Categories
ಭಕ್ತಿ ಮಾಹಿತಿ ಸಂಗ್ರಹ

ಈ ನಗರದಲ್ಲಿ ಹೈಕೋರ್ಟ್ ಇದ್ದರೂ ಕೂಡ ಜನರು ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಹನುಮಂತನ ದೇವಸ್ಥಾನಕ್ಕೆ ಹೋಗುತ್ತಾರೆ … ಇತ್ತೊಂದು ಪ್ರಭಾವಶಾಲಿಯಾಗಿ ಭಯ ಹುಟ್ಟಿಸುವಂತಹ ದೇವಸ್ಥಾನ ಎಲ್ಲಿದೆ ಹಾಗೂ ಇದರ ಹಿನ್ನೆಲೆಯನ್ನು ನಾವು ತಿಳಿದುಕೊಳ್ಳಲೇಬೇಕು ….

ದಿನನಿತ್ಯ ಸಾವಿರಾರು ಜನರು ಹಲವಾರು ತಪ್ಪುಗಳನ್ನು ಮಾಡಿಕೊಡುವಂತಹ ತಿರುಗುತ್ತಿರುತ್ತಾರೆ ಆದರೆ ಕೆಲವೊಂದು ಬಾರಿ ನಿಜವಾಗಲೂ ತಪ್ಪು ಮಾಡಿದಂತಹ ಮನುಷ್ಯ ಒಳ್ಳೆಯ ಲಾಯರ್ ಗಳನ್ನು ಹಿಡಿದುಕೊಂಡು ಅವರಿಗೆ ಸ್ವಲ್ಪ ಲಂಚವನ್ನು ಕೊಟ್ಟು ತನ್ನ ಕೇಸನ್ನ ಗೆದ್ದು ಹೊರಗಡೆ ಬರುತ್ತಾನೆ.

ಆದರೆ ಮೋಸಕ್ಕೆ ಒಳಗಾದಂತಹ ಜನ ತಮ್ಮ ಹತ್ತಿರ ದುಡ್ಡು ಇಲ್ಲ ಹಾಗೂ ಲಾಯರನ್ನೂ ಇಟ್ಟುಕೊಳ್ಳುವಂತಹ ಶಕ್ತಿ ಅವರಲ್ಲಿ ಇಲ್ಲ ಅಂದರೆ ಅವರು ಕೇಸಿನಲ್ಲಿ ಗೆಲ್ಲುವುದಿಲ್ಲ. ಇರಿ ರೀತಿಯಾದಂತಹ ಸಂದರ್ಭ ನಾವು ಪ್ರತಿಯೊಂದು ಕೋರ್ಟಿನಲ್ಲಿ ಅಥವಾ ಪ್ರತಿಯೊಂದು ಕೇಸಿನಲ್ಲಿ ನಾವು ನೋಡಬಹುದಾಗಿದೆ.

ಆದರೆ ಇಲ್ಲೊಂದು ನಗರ ಇದೆ ಈ ನಗರದಲ್ಲಿ ಹೈಕೋರ್ಟು ಇದ್ದರೂ ಕೂಡ ಜನರು ಅಲ್ಲಿಗೆ ಹೋಗುವುದಿಲ್ಲ ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಹೋಗಿ ದೇವಸ್ಥಾನಕ್ಕೆ ಬರುತ್ತಾರೆ.

ಆದರೆ ಯಾವುದೇ ಮನುಷ್ಯ ಆಗಲಿ ದೇವರನ್ನು ಕಂಡರೆ ಹೆದರುತ್ತಾನೆ, ಆದುದರಿಂದ ಈ ದೇವಸ್ಥಾನಕ್ಕೆ ಬಂದಂತಹ ಜನ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳುತ್ತಾರೆ ಇನ್ನೊಂದು ವಿಚಾರ ಏನಪ್ಪಾ ಅಂದರೆ ಇಲ್ಲಿ ತಪ್ಪು ಮಾಡಿದಂತಹ ಮನುಷ್ಯ ಯಾವುದೇ ಕಾರಣಕ್ಕೂ ನಾನು ತಪ್ಪು ಮಾಡಿಲ್ಲ ಅಂತ ಹೇಳುವುದಿಲ್ಲ .

ಯಾಕೆಂದರೆ ಇಲ್ಲಿರುವಂತಹ ದೇವಸ್ಥಾನದಲ್ಲಿ ಇರುವಂತಹ ದೇವರ ಪ್ರತಿಯೊಬ್ಬ ಮನುಷ್ಯನ ಮೇಲೆ ಇರುತ್ತದೆ. ಹಾಗಾದ್ರೆ ಬನ್ನಿ ಈ ದೇವಸ್ಥಾನ ಇರೋದಾದ್ರೂ ಎಲ್ಲಿ ಹಾಗೂ ಈ ದೇವಸ್ಥಾನದ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ನಾವು ತಿಳಿದುಕೊಳ್ಳೋಣ.

ಈ ದೇವಸ್ಥಾನ ಇರುವುದು ಬಿಲಾಸಪುರ ಎನ್ನುವಂತಹ ಪ್ರದೇಶ ಇಲ್ಲಿ ಭಜರಂಗಿ ಪಂಚಾಯತ್ ಅನುಮಂತ ಹೆಸರಿನಲ್ಲಿ ಯಾವುದೇ ಸಮಸ್ಯೆ ಇದ್ದರೂ ಕೂಡ ಇಲ್ಲಿ ಜನರು ಬಂದು ತಮ್ಮ ಪರಿಹಾರವನ್ನು ಪಡೆದುಕೊಳ್ಳುತ್ತಾರೆ.

