Categories
ಮಾಹಿತಿ ಸಂಗ್ರಹ

ಈ ದೇಶದಲ್ಲಿ ಹೆಣ್ಣಾಗಿ ಹುಟ್ಟಿ ಗಂಡಾಗಿ ಬದಲಾಗುತ್ತಾರೆ ಯಾಕೆ ಅನ್ನೋದು ಗೊತ್ತಾದ್ರೆ ನಿಜ್ವಾಗ್ಲೂ ಶಾಕ್ ಆಗೋದು ಗ್ಯಾರಂಟಿ ….

ಈ ದೇಶದಲ್ಲಿ ಮಹಿಳೆಯರು ಗಂಡಸರಾಗಿ ಪರಿವರ್ತನೆಯಾಗುತ್ತಾರೆ ಹೌದು ಆದರೆ ಒಂದು ವಿಚಾರವೇನೆಂದರೆ ಈ ದೇಶದಲ್ಲಿ ಪರಿವರ್ತನೆ ಆಗುವಂತಹ ಹೆಣ್ಣು ಮಕ್ಕಳು ದೈಹಿಕವಾಗಿ ಗಂಡಸರಾಗುವುದಿಲ್ಲ,

ಆದರೆ ಪರಿವರ್ತನೆಯಾದಂತಹ ಹೆಣ್ಣು ಮಕ್ಕಳು ಅವರ ಚಟುವಟಿಕೆಯಿಂದ ಹಿಡಿದು ಅವರ ಪ್ರತಿದಿನದ ಕೆಲಸಗಳು ಎಲ್ಲವೂ ಕೂಡ ಗಂಡಸರನ್ನು ಹೊಂದಿರುತ್ತದೆ ಹಾಗೂ ಸಮಾಜದಲ್ಲಿಯೂ ಕೂಡ ಇವರನ್ನು ಗಂಡಸರ ರೀತಿಯಲ್ಲಿಯೇ ಕಾಣಲಾಗುತ್ತದೆ, ಇದು ಇವರ ಸಂಸ್ಕೃತಿಯಂತೆ , ಇವರನ್ನು ಬುರ್ನಿಶಿಯರು ಎಂದು ಕರೆಯಲಾಗುತ್ತದೆ.

ಹಾಗಾದರೆ ಈ ರೀತಿಯ ಸಂಪ್ರದಾಯ ಪಾಲಿಸುವಂತಹ ಆದೇಶವಾದರೂ ಯಾವುದೋ ಮತ್ತು ಆದೇಶದಲ್ಲಿ ಇಂತಹ ಸಂಪ್ರದಾಯವನ್ನು ಪಾಲಿಸುವುದಕ್ಕೆ ಕಾರಣವೇನು ಮತ್ತು ಇನ್ನು ಈ ದೇಶದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನಿಮಗೆ ತಿಳಿಸಿಕೊಡುತ್ತವೆ,

ನಿಮಗೆ ಈ ಮಾಹಿತಿಯನ್ನು ತಿಳಿಯುವ ಆಸಕ್ತಿ ಇದ್ದರೆ ತಪ್ಪದೆ ಕೆಳಗೆ ನೀಡಲಾಗಿರುವ ಮಾಹಿತಿಯನ್ನು ಪೂರ್ತಿಯಾಗಿ ತಿಳಿಯಿರಿ ಇದೊಂದು ಇಂಟ್ರೆಸ್ಟಿಂಗ್ ಪ್ಯಾಕ್ಟ್ ಆಗಿರುತ್ತದೆ ಹಾಗೂ ನಿಮಗೆ ಈ ಮಾಹಿತಿ ಇಷ್ಟ ಕೂಡ ಆಗುತ್ತದೆ ಈ ಮಾಹಿತಿಯನ್ನು ತಿಳಿಯಿರಿ ಹಾಗು ಲೈಕ್ ಮಾಡಿ ಶೇರ್ ಮಾಡಿ.

ಇನ್ನು ಆ ದೇಶ ಯಾವುದು ಅಂದರೆ ನಮ್ಮ ಭಾರತ ದೇಶಕ್ಕೆ ಬಂದು ಅವರ ನಿಸ್ವಾರ್ಥ ಸೇವೆಯನ್ನು ಮಾಡಿ ನೊಬೆಲ್ ಪ್ರಶಸ್ತಿಯನ್ನು ಪಡೆದುಕೊಂಡಂತಹ ಮದರ್ ತೆರೆಸಾ ಅವರ ದೇಶ, ಹೌದು ಯೂರೋಪ್ನ ಖಂಡಕ್ಕೆ ಸೇರಿರುವಂತಹ ರಿಪಬ್ಲಿಕ್ ಆಫ್ ಅಲ್ಬೇನಿಯಾ ದೇಶ. ಈ ದೇಶದಲ್ಲಿ ಈ ರೀತಿಯ ಸಂಪ್ರದಾಯವನ್ನು ಪಾಲಿಸಲಾಗುತ್ತಿದೆ, ಒಂದು ಪದ್ಧತಿಯನ್ನು ಪಾಲಿಸುವುದಕ್ಕೆ ಇಲ್ಲಿಯ ಜನರಿಗೆ ಒಂದು ಕಾರಣವೂ ಕೂಡ ಇದೇ.

