Categories
ಅರೋಗ್ಯ ಆರೋಗ್ಯ ಮನೆಔಷಧಿ ಮಾಹಿತಿ ಸಂಗ್ರಹ

ಇದನ್ನೇನಾದ್ರೂ ನಿತ್ಯ ತಿನ್ನುತ್ತಾ ಬಂದರೆ ನಿಮ್ಮ ಡೊಳ್ಳು ಹೊಟ್ಟೆ ಕರಗಿ ಹೋಗುತ್ತದೆ …

ಇದನ್ನು ತಿನ್ನಿ ಡೊಳ್ಳು ಹೊಟ್ಟೆ ಮಾಯವಾಗುತ್ತದೆ ಹೌದು ನೀವು ಅನಗತ್ಯ ಕೊಬ್ಬಿನ ಸಮಸ್ಯೆಯಿಂದ ಬಳಲುತ್ತಿದ್ದೀರಾ ಹೊಟ್ಟೆ ಸುತ್ತ ಬೊಚ್ಚು ಇದೆಯಾ ಹಾಗಾದರೆ ನಾವು ಹೇಳುವ ಹಾಗೆ ಮನೆಯಲ್ಲಿ ಮಾಡಿ ನೋಡಿ ಸ್ವಲ್ಪ ದಿನಗಳಲ್ಲಿಯೇ ಡೊಳ್ಳು ಹೊಟ್ಟೆ ಕರಗಿ ಸುಂದರವಾದ ಮೈಕಟ್ಟನ್ನು ನೀವು ಪಡೆದುಕೊಳ್ಳಬಹುದಾಗಿದೆ,

ಇದಕ್ಕಾಗಿ ಏನು ಮಾಡಬೇಕು ಹಾಗೂ ಯಾವ ರೀತಿಯ ಆಹಾರ ಪದ್ಧತಿಯನ್ನು ಪಾಲಿಸಬೇಕು ಅನ್ನೋದನ್ನು ಸರಿಯಾಗಿ ತಿಳಿದು ಅದೇ ರೀತಿಯ ಆಹಾರ ಕ್ರಮವನ್ನು ಪಾಲಿಸಿ ನಂತರ ನೋಡಿ ಉತ್ತಮ ಫಲಿತಾಂಶವನ್ನು ನೀವೇ ನೋಡಬಹುದಾಗಿದೆ.

ಇತ್ತೀಚಿನ ದಿನಗಳಲ್ಲಿ ಬಹು ಜನರು ಇಂತಹ ಸ್ಥೂಲಕಾಯ ಸಮಸ್ಯೆಯಿಂದ ಬಳಲುತ್ತಿರುತ್ತಾರೆ ಆದರೆ ಇದಕ್ಕಾಗಿ ಸೂಕ್ತ ಪರಿಹಾರ ಮಾತ್ರ ಎಲ್ಲೂ ಕಂಡು ಕೊಂಡಿರುವುದಿಲ್ಲ ಹಾಗೂ ಡೊಳ್ಳು ಹೊಟ್ಟೆಯನ್ನು ಕರಗಿಸುವುದಕ್ಕಾಗಿ ಇಂಗ್ಲಿಷ್ ಮೆಡಿಸಿನ್ ಟ್ರೀಟ್ಮೆಂಟ್ ಅನ್ನು ಕೂಡ ತೆಗೆದುಕೊಳ್ಳಲಾಗುತ್ತದೆ, ಆದರೆ ಯಾವ ಪ್ರಯೋಜನಗಳು ಮಾತ್ರ ಆಗುವುದಿಲ್ಲ.

ಇಂತಹ ಸಮಸ್ಯೆಯಿಂದ ನೀವು ಬಳಲುತ್ತಿದ್ದರೆ ಇನ್ನು ಮುಂದೆ ಚಿಂತಿಸುವ ಪ್ರಮಯವೇ ಇಲ್ಲ ಯಾಕೆಂದರೆ ಈ ರೀತಿ ಪದಾರ್ಥಗಳನ್ನು ಸೇವಿಸಿ ಅನಗತ್ಯ ಕೊಬ್ಬನ್ನು ಕರಗಿಸಿಕೊಳ್ಳಿ,

ಹಾಗಾದರೆ ಪದಾರ್ಥವು ಯಾವುದು ಅಂದರೆ ಶೇಂಗಾ ಬೆಲ್ಲ ಮತ್ತು ಎಳ್ಳು ಈ ಪದಾರ್ಥಗಳನ್ನು ಸೇವಿಸುವುದರಿಂದ ನೋಡಿ ಉತ್ತಮವಾದ ಫಲಿತಾಂಶವು ನಿಮಗೆ ದೊರೆಯುತ್ತದೆ ಹಾಗೂ ನಾವು ಹೇಳುವಂತಹ ಕೆಲವೊಂದು ನಿಯಮಗಳನ್ನು ಪಾಲಿಸಿ ಇದರಿಂದಾಗಿ ನೀವು ನಿಮ್ಮ ಹೊಟ್ಟೆ ಸುತ್ತಲಿನ ಬೊಜ್ಜನ್ನು ಕರಗಿಸಿಕೊಳ್ಳಬಹುದು.

