Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ಇಂಥ ಸಮಯದಲ್ಲಿ ಮೀನುಗಳನ್ನ ಯಾವುದೇ ಕಾರಣಕ್ಕೂ ಕೂಡ ತಿನ್ನಬಾರದು … ವಿಶೇಷವಾದ ವಿಚಾರ

ಮೀನುಗಳನ್ನು ಈ ಸಮಯದಲ್ಲಿ ಯಾವತ್ತಿಗೂ ಕೂಡ ಸೇವಿಸಲು ಹೋಗಬೇಡಿ ಈ ಸಮಯದಲ್ಲಿ ನೀವೇನಾದರೂ ಮೀನುಗಳನ್ನು ಸೇವಿಸಿದರೆ ಅನಾರೋಗ್ಯ ಸಮಸ್ಯೆ ನಿಮಗೆ ಕಟ್ಟಿಟ್ಟ ಬುತ್ತಿ ಮತ್ತು ನಿಮ್ಮ ಸಾವು ಕೂಡ ಇದರಿಂದ ಸಂಭವಿಸಬಹುದು .

ಹಾಗಾದರೆ ಮೀನುಗಳನ್ನು ಯಾವ ಸಂದರ್ಭದಲ್ಲಿ ಅಂದರೆ ಯಾವ ಕಾಲದಲ್ಲಿ ತಿನ್ನಬಾರದು ಅನ್ನೋದನ್ನ ನಾವು ಈ ಮಾಹಿತಿಯಲ್ಲಿ ಸಂಪೂರ್ಣವಾಗಿ ತಿಳಿದುಕೊಳ್ಳೋಣ ಬನ್ನಿ .

ಹೌದು ಸ್ನೇಹಿತರೇ ಮೀನುಗಳನ್ನು ತಿನ್ನುವುದರಿಂದ ಆರೋಗ್ಯಕ್ಕೆ ತುಂಬಾನೇ ಲಾಭಗಳಿವೆ ಅನ್ನೋದನ್ನು ನಾವು ಈಗಾಗಲೇ ಕೇಳಿರುತ್ತೀರಿ ಮತ್ತು ಮೀನಿನ ಎಣ್ಣೆ ಮೀನುಗಳ ಮೊಟ್ಟೆ ಮೀನಿನ ತಲೆ ಈ ಎಲ್ಲ ಪದಾರ್ಥಗಳು ಮನುಷ್ಯನಿಗೆ ತುಂಬಾನೇ ಲಾಭದಾಯಕವಾಗಿರುತ್ತದೆ .

ಆದರೆ ಮೀನುಗಳನ್ನು ಮಳೆಗಾಲದಲ್ಲಿ ಯಾವತ್ತಿಗೂ ಕೂಡ ಸೇವಿಸಲು ಹೋಗಬಾರದು ಹೀಗೆ ಮಳೆಗಾಲದಲ್ಲಿ ಮೀನುಗಳನ್ನು ಸೇವಿಸುವುದರಿಂದ ಸಾಕಷ್ಟು ಸಮಸ್ಯೆಗಳಿಗೆ ನೀವು ಒಳಗಾಗಬಹುದು ಅನಾರೋಗ್ಯ ಪೀಡಿತರಾಗಬಹುದು .

ಮಳೆಗಾಲದಲ್ಲಿ ಮನುಷ್ಯರ ಜೀರ್ಣಾಂಗ ವ್ಯವಸ್ಥೆ ತುಂಬಾನೆ ದುರ್ಬಲವಾಗಿರುತ್ತದೆ ಮತ್ತು ಈ ರೀತಿಯಾಗಿ ಮೀನುಗಳ ಸೇವನೆ ಮಾಡುವುದರಿಂದ ಹೊಟ್ಟೆ ಭಾರವೆನಿಸುತ್ತದೆ ಇದರಿಂದ ಜೀರ್ಣಕ್ರಿಯೆ ಸಮಸ್ಯೆ ಹೆಚ್ಚಾಗುತ್ತದೆ ಆದ್ದರಿಂದ ಮೀನುಗಳನ್ನು ಮಳೆಗಾಲದಲ್ಲಿ ಸೇವಿಸುವುದು ಉತ್ತಮವಲ್ಲ .

ಮಳೆಗಾಲದಲ್ಲಿ ಮೀನುಗಳು ಮೊಟ್ಟೆ ಇಡುವಂತಹ ಸಮಯವಾಗಿರುತ್ತದೆ ಆ ಸಮಯದಲ್ಲಿ ಮೀನುಗಳು ವಿಷಕಾರಿಯಾಗುತ್ತದೆ ಆದ್ದರಿಂದ ಇದನ್ನು ಸೇವನೆ ಮಾಡುವುದರಿಂದ ದೇಹಕ್ಕೆ ಉತ್ತಮವಾಗಿರುವುದಿಲ್ಲ.

ಮತ್ತು ವಿಷಕಾರಿ ಪದಾರ್ಥಗಳು ನಮ್ಮ ದೇಹ ಸೇರುವುದರಿಂದ ದೇಹಕ್ಕೆ ಸಾಕಷ್ಟು ಸಮಸ್ಯೆಗಳು ಎದುರಾಗಬಹುದು ಆದ್ದರಿಂದ ಮೀನುಗಳನ್ನು ಮಳೆಗಾಲದಲ್ಲಿ ಸೇವನೆ ಮಾಡದೆ ಇರುವುದೇ ಉತ್ತಮ .