ಅದೇನು ಅಂತ ಹೇಳ್ತೀವಿ ಕೇಳಿ ಹೌದು ಇಲ್ಲಿಯ ಕುಟುಂಬದ ಜನರಲ್ಲಿ ಆ ಒಂದು ಕುಟುಂಬಕ್ಕೆ ಗಂಡು ದಿಕ್ಕಿಲ್ಲದೆ ಆ ಮನೆಯಲ್ಲಿರುವಂತಹ ಹೆಣ್ಣುಮಕ್ಕಳೇ ಗಂಡಸಾಗಿ ಆ ಮನೆಯ ಪೂರ್ತಿ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು ಹಾಗೆಯೇ ಮನೆಯವರು ಕೂಡ ಆ ಹೆಣ್ಣು ಮಗಳಿಗೆ ಗಂಡಸಿಗೆ ಹೇಗೆ ಗೌರವವನ್ನು ನೀಡುತ್ತಿರುತ್ತಾರೆ ಆ ರೀತಿಯ ಗೌರವವನ್ನು ನೀಡಬೇಕು, ಹಾಗೆಯೇ ಇಲ್ಲಿಯ ಜನರು ಕೂಡ ಈ ಹೆಣ್ಣುಮಕ್ಕಳು ಗಂಡಸಾಗಿ ಪರಿವರ್ತನೆಗೊಂಡಾಗ ಅವರಿಗೆ ನೀಡಬೇಕಾದಂತಹ ಗೌರವವನ್ನು ನೀಡಲೇಬೇಕು.

ಇಲ್ಲಿಯ ಜನರಾದರೂ ಬದಲಾದಂತಹ ಹೆಣ್ಣುಮಗಳಿಗೆ ಶಿಖಂಡಿ ಎಂದರೆ ಅವರು ತುಂಬಾನೇ ಕೋಪಗೊಳ್ಳುತ್ತಾರೆ, ಹಾಗೆಯೇ ಪರಿವರ್ತನೆಯಾದಂತಹ ಈ ಹೆಣ್ಣು ಮಕ್ಕಳು ಈ ದೇಶದಲ್ಲಿ ಬಾರಿಗೆ ಹೋಗಿ ಕುಡಿಯಬಹುದು ಹಾಗೆ ಇದಕ್ಕಾಗಿ ಇಲ್ಲಿ ಯಾವ ರಿಸ್ಟ್ರಿಕ್ಷನ್ಸ್ ಗಳು ಕೂಡ ಇಲ್ಲ.

ಈ ದೇಶಕ್ಕೆ ಸೇರಿದಂತಹ ಒಬ್ಬ ಹೆಣ್ಣು ಮಗಳು ಈಕೆಗೆ ಇದೀಗ ತೊಂಬತ್ತರ ಪ್ರಾಯ ಈಕೆಯ ಹೆಸರು ಕುಮೈಲ್ಸ್ಟೆನಾ ಎಂದು ಈಕೆ ಇಪ್ಪತ್ತು ವರ್ಷವಿದ್ದಾಗ ಈಕೆಯ ತಂದೆ ತೀರಿಹೋದರು ಈಕೆಯ ಹಿಂದೆ ಇನ್ನೂ ಒಂಬತ್ತು ಜನ ಹೆಣ್ಣುಮಕ್ಕಳಿದ್ದ ಕಾರಣದಿಂದಾಗಿ ಆಕೆ ಗಂಡಾಗಿ ಪರಿವರ್ತನೆಗೊಂಡು ಆ ಮನೆಯ ಪೂರ್ತಿ ಜವಾಬ್ದಾರಿಯನ್ನು ಪಡೆದುಕೊಂಡಳು ಹಾಗೆ ತನ್ನ ತಂಗಿಯರ ಮದುವೆಯ ಜವಾಬ್ದಾರಿಯನ್ನು ಕೂಡ ಪಡೆದುಕೊಂಡು ಈಕೆ ಗಂಡಸಾಗಿ ಆ ಮನೆಯ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ.

ಮತ್ತೊಂದು ವಿಚಾರವೇನು ಅಂದರೆ ಈ ರೀತಿಯ ಹೆಣ್ಣುಮಕ್ಕಳು ಗಂಡಸಾಗಿ ಪರಿವರ್ತನೆಯಾದ ನಂತರ ಅವರು ತಮ್ಮ ಸಕಲ ಆಸೆಗಳನ್ನು ತ್ಯಾಗ ಮಾಡಿ ತಮ್ಮ ಜೀವನ ಪೂರ್ತಿ ಬ್ರಹ್ಮಚಾರಿ ಆಕೆಯೇ ತಮ್ಮ ಜೀವನವನ್ನು ನಡೆಸಬೇಕಾಗುತ್ತದೆ. ಈ ರೀತಿಯಾಗಿ ಈ ಬರ್ನೀಶ್ ಜನಾಂಗದವರು ಇಂತಹ ಒಂದು ಸಂಪ್ರದಾಯವನ್ನು ನಡೆಸಿಕೊಂಡು ಬರುತ್ತಿದ್ದಾರೆ. ಈ ಒಂದು ಪದ್ಧತಿಯನ್ನು ಕುರಿತು ನಿಮ್ಮ ಅನಿಸಿಕೆಯನ್ನು ನಮಗೆ ಕಾಮೆಂಟ್ ಮಾಡಿ ಸ್ನೇಹಿತರೆ ಧನ್ಯವಾದಗಳು.

Leave a Reply