Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ಈ ಒಂದು ಕಾಳಿನಿಂದ ಸಕ್ಕರೆ ಕಾಯಿಲೆ, ಬೊಜ್ಜು, ಕಿಡ್ನಿ ಸಮಸ್ಯೆ, ಮೊಡವೆ, ಎಲ್ಲವೂ ಮಾಯಾ ಆಗುತ್ತೆ ..!

ನಮಸ್ಕಾರ ಪ್ರಿಯ ಸ್ನೇಹಿತರೆ ಇಂದಿನ ಮಾಹಿತಿಯಲ್ಲಿ ನಾವು ನಿಮಗೆ ತಿಳಿಸುತ್ತಿರುವಂತಹ ಒಂದು ವಿಚಾರ ಏನು ಅಂದರೆ ಒಂದೇ ಒಂದು ಕಾಳನ್ನು ನೀವು ಪ್ರತಿದಿನ ನಿಮ್ಮ ಆಹಾರ ಪದ್ಧತಿಯಲ್ಲಿ ಸೇವನೆ ಮಾಡುವುದರಿಂದ ನಿಮಗೆ ಜೀವನದಲ್ಲಿ ರಕ್ತಹೀನತೆ ಸಮಸ್ಯೆ ಆಗಲಿ ಅಥವಾ ಮೂಳೆಗೆ ಸಂಬಂಧಪಟ್ಟ ಸಮಸ್ಯೆಗಳನ್ನೆ ಆಗಲಿ ಶ್ರೀಮಂತ ಕಾಯಿಲೆ ಅಂತ ಕರೆಯುವ ಮಧುಮೇಹ ಕೂಡ ನಿಮ್ಮ ಬಳಿ ಸುಳಿಯುವುದಿಲ್ಲ. ಇಂದಿನ ಮಾಹಿತಿಯಲ್ಲಿ ಸಂಪೂರ್ಣವಾಗಿ ನಿಮಗೆ ತಿಳಿಸಿಕೊಡುತ್ತೇನೆ ಈ ಒಂದು ಕಾಳನ್ನು ನೀವು ಹೇಗೆ ,

ಬಳಸುವುದರಿಂದ ನಿಮ್ಮ ಆರೋಗ್ಯ ಹೆಚ್ಚುತ್ತದೆ ಮತ್ತು ಇದನ್ನು ಉಪಯೋಗಿಸುವುದರಿಂದ ಆಗುವ ಲಾಭಗಳೇನು ಎಂದು ಮಾಹಿತಿಯನ್ನು ತಿಳಿಸಿಕೊಡುತ್ತೇನೆ. ಉತ್ತಮ ಆರೋಗ್ಯಕ್ಕಾಗಿ ಸಂಪೂರ್ಣ ಮಾಹಿತಿಯನ್ನು ತಿಳಿದು ಮಾಹಿತಿಯನ್ನು ಶೇರ್ ಮಾಡುವುದನ್ನು ಮರೆಯದಿರಿ. ಆ ಕಾಳು ಯಾವುದು ಅಂತ ಯೋಚನೆ ಮಾಡ್ತಾ ಇದ್ದೀರ, ಅದು ಮಾರುಕಟ್ಟೆಯಲ್ಲಿ ತುಂಬಾ ಕಡಿಮೆ ಬೆಲೆಯಲ್ಲಿ ದೊರೆಯುವ ಕಾಳು ಆಗಿರುತ್ತದೆ.

ಹೌದು, ಮೆಂತೆಕಾಳು ಬಹಳ ಅದ್ಭುತವಾದ ಆರೋಗ್ಯಕರ ಲಾಭಗಳನ್ನು ನೀಡುವ ಈ ಮೆಂತ್ಯೆ ಕಾಳುಗಳನ್ನು ನಾವು ಹಾಗೆ ನೇರವಾಗಿ ಸೇವನೆ ಮಾಡುವುದಕ್ಕೆಂದು ಆಗೋದಿಲ್ಲ. ಆದರೆ ಉತ್ತರ ಕರ್ನಾಟಕ ಮಂದಿ ಅಷ್ಟೊಂದು ಗಟ್ಟಿಮುಟ್ಟಾಗಿ ಇರುವುದಕ್ಕೆ ಕಾರಣ ಅಂದರೆ ಅವರು ಈ ಮೆಂತೆ ಕಾಳುಗಳನ್ನು ಪುಡಿಮಾಡಿಟ್ಟುಕೊಂಡು ಪ್ರತಿದಿನ ಅವರ ಅಡುಗೆಯಲ್ಲಿ ಒಂದು ಚಮಚದಷ್ಟು ಬಳಕೆ ಮಾಡುತ್ತಾರೆ. ಇದರಿಂದ ಅವರಿಗೆ ಸಂಬಂಧಪಟ್ಟ ಸಮಸ್ಯೆಗಳಾಗಲಿ ಅಥವಾ ಹೃದಯಕ್ಕೆ ಸಂಬಂಧಪಟ್ಟ ಸಮಸ್ಯೆಗಳಾಗಲಿ ಬರುವುದಿಲ್ಲ. ಮೆಂತೆಕಾಳನ್ನು ಯಾರು ಬೇಕಾದರೂ ಸೇವಿಸಬಹುದು, ಮಕ್ಕಳಿಂದ ಹಿಡಿದು ಬಾಣಂತಿಯರು ವಯಸ್ಸಾದ ಮಂದಿ ಚಿಕ್ಕ ಮಕ್ಕಳು ಸೇವಿಸಬಹುದು.