ಮಳೆಗಾಲದಲ್ಲಿ ಮಳೆ ಬಂದು ಕೆರೆಯ ನೀರು ಮತ್ತು ಸಮುದ್ರದ ನೀರು ಕಲುಷಿತ ಗೊಂಡಿರುತ್ತದೆ ಯಾಕೆ ಎಂದರೆ ಊರಿನಲ್ಲಿ ಇರುವಂತಹ ಚರಂಡಿಗಳ ನೀರು ಡ್ರೈನೇಜ್ ನೀರು ಎಲ್ಲ ಕೆರೆಗೆ ಮತ್ತು ಸಮುದ್ರಕ್ಕೆ ಸೇರುವ ಕಾರಣದಿಂದಾಗಿ.

ಅದರಲ್ಲಿ ಮೀನುಗಳನ್ನು ಹಿಡಿದು ತಂದಿರುತ್ತಾರೆ ಇದರಿಂದ ಮೀನುಗಳು ವಿಷ ಕಾರಿಯಾಗಿರುತ್ತದೆ ಈ ಒಂದು ಕಾರಣದಿಂದಾಗಿ ಕೂಡ ಮೀನುಗಳನ್ನು ಮಳೆಗಾಲದಲ್ಲಿ ಸೇವಿಸುವುದು ತುಂಬಾನೇ ಅಪಾಯಕಾರಿ .

ಮಳೆಗಾಲದಲ್ಲಿ ಹಿಡಿದು ತಂದಂತಹ ಮೀನುಗಳನ್ನು ರಿಸರ್ವ್ ಮಾಡಿ ಇಡುವುದಕ್ಕಾಗಿ ಪೊಲೀಸ್ ಸಲ್ಫೇಟ್ ಅನ್ನು ಬಳಸುತ್ತಾರೆ ಈ ಒಂದು ಪೊಲೀಸ್ ಸಲ್ಫೆಟ್ ಎಂಬ ಆಸಿಡ್ ತುಂಬಾನೇ ಕೆಟ್ಟ ವಿಷಕಾರಿ ಪದಾರ್ಥ ವಾಗಿರುತ್ತದೆ.

ಇದು ಮನುಷ್ಯನ ಆರೋಗ್ಯದ ಮೇಲೆ ತುಂಬಾನೇ ಕೆಟ್ಟದಾಗಿ ಪರಿಣಾಮ ಬೀರುತ್ತದೆ ಈ ಒಂದು ಕಾರಣಕ್ಕಾಗಿ ಕೂಡ ಮೀನುಗಳನ್ನು ಮಳೆಗಾಲದಲ್ಲಿ ತಿನ್ನದೇ ಇರುವುದು ಒಳ್ಳೆಯದು ಎಂದು ಹೇಳಲಾಗುವುದು .

ಆರೋಗ್ಯಕ್ಕೆ ಒಳ್ಳೆಯದು ಅನ್ನೋ ಒಂದು ಮೀನುಗಳನ್ನು ಮಳೆಗಾಲದಲ್ಲಿ ಈ ರೀತಿ ವಿಷ ಕಾರಿಯಾಗಿರುತ್ತದೆ ಆದ್ದರಿಂದ ಸ್ನೇಹಿತರು ಯಾರು ಕೂಡ ಮಳೆಗಾಲದಲ್ಲಿ ಮೀನುಗಳನ್ನು ಸೇವಿಸಲು ಹೋಗಬೇಡಿ ಇದರಿಂದ ಆರೋಗ್ಯಕ್ಕೆ ಉತ್ತಮ ಅನ್ನೋ ಬದಲು ಆರೋಗ್ಯಕ್ಕೆ ಕಂಟಕವಾಗಿವೆ ಇರುವುದು ಹೆಚ್ಚು ಆದ್ದರಿಂದ ಈ ಒಂದು ಉಪಯುಕ್ತ ಮಾಹಿತಿಯನ್ನು ನೆನಪಿನಲ್ಲಿ ಇಟ್ಟುಕೊಂಡು ಯಾರು ಕೂಡ ಮಳೆಗಾಲದಲ್ಲಿ ಮೀನು ತಿನ್ನಲು ಹೋಗಬೇಡಿ .

ಮೀನುಗಳಲ್ಲಿ ಮೊಟ್ಟೆ ಯಾದಾಗ ಆ ಮೀನನ್ನು ಸೇವಿಸುವುದು ತುಂಬಾನೇ ವಿಷ ಕಾರಿಯಾಗಿರುತ್ತದೆ ಆದ್ದರಿಂದ ಈ ಮೀನುಗಳನ್ನು ತಿಂದರೆ ಆರೋಗ್ಯದ ಮೇಲೆ ತುಂಬಾ ಕೆಟ್ಟ ಪರಿಣಾಮ ಬೀರುತ್ತದೆ . ಇದಿಷ್ಟು ಮಾಹಿತಿ ಮಳೆಗಾಲದಲ್ಲಿ ಯಾಕೆ ಮೀನುಗಳನ್ನು ಸೇವಿಸಬಾರದು ಅಂತ ಈ ಮಾಹಿತಿ ಎಲ್ಲರಿಗೂ ಉಪಯುಕ್ತವಾಗಿದೆ ಎಂದು ನಾನು ಭಾವಿಸುತ್ತೇನೆ ಮತ್ತು ಇಂತಹ ಒಳ್ಳೆಯ ಆರೋಗ್ಯ ಮಾಹಿತಿಯನ್ನು ನಿಮ್ಮ ಗೆಳೆಯರಿಗೂ ಕೂಡಾ ತಪ್ಪದೇ ಶೇರ್ ಮಾಡಿ ಲೈಕ್ ಮಾಡಿ .