Categories
ಭಕ್ತಿ ಮಾಹಿತಿ ಸಂಗ್ರಹ

ಈ ದೇವಸ್ಥಾನಕ್ಕೆ ಹೋಗಬೇಕೆಂದರೆ ಎಂಟೆದೆ ಗುಂಡಿಗೆ ಇರಬೇಕು ಅಷ್ಟಕ್ಕೂ ಈ ದೇವಸ್ಥಾನದ ದೇವರು ಯಾರ್ ಗೊತ್ತಾ

ಈ ದೇವಾಲಯಕ್ಕೆ ಹೋಗಬೇಕು ಅಂದರು ಕೂಡ ಜನರಿಗೆ ಎಂಟೆದೆ ಇರಬೇಕು, ಹೌದು ಈ ದೇವಾಲಯವು ಎಲ್ಲಿದೆ ಹಾಗೂ ಈ ದೇವಾಲಯದಲ್ಲಿ ಪೂಜಿಸುವ ಆ ದೇವರಾದರು ಯಾವುದು ಮತ್ತು ಜನರು ಯಾಕೆ ಇಲ್ಲಿಗೆ ಬರುವುದಕ್ಕೆ ಹೆದರುತ್ತಾರೆ ಅನ್ನುವುದನ್ನು ನಾವು ನಿಮಗೆ ತಿಳಿಸಿಕೊಡುತ್ತೇವೆ.

ಇದೊಂದು ನಿಜವಾಗಲೂ ಇಂಟ್ರೆಸ್ಟಿಂಗ್ ವಿಚಾರ, ಆದ್ದರಿಂದ ಮಾಹಿತಿಯನ್ನು ನೀವು ಕೂಡ ತಿಳಿದ ನಂತರ ಬೇರೆಯವರಿಗು ಕೂಡ ಮಾಹಿತಿಯನ್ನು ಶೇರ್ ಮಾಡಿ ಮತ್ತು ಸ್ನೇಹಿತರೇ ಈ ದೇವಾಲಯದ ಕುರಿತು ನಿಮ್ಮ ಅನಿಸಿಕೆಯನ್ನು ತಪ್ಪದೇ ಕಾಮೆಂಟ್ ಮಾಡಿ.

ನಮ್ಮ ಹಿಂದೂ ಸಂಪ್ರದಾಯದಲ್ಲಿ ನಾವು ಮುಕ್ಕೋಟಿ ದೇವರುಗಳನ್ನು ಪೂಜಿಸುತ್ತೇವೆ, ಹಾಗೆಯೇ ಈ ಮುಕ್ಕೋಟಿ ದೇವರುಗಳಿಗೂ ಕೂಡ ನಮ್ಮ ಈ ಪುಣ್ಯ ನೆಲದಲ್ಲಿ ದೇವಾಲಯವೂ ಕೂಡ ಇದೆ, ಹಾಗೆ ಆ ದೇವಾಲಯಕ್ಕೆ ಅದರದ್ದೇ ಆದಂತಹ ವೈಶಿಷ್ಟ್ಯತೆ ಕೂಡಾ ಹಾಗೂ ನಮ್ಮ ಈ ಪುಣ್ಯ ಭೂಮಿಯಲ್ಲಿ ಹಲವಾರು ಅಚ್ಚರಿಗಳು ಜರುಗುತ್ತಲೇ ಇರುತ್ತವೆ ಅಂತಹ ಅನೇಕ ಅಚ್ಚರಿಗಳ ಬಗ್ಗೆ ನಾವು ನಿಮಗೆ ಈಗಾಗಲೇ ಸಾಕಷ್ಟು ಮಾಹಿತಿಯಲ್ಲಿ ತಿಳಿಸಿಕೊಟ್ಟಿದ್ದೇವೆ.

ಇನ್ನು ನಾವು ಈ ದಿನದ ಲೇಖನದಲ್ಲಿ ನಿಮಗೆ ತಿಳಿಸಿಕೊಡಲು ಹೊರಟಿರುವಂಥ ದೇವರು ಜವರಾಯ, ಹೌದು ಯಮರಾಜ ಅಂತ ಏನು ಕರೆಯುತ್ತೆವೊ ಆ ದೇವರಿಗೂ ಕೂಡ ನಮ್ಮ ಈ ಪುಣ್ಯ ಭೂಮಿಯಲ್ಲಿ ಒಂದು ದೇವಾಲಯವನ್ನು ಕಟ್ಟಲಾಗಿದೆ, ಹೌದು ಯಮರಾಜ ಅಂದರೆ ಎಲ್ಲರಿಗೂ ಭಯವಾಗುತ್ತದೆ, ಅದರಲ್ಲಿಯೂ ಮಾನವನ ಪಾಪ ಪುಣ್ಯಗಳನ್ನು ಎಣಿಸುವಂತಹ ಈ ಯಮರಾಜನನ್ನು ಯಾರು ತಾನೇ ಪೂಜಿಸುತ್ತಾರೆ ಹಾಗೂ ಯಾರು ತಾನೇ ದೇವಾಲಯವನ್ನು ಕಟ್ಟುತ್ತಾರೆ ಅಲ್ವಾ.

