Categories
ಅರೋಗ್ಯ ಆರೋಗ್ಯ ಮನೆಔಷಧಿ ಮಾಹಿತಿ ಸಂಗ್ರಹ

ಉತ್ತರಾಣಿ ಎಲೆಯನ್ನ ಬಳಕೆ ಮಾಡುವುದರಿಂದ ಮೂಲವ್ಯಾದಿ ಹಾಗೂ ಚೇಳು ಕಡಿದಾಗ ವಿಷವನ್ನು ತೆಗೆಯಲು ಇದು ತುಂಬಾ ಸಹಕಾರಿ, ಅದಲ್ಲದೆ ಹತ್ತು ಹಲವು ರೋಗಗಳಿಗೆ ಉತ್ತರಾಣಿ ಎಲೆ ರಾಮಬಾಣ …

ಸಿಕ್ಕಾಪಟ್ಟೆ ಫೇಮಸ್ ಆಗಿರುವಂತಹ ಈ ಎಲೆಗಳನ್ನು ಕೆಲವೊಂದು ಹಳ್ಳಿಗಳಲ್ಲಿ ಈಗಲೂ ಕೂಡ ಕೆಲವೊಂದು ರೋಗಗಳ ನಿವಾರಣೆ ಮಾಡಲು ಹಾಗೂ ರೋಗಗಳು ಬಂದಾಗ ಚಿಕಿತ್ಸೆಯನ್ನು ಕೊಡುವಂತಹ ಸಂದರ್ಭದಲ್ಲಿ ಉತ್ತರಾಣಿ ಎಲೆಯನ್ನು ಕಷಾಯದ ರೂಪದಲ್ಲಿ ಬಳಕೆ ಮಾಡಲಾಗುತ್ತದೆ,

ಹಾಗಾದರೆ ಬನ್ನಿ ಉತ್ತರಾಣಿ ಎಲೆಯನ್ನ ಬಳಕೆ ಮಾಡುವುದರಿಂದ ಯಾವ ಯಾವ ರೋಗಗಳಿಂದ ನಾವು ದೂರ ಇರಬಹುದು ಹಾಗೂ ಯಾವ ರೀತಿಯಾಗಿ ಚೇಳು ಕಡಿದಾಗ ಯಾವ ರೀತಿಯಾಗಿ ಇದನ್ನು ಬಳಸಿಕೊಂಡು ವಿಷ ಹೊರಗೆ ತೆಗೆಯ ಬಹುದು ಎನ್ನುವಂತಹ ಒಂದು ವಿಚಾರವನ್ನ ತಿಳಿದುಕೊಳ್ಳೋಣ. 

ಮೊದಲನೆಯದಾಗಿ ಉತ್ತರಾಣಿಯ ಎಲೆ ಯಾವ ಯಾವ ರೋಗಗಳಿಗೆ ಮದ್ದು ಎನ್ನುವಂತಹ ವಿಚಾರವನ್ನು ತಿಳಿದುಕೊಳ್ಳೋಣ, ಉತ್ತರಾಣಿಯ ಕಷಾಯದ ಬಳಕೆಯಾದರೂ ದಿನನಿತ್ಯ ಮಾಡಿದ್ದೆ ಆದಲ್ಲಿ ನಿಮ್ಮ ಮೂತ್ರದಲ್ಲಿ ಯಾವುದೇ ರೀತಿಯಾದಂತಹ ಕ್ಲೇಶ ಕಂಡುಬರುವುದಿಲ್ಲ.

ಯಾರಿಗಾದರೂ ಭೇದಿ ಆಗುವಂತಹ ಸಂದರ್ಭದಲ್ಲಿ ಈ ಎಲೆಯ ರಸವನ್ನು ಮೊಸರಿನಲ್ಲಿ ಮಿಕ್ಸ್ ಮಾಡಿ ಕುಡಿಯುವುದರಿಂದ ತಕ್ಷಣ ಭೇದಿ ಅನ್ನುವುದು ಕಡಿಮೆಯಾಗುತ್ತದೆ. 

ಉತ್ತರಾಣಿಯ ರಸದಿಂದ ಮೂಲವ್ಯಾಧಿ, ದಿನನಿತ್ಯ ನಮಗೆ ಬರುವಂತಹ ಹೊಟ್ಟೆ ನೋವು, ಕೆಲವೊಂದು ಸಂದರ್ಭದಲ್ಲಿ ನಮಗೆ ಗೊತ್ತಿಲ್ಲದ ಹಾಗೆ ಆಗುವಂತಹ ಸುಟ್ಟಗಾಯಗಳು, ಚರ್ಮಕ್ಕೆ ಸಂಬಂಧಪಟ್ಟಂತಹ ವ್ಯಾಧಿಗಳು, ಈ ರೀತಿಯಾದಂತಹ ವಿಚಾರಗಳಿಗೆ ಉತ್ತರಾಣಿ ಎಲೆ ಹಾಗೂ ಅದರ ರಸ ತುಂಬಾ ಒಳ್ಳೆಯದು , 

