Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ಈ ಎಲೆಯಲ್ಲಿ ಅಡಗಿದೆ ಹಲವಾರು ರೋಗಗಳನ್ನು ನಿವಾರಿಸುವಂಥ ಗುಣ … ಇಷ್ಟ ಇದ್ರೆ ಓದಿ …

ನಮ್ಮ ಭಾರತ ದೇಶವು ಆಯುರ್ವೇದಕ್ಕೆ ಮೂಲ ಎಂದರೆ ತಪ್ಪಾಗಲಾರದು ಹಿಂದಿನ ಕಾಲದಿಂದಲೂ ಅಂದರೆ ನಮ್ಮ ಪೂರ್ವಜರ ಕಾಲದಿಂದಲೂ ಕೂಡ ಆರ್ಯುವೇದಿಕ್ ಗಿಡಮೂಲಿಕೆ ಒಂದು ಉತ್ತಮ ಪ್ರಾಧಾನ್ಯತೆಯನ್ನು ನೀಡಲಾಗಿದೆ ಆಯುರ್ವೇದಿಕ್ ಎಂದರೆ ಎಲ್ಲರಿಗೂ ಕೂಡ ಉಪಯುಕ್ತವಾಗುವಂತಹ ಒಂದು ಚಿಕಿತ್ಸೆಯಾಗಿ ಇಂದಿನ ಕಾಲದಲ್ಲಿ ಇಂಗ್ಲಿಷ್ ಮೆಡಿಸನ್ ಬರುವ ಮೊದಲು ಇದ್ದದ್ದೇ ಆಯುರ್ವೇದಿಕ್ ಪ್ರತಿಯೊಂದು ಕಾಯಿಲೆಗೂ ಕೂಡ ಆಯುರ್ವೇದಿಕ್ ಬಳಸುತ್ತಿದ್ದರೂ.

ಅದರ ಜೊತೆಗೆ ಆಯುರ್ವೇದಿಕ್ ಎಂದರೆ ಯಾವುದೋ ಆಸ್ಪತ್ರೆಗೆ ಹೋಗಿ ಸಾವಿರಾರು ರೂಪಾಯಿ ಖರ್ಚು ಮಾಡುವ ಅವಶ್ಯಕತೆ ಇರುತ್ತಿರಲಿಲ್ಲ ನಮ್ಮ ಅಕ್ಕ ಪಕ್ಕ ಇರುವ ಯಾವುದೋ ಸಸ್ಯದ ಬೇರಿನಿಂದ ಸಸ್ಯದ ಎಲೆಗಳನ್ನು ಸಸ್ಯದ ಕಾಯಿಗಳಿಂದ ಅಥವಾ ಮರದ ತೊಗಟೆಗಳನ್ನು ಬಳಸಿ ಔಷಧಿಯನ್ನು ಮಾಡಿ ಚಿಕಿತ್ಸೆಯನ್ನು ಕೊಡುತ್ತಿದ್ದರು ಆದರೆ ಈಗಿನ ಕಾಲದಲ್ಲಿ ಅಂತಹ ಗಿಡಮೂಲಿಕೆಗಳು ತುಂಬಾ ಕಡಿಮೆಯಾಗಿದೆ.

ಈಗ ಸಾಮಾನ್ಯವಾಗಿ ಜನರಿಗೆ ಗಿಡಮೂಲಿಕೆ ಗಿಡಗಳು ಯಾವುವು ಅಂದರೆ ಔಷಧಿ ಗುಣಗಳಿರುವ ಗಿಡಗಳು ಯಾವ ಸಾಮಾನ್ಯ ಗಿಡಗಳು ಯಾವುವು ಎಂಬ ಕಲ್ಪನೆಯೇ ಇರುವುದಿಲ್ಲ ಅಂಥದ್ದೇ ಒಂದು ಗಿಡದ ಬಗ್ಗೆ ನಾ ನಿಮಗೀಗ ತಿಳಿಸಿಕೊಡುತ್ತೇನೆ ಈ ಗಿಡವನ್ನು ಯಾರೂ ಕೂಡ ಔಷಧೀಯ ಗಿಡ ಎಂದು ಕೊಂಡಿರುವುದಿಲ್ಲ ಸಾಮಾನ್ಯವಾಗಿ ಬೇಲಿಗಳ ಮೇಲೆ ಈ ಗಿಡಗಳನ್ನು ನಾವು ಕಾಣುತ್ತೇವೆ ಆ ಗಿಡದ ಹೆಸರೇ ಅತಿಬಲ ಅತಿ ಬಲದ ಬಗ್ಗೆ ಯಾರೂ ಕೂಡ ಕೇಳಿರುವುದು ಇಲ್ಲ ಅದನ್ನು ನೋಡಿರಲು ಸಾಧ್ಯವೇ ಇಲ್ಲ.

