Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ಈ ಪುಡಿಯನ್ನು ತುಪ್ಪದ ಜೊತೆ ಕಲಿಸಿಕೊಂಡು ತಿನ್ನುತ್ತಿದ್ದರೆ ಆರೋಗ್ಯ ಸುಭದ್ರವಾಗಿರುತ್ತದೆ…

ಆರೋಗ್ಯವಾಗಿರಬೇಕು ಅಂದರೆ ಪ್ರತಿದಿನ ತುಪ್ಪದೊಂದಿಗೆ ಇದನ್ನು ಬೆರೆಸಿ ತಿಂದರೆ ಸಾಕು ನಿಜಕ್ಕೂ ನೀವು ಆರೋಗ್ಯದ ಜೀವನವನ್ನು ನಡೆಸಿಕೊಂಡು ಹೋಗಬಹುದಾಗಿದೆ .

ಮತ್ತು ಒಂದು ಪುಡಿ ಅನ್ನ ಮಕ್ಕಳಿಗೂ ಕೂಡ ಕೊಡಬಹುದು ಇದನ್ನು ಅನ್ನದ ಜೊತೆ ಬೆರೆಸಿ ಮಕ್ಕಳಿಗೆ ತಿನ್ನಿಸುವುದನ್ನು ರೂಢಿ ಮಾಡಿದರೆ ಮಕ್ಕಳಿಗೆ ಬೇಕಾಗಿರುವಂತಹ ಪೌಷ್ಟಿಕಾಂಶವೂ ಕೂಡಾ ಇದನ್ನು ತಿನ್ನುವುದರಿಂದ ದೊರೆಯುತ್ತದೆ .

ಎಲ್ಲರೂ ಕೂಡ ಆರೋಗ್ಯದಿಂದ ಇರಬೇಕು ಎಂದು ಬಯಸುತ್ತಾರೆ ಮತ್ತು ಇತ್ತೀಚಿನ ದಿನಗಳಲ್ಲಿ ಪ್ರತಿಯೊಂದು ಆಹಾರವೂ ಕೂಡ ಕಲಬೆರಕೆಯಾಗಿರುವ ಕಾರಣದಿಂದಾಗಿ ನಾವು ಎಷ್ಟೇ ಆರೋಗ್ಯಕರ ಪದಾರ್ಥಗಳನ್ನು ತಿಂದರೂ ಕೂಡ ಪೌಷ್ಟಿಕಾಂಶ ನಮ್ಮಲ್ಲಿ ಅಪೂರ್ಣತೆಯಾಗಿರುತ್ತದೆ .

ಆ ಕಾರಣದಿಂದಾಗಿ ಈ ರೀತಿಯ ಪುಡಿಯನ್ನು ಮಾಡಿ ಪ್ರತಿದಿನ ನಿಯಮಿತವಾಗಿ ಸೇವನೆ ಮಾಡಿದರೆ ನಿಜಕ್ಕೂ ಆರೋಗ್ಯಕರ ಜೀವನವನ್ನು ನಿಮ್ಮದಾಗಿಸಿಕೊಳ್ಳಬಹುದು .

ಬಾಯಿಗೆ ರುಚಿ ಸಿಗುವ ಆಹಾರ ಎಲ್ಲರಿಗೂ ಇಷ್ಟ , ಆರೋಗ್ಯವನ್ನು ಹಾಳು ಮಾಡುತ್ತದೆ ಎಂದು ಗೊತ್ತಿದ್ದರೂ ಕೂಡ ಬಾಯಿ ರುಚಿಗೋಸ್ಕರ ಇಂತಹ ಆಹಾರ ಪದ್ಧತಿಯ ಕ್ರಮವನ್ನು ಇತ್ತೀಚಿನ ದಿನಗಳಲ್ಲಿ ನಮ್ಮ ಜನರು ಪಾಲಿಸುತ್ತಿದ್ದಾರೆ .

ರುಚಿಕರವಾಗಿರಬೇಕು ಮತ್ತು ಆರೋಗ್ಯವೂ ಕೂಡ ಚೆನ್ಬಗಿರಬೇಕು ಎನ್ನುವವರು ಈ ರೀತಿಯ ಪುಡಿಯನ್ನು ಮಾಡಿ ಅನ್ನದೊಂದಿಗೆ ಬೆರೆಸಿ ತಿನ್ನುವುದರಿಂದ ಒಳ್ಳೆಯ ರುಚಿ ದೊರೆಯುವುದರ ಜೊತೆಗೆ ಆರೋಗ್ಯ ಕೂಡ ವೃದ್ಧಿಸುತ್ತದೆ .

ಇದೀಗ ಈ ಪುಡಿಯನ್ನು ಮಾಡಲು ಬೇಕಾಗಿರುವ ಸಾಮಗ್ರಿಗಳು ಯಾವುವು ಅನ್ನೋದನ್ನ ತಿಳಿಯೋಣ ಇದಕ್ಕೆ ಬೇಕಾಗಿರುವುದು ಬಿಳಿ ಎಳ್ಳು ಅಥವಾ ಕಪ್ಪಲ್ಲ ಒಣಮೆಣಸಿನಕಾಯಿ , ಕಲ್ಲುಪ್ಪು ಮತ್ತು ಬೆಳ್ಳುಳ್ಳಿ , ಕರಿಬೇವಿನ ಸೊಪ್ಪು . ಈ ಪುಡಿಯನ್ನು ಮಾಡುವ ಮೊದಲು ತೆಗೆದುಕೊಂಡಿರುವ ಸಾಮಗ್ರಿಗಳನ್ನು ಮೊದಲು ಕಬ್ಬಿಣದ ಬಾಣಲೆಯಲ್ಲಿ ಹುರಿದುಕೊಳ್ಳಬೇಕು ಅಂದರೆ ಎಲ್ಲ ಸಾಮಗ್ರಿಗಳನ್ನು ಒಟ್ಟಿಗೆ ಹರಿದುಕೊಳ್ಳುವ ಬದಲು ಎಲ್ಲವನ್ನು ಬೇರೆ ಬೇರೆಯಾಗಿ ಹುರಿದಿಟ್ಟುಕೊಳ್ಳಬೇಕು .