ಇಲ್ಲಿಯವರೆಗೂ ನಾವು ಅಂದುಕೊಂಡೆ ಇರುವುದಿಲ್ಲವೇನೋ ಅಲ್ವಾ ಯಮರಾಜನಿಗೆ ಕೂಡ ದೇವಾಲಯವನ್ನು ಕಟ್ಟಿರುತ್ತಾರೆ ಅಂತ, ಆದರೆ ಯಮರಾಜನಿಗೆ ಕೂಡ ದೇವಾಲಯವನ್ನು ಕಟ್ಟಿದ್ದಾರೆ. ಆ ದೇವಾಲಯ ಇರುವುದು ಹಿಮಾಚಲ ಪ್ರದೇಶದಲ್ಲಿ ಹಿಮಾಚಲ ಪ್ರದೇಶಕ್ಕೆ ಸೇರಿದಂತಹ ಚಂಬ ಎಂಬ ಜಿಲ್ಲೆಗೆ ಸೇರಿದ ಬರಮೊರ್ ಎಂಬ ಊರಿನಲ್ಲಿ ಈ ದೇವಾಲಯವನ್ನು ಕಟ್ಟಲಾಗಿದೆ.

ಈ ದೇವಾಲಯವನ್ನು ನಿರ್ಮಿಸಿರುವುದು ಹೇಗೆ ಎಂದರೆ ಒಂದು ಕೊಠಡಿಯಲ್ಲಿ ಈ ಕೊಠಡಿಯಲ್ಲಿ ಯಮರಾಜನನ್ನು ಪೂಜಿಸಲಾಗುತ್ತದೆ ಹಾಗೂ ಈ ದೇವಾಲಯದಲ್ಲಿ ಕೋಣೆಗಳು ಕೂಡ ಇವೇ ಆ ಕೋಣೆಯನ್ನು ಚಿತ್ರಗುಪ್ತರ ಕೋಣೆ ಅಂತ ಕೂಡ ಕರೆಯಲಾಗುತ್ತದೆ ಹಾಗೂ ಇಲ್ಲಿಗೆ ಹೋಗಲು ಜನರು ತುಂಬಾನೇ ಹೆದರುತ್ತಾರೆ ಹಾಗೂ ಎಂಟೆದೆ ಇರುವಂತಹ ಜನರು ಮಾತ್ರ ಇಲ್ಲಿಗೆ ಹೋಗಬೇಕಾಗುತ್ತದೆ.

ಈ ದೇವಸ್ಥಾನವನ್ನು ಕುರಿತು ಮತ್ತೊಂದು ನಂಬಿಕೆಯೂ ಕೂಡಾ ಇದೆ ಅದೇನೆಂದರೆ ಸತ್ತ ನಂತರ ಆತ್ಮಗಳು ಮೊದಲು ಈ ದೇವಾಲಯಕ್ಕೆ ಹೋಗಿ ಯಮರಾಜನ ದರ್ಶನವನ್ನು ಪಡೆದು ನಂತರ ಆ ಆತ್ಮ ಮಾಡಿರುವಂತಹ ಪಾಪ ಪುಣ್ಯದ ಆಧಾರದ ಮೇಲೆ ಸ್ವರ್ಗ ನರಕ ಎಂದು ನಿಶ್ಚಯಿಸಲಾಗುತ್ತದೆ ಎಂಬ ನಂಬಿಕೆಯನ್ನು ಕೂಡ ಇಲ್ಲಿ ನಂಬಲಾಗುತ್ತದೆ.

ಅದೇನೇ ಆಗಲಿ ಯಮರಾಜ ಅಂದರೆ ಬಂದು ಭಯ ಹುಟ್ಟುತ್ತದೆ ಹಾಗೆಯೇ ಜನರ ಪಾಪ ಪುಣ್ಯವನ್ನು ನಿರ್ಧರಿಸುವಂತಹ ಯಮರಾಜನನ್ನು ಯಾರು ಪೂಜಿಸುತ್ತಾರೆ ಆಕೆಯೇ ಈ ಯಮರಾಜನಿಗೋಸ್ಕರ ಕಟ್ಟಿರುವಂತಹ ದೇವಾಲಯವಾದರೂ ಹೇಗೆ ಇರಬಹುದು ಅಂತ ನೋಡುವ ಹಂಬಲ ಈ ಮಾಹಿತಿಯನ್ನು ತಿಳಿದ ನಂತರ ಹೆಚ್ಚಾಗುತ್ತಿದೆ, ಹಾಗಾದರೆ ನಿಮಗೂ ಕೂಡ ಈ ಮಾಹಿತಿ ಇಷ್ಟವಾದಲ್ಲಿ ತಪ್ಪದೇ ಪ್ರತಿಯೊಬ್ಬರಿಗೂ ಮಾಹಿತಿಯನ್ನು ಶೇರ್ ಮಾಡಿ ಮತ್ತು ಈ ಮಾಹಿತಿಯನ್ನು ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ಕಮೆಂಟ್ ಮಾಡಿ ತಿಳಿಸಿ ಶುಭ ದಿನ ಧನ್ಯವಾದಗಳು.