ ಕಪ್ಪು ಎಳ್ಳಿನೊಂದಿಗೆ ಬೆಲ್ಲವನ್ನು ಮಿಶ್ರಣ ಮಾಡಿ ಉಂಡೆ ಕಟ್ಟಿ ಈ ಎಳ್ಳುಂಡೆಯನ್ನು ಋತುಮತಿ ಆದ ಹೆಣ್ಣು ಮಕ್ಕಳಿಗೆ ತಿನ್ನಲು ನೀಡುತ್ತಾರೆ. ಇದರಿಂದ ಮೂಳೆ ಬಲಗೊಳ್ಳುತ್ತದೆ ಮತ್ತು ಅಂಡಾಣು ಆರೋಗ್ಯಕರವಾಗಿ ಬಿಡುಗಡೆ ಆಗುತ್ತದೆ.

ಎರಡನೆಯ ಆಹಾರ ಪದಾರ್ಥ ಅಂದರೆ ಅದು ಮೆಂತ್ಯೆ ಕಾಳುಗಳು ಸಮಾನ್ಯವಾಗಿ ಮೆಂತೆ ಕಾಳುಗಳನ್ನು ಸೇವಿಸಬೇಕು ಪುರುಷರಾಗಲಿ ಸ್ತ್ರೀಯರಾಗಲಿ ಮೆಂತ್ಯೆ ಕಾಳುಗಳನ್ನು ಸೇವಿಸುವುದರಿಂದ ಸಂತಾನ ಪ್ರಾಪ್ತಿ ಅಲ್ಲಿಯೂ ಕೂಡ ಉತ್ತಮವಾದ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಹಾಗಾಗಿ ಪ್ರತಿದಿನ ಈ ಮೆಂತೆಕಾಳುಗಳನ್ನು ಹೇಗೆ ಸಲ್ಲಿಸಬೇಕು ಅಂದರೆ ಉತ್ತಮ ಆರೋಗ್ಯಕರ ಅಂಡಾಣು ಬಿಡುಗಡೆಗಾಗಿ ಮೂರು ಚಮಚ ಮೆಂತ್ಯೆ ಕಾಳುಗಳನ್ನು ನೆನೆಸಿಟ್ಟು ಅದನ್ನು ಬೆಳಿಗ್ಗೆ ಉಪಾಹಾರಕ್ಕೂ ಮೊದಲು ಮಧ್ಯಾಹ್ನ ಉಪಾಹಾರಕ್ಕೂ ಮೊದಲು ಮತ್ತು ರಾತ್ರಿ ಉಪಹಾರಕ್ಕೂ ಮೊದಲು ಸೇರಿಸಬೇಕು ಈ ರೀತಿಯ ಪರಿಹಾರ ವರ ಮಾಡುವುದರಿಂದ ಕೂಡ ಆರೋಗ್ಯವಂತರಾಗಿ ಇರಬಹುದು ಆರೋಗ್ಯಕರವಾದ ಅಂಡಾಣು ಬಿಡುಗಡೆ ಆಗುತ್ತದೆ.

ಇನ್ನು ಮೂರನೆಯ ಆಹಾರ ಪದಾರ್ಥ ಅಂದರೆ ಅಗಸಿಬೀಜ ಹೃದಯದ ಆರೋಗ್ಯವನ್ನು ಕಾಪಾಡುವ ಈ ಅಗಸೆ ಬೀಜದಲ್ಲಿ ಒಮೆಗಾ ಫ್ಯಾಟಿ ಅಂಶ ಇದೆ ಇದು ಹೃದಯದ ಆರೋಗ್ಯಕ್ಕೆ ಮಾತ್ರವಲ್ಲ ಕಣ್ಣಿನ ಆರೋಗ್ಯಕ್ಕೆ ಮಾತ್ರ ಅಲ್ಲ, ಆರೋಗ್ಯಕರವಾದ ಅಂಡಾಣು ಬಿಡುಗಡೆಗಾಗಿ ಕೂಡ ಅಗಸೆ ಬೀಜ ಉಪಯುಕ್ತಕಾರಿ ಆಗಿದೆ. ಈ ಸೂಪರ್ ಫುಡ್ ಅಂತ ಕರೆಸಿ ಕೊಂಡಿರುವ ಅಗಸೆ ಬೀಜವನ್ನು ಸೇವಿಸುವುದರಿಂದ ಕೂಡ ಸಂತಾನ ವಿಚಾರಕ್ಕೆ ಸಂಬಂಧಿಸಿದ ಸಮಸ್ಯೆಗಳು ಪರಿಹಾರ ಆಗುತ್ತದೆ.

ಈ ಮಾಹಿತಿ ನಿಮಗೆ ಉಪಯುಕ್ತವಾಯಿತು ಪ್ರಯೋಜನ ಆಯ್ತು ಅಂದ ಲಲಿತಪದ ಮಾಹಿತಿಗೆ ಒಂದು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗೂ ಶೇರ್ ಮಾಡಿ. ಇನ್ನೂ ಅನೇಕ ಉಪಯುಕ್ತ ಮಾಹಿತಿಗಳಿಗಾಗಿ ಆರೋಗ್ಯಕ್ಕೆ ಸಂಬಂಧಿಸಿದ ವಿಚಾರಗಳನ್ನು ಪಡೆದುಕೊಳ್ಳುವುದಕ್ಕಾಗಿ ತಪ್ಪದೆ ನಮ್ಮ ಫೇಸ್ ಬುಕ್ ಪೇಜ್ ಅನ್ನು ಫಾಲೋ ಮಾಡಿ ಲೈಕ್ ಮಾಡಿ ಆರೋಗ್ಯದಿಂದಿರಿ ಧನ್ಯವಾದ.