ಹೀಗೆ ಯಾವುದೇ ಪದಾರ್ಥಗಳನ್ನಾಗಿ ಹುರಿಯುವಾಗ ಬೇರೆ ಬೇರೆಯಾಗಿ ಪದಾರ್ಥಗಳನ್ನು ಹರಿಯುವುದರಿಂದ ಚೆನ್ನಾಗಿ ಫ್ರೈ ಮಾಡಬಹುದು ಮತ್ತು ಒಣ ಮೆಣಸಿನಕಾಯಿಯನ್ನು ಹುರಿಯುವಾಗ ದಾಟ ಆಗುವುದು ಅನ್ನುವುದಾದರೆ ಅದಕ್ಕೆ ಸ್ವಲ್ಪ ಕಲ್ಲುಪ್ಪನ್ನು ಬೆರೆಸಿ ಹುರಿಯುವುದರಿಂದ ಘಾಟ ಆಗುವುದಿಲ್ಲ .

ನಂತರ ಎಳ್ಳು ಮೆಣಸಿನಕಾಯಿ ಕರಿಬೇವಿನ ಸೊಪ್ಪನ್ನು ಹುರಿದುಕೊಂಡ ಮೇಲೆ ಬೆಳ್ಳುಳ್ಳಿಯನ್ನು ತೆಗೆದುಕೊಂಡು ಅದನ್ನು ಜಜ್ಜಿ ನಂತರ ಈ ಎಲ್ಲಾ ಸಾಮಾಗ್ರಿಗಳನ್ನು ಒಟ್ಟಿಗೆ ರುಬ್ಬಿಕೊಳ್ಳಬೇಕು ಇದೀಗ ಈ ಪುಡಿ ರೆಡಿಯಾಗಿದೆ .
ಇದನ್ನು ಚಪಾತಿಯೊಂದಿಗೆ ದರೂ ಅಥವಾ ಅನ್ನದೊಂದಿಗೆ ಬೆರೆಸಿ ತಿನ್ನುವುದರಿಂದ ಒಳ್ಳೆಯ ರುಚಿ ನೀಡುವ ಜೊತೆಗೆ ಆರೋಗ್ಯ ಕೂಡ ಚೆನ್ನಾಗಿರುತ್ತದೆ .

ಅನ್ನದೊಂದಿಗೆ ಈ ಎಳ್ಳಿನ ಪುಡಿಯನ್ನು ಬೆರೆಸಿ ತಿನ್ನುವಾಗ ಇದಕ್ಕೆ ಸ್ವಲ್ಪ ತುಪ್ಪವನ್ನು ಬೆರೆಸಿ ಬಿಸಿ ಅನ್ನವನ್ನು ತಿನ್ನುವುದರಿಂದ ಇನ್ನೂ ಒಳ್ಳೆಯದು ಹಾಗಾದರೆ ಈ ಪುಡಿಯನ್ನು ತಿನ್ನುವುದರಿಂದ ಏನೆಲ್ಲ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು ಅಂತ ಈಗ ತಿಳಿಯೋಣ .
ಮೊದಲಿಗೆ ಈ ಎಳ್ಳಿನಿಂದ ಮಾಡಿದಂತಹ ಪುಡಿಯನ್ನು ತಿನ್ನುವುದರಿಂದ ಸಣ್ಣಗಾಗಲು ಬಯಸುವವರು ಸುಲಭವಾಗಿ ತೂಕವನ್ನು ಉಳಿಸಬಹುದು ಮತ್ತು ಕೊಲೆಸ್ಟ್ರಾಲ್ ಹೆಚ್ಚಾಗಿರುವ ಸಮಸ್ಯೆಯಿಂದ ಬಳಲುತ್ತಿರುವವರು ಇದನ್ನು ಬಳಸುವುದರಿಂದ ನಿಜಕ್ಕೂ ಉತ್ತಮ ಫಲಿತಾಂಶವನ್ನು ಪಡೆದುಕೊಳ್ಳಬಹುದಾಗಿದೆ .

ರಕ್ತದೊತ್ತಡ ಸಮಸ್ಯೆ ಮತ್ತು ಸಕ್ಕರೆ ಕಾಯಿಲೆ ಸಮಸ್ಯೆಯಿಂದ ಬಳಲುತ್ತಿರುವವರು ಕೂಡ ಯಾವುದೇ ಭಯವಿಲ್ಲದೆ ಇದನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಒಳ್ಳೆಯ ಆರೋಗ್ಯವನ್ನು ಪಡೆದುಕೊಳ್ಳಬಹುದು . ಮೇಲೆ ತಿಳಿಸಿದ ಮಾಹಿತಿ ನಿಮಗೆಲ್ಲರಿಗೂ ಉಪಯುಕ್ತವಾಗಿದೆ ಎಂದು ಭಾವಿಸುತ್ತಾ ನಿಮ್ಮ ಅನಿಸಿಕೆಯನ್ನು ನಮಗೆ ಕಾಮೆಂಟ್ ಮಾಡಿ ತಿಳಿಸಿ ಇನ್ನೂ ಇಂತಹ ಅನೇಕ ಆರೋಗ್ಯಕರ ಮಾಹಿತಿಗೆ ನಮ್ಮ ಪೇಜ್ ಲೈಕ್ ಮಾಡಲು ಮರೆಯದಿರಿ .