Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ಈ ಅದ್ಬುತ ಮನೆ ಮದ್ದನ್ನ ಬಳಸಿ ನೋಡಿ ಗ್ಯಾಸ್ಟ್ರಿಕ್ ಯಾವುದೇ ಕಾರಣಕ್ಕೂ ಬರೋದೇ ಇಲ್ಲ ..!

ಇತ್ತೀಚಿನ ಕಾಲದಲ್ಲಿಯಂತೂ ಹೆಚ್ಚಿನ ಜನರು ಯಾರಿಗೆ ಕೇಳಿದರೂ ಅಸಿಡಿಟಿ ಸಮಸ್ಯೆ ಇದೆ ನಾವು ಆ ಆಹಾರ ಸೇವಿಸುವಂತಿಲ್ಲ ಅಥವಾ ಸೇವಿಸುವ ಮುನ್ನ ಮಾತ್ರೆಗಳನ್ನು ತೆಗೆದುಕೊಳ್ಳಬೇಕು ಅಂತ ಅಂದುಕೊಳ್ಳುತ್ತ ಇರ್ತಾರೆ. ಈ ಒಂದು ಸನ್ನಿವೇಶವನ್ನು ಸಾಕಷ್ಟು ಮಂದಿ ಈಗಾಗಲೆ ಎದುರಿಸಿರುತ್ತಾರೆ. ಹಾಗಾದರೆ ಗ್ಯಾಸ್ಟ್ರಿಕ್ ಸಮಸ್ಯೆ ಪರಿಹಾರವಾಗಬೇಕೆಂದರೆ ಮನೆಯಲ್ಲಿ ಮಾಡಬೇಕಾಗಿರುವ ಮನೆ ಮದ್ದು ಏನು ಮತ್ತು ಮುಂದಿನ ದಿನಗಳಲ್ಲಿ ಗ್ಯಾಸ್ಟ್ರಿಕ್ ಕಾಡಬಾರದು ಅಂದರೆ ಮಾತ್ರೆಗಳ ಬಳಕೆ ಇಲ್ಲದೆ ನಾವು ಹೇಗೆ ಈ ಗ್ಯಾಸ್ಟ್ರಿಕ್ ಅಸಿಡಿಟಿ ಸಮಸ್ಯೆ ಪರಿಹರಿಸಿಕೊಳ್ಳಬಹುದು ಎಂಬ ಮಾಹಿತಿಯನ್ನು ನೀಡುತ್ತೇವೆ ಸಂಪೂರ್ಣವಾಗಿ ಈ ದಿನದ ಮಾಹಿತಿಯನ್ನು ತಿಳಿಯಿರಿ.

ಗ್ಯಾಸ್ಟ್ರಿಕ್ ಸಮಸ್ಯೆ ಕಾಡುವುದು ನಾವು ಸರಿಯಾದ ಸಮಯಕ್ಕೆ ಊಟ ಮಾಡದೇ ಇದ್ದಾಗ ಮತ್ತು ಖಾಲಿ ಹೊಟ್ಟೆಯಲ್ಲಿ ನಾವು ಸಮಯ ಕಳೆಯುವುದರಿಂದ. ಈ ರೀತಿಯಾಗಿ ನಾವು ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಬರ ಮಾಡಿಕೊಳ್ಳುತ್ತೇವೆ ಆದರೆ ನಾವು ನಮ್ಮ ಹೊಟ್ಟೆಯನ್ನು ಖಾಲಿ ಬಿಡದೆ ಗಂಟೆಗೊಮ್ಮೆ ಹೆಚ್ಚು ನೀರನ್ನು ಕುಡಿಯುವುದು ಆಗಲಿ ಅಥವಾ ಲಘು ಉಪಹಾರವನ್ನು ಸೇವಿಸುವುದಾಗಲಿ ಮಾಡುತ್ತ ಬರುವುದರಿಂದ ಗ್ಯಾಸ್ಟ್ರಿಕ್ ಸಮಸ್ಯೆ ಜೀವನದಲ್ಲಿಯೇ ಕಾಡುವುದಿಲ್ಲ. ಆದರೆ ಹೆಚ್ಚಿನ ಮಂದಿ ಹಸಿದಾಗ ಅಥವಾ ಖಾಲಿ ಹೊಟ್ಟೆಗೆ ಮಸಲಾ ಪದಾರ್ಥಗಳು ಬೇಕರಿ ಪದಾರ್ಥಗಳನ್ನು ಸೇರಿಸುವುದರಿಂದ ಇದು ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರುತ್ತದೆ ಮತ್ತು ಮಸಾಲ ಪದಾರ್ಥ ಹೊಟ್ಟೆಯನ್ನ ಹಾಳುಮಾಡುತ್ತದೆ ಅಸಿಡಿಟಿಯನ್ನು ಹೆಚ್ಚು ಮಾಡುತ್ತದೆ.