ಹೊಟ್ಟೆ ಸುತ್ತಲಿನ ಬೊಜ್ಜನ್ನು ಕರಗುವುದಕ್ಕೆ ಎಳ್ಳು ಹೆಚ್ಚು ಸಹಾಯಕಾರಿಯಾಗಿದೆ, ಹೌದು ಸ್ನೇಹಿತರೆ ಎಳ್ಳನ್ನು ತಿನ್ನುವುದರಿಂದ ದೇಹಕ್ಕೆ ಉತ್ತಮವಾದ ಕೊಬ್ಬಿನಾಂಶ ದೊರೆಯುತ್ತದೆ ಹಾಗೆಯೇ ಎಳ್ಳನ್ನು ತಿಂದರೆ ದೇಹದಲ್ಲಿ ಶೇಖರಣೆಯಾಗಿರುವ ಅನಗತ್ಯ ಕೊಬ್ಬು ಕೂಡಾ ಕರಗುತ್ತದೆ, ಆದ್ದರಿಂದ ಎಳ್ಳನ್ನು ತಿನ್ನುವುದರಿಂದ ತೂಕ ಇಳಿಯುತ್ತದೆ ಜೊತೆಗೆ ಅನಗತ್ಯ ಕೊಬ್ಬು ಕೂಡಾ ಕರಗುತ್ತದೆ ಡೊಳ್ಳು ಹೊಟ್ಟೆ ಮಾಯವಾಗುತ್ತದೆ.

ಇದರೊಟ್ಟಿಗೆ ನಾವು ಹೇಳುವಂತಹ ಒಂದು ನಿಯಮವನ್ನು ತಪ್ಪದೇ ಪಾಲಿಸಿ ಅದೇನೆಂದರೆ ವಾರಕ್ಕೊಮ್ಮೆಯಾದರೂ ಉಪವಾಸ ಮಾಡಿ ಉಪವಾಸ ಅಂದರೆ ಪೂರ್ತಿ ಏನನ್ನೂ ತಿನ್ನದೆ ಮಾಡುವ ಉಪವಾಸವಲ್ಲ ಉಪವಾಸ ಮಾಡುವಾಗ ಹಣ್ಣು ತರಕಾರಿಗಳನ್ನು ಸೇವಿಸಿ, ಇದರಿಂದ ದೇಹಕ್ಕೆ ಬೇಕಾಗುವ ಪೋಷಕಾಂಶ ದೊರೆಯುತ್ತದೆ ಹಾಗೂ ಉಪವಾಸ ಮಾಡುವುದರಿಂದ ದೇಹದಲ್ಲಿ ಇರುವಂತಹ ಬೇಡದೆ ಇರೋ ಗ್ಯಾಸ್ ಆಚೆ ಹೋಗುತ್ತದೆ.

ನಾವು ಈ ಮೇಲೆ ತಿಳಿಸಿದ ಹಾಗೆ ಎಳ್ಳನ್ನು ತಿನ್ನುವುದರಿಂದ ದೇಹಕ್ಕೆ ಬೇಕಾಗುವ ಕೊಬ್ಬು ದೊರೆಯುತ್ತದೆ ಹಾಗೂ ಅನಗತ್ಯ ಕೊಬ್ಬು ಕರಗುತ್ತದೆ ಅಂತ ಹೇಳಿದ್ದೆವು ಆದರೆ ಈ ಪದ್ಧತಿಯನ್ನು ಕೇವಲ ಚಳಿಗಾಲ ಮತ್ತು ಮಳೆಗಾಲದಲ್ಲಿ ಮಾತ್ರ ಪಾಲಿಸುವುದು ಉತ್ತಮವಾಗಿರುತ್ತದೆ, ಇನ್ನು ಶೇಂಗಾ ಮತ್ತು ಬೆಲ್ಲ ಕೂಡ ಆರೋಗ್ಯಕ್ಕೆ ಉತ್ತಮ ಮತ್ತು ತೂಕ ಇಳಿಸುವುದರಲ್ಲಿ ಕೂಡ ಒಳ್ಳೆಯ ಪ್ರಯೋಜನಗಳನ್ನ ನೀಡುತ್ತದೆ.

ಸಕ್ಕರೆಯನ್ನು ಬಳಸುವಂತಹ ಜಾಗದಲ್ಲಿ ಬೆಲ್ಲವನ್ನು ಬಳಸಿ ಇದರಿಂದಾಗಿ ದೇಹಕ್ಕೆ ಬೇಕಾಗುವಂತಹ ಹೆಚ್ಚು ಕಾಂಶಗಳು ದೊರೆಯುತ್ತದೆ ಹಾಗೂ ಸಕ್ಕರೆ ಅಂಶವೂ ಅನಗತ್ಯ ಕೊಬ್ಬನ್ನು ಹೆಚ್ಚಿಸುತ್ತದೆ ಆದರೆ ಬೆಲ್ಲ ಆರೋಗ್ಯಕ್ಕೂ ಕೂಡ ಉತ್ತಮ ಜೊತೆಗೆ ತೂಕ ಇಳಿಸುವುದರಲ್ಲಿ ಹೆಚ್ಚು ಸಹಾಯಕಾರಿಯಾಗಿದೆ ಹಾಗೂ ರಕ್ತ ಶುದ್ಧೀಕರಣದಲ್ಲಿ ಹಿಮೋಗ್ಲೋಬಿನ್ ವೃದ್ಧಿಸುವುದರಲ್ಲಿ ಉತ್ತಮವಾದ ಪದಾರ್ಥವೂ ಈ ಬೆಲ್ಲ.

ಈ ಮೇಲೆ ತಿಳಿಸಿದ ಆಹಾರ ಪದ್ಧತಿಯನ್ನು ಪಾಲಿಸಿ ಹಾಗೂ ನಾವು ಹೇಳಿದಂತಹ ಆಹಾರ ಪದಾರ್ಥಗಳನ್ನು ಸೇವಿಸುತ್ತಾ ಬನ್ನಿ, ನೋಡಿ ಉತ್ತಮ ಫಲಿತಾಂಶವನ್ನು ನೀವೇ ನಿಮ್ಮ ಕಣ್ಣಾರೆ ಕಾಣಬಹುದಾಗಿದೆ.