Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ಆರೋಗ್ಯಯುತ ಕಣ್ಣುಗಳು ನಿಮ್ಮದಾಗಬೇಕು ಅಂದ್ರೆ ಈ ಆಹಾರಗಳನ್ನು ಸೇವಿಸಿ !

ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕಾಗಿ ನೀವು ಈ ಕೆಲವೊಂದು ಆಹಾರ ಪದಾರ್ಥಗಳನ್ನು ಸೇವಿಸಲೇಬೇಕು. ಹೌದು ಕಣ್ಣಿಗೆ ಪೋಷಣೆ ನೀಡೋದು ವಿಟಮಿನ್ ಎ ಅಂಶ. ಆದಕಾರಣ ನಾವು ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳುವುದಕ್ಕಾಗಿ ವಿಟಮಿನ್ ಎ ಅಂಶ ಹೇರಳವಾಗಿರುವ ಆಹಾರವನ್ನು ಸೇವಿಸಬೇಕಾಗುತ್ತದೆ. ಇದಕ್ಕಾಗಿ ನಾವು ಯಾವೆಲ್ಲ ಆಹಾರ ಪದಾರ್ಥಗಳನ್ನು ಸೇವಿಸಿದರೆ ಉತ್ತಮ ಅನ್ನೋ ಮಾಹಿತಿಯನ್ನ ಇವತ್ತಿನ ಈ ಲೇಖನದಲ್ಲಿ ತಿಳಿಸಿಕೊಡುತ್ತವೆ ನೀವು ಕೂಡ ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕಾಗಿ ಈ ಕೆಲವೊಂದು ಆಹಾರಗಳನ್ನು ಸೇವಿಸಿ.

ಇತ್ತೀಚಿನ ದಿನಗಳಲ್ಲಿಯಂತೂ ಮಂದಿ ಕಣ್ಣಿಗೆ ಸಂಬಂಧಪಟ್ಟ ಸಮಸ್ಯೆಗಳಿಂದ ಬಳಲುತ್ತಾ ಇದ್ದಾರೆ. ಇದಕ್ಕಾಗಿ ಕನ್ನಡಕಗಳನ್ನು ಕೂಡ ಹಾಕಿಕೊಳ್ತಾರೆ. ಆದರೆ ಕನ್ನಡಕವನ್ನು ಹಾಕಿದಷ್ಟು ಇನ್ನೂ ನಮ್ಮ ಕಣ್ಣಿನ ಆರೋಗ್ಯ ಹದಗೆಡುತ್ತಲೇ ಇರುತ್ತದೆ ಹೊರತು ನಮಗೆ ಯಾವ ಲಾಭವಂತೂ ದೊರೆಯುವುದಿಲ್ಲ ಆದಕಾರಣ ನಾವು ನಮ್ಮ ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕಾಗಿ ಪೌಷ್ಟಿಕಾಂಶವುಳ್ಳ ಆಹಾರವನ್ನು ಸೇವಿಸುವುದು ಅತ್ಯವಶ್ಯಕವಾಗಿರುತ್ತದೆ .

ಒಣ ಹಣ್ಣುಗಳು :
ಒಣ ಹಣ್ಣುಗಳು ಅಂದರೆ ಬಾದಾಮಿ ಗೋಡಂಬಿ ದ್ರಾಕ್ಷಿ ಪಿಸ್ತಾ ವಾಲ್ನಟ್ ಇವು ಇವುಗಳನ್ನ ತಿನ್ನೋದ್ರಿಂದ ಕೇವಲ ಕಣ್ಣಿನ ಆರೋಗ್ಯ ಮಾತ್ರ ಅಲ್ಲ ನಮ್ಮ ದೇಹದ ಆರೋಗ್ಯವನ್ನು ಕೂಡ ನಾವು ವೃದ್ಧಿಸಿಕೊಳ್ಳಬಹುದು. ಈ ಒಣ ಹಣ್ಣುಗಳಲ್ಲಿ ಸಾಕಷ್ಟು ಉತ್ತಮವಾದ ಪೋಷಕಾಂಶಗಳು ಆ್ಯಂಟಿಆಕ್ಸಿಡೆಂಟ್ ಗಳು ಇವೆ ಇದು ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚು ಮಾಡುವುದಲ್ಲದೆ ದೇಹಕ್ಕೆ ಬೇಕಾಗಿರುವ ವಿಟಮಿನ್ಸ್ ಗಳು ಖನಿಜಾಂಶಗಳನ್ನು ಕೂಡ ನೀಡುತ್ತದೆ ಉತ್ತಮ ಆರೋಗ್ಯವು ಕೂಡ ಲಭಿಸುತ್ತದೆ.

