Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ಈ ಕಾಳುಗಳನ್ನು ಹೆಚ್ಚು ತಿನ್ನೋದ್ರಿಂದಾ ಏನಾಗತ್ತೆ ಗೊತ್ತಾ….!

ಹಿಂದಿನ ಕಾಲದವರು ಆಸ್ಪತ್ರೆಗೆ ಹೋಗ್ತಾ ಇರ್ಲಿಲ್ಲಾ ಎಷ್ಟೋ ಜನರು ಆಸ್ಪತ್ರೆಯ ಮುಖ ನೋಡ್ತಾ ಇರ್ಲಿಲ್ಲ. ಇನ್ನೂ ಇಂದಿನ ಕಾಲದಲ್ಲಿಯೂ ಕೂಡ ಕೆಲ ಮಂದಿ ಆಸ್ಪತ್ರೆಗೆ ಹೋಗುವುದು ಕೂಡ ತುಂಬ ಕಡಿಮೆ ಯಾಕೆಂದರೆ ಅವರು ಪಾಲಿಸುವ ಆಹಾರಪದ್ಧತಿ ಆಗಿರುತ್ತದೆ ಆದರೆ ಇನ್ನೂ ಕೆಲವರಂತೂ ತಮ್ಮ ಜೀವನದ ಅರ್ಧ ಸಮಯ ಆಸ್ಪತ್ರೆಯಲ್ಲಿ ಕಳೆಯುತ್ತಾರೆ ಯಾಕೆಂದರೆ ಪದೇ ಪದೇ ಕಾಡುವ ಅನಾರೋಗ್ಯ ಸಮಸ್ಯೆಗಳಿಂದಾಗಿ ಆದಕಾರಣ ಆರೋಗ್ಯವಂತರಾಗಿರಬೇಕು ಅಂದರೆ ಆಸ್ಪತ್ರೆ ಮುಖವೇ ನೋಡದ ಇರುವ ಮಂದಿ ಯಾವ ಆಹಾರ ಪದ್ಧತಿಯನ್ನು ಪಾಲಿಸುತ್ತಾರೆ ಮತ್ತು ಅವರ ಉತ್ತಮ ಆರೋಗ್ಯದ ಗುಟ್ಟು ಏನಿರಬಹುದು ಅನ್ನೋ 1ಚಿಕ್ಕ ಮಾಹಿತಿಯನ್ನ ಇಂದಿನ ಲೇಖನದಲ್ಲಿ ನಿಮಗೆ ತಿಳಿಸಿಕೊಡುತ್ತೇವೆ.

ಹೌದು ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅಷ್ಟೊಂದು ಸುಲಭವಲ್ಲ ನಾವು ಉತ್ತಮ ಆರೋಗ್ಯ ಕಾಪಾಡಿಕೊಳ್ಳುವುದಕ್ಕಾಗಿ ಸ್ವಲ್ಪ ಕಾಳಜಿಯಿಂದ ಇರಬೇಕಾಗುತ್ತದೆ ಇದರ ಜೊತೆಗೆ ಸಿಕ್ಕ ಸಿಕ್ಕ ಆಹಾರಗಳನ್ನು ಸೇವಿಸುವುದು ಉತ್ತಮವಲ್ಲ ಆದರೆ ನಾವು ಕೆಲವೊಂದು ಮನೆಯಲ್ಲಿಯೇ ದೊರೆಯುವ ಪದಾರ್ಥಗಳನ್ನು ರುಚಿಯಾಗಿಸಿ ಕೊಂಡು ನಮ್ಮ ಆಹಾರ ಪದ್ಧತಿಯಲ್ಲಿ ಅಳವಡಿಸಿಕೊಂಡು ಆಹಾರಗಳನ್ನು ಸೇವನೆ ಮಾಡುತ್ತ ಬರುವುದರಿಂದ ನ ಉತ್ತಮ ಆರೋಗ್ಯವನ್ನು ಪಡೆದುಕೊಳ್ಳಬಹುದು ಅಂತಹ ಆಹಾರ ಯಾವುದು ಅಂತ ಹೇಳಿದರೆ ಮೊಳಕೆ ಕಟ್ಟಿದ ಕಾಳುಗಳು ಹೌದು ಹೆಸರು ಕಾಳು ಕಡಲೆ ಕಾಳು ಹುರುಳಿಕಾಳು ಬಟಾಣಿ ಇಂತಹ ಅನೇಕ ಕಾಳುಗಳನ್ನು ಮೊಳಕೆ ಕಟ್ಟಿಸಿ ತಿನ್ನಬಹುದು.