ನಿಮಗೆ ಗ್ಯಾಸ್ಟ್ರಿಕ್ ಕಾಡಬಾರದೆಂದರೆ ಹೊಟ್ಟೆ ಪೂರ್ತಿ ಪೌಷ್ಠಿಕಾಂಶವುಳ್ಳ ಆಹಾರವನ್ನು ಸೇವಿಸಬೇಕು ಮತ್ತು ಮಸಾಲೆಯುಕ್ತ ಪದಾರ್ಥಗಳನ್ನು ಆದಷ್ಟು ಕಡಿಮೆ ಮಾಡಬೇಕು. ಒಂದಂತೂ ನಿಜ ಮಸಾಲೆಯುಕ್ತ ಪದಾರ್ಥಗಳು ದೇಹಕ್ಕೆ ಒಳ್ಳೆಯದೇ ಆದರೆ ಅತಿ ಮಿತಿಯಾಗಿ ಈ ಪದಾರ್ಥಗಳನ್ನು ನಾವು ಬಳಕೆ ಮಾಡಬೇಕು. ಇವತ್ತಿನ ಮಾಹಿತಿ ತಿಳಿಸುವ ಈ ಮನೆಮದ್ದು ಗ್ಯಾಸ್ಟ್ರಿಕ್ ಸಮಸ್ಯೆ ಅನ್ನು ಪರಿಹಾರ ಮಾಡುತ್ತದೆ ಇದಕ್ಕಾಗಿ ನಿಮಗೆ ಬೇಕಾಗಿರುವುದು ಕೊತ್ತಂಬರಿ ಬೀಜ ಮತ್ತು ಜೀರಿಗೆ.

ಈ ಪರಿಹಾರದ ಪ್ರಯೋಜನಗಳ ಬಗ್ಗೆ ಹೇಳುವುದಾದರೆ ವಾಯು ಸಮಸ್ಯೆಯಿಂದ ಉಂಟಾಗುವ ಹೊಟ್ಟೆ ನೋವನ್ನು ನಿವಾರಣೆ ಮಾಡುತ್ತದೆ ಮತ್ತು ಅಸಿಡಿಟಿ ಸಮಸ್ಯೆ ಬೇಗ ಪರಿಹಾರ ಮಾಡುತ್ತದೆ ಇದೀಗ ನಿಮ್ಮ ಮನೆಯಲ್ಲಿ ಹಂಚಿನ ಕಾವಲು ಇದ್ದರೆ ಅದಕ್ಕೆ 1ಚಮಚ ಕೊತ್ತಂಬರಿ ಬೀಜವನ್ನು ಹಾಕಿ ಇದಕ್ಕೆ 2ಚಮಚ ಜೀರಿಗೆಯನ್ನು ಹಾಕಿ ಹುರಿಯಬೇಕು ಈ ಪದಾರ್ಥಗಳ ಬಣ್ಣ ಸ್ವಲ್ಪ ಬದಲಾಗುವವರೆಗೂ ಹುರಿದಿಟ್ಟುಕೊಂಡು ನಂತರ ಈ ಬಾಣಲೆಗೆ ಎರಡು ಲೋಟ ನೀರನ್ನು ಹಾಕಿ ಚೆನ್ನಾಗಿ ಕುದಿಸಬೇಕು ಎಷ್ಟು ಅಂದರೆ, ಒಂದು ಲೋಟ ನೀರು ಅರ್ಧ ಲೋಟ ವಾಗಬೇಕು ಆ ಪ್ರಮಾಣದಲ್ಲಿ ನೀರನ್ನು ಕುದಿಸಿ ಇದನ್ನು ದಿನಕ್ಕೆ ಒಂದು ಬಾರಿ ಸೇವಿಸಬೇಕು.

ಹಳ್ಳಿ ಮಂದಿ ಈ ಕಷಾಯವನ್ನು ಓಡ್ ಕಷಾಯ ಅಂತ ಕರೀತಿದ್ರೋ ಯಾಕೆ ಅಂದರೆ ಈ ಅಸಿಡಿಟಿ ಸಮಸ್ಯೆ ಅನ್ನು ಪರಿಹರಿಸುವುದಕ್ಕೆ ಹಂಚಿನ ಕಾವಲೆಯ ಮೇಲೆ ಅಥವಾ ಹಂಚಿನ ಪಾತ್ರೆಯನ್ನು ಬಳಸಿ ಈ ಕಷಾಯವನ್ನು ಮಾಡುತ್ತಿದ್ದರು. ಅದಕ್ಕಾಗಿ ಇದನ್ನು ಓಡ್ ಕಷಾಯ ಅಂತ ಕೂಡ ಕರೆಯುತ್ತಿದ್ದರೂ. ಗ್ಯಾಸ್ಟ್ರಿಕ್ ಸಮಸ್ಯೆ ಉಂಟಾದಾಗ ಅದನ್ನು ಪರಿಹರಿಸುವುದಕ್ಕೆ ಈ ಪರಿಹಾರವನ್ನು ಮಾಡಿಕೊಳ್ಳಿ ಮನೆಮದ್ದು ತುಂಬಾ ಪರಿಣಾಮಕಾರಿ ಆಗಿ ಫಲಿತಾಂಶವನ್ನು ನೀಡುತ್ತದೆ.