ಈ ಬಿಲಾಸಪುರ ಭಜರಂಗಿ ಪಂಚಾಯತಿನಲ್ಲಿ ಕಳೆದ ಎಂಬತ್ತು ವರ್ಷದಿಂದಲೂ ಕೂಡ ಏನೇ ಸಮಸ್ಯೆ ಬಂದರೂ ಅಥವಾ ಏನೇ ವಿವಾದ ಬಿದ್ದರೂ ಅದನ್ನು ಸಂಪೂರ್ಣವಾಗಿ ನಿರ್ವಹಣೆಯನ್ನು ಮಾಡುತ್ತಿದ್ದಾರೆ.

ಏನೇ ಕಠಿಣ ಸಮಸ್ಯೆ ಇದ್ದರೂ ಏನೇ ಜೀವನದಲ್ಲಿ ಸಮಸ್ಯೆ ಬಂದರೂ ಕೂಡ ಜನರು ಈ ಹನುಮಂತನ ದೇವಸ್ಥಾನಕ್ಕೆ ಬರುತ್ತಾರೆ ಹಾಗೂ ಹನುಮಂತ ಇವರಿಗೆ ಸಮಸ್ಯೆಯನ್ನು ಪರಿಹಾರ ಮಾಡುತ್ತಾನೆ ಎನ್ನುವುದು ಇಲ್ಲಿನ ಜನರಲ್ಲಿ ಇರುವಂತಹ ಗಾಢವಾದ ನಂಬಿಕೆ.

ಇಲ್ಲಿನ ಹಿರಿಯರು ಹಾಗೂ ಇಲ್ಲಿನ ಹಳೆಯ ಜನರು ಹೇಳುವ ಹಾಗೆ 80ರಿಂದ 100 ವರ್ಷಗಳ ಹಿಂದೆ ಒಬ್ಬ ಭಕ್ತ ಇಲ್ಲಿಗೆ ಬಂದು ಅಶ್ವತ ಮರದ ಕೆಳಗೆ ಆಂಜನೇಯನ ಮೂರ್ತಿಯನ್ನಿಟ್ಟು ಪೂಜೆ ಮಾಡುತ್ತಾ ಇರುತ್ತಾನೆ. ಅದಾದ ನಂತರ ಕೆಲವು ಪಂಚಾಯ್ತಿ ಸದಸ್ಯರ ಹಾಗೂ ಜನರ ಒಂದು ನೆರವಿನಿಂದಾಗಿ ದೊಡ್ಡದಾದ ಆಂಜನೇಯನ ಗುಡಿಯ ಕಟ್ಟಿ ಸಲಾಗುತ್ತದೆ.

ಸನ್ನಿಧಿಯಲ್ಲಿ ಯಾರಿಗಾದರೂ ಅನ್ಯಾಯವಾದಲ್ಲಿ ಹಾಗೂ ಯಾರಿಗಾದರೂ ಸಮಸ್ಯೆ ಬಂದರೆ ಅದನ್ನು ಆಂಜನೇಯನ ಎದುರುಗಡೆ ಪರಿಹಾರ ಮಾಡುವಂತಹ ಒಂದು ವಾಡಿಕೆ ಶುರುವಾಗುತ್ತದೆ. ಹಾಗೆ ಇಲ್ಲಿ ಹೊರಗೆ ಬಂದಂತಹ ತೀರ್ಪನ್ನ ಪ್ರತಿಯೊಬ್ಬರು ಕೂಡ ಒಪ್ಪಿಕೊಳ್ಳುತ್ತಾರೆ . ಹೀಗೆ ಯಾರಿಗಾದರೂ ಅನ್ಯಾಯವಾದಲ್ಲಿ ಹಾಗೂ ಯಾರಿಗಾದರೂ ಪ್ರಾಬ್ಲಮ್ ಬಂದಲ್ಲಿ ಈ ದೇವರ ಸಾಕ್ಷಿ ಯಾಗಿ ತಿರ್ಮಾನವನ್ನು ಮಾಡಿಕೊಳ್ಳುತ್ತಾರೆ.

ಹೀಗೆ ದೇವರ ಮೇಲೆ ಸಾಕ್ಷಿಯನ್ನು ಮಾಡುತ್ತಿರುವಂತಹ ವ್ಯಕ್ತಿ ಏನಾದರೂ ತಪ್ಪು ಮಾಡಿದಲ್ಲಿ ದೇವರು ಅವನಿಗೆ ಶಿಕ್ಷೆ ನೀಡುತ್ತಾನೆ ಎನ್ನುವಂತಹ ಒಂದು ಗಾಢವಾದ ನಂಬಿಕೆ ಇಲ್ಲಿನ ಜನರದ್ದು ಆಗಿದೆ. ಇದು ಒಂದು ಸಂಗ್ರಹ ಮಾಹಿತಿ. ಈ ಲೇಖನ ಏನಾದರೂ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ.

ಹಾಗೂ ಯಾವುದೇ ಕಾರಣಕ್ಕೂ ನಮ್ಮ ಲೇಖನವನ್ನು ಶೇರ್ ಮಾಡುವುದಾಗಲಿ ಅಥವಾ ನಮ್ಮ ಲೇಖನವನ್ನು ಲೈಕ್ ಮಾಡಿ ಮರೆಯಬೇಡಿ. ನಮ್ಮ ಪೇಜ್ ಅನ್ನು ಕೂಡ ಯಾವುದೇ ಕಾರಣಕ್ಕೂ ಲೈಕ್ ಮಾಡುವುದನ್ನು ಹಾಗೂ ನಿಮ್ಮ ಫ್ರೆಂಡ್ಸ್ ಗಳಿಗೆ ತಿಳಿಸುವುದನ್ನು ಮರೆಯಬೇಡಿ.