ಅದು ಸಾಮಾನ್ಯವಾಗಿ ಎಲ್ಲರ ಕಣ್ಣಿಗೂ ಬೀಳುತ್ತದೆ ಈ ಗಿಡವು ಅತಿ ಹೆಚ್ಚಾಗಿ ಹಳ್ಳಿಯ ಕಡೆ ಸಿಗುತ್ತದೆ ಇದನ್ನು ಹಳ್ಳಿಗರು ಕೂಡ ಈಗಿನ ಕಾಲದಲ್ಲಿ ಕಂಡು ಹಿಡಿಯುವುದು ಕಷ್ಟಕರವಾಗಿದೆ ಜೊತೆಗೆ ಈ ಗಿಡವನ್ನು ಕಂಡು ಹಿಡಿಯುವುದು ತುಂಬಾ ಸುಲಭ ಈ ಗಿಡದ ಕಾಯಿಗಳು ಚಕ್ರದ ರೀತಿಯಲ್ಲಿರುತ್ತವೆ ಇದನ್ನು ಹಳ್ಳಿಯ ಕಡೆ ಮಕ್ಕಳು ಆಟವಾಡಲು ಬಳಸುತ್ತಾರೆ ಈ ಗಿಡದಿಂದ ಹೇಗೆ ಚಿಕಿತ್ಸೆಯನ್ನು ಪಡೆಯಬಹುದು ಅಥವಾ ಈ ಗಿಡದಲ್ಲಿ ಅಂತಹ ಆಯುರ್ವೇದಿಕ್ ಸತ್ವ ಏನಿದೆ ಎಂಬ ಪ್ರಶ್ನೆ ಮೂಡುತ್ತಿದೆ ಅಲ್ಲವೇ .

ಅದರ ಬಗ್ಗೆ ನಾ ನಿಮಗೀಗ ತಿಳಿಸಿಕೊಡುತ್ತೇನೆ ಈ ಅತಿಬಲ ಸಸ್ಯವು ಅತಿ ಹೆಚ್ಚು ಆಯುರ್ವೇದಿಕ್ ಗುಣಗಳನ್ನು ಹೊಂದಿದೆ ಜ್ವರ ವಿಷಮ ಜ್ವರ ನೆಗಡಿ ತಲೆನೋವು ಕಿಡ್ನಿಯಲ್ಲಿ ಕಲ್ಲು ಮಲಬದ್ಧತೆ ನೆಗಡಿ ಈ ರೀತಿ ಎಲ್ಲ ಸಮಸ್ಯೆಗಳಿಗೂ ಅತಿಬಲ ಸಸ್ಯದ ಎಲೆಗಳು ಉತ್ತಮವಾಗಿದೆ ಅದು ಹೇಗೆಂದರೆ ಈ ಎಲೆಯನ್ನು ಹೇಗೆ ಬೆಳೆಸಬೇಕು ಎಂದರೆ ಈ ಗಿಡದ ಕೇವಲ ಐದು ಎಲೆಗಳನ್ನು ತೆಗೆದುಕೊಂಡು ಅದನ್ನು ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಬೇಕು ಕುದಿಸುವ ಮೊದಲು ಐದು ಎಲೆಗಳನ್ನು ಕಾಲು ಲೀಟರ್ ನೀರಿನಲ್ಲಿ ನೆನೆಸಿಡಬೇಕು ಅರ್ಧ ಗಂಟೆ ನೆನೆಸಿದರೆ ಸಾಕು ನೆನೆಸಿದ ನಂತರ ಅದನ್ನು ಚೆನ್ನಾಗಿ ಕುದಿಸಿ ಸೋಸಿಕೊಂಡು ಕುಡಿದರೆ ಜ್ವರ ನೆಗಡಿ ಮಲಬದ್ಧತೆಯಂತಹ ಕಾಯಿಲೆಗಳು ಬೇಗ ಉಪಶಮನವಾಗುತ್ತವೆ.

ಇದೊಂದು ಸರಳ ವಿಧಾನವಾಗಿದೆ ಸಾಮಾನ್ಯವಾಗಿ ಹಳ್ಳಿಗಳಲ್ಲಿ ಈ ಗಿಡವು ಸಿಗುತ್ತದೆ ಈ ಸರಳ ವಿಧಾನವನ್ನು ಮಾಡಿ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದರಲ್ಲಿ ತಪ್ಪಿಲ್ಲ ಅಲ್ಲವೇ ಆದ್ದರಿಂದ ಎಲ್ಲರೂ ಕೂಡ ಈ ವಿಧಾನವನ್ನು ಬಳಸಿ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ ಮತ್ತು ಈಗಿನ ಕಾಲದಲ್ಲಿ ದೊಡ್ಡ ಸಮಸ್ಯೆಯಾಗಿರುವ ಕಿಡ್ನಿಯಲ್ಲಿ ಕಲ್ಲು ಈ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಿ ಎಲ್ಲರಿಗೂ ಧನ್ಯವಾದ ಶುಭ ದಿನ ..

Leave a Reply