ಉತ್ತರಾಣಿ ಗಿಡದ ಕಾಂಡವನ್ನು ಚೆನ್ನಾಗಿ ಕುಟ್ಟಿ ಅದರಿಂದ ಬರುವಂತಹ ರಸದಿಂದ ನೀವೇನಾದರೂ ಕಷಾಯದ ರೂಪದಲ್ಲಿ ಬಳಕೆ ಮಾಡಿದ್ದಲ್ಲಿ ನಿಮಗೆ ನಿದ್ರಾಹೀನತೆಯನ್ನು ವುದು ಕಡಿಮೆಯಾಗುತ್ತದೆ. ಉತ್ತರಾಣಿ ಗಟ್ಟಿಯನ್ನ ಚೆನ್ನಾಗಿ ಕುಟ್ಟಿ ಪುಡಿಪುಡಿ ಮಾಡಿ ಅದರ ಬೂದಿಯಿಂದ ಸ್ವಲ್ಪ ಕಾಳುಮೆಣಸು ಹಾಗೂ ಸ್ವಲ್ಪ ಜೇನುತುಪ್ಪವನ್ನು  ಬೆರಿಕೆ ಮಾಡಿ ಕುಡಿಯುವುದರಿಂದ ಯಾವುದೇ ರೀತಿಯಾದಂತಹ ರಕ್ತಸ್ತ್ರಾವ ರಕ್ತದ ಸಮಸ್ಯೆ ಅಸ್ತಮಾ ಹಾಗೂ ಹೃದಯಕ್ಕೆ ಸಂಬಂಧಪಟ್ಟಂತಹ ಕಾಯಿಲೆಗಳು ನಮ್ಮ ದೇಹಕ್ಕೆ ಬರುವುದಿಲ್ಲ. 

ಕೆಲವೊಂದು ಸಾರಿ ಕೆಲವೊಂದು ಕೀಟಗಳು ನಮ್ಮನ್ನು ಕಡಿದಾದ ಚರ್ಮದ ಮೇಲೆ ಕೆಲವೊಂದು ಅಲರ್ಜಿ ಆಗುತ್ತದೆ ಹಾಗೂ ಕೆಲವೊಂದು  ಜೇನುನೊಣ ಕಚ್ಚಿದಾಗ ಇದೆ ಉತ್ತರ ತುಂಬಾ ಸಹಾಯಕ್ಕೆ ಹೇಳಲಾಗುತ್ತದೆ, ಉತ್ತರಾಣಿ ಎಲೆಯನ್ನು ಚೆನ್ನಾಗಿ ಅರೆದು ಚರ್ಮದ ಮೇಲೆ ಲೇಪನ ಮಾಡುವುದರಿಂದ ಕೀಟಗಳಿಂದ ಆಗದಂತಹ ಅಲರ್ಜಿ ಹೋಗುತ್ತದೆ . 

ನೀವು ಬೆಳಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ಸ್ವಲ್ಪ ಬೆಲ್ಲ ಹಾಗೂ ಉತ್ತರಹಳ್ಳಿಯ ರಸವನ್ನು ಮಿಕ್ಸ್ ಮಾಡಿಕೊಂಡು ಇದರಿಂದ ರಕ್ತಹೀನತೆ ಸಮಸ್ಯೆಯನ್ನು ಕೂಡ ನೀವು ದೂರ ಮಾಡಿಕೊಳ್ಳಬಹುದು, ಉತ್ತರಾಣಿ ಕೇವಲ ಔಷಧಿ ಅಂಶವನ್ನು ಹೊಂದಿರುವಂತಹ ಗಿಡ ಮಾತ್ರವಲ್ಲ ಇದರಲ್ಲಿ ಇರುವಂತಹ ಭಸ್ಮದ ಗುಣಗಳು ನೀವು ಬಟ್ಟೆ ತೊಳೆಯುವುದಕ್ಕೂ ಕೂಡ ಇದನ್ನು ಬಳಕೆ ಮಾಡಬಹುದು,

ಉತ್ತರಾಣಿಯ ಭಸ್ಮ ಉಪ್ಪು ಹಾಗೂ ಸಾಸವೆಯ ಎಣ್ಣೆಯನ್ನು ಮಿಕ್ಸ್ ಮಾಡಿಕೊಂಡು ಹಲ್ಲುಜ್ಜಿದರೆ ನಿಮ್ಮ ಹಲ್ಲಿನಲ್ಲಿ ನೋವುಗಳು ಕಂಡುಬರುವುದಿಲ್ಲ. ಹಳ್ಳಿಯ ಕಡೆ ಕೆಲವೊಂದು ಭಾಗದ ಜನರು ಉತ್ತರಾಣಿಯ ಗಿಡದ ಕಾಂಡವನ್ನು ಬಳಕೆ ಮಾಡಿಕೊಂಡು ಹಲ್ಲುಜ್ಜಲು ಬಳಸುತ್ತಾರೆ …