Categories
ಭಕ್ತಿ ಮಾಹಿತಿ ಸಂಗ್ರಹ

ಈ ವಿಚಿತ್ರವಾದ ದೇವಸ್ಥಾನಕ್ಕೆ ಯಾರೇ ಹೋದರು ಕಳ್ಳತನ ಮಾಡ್ಬೇಕಂತೆ..! ಹಾಗಾದರೆ ಅದು ಎಲ್ಲಿ ಇರೊಗು ಗೊತ್ತ …

ಸ್ನೇಹಿತರೇ ನಮ್ಮ ಭಾರತ ದೇಶವು ಹಿಂದೂ ಸಂಪ್ರದಾಯಗಳನ್ನು ಹೆಚ್ಚಾಗಿ ಅನುಸರಿಸುವ ಜನರನ್ನು ಹೊಂದಿರುವ ದೇಶವಾಗಿದೆ ಇಲ್ಲಿ ಅದಕ್ಕೆ ಸಂಬಂಧಪಟ್ಟ ಹಾಗೆ ಅಂದರೆ ಹಿಂದೂ ಸಂಪ್ರದಾಯಕ್ಕೆ ಸಂಬಂಧಪಟ್ಟ ಹಾಗೆ ಸಾವಿರಾರು ದೇವಾಲಯಗಳಿರುವುದನ್ನು ನಾವು ಕಾಣಬಹುದಾಗಿದೆ.

ಆ ಪ್ರತಿಯೊಂದು ದೇವಾಲಯಗಳು ಕೂಡ ಒಂದಲ್ಲ ಒಂದು ರೀತಿಯ ದಂತಹ ವಿಶೇಷ ಗುಣಗಳನ್ನು ಹೊಂದಿದೆ ಆದರೆ ಆ ದೇವಾಲಯಗಳಲ್ಲಿ ಎಷ್ಟೊಂದು ದೇವಾಲಯಗಳ ಗುಣಗಳು ನಮ್ಮ ಅರಿವಿಗೆ ಬರದೇ ಇರುವುದನ್ನು ನಾವು ಗಮನಿಸಬಹುದಾಗಿದೆ.

ಆ ದೇವಾಲಯಗಳೆಲ್ಲಾ ಕೂಡ ತನ್ನದೇ ಆದಂತಹ ಕೆಲವೊಂದು ವಿಚಿತ್ರ ಆಚರಣೆಗಳನ್ನು ಹೊಂದಿರುತ್ತವೆ ಮತ್ತು ವಿಶೇಷವಾದ ಹರಕೆಗಳನ್ನು ಕೂಡ ಹೊಂದಿರುತ್ತವೆ ಹೆಚ್ಚಾಗಿ ನಾವು ದೇವಾಲಯಕ್ಕೆ ಏನನ್ನಾದರೂ ದೇವರ ಬಳಿ ಬೇಡಿಕೊಂಡು ಬರಲು ಹೋದರೆ ಮೊದಲು ಹೇಳುವುದು ದೇವರೇ ನನಗೆ ಈ ಕೆಲಸವನ್ನು ಮಾಡಿಕೊಟ್ಟರೆ ಈ ರೀತಿಯ ದಂತಹ ಹರಕೆಯನ್ನು ತೀರಿಸುತ್ತೇನೆ .

ಅಥವಾ ನಿನಗೆ ಈ ರೀತಿಯ ಕಾಣಿಕೆಯನ್ನು ತಂದುಕೊಡುತ್ತೇನೆ ಎಂದು ಹೇಳುತ್ತಾರೆ ಅದರಲ್ಲೂ ವಿಶೇಷವಾಗಿ ನಿನಗೆ ನೂರಾಒಂದು ತೆಂಗಿನಕಾಯಿಯನ್ನು ಹೊಡೆಸುತ್ತೇನೆ ಅಥವಾ ತಲೆ ಮುಡಿ ಕೊಡುತ್ತೇನೆ ಅಥವಾ ಯಾವುದಾದರೂ ಬಟ್ಟೆ ಕೊಡುತ್ತೇನೆ ಅಥವಾ ಯಾವುದಾದರೂ ದವಸ ಧಾನ್ಯಗಳನ್ನು ದಾನ ಕೊಡುತ್ತೇನೆ.

ಮತ್ತು ಕುಂಕುಮ ಅಭಿಷೇಕ ಹಾಲಿನ ಅಭಿಷೇಕ ಪಂಚಾಮೃತ ಅಭಿಷೇಕ ಈ ರೀತಿ ಎಷ್ಟೊಂದು ಆಸೆ ಆಕಾಂಕ್ಷೆಗಳನ್ನು ನಾವು ದೇವರ ಮುಂದೆ ಇಡುತ್ತೇವೆ ಆ ರೀತಿ ದೇವಾಲಯಗಳಿಗೆ ಹೋದಾಗ ನಾವು ದೇವರ ಬಳಿ ಭಕ್ತಿಯಿಂದ ಬೇಡಿ ಕೊಳ್ಳುವುದನ್ನು ಬಿಟ್ಟು ದೇವಸ್ಥಾನದಿಂದ ಬೇರೇನನ್ನೂ ತರುವುದಿಲ್ಲ ಹೆಚ್ಚೆಂದರೆ ಕುಂಕುಮ ಹೂವನ್ನು ತರುತ್ತೇವೆ.