ಈ ಮೊಳಕೆ ಕಟ್ಟಿಸಿದ ಕಾಳುಗಳನ್ನು ಸಲಾಡ್ ರೂಪದಲ್ಲಿ ಸೇವನೆಮಾಡುತ್ತ ಬರಬಹುದು ಅಥವಾ ಆ ಮೊಳಕೆ ಕಟ್ಟಿದ ಕಾಳುಗಳನ್ನು ಹಸಿಯಾಗಿ ಹಾಗೆ ಸೇವನೆ ಮಾಡಬಹುದು. ಇನ್ನು ಕೆಲವರು ಪಲ್ಯದ ರೂಪದಲ್ಲಿ ಕೂಡ ಸೇವನೆ ಮಾಡ್ತಾರೆ. ಈ ರೀತಿ ಮೊಳಕೆ ಕಟ್ಟಿಸಿದ ಕಾಳುಗಳಲ್ಲಿ ಸಾಕಷ್ಟು ವಿಟಮಿನ್ ಗಳು ಆ್ಯಂಟಿ ಆಕ್ಸಿಡೆಂಟ್ಸ್ ಗಳು ಖನಿಜಾಂಶಗಳು ಕೂಡ ಇತ್ತು ಈ ಮೊಳಕೆ ಕಟ್ಟಿಸಿದ ಕಾಳುಗಳನ್ನು ತಿನ್ನುವುದರಿಂದ ನಮ್ಮ ದೇಹಕ್ಕೆ ಅಗತ್ಯವಿರುವ ಸಾಕಷ್ಟು ಪೋಷಕಾಂಶಗಳು ನಮಗೆ ಉಚಿತವಾಗಿ ದೊರೆಯುತ್ತದೆ.

ಕಾಲುಗಳನ್ನು ಆಗ ಸೇವನೆ ಮಾಡುವುದಕ್ಕಿಂತ ಈ ಕಾಳುಗಳನ್ನು ಮೊಳಕೆ ಕಟ್ಟಿಸಿದ ತಿನ್ನುವುದರಿಂದ ಇನ್ನು ದುಪ್ಪಟ್ಟು ಪ್ರಯೋಜನವನ್ನು ನಾವು ಪಡೆದುಕೊಳ್ಳಬಹುದಾಗಿರುತ್ತದೆ. ಆದಕಾರಣ ನೀವು ಉತ್ತಮವಾದ ಜೀವನಶೈಲಿಯನ್ನು ಪಾಲಿಸಬೇಕು ಮತ್ತು ಅದರಲ್ಲಿ ಉತ್ತಮವಾದ ಆಹಾರ ಪದ್ಧತಿಯನ್ನು ಪಾಲಿಸಬೇಕು ಅಂತ ಅಂದುಕೊಂಡಿದ್ದಲ್ಲಿ ತಪ್ಪದೆ ನಿಮ್ಮ ಆಹಾರ ಪದ್ಧತಿಯಲ್ಲಿ ಮೊಳಕೆ ಕಟ್ಟಿಸಿದ ಕಾಳುಗಳ ಸೇವನೆ ಮಾಡುತ್ತಾ ಬನ್ನಿ ನಿಮಗೆ ಉತ್ತಮ ಆರೋಗ್ಯ ತೊರೆಯುವುದು ಖಚಿತ.

ಸಾಕಷ್ಟು ಮಂದಿ ಸಂಜೆಯ ಸಮಯದಲ್ಲಿ ಪಾನಿಪುರಿ ಮಸಾಲಾಪುರಿಯಂಥ ಚಾಟ್ಸ್ ತಿನ್ನಲು ಇಷ್ಟಪಡುತ್ತಾರೆ ಆದರೆ ಪ್ರತಿದಿನ ಮೊಳಕೆ ಕಟ್ಟಿದ ಕಾಳುಗಳು ತಿನ್ನುವುದರಿಂದ ಮತ್ತು ಮಕ್ಕಳಿಗೂ ಕೂಡ ನೀಡುವುದರಿಂದ ಮಕ್ಕಳಿಗೆ ರುಚಿಯಾಗಿ ಸಲಾಡ್ ರೂಪದಲ್ಲಿ ಈ ಮೊಳಕೆ ಕಟ್ಟಿದ ಕಾಳುಗಳು ನೀಡುತ್ತ ಬರುವುದರಿಂದ ಮಕ್ಕಳಿಗೂ ಕೂಡ ಇದರ ರುಚಿ ಇಷ್ಟ ಆಗುತ್ತದೆ. ಅವರು ಕೂಡ ಇಷ್ಟಪಟ್ಟು ಮೊಳಕೆ ಕಟ್ಟಿದ ಕಾಳುಗಳು ಅವರ ಬೆಳವಣಿಗೆ ಉತ್ತಮವಾಗಿರುತ್ತದೆ ನೆನಪಿನಶಕ್ತಿ ಕೂಡ ಹೆಚ್ಚುತ್ತದೆ. ನೀವು ಈ ಸಣ್ಣ ಕೆಲಸ ಮಾಡಿ ಪ್ರತಿದಿನ 1ಹಿಡಿಯಷ್ಟು ಮೊಳಕೆ ಕಟ್ಟಿದ ಕಾಳುಗಳು ಸೇವನೆ ಮಾಡುತ್ತ ಬನ್ನಿ ಉತ್ತಮ ಆರೋಗ್ಯ ನಿಮ್ಮದಾಗುತ್ತದೆ. ಇವತ್ತಿನ ಮಾಹಿತಿ ಇಷ್ಟು ನಿಮಗೆ ಈ ಚಿಕ್ಕ ಮಾಹಿತಿ ಉಪಯುಕ್ತವಾಗಿದ್ದಲ್ಲಿ ತಪ್ಪದೆ ಮಾಹಿತಿಗೆ ಲೈಕ್ ಮಾಡುವುದನ್ನು ಮರೆಯದಿರಿ ಧನ್ಯವಾದ.