ಇದನ್ನು ಒಂದು ಚಮಚದಷ್ಟು ಒಬ್ಬ ವ್ಯಕ್ತಿ ಸೇವಿಸಿದರೆ ಸಾಕು. ರಾತ್ರಿ ಮಲಗುವ ಮುನ್ನ ಒಂದು ಚಮಚದಷ್ಟು ಮೆಂತೆ ಕಾಳುಗಳನ್ನು ಒಂದು ಲೋಟದಲ್ಲಿ ನೆನೆಸಿಡಬೇಕು. ನಂತರ ನೀರನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡಬೇಕು, ಆಮೇಲೆ ಕಾಳುಗಳನ್ನು ಚೆನ್ನಾಗಿ ಜಗಿದು ನುಂಗಬೇಕು ಆಗಲೆ ಇದರ ಸಂಪೂರ್ಣ ಪೋಷಕಾಂಶ ನಮಗೆ ದೊರೆಯುವುದಕ್ಕೆ ಸಾಧ್ಯ.

ಇನ್ನೂ ಹತ್ತಾರು ಮೆಂತ್ಯೆ ಕಾಳುಗಳ ಲಾಭವನ್ನು ಹೇಳಬೇಕೆಂದರೆ ಸಕ್ಕರೆ ಕಾಯಿಲೆಯ ವ್ಯಕ್ತಿ ಮೆಂತೆ ಕಾಳುಗಳನ್ನು ಮಿತಿಯಾಗಿ ಬಳಸುವುದರಿಂದ ರಕ್ತದಲ್ಲಿರುವ ಸಕ್ಕರೆಯ ಪ್ರಮಾಣವನ್ನು ನಿಯಂತ್ರಣಕ್ಕೆ ತರುತ್ತದೆ ಗರ್ಭಾವಸ್ಥೆಯಲ್ಲಿರುವ ಹೆಣ್ಣುಮಕ್ಕಳಿಗೆ ಒಳ್ಳೆಯ ಪೋಷಕಾಂಶವನ್ನು ನೀಡುವುದಲ್ಲದೆ ಬಾಣಂತಿಯರಿಗೆ ಮೆಂತ್ಯೆ ಕಾಳನ್ನು ಬಳಸಿ ಮಾಡಿಕೊಡುವ ವಾಡಿಕೆ ಕೂಡ ಇದೆ. ಈ ರೀತಿ ಮೆಂತೆ ಮುದ್ದೆ ಅನ್ನು ಬಾಣಂತಿ ಹೆಣ್ಣುಮಕ್ಕಳಿಗೆ ನೀಡುವುದರಿಂದ ಅವರ ಸೊಂಟ ಬಲಗೊಳ್ಳುತ್ತದೆ.

ನಿಮಗೇನಾದರೂ ರಕ್ತಹೀನತೆ ಸಮಸ್ಯೆ ಕಾಡುತ್ತಿದ್ದಲ್ಲಿ ಪ್ರತಿದಿನ ಮೆಂತೆ ಕಾಳುಗಳನ್ನು ಸೇವಿಸಿ ಹಾಗೆ ನೀವು ಈ ಮೆಂತೆ ಕಾಳುಗಳನ್ನು ಸೇವನೆ ಮಾಡುವುದಕ್ಕೆ ನಮಗೆ ಆಗುವುದಿಲ್ಲ ಅನ್ನೋರು ಮೆಂತೆ ಕಾಳುಗಳನ್ನು ಮೊಳಕೆ ಕಟ್ಟಿಸಿ ಕೂಡ ತಿನ್ನಬಹುದು. ಇದರಿಂದ ನೀವು ಯಾವುದೇ ವ್ಯಾಯಾಮ ಇಲ್ಲದೆ ನಿಮ್ಮ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು. ಎಷ್ಟು ಕಡಿಮೆ ಬೆಲೆಯಲ್ಲಿ ದೊರೆಯುವ ಮೆಂತೆಕಾಳುಗಳಲ್ಲಿ ಎಷ್ಟು ಅಗಾಧವಾದ ಔಷಧೀಯ ಗುಣವು ಇದೆ. ನೀವು ಸಕ್ಕರೆ ಕಾಯಿಲೆ ಯಿಂದ ದೂರವಿರಲು ರಕ್ತ ಹೀನತೆ ಸಮಸ್ಯೆಯಿಂದ ರಕ್ತದೊತ್ತಡದ ಸಮಸ್ಯೆಯಿಂದ ದೂರವಿರಲು ಮೆಂತೆ ಕಾಳುಗಳನ್ನು ಪ್ರತಿ ದಿನ ನೆನೆಸಿಟ್ಟು ಸೇವಿಸುತ್ತಾ ಬನ್ನಿ. ಮಕ್ಕಳಿಗೂ ಕೂಡ ನೀಡಿ ಎಲ್ಲರೂ ಉತ್ತಮ ಆರೋಗ್ಯವನ್ನು ಪಡೆದುಕೊಳ್ಳಿ ಧನ್ಯವಾದ.