ಹಸಿರು ತರಕಾರಿಗಳು :
ಈ ತರಕಾರಿಗಳ ಬಗ್ಗೆ ನಾವು ಹೇಳೋದೇ ಬೇಡ ಈ ಹಸಿರು ತರಕಾರಿಗಳನ್ನು ನಾವು ನಮ್ಮ ಆಹಾರ ಪದ್ಧತಿಯಲ್ಲಿ ಅಳವಡಿಸಿಕೊಂಡು ಅನೇಕ ವಿಧದ ಗಾದೆಗಳನ್ನ ಮಾಡಿ ಸೇವಿಸಿದರೆ ಸಾಕು ಇದರಿಂದ ನಮಗೆ ಒಳ್ಳೆಯ ನಾರಿನಂಶದಿಂದ ಹಿಡಿದು ಒಳ್ಳೆಯ ವಿಟಮಿನ್ಸ್ ಗಳವರೆಗೂ ಕೂಡ ನಾವು ಪಡೆದುಕೊಳ್ಳಬಹುದು.

ಮೀನು :
ಮೀನುಗಳಲ್ಲಿ ಇರುವ ಉತ್ತಮವಾದ ಒಮೇಗಾ ಫ್ಯಾಟಿ ಆ್ಯಸಿಡ್ ಗಳು ನಮ್ಮ ಆರೋಗ್ಯಕ್ಕೆ ಅವಶ್ಯಕವಾದ ಈ 1ಮೀನನ್ನು ತಿನ್ನುವುದರಿಂದ ನಾವು ಅತ್ಯಂತ ಪ್ರಮುಖವಾದ ಎಚ್ ಡಿಎಲ್ ಅಂಶವನ್ನು ಇದರಿಂದ ನಮಗೆ ಉತ್ತಮ ಆರೋಗ್ಯ ಲಭಿಸುತ್ತದೆ. ಅಷ್ಟೇ ಅಲ್ಲ ಈ ಮೀನನ್ನು ಮತ್ತು ಮೀನಿನ ತಲೆಯನ್ನು ತಿನ್ನುವುದ್ರಿಂದ ಬುದ್ಧಿ ಚುರುಕಾಗುತ್ತದೆ ಮತ್ತು ಕಣ್ಣಿನ ದೃಷ್ಟಿ ತೀಕ್ಷ್ಣಗೊಳ್ಳುತ್ತದೆ.

ಕ್ಯಾರೆಟ್ :
ಕ್ಯಾರೆಟ್ ನಲ್ಲಿ ಕೆರೋಟಿನಾಯ್ಡ್ ಅಂಶ ಹೇರಳವಾಗಿದ್ದು ಇದು ಕಣ್ಣಿನ ಆರೋಗ್ಯವನ್ನು ಕಾಪಾಡುತ್ತದೆ ದೃಷ್ಟಿಗೆ ಸಂಬಂಧಪಟ್ಟ ಸಮಸ್ಯೆಗಳನ್ನು ನಿವಾರಿಸುತ್ತದೆ ಮತ್ತು ಕಣ್ಣು ಮಂಜಾಗುವುದು ಕಣ್ಣಿನಲ್ಲಿ ಪದರ ಉಂಟಾಗುವುದು ಇಂತಹ ಎಲ್ಲ ಸಮಸ್ಯೆಗಳನ್ನು ಪರಿಹರಿಸುತ್ತದೆ ಕ್ಯಾರೋಟ್ ಆದಷ್ಟು ಕ್ಯಾರೆಟ್ ಅನ್ನು ಹಸಿಯಾಗಿ ಸೇರಿಸಿ ಮತ್ತು ಮಕ್ಕಳಿಗೂ ಕೂಡ ನೀಡಿ ಇದು ಉತ್ತಮ ಬೆಳವಣಿಗೆಯಲ್ಲ ನೀಡುತ್ತದೆ.

ಮೊಟ್ಟೆಗಳು :
ಮೊಟ್ಟೆಯಲ್ಲಿ ಆ್ಯಂಟಿಆಕ್ಸಿಡೆಂಟ್ ಗಳು ಝಿಂಕ್ ಅಂಶ ಹೇರಳವಾಗಿದ್ದು ಈ ಮೊಟ್ಟೆಗಳು ನಮ್ಮ ಆರೋಗ್ಯಕ್ಕೆ ಬಹಳ ಅವಶ್ಯಕವಾದ ಪೋಷಕಾಂಶಗಳನ್ನು ನೀಡುತ್ತದೆ ಉತ್ತಮ ಆರೋಗ್ಯ ನಮಗೆ ಇದರಿಂದ ಲಭಿಸುತ್ತದೆ. ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳುವುದಕ್ಕಾಗಿ ಪ್ರತಿ ದಿನ ಒಂದು ಬೇಯಿಸಿದ ಮೊಟ್ಟೆಯನ್ನು ಸೇವಿಸಿದರೆ ಉತ್ತಮ. ಇವತ್ತಿನ ಈ ಮಾಹಿತಿ ನಿಮಗೆ ಉಪಯುಕ್ತವಾಗಿದ್ದಲ್ಲಿ ತಪ್ಪದ ಮಾಹಿತಿಯೊಂದು ಲೈಕ್ ಮಾಡಿ ಇನ್ನೂ ಅನೇಕ ಉಪಯುಕ್ತ ಮಾಹಿತಿಗಳನ್ನು ಪಡೆದುಕೊಳ್ಳುವುದಕ್ಕಾಗಿ ನಮ್ಮ ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡಿ ಧನ್ಯವಾದ.