Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ಉರಿ, ಕೆಂಪು ಗುಳ್ಳೆ ಕಜ್ಜಿ ಕೆರೆತ ಅಲರ್ಜಿ ಚರ್ಮ ಸಮಸ್ಯೆಗಳಿಗೆ ಇದನ್ನ ಮಾಡಿ ಲೇಪನ ಮಾಡಿಕೊಳ್ಳಿ …!

ಇವತ್ತಿನ ಮಾಹಿತಿಯಲ್ಲಿ ಫ್ರೆಂಡ್ಸ್ ನಿಮಗೆ ತಿಳಿಸುತ್ತಿರುವ ಮಾಹಿತಿ ಏನೆಂದರೆ ಈ ಒಂದು ಸಮಸ್ಯೆ ಸಾಮಾನ್ಯವಾಗಿಬಿಟ್ಟಿದೆ. ಆ ಒಂದು ತೊಂದರೆ, ಅದೇನೆಂದರೆ ಚರ್ಮಕ್ಕೆ ಸಂಬಂಧಪಟ್ಟ ಸಮಸ್ಯೆಗಳು. ಹೌದು ಇತ್ತೀಚಿನ ದಿನಗಳಲ್ಲಿ ಅಂತೂ ಹೆಚ್ಚಿನ ಮಂದಿ ಈ ಗಜಕರ್ಣದಂಥ ಸಮಸ್ಯೆ ಯಿಂದ ಬಳಲುತ್ತಾ ಇದ್ದಾರೆ. ಒಮ್ಮೆ ಮನೆಯಲ್ಲಿ ಒಬ್ಬರಿಗೆ ಬಂದರೆ ಈ ಗಜಕರ್ಣ ಸಮಸ್ಯೆ ಮನೆ ಮಂದಿಗೆಲ್ಲಾ ಬೇಗ ಹಬ್ಬುತ್ತದೆ ಆದ ಕಾರಣ ಈ ಸಮಸ್ಯೆ ಒಬ್ಬರಿಗೆ ಕಾಣಿಸಿಕೊಂಡರೆ ಅವರು ತುಂಬಾ ಜಾಗರೂಕತೆಯಿಂದ ಇರುವುದು ಒಳ್ಳೆಯದು ಅವರು ಬಳಸಿದ ಬಟ್ಟೆಗಳನ್ನು ಯಾವುದೇ ಕಾರಣಕ್ಕೂ ಬೇರೆಯವರು ಮುಟ್ಟಲೇಬಾರದು ಮತ್ತು ಅವರು ಬಳಸಿದ ಬಟ್ಟೆಗಳನ್ನು ಬಿಸಿ ನೀರಿನಲ್ಲಿ ಸ್ವಚ್ಛಗೊಳಿಸಬೇಕು.

ಈ ರೀತಿಯಾಗಿ ನಾವು ಚರ್ಮಕ್ಕೆ ಸಂಬಂಧಪಟ್ಟ ಸಮಸ್ಯೆಗಳಿಂದ ಬಳಲುತ್ತಾ ಇರುವಾಗ ಆದಷ್ಟು ಜಾಗರೂಕತೆಯಿಂದ ಇರುವುದು ತುಂಬಾ ಅವಶ್ಯಕವಾಗಿರುತ್ತದೆ ಈ ಗಜಕರ್ಣ ಕಜ್ಜಿ ತುರಿಕೆ ಮತ್ತು ಚರ್ಮ ಕೆಂಪಾಗುವುದು ಇಂತಹ ಎಲ್ಲ ಸಮಸ್ಯೆಗಳಿಗೂ ಪರಿಹಾರ ಒಂದೇ ಅದು ಬೇವಿನ ಸೊಪ್ಪು ಬೇವಿನ ಸೊಪ್ಪಿನಲ್ಲಿ ಆ್ಯಂಟಿ ಇನ್ ಫ್ಲಮೇಟರಿ ಆ್ಯಂಟಿಸೆಪ್ಟಿಕ್ ಆ್ಯಂಟಿಬಯೋಟಿಕ್ ಅಂಶ ಇತ್ತು ನಮ್ಮ ಚರ್ಮಕ್ಕೆ ಸಂಬಂಧಪಟ್ಟ ಸಮಸ್ಯೆಗಳಿಗೆ ಒಳ್ಳೆಯ ಪರಿಹಾರವನ್ನು ನೀಡಬಲ್ಲದು ಬೇವಿನ ಸೊಪ್ಪು .

