Categories
ಭಕ್ತಿ ಮಾಹಿತಿ ಸಂಗ್ರಹ

ಆಷಾಢ ಮಾಸದಲ್ಲಿ ಹೊಸ ಜೋಡಿ ಅಥವಾ ನವದಂಪತಿಗಳು ಒಂದಾಗಬಾರದು… ಯಾಕೆ ಗೊತ್ತಾ..

ಸ್ನೇಹಿತರೇ ಸಾಮಾನ್ಯವಾಗಿ ನಮ್ಮ ಹಿಂದಿನವರು ಯಾವುದಾದರೂ ಒಂದು ಆಚಾರ ವಿಚಾರ ಸಂಪ್ರದಾಯಗಳನ್ನು ಅನುಸರಿಸಿಕೊಂಡು ಬಂದಿದ್ದಾರೆ ಎಂದರೆ ಅದಕ್ಕೆ ಅದರದೇ ಆದಂತಹ ಕೆಲವೊಂದು ಕಾರಣಗಳಿರುತ್ತವೆ ಅದನ್ನು ಮೂಢನಂಬಿಕೆ ಎನ್ನುವವರು ಕೂಡ ಉಂಟು ಆದರೆ ಅವೆಲ್ಲವೂ ಕೂಡ ಮೂಢನಂಬಿಕೆ ಆಗಲು ಸಾಧ್ಯವಿಲ್ಲ ಕೆಲವೊಂದಕ್ಕೆ ವೈಜ್ಞಾನಿಕ ಕಾರಣಗಳು ಕೂಡ ಇದೆ ಆದರೆ ಅವುಗಳ ಅರಿವು ಮಾತ್ರ ನಮಗಿರುವುದಿಲ್ಲ.

ಸ್ನೇಹಿತರೇ ಈ ದಿನ ನಾವು ಅಂಥದ್ದೇ ಒಂದು ವಿಷಯದ ಬಗ್ಗೆ ಮಾಹಿತಿಯನ್ನು ತಿಳಿಸುವ ಪ್ರಯತ್ನವನ್ನು ಮಾಡುತ್ತೇವೆ ಅದೇನೆಂದರೆ ಆಷಾಢ ಮಾಸ ಬಂತು ಎಂದರೆ ಸಾಮಾನ್ಯವಾಗಿ ಎಲ್ಲ ಗಂಡ ಹೆಂಡತಿಯರನ್ನು ದೂರ ಮಾಡುವಂತಹ ಸಂಪ್ರದಾಯವಿದೆ ದೂರ ಎನ್ನುವುದಕ್ಕಿಂತ ಹೆಂಡತಿಯೂ ಗಂಡನ ಮನೆಯಲ್ಲಿ ಗಂಡನ ಜತೆ ಇರುವ ಹಾಗಿಲ್ಲ ಅದರ ಬದಲು ತನ್ನ ತವರು ಮನೆಗೆ ಹೋಗುವುದು .

ಸಂಪ್ರದಾಯವಾಗಿದೆ ಆದರೆ ಆ ಸಂಪ್ರದಾಯವನ್ನು ಏಕೆ ಮಾಡುತ್ತಾರೆ ಅದನ್ನು ಕೆಲವೊಬ್ಬರು ಮೂಢನಂಬಿಕೆ ಎಂದು ಹೇಳುವುದು ಉಂಟು ಆದರೆ ಆ ಸಂಪ್ರದಾಯದ ಹಿಂದೆ ಒಂದು ವೈಜ್ಞಾನಿಕ ಕಾರಣ ಇದೆ ಎಂಬುದರ ಅರಿವು ಮಾತ್ರ ಯಾರಿಗೂ ಇರುವುದಿಲ್ಲ ಅದರ ಹಿಂದಿರುವ ವೈಜ್ಞಾನಿಕ ಕಾರಣ ಏನು ಆ ಸಂಪ್ರದಾಯವನ್ನು ಏಕೆ ನಡೆಸಿಕೊಂಡು ಬಂದಿದ್ದಾರೆ .

ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ದಿನ ನಾವು ನಿಮಗೆ ತಿಳಿಸಿ ಕೊಡುತ್ತೇವೆ ನೀವು ಕೂಡ ಈ ಮಾಹಿತಿಯನ್ನು ತಿಳಿದುಕೊಳ್ಳಿ ಮತ್ತು ಮೂಢನಂಬಿಕೆ ಎಂದು ಈ ಆಚರಣೆಗಳನ್ನು ಅನುಸರಿಸದೇ ಇರುವವರಿಗೆ ಕೂಡ ಈ ಮಾಹಿತಿಯನ್ನು ತಲುಪಿಸುವ ಪ್ರಯತ್ನವನ್ನು ಮಾಡಿ.

ಸ್ನೇಹಿತರೇ ಸಾಮಾನ್ಯವಾಗಿ ಆಷಾಢದ ಸಂದರ್ಭದಲ್ಲಿ ಮಳೆ ಗಾಳಿ ಅದರ ಜೊತೆಯಲ್ಲಿ ಹೆಚ್ಚು ವಾತಾವರಣ ಕಲುಷಿತವಾಗಿರುತ್ತದೆ ಬ್ಯಾಕ್ಟೀರಿಯಾಗಳು ಹರಡುವ ಸಾಧ್ಯತೆ ಹೆಚ್ಚಾಗಿರುತ್ತದೆ ಇಂತಹ ಸಂದರ್ಭದಲ್ಲಿ ಎಲ್ಲರೂ ಕೂಡ ಹೇಳುವ ಮಾತೆಂದರೆ ಗಂಡ ಹೆಂಡತಿ ಜೊತೆಯಲ್ಲಿ ಇರಬಾರದು ಎಂದು ಅದಕ್ಕೆ ಒಂದು ಕಾರಣವಿದೆ ಅದೇನು ಗೊತ್ತಾ .

ಸ್ನೇಹಿತರೇ ಸಾಮಾನ್ಯವಾಗಿ ಗಂಡ ಹೆಂಡತಿ ದೈಹಿಕವಾಗಿ ಜೊತೆ ಇದ್ದಂತಹ ಸಂದರ್ಭದಲ್ಲಿ ಅವರು ಗರ್ಭವತಿಯಾಗುವ ಸಾಧ್ಯತೆ ಇರುತ್ತದೆ ಅವರು ಗರ್ಭವತಿಯಾಗಿ, ಸುಮಾರು ಎಂಟರಿಂದ ಒಂಬತ್ತು ತಿಂಗಳ ಸಮಯಕ್ಕೆ ಮಗು ಜನನವನ್ನು ಪಡೆಯುತ್ತದೆ ಆಷಾಢದ ಸಂದರ್ಭದಲ್ಲಿ ಹೆಂಡತಿ ಗರ್ಭವತಿಯಾದರೆ ಮಗು ಒಂಬತ್ತು ತಿಂಗಳಿಗೆ ಹುಟ್ಟಿತು ಎಂದರೆ ಆ ಸಮಯದಲ್ಲಿ ಹೆಚ್ಚು ಮಳೆ ಇರುತ್ತದೆ ಮಗುವಿನ ಪಾಲನೆ ಪೋಷಣೆ ಸಂಪೂರ್ಣವಾಗಿ ಕಷ್ಟವಾಗುತ್ತದೆ ಆ ಸಂದರ್ಭದಲ್ಲಿ ಶೀತ ಆಗುವ ಸಾಧ್ಯತೆ ಕೂಡ ಹೆಚ್ಚಿರುತ್ತದೆ ಮಗುವಿನ ಆರೋಗ್ಯದಲ್ಲಿ ಹೆಚ್ಚಿನ ಏರುಪೇರಾಗುತ್ತದೆ.

ಆದ್ದರಿಂದ ಹಿರಿಯರು ಈ ಸಂದರ್ಭದಲ್ಲಿ ಜೊತೆ ಇರಬಾರದು ಎಂಬ ಮಾತುಗಳನ್ನು ಹೇಳಿದ್ದಾರೆ ಆದರೆ ಇದರ ಅರಿವು ಯಾರಿಗೂ ಇರುವುದಿಲ್ಲ ಏನಾದರೂ ಆಗಲಿ ಎಂಬ ಮನೋಭಾವನೆಯನ್ನು ಜನರು ಹೊಂದಿರುತ್ತಾರೆ ನೋಡಿದಿರಲ್ಲ ಸ್ನೇಹಿತರೇ ಒಂದು ಚಿಕ್ಕ ಕಾರಣ ನಮಗೆ ಎಷ್ಟು ಅನುಕೂಲವನ್ನು ಮಾಡುತ್ತದೆ ಎಂದು ನಮ್ಮ ಪೂರ್ವಜರು ಹಾಗೆ ಯಾವುದನ್ನೂ ಕೂಡ ಸುಮ್ಮನೇ ಮಾಡುವುದಿಲ್ಲ ಎಲ್ಲದಕ್ಕೂ ಕೂಡ ಯೋಚನೆಗಳನ್ನು ಮಾಡಿಕೊಂಡು ಕೆಲವೊಂದು ಸಂಪ್ರದಾಯಗಳನ್ನು ಮಾಡಿಕೊಂಡಿರುತ್ತಾರೆ.

ಜನರು ಬಾಯಿ ಮಾತಿನಲ್ಲಿ ಹೇಳಿದರೆ ಆ ಮಾತುಗಳನ್ನು ಕೇಳುವುದಿಲ್ಲ ಆ ಕಾರಣದಿಂದಾಗಿ ಅವುಗಳಿಗೆ ಸಂಪ್ರದಾಯಗಳು ಆಚರಣೆಗಳು ಎಂಬ ಹೆಸರನ್ನಿಟ್ಟು ಹೇಳುವ ಪ್ರಯತ್ನವನ್ನು ಹಿರಿಯರು ಮಾಡಿದ್ದಾರೆ ಆದರೆ ಜನರು ಅವುಗಳನ್ನು ಮೂಢನಂಬಿಕೆ ಎನ್ನುತ್ತಾರೆ ಇನ್ನು ಮುಂದೆ ಮೂಢನಂಬಿಕೆ ಎನ್ನುವ ಮೊದಲು ಒಂದು ಬಾರಿ ಅವುಗಳ ಬಗ್ಗೆ ಯೋಚನೆಯನ ಮಾಡಿ ಅದಾದ ನಂತರ ಅವುಗಳ ಸತ್ಯಾಸತ್ಯತೆಯನ್ನು ತಿಳಿದುಕೊಂಡು ಆಚರಣೆಯನ್ನು ಮಾಡೋಣ ಧನ್ಯವಾದಗಳು