ಆದರೆ ನಾನು ಈಗ ಹೇಳಹೊರಟಿರುವ ದೇವಾಲಯದ ವಿಶೇಷವೇನೆಂದರೆ ಈ ದೇವಾಲಯಕ್ಕೆ ಹೋದರೆ ಈ ಒಂದು ವಸ್ತುವನ್ನು ಕಳ್ಳತನ ಮಾಡಿಕೊಂಡು ಬರಲೇಬೇಕು ಕಳ್ಳತನ ಮಾಡಿಕೊಂಡು ಬಂದರೆ ನಿಮ್ಮ ಜೀವನದಲ್ಲಿ ಒಂದು ರೀತಿ ಯಶಸ್ಸು ಕಂಡ ಹಾಗೆ ಅದರಲ್ಲೂ ಕೂಡ ಮಕ್ಕಳಾಗದೆ ಇರುವವರು ಈ ರೀತಿ ಅಲ್ಲಿ ಇರುವ ಒಂದು ವಸ್ತುವನ್ನು ಕಳ್ಳತನ ಮಾಡಿಕೊಂಡು ಬಂದರೆ ಮಕ್ಕಳಾಗುವ ಎಲ್ಲ ಸಾಧ್ಯತೆಗಳು ಇದೆ .

ಈ ದೇವಾಲಯ ಇರುವುದಾದರೂ ಎಲ್ಲಿ ಆ ದೇವಾಲಯದ ವಿಶೇಷತೆ ಏನು ಯಾಕೆ ವಸ್ತುವನ್ನು ಕಳ್ಳತನ ಮಾಡಿಕೊಂಡು ಬರಬೇಕು ಎಂಬ ಸಂಪೂರ್ಣ ಮಾಹಿತಿಯನ್ನು ನೀಡುತ್ತೇನೆ .
ಸ್ನೇಹಿತರೇ ಈ ದೇವಾಲಯ ಇರುವುದು ಉತ್ತರಾಖಂಡದ ರೂರ್ಕಿ ಜಿಲ್ಲೆಯ ಚೂಡಿಯಾದಲ್ಲಿರುವ ತಾಯಿ ಚೂಡಾಮಣಿ ಅವರ ದೇವಾಲಯ ಇದಾಗಿದೆ.

ಈ ಚೂಡಾಮಣಿ ದೇವಾಲಯದಲ್ಲಿ ಅಮ್ಮನ ವಿಗ್ರಹದ ಪಾದದ ಬಳಿ ಇರುವ ಬಿದಿರು ಗೊಂಬೆಯನ್ನು ಮಕ್ಕಳಾಗದೆ ಇರುವವರು ಕದ್ದುಕೊಂಡು ಬರಬೇಕು ಅದಾದ ನಂತರ ಮಕ್ಕಳಾದ ಮೇಲೆ ಅದರ ಜೊತೆಯಲ್ಲಿ ಮತ್ತೊಂದು ಬಿದಿರು ಗೊಂಬೆಯನ್ನು ಮಾಡಿಸಿಕೊಂಡು ತಂದು ಮತ್ತೆ ಅದೇ ಪಾದದ ಬಳಿ ಇಡಬೇಕು ಅದನ್ನ ಬಿಟ್ಟು ಯಾವುದೇ ಹಣ ಒಡವೆಯನ್ನು ಕದಿಯಬಾರದು.

ಈ ವಿಶೇಷವಾದ ಆಚರಣೆ ಇಲ್ಲಿ ಸಾವಿರದ ಎಂಟು ನೂರು ವರ್ಷಗಳಿಂದಲೂ ಕೂಡ ನಡೆದುಕೊಂಡು ಬಂದಿದೆ ಅದಕ್ಕೆ ಮೂಲ ಏನೆಂದರೆ ಇಲ್ಲಿ ಲಂದ್ವರ್ ಎಂಬ ಸಾಮ್ರಾಜ್ಯ ವಿರುತ್ತದೆ ಅಲ್ಲಿಯ ರಾಜ ಒಂದು ಬಾರಿ ಬೇಟೆಗೆಂದು ಬಂದಾಗ ಅವನಿಗೆ ದೇವರು ಪ್ರತ್ಯಕ್ಷವಾಗುತ್ತದೆ ಅವನಿಗೆ ಮಕ್ಕಳಿರುವುದಿಲ್ಲ ಅದಕ್ಕಾಗಿ ಅವನಿಗೆ ಒಂದು ಬಿದಿರು ಗೊಂಬೆಯನ್ನು ದೇವರು ಕೊಡುತ್ತದೆ .

ಅದಾದ ನಂತರ ಅವನಿಗೆ ಮಕ್ಕಳಾದ ಮೇಲೆ ಅವನು ಅಲ್ಲಿ ತಾಯಿಯ ದೇವಸ್ಥಾನವನ್ನು ಕಟ್ಟಿ ಈ ಆಚರಣೆಯನ್ನು ಮುಂದುವರಿಸಿಕೊಂಡು ಬರುತ್ತಾರೆ ಮತ್ತು ಇಂದೂ ಕೂಡ ಜನರು ಈ ದೇವಾಲಯದಲ್ಲಿ ಈ ಆಚರಣೆಯನ್ನು ನಡೆಸಿಕೊಂಡು ಬರುತ್ತಿರುತ್ತಾರೆ ಇದಕ್ಕೆ ಸಂಬಂಧಪಟ್ಟ ಹಾಗೆ ಯಾವುದೇ ಅಪನಂಬಿಕೆ ಇದ್ದರೂ ಕೂಡ ಒಮ್ಮೆ ನೀವೂ ಕೂಡ ಈ ದೇವಾಲಯಕ್ಕೆ ಭೇಟಿ ನೀಡಿ ಧನ್ಯವಾದಗಳು.