ಆದಕಾರಣ ನೆನಪಿನಲ್ಲಿ ಇಡೀ ನೀವು ವಾರಕ್ಕೆ ಒಮ್ಮೆಯಾದರೂ ಬೇವಿನ ಸೊಪ್ಪನ್ನು ನೀರಿನಲ್ಲಿ ನೆನೆಸಿ ಆ ನೀರನ್ನು ಸ್ನಾನ ಮಾಡುವುದರಿಂದ ಚರ್ಮಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಎದುರಾಗುವುದೇ ಇಲ್ಲ ಇನ್ನು ದೂಳು ಪ್ರದೂಷಣೆ ಅಂತಹ ಜಾಗಗಳಲ್ಲಿ ಕೆಲಸ ಮಾಡುವ ಮಂದಿ ಈಗಲೂ ಪರಿಹಾರವನ್ನ ಮಾಡಿಕೊಂಡರೆ ಈ ಚರ್ಮಕ್ಕೆ ಸಂಬಂಧಪಟ್ಟ ವ್ಯಾಧಿಗಳು ಬರುವುದಿಲ್ಲಾ. ಮಾಹಿತಿಗೆ ಬರುವುದಾದರೆ, ಈ ಗಜಕರ್ಣ ಸಮಸ್ಯೆಗೆ ಪರಿಹಾರ ತುಂಬಾ ಸುಲಭವಾಗಿ ಇರುತ್ತದೆ ಇದಕ್ಕಾಗಿ ಬೇಕಾಗಿರುವುದು ಬೇವಿನ ಸೊಪ್ಪು ತೆಂಗಿನಕಾಯಿ ಎಣ್ಣೆ ಅರಿಶಿಣ ಮತ್ತು ಕರ್ಪೂರ.

ನಾವು ಇಲ್ಲಿ ಬಳಸಿರುವಂತಹ ಎಲ್ಲ ಪದಾರ್ಥಗಳು ಚರ್ಮಕ್ಕೆ ಪೋಷಣೆ ಮಾಡುವಂತಹ ಪದಾರ್ಥಗಳಾಗಿರುತ್ತವೆ ಇದರಿಂದ ಯಾವುದೇ ಅಡ್ಡ ಪರಿಣಾಮಗಳು ನಮ್ಮ ಮೇಲೆ ಆಗುವುದಿಲ್ಲ ಇದೀಗ ಬೇವಿನ ಸೊಪ್ಪಿನ ಪೇಸ್ಟ್ ಅನ್ನು ತೆಗೆದುಕೊಂಡು ಇದಕ್ಕೆ ಕೊಬ್ಬರಿ ಎಣ್ಣೆಯನ್ನು ಮಿಶ್ರಣ ಮಾಡಬೇಕು ಇದಕ್ಕೆ ನಂತರ ಕಸ್ತೂರಿ ಅರಿಶಿಣವನ್ನು ಬಳಸಿ ಇದು ತುಂಬ ಪರಿಣಾಮಕಾರಿಯಾಗಿ ಇರುತ್ತದೆ. ನಂತರ 2ಕರ್ಪೂರವನ್ನು ಪುಡಿ ಮಾಡಿ ಈ ಮಿಶ್ರಣಕ್ಕೆ ಹಾಕಿಕೊಳ್ಳಿ ನಂತರ ಎಲ್ಲವನ್ನೂ ಚೆನ್ನಾಗಿ ಮಿಶ್ರ ಗೊಳಿಸಿಕೊಳ್ಳಬೇಕು.

ಯಾವ ಭಾಗದಲ್ಲಿ ತುಂಬಾ ತುರಿಕೆ ಕೆಂಪು ಆಗಿರುತ್ತದೆ ಮತ್ತು ಗಜಕರ್ಣ ಆಗಿರುತ್ತದೆ ಆ ಭಾಗಕ್ಕೆ ನೀವು ಹತ್ತಿಯ ಸಹಾಯ ದಿಂದ ಈ ಲೇಪನವನ್ನು ಲೇಪಿಸಿಕೊಳ್ಳಿ ಇದೇ ರೀತಿ ನೀವು ದಿನಕ್ಕೆ 3ಬಾರಿ ಮಾಡಿ ಬಿಸಿ ನೀರಿನಿಂದ ಸ್ವಚ್ಛ ಈ ರೀತಿ ನೀವು ಸತತವಾಗಿ ಹದಿನೈದು ದಿನಗಳ ಕಾಲ ಮಾಡುತ್ತ ಬಂದಲ್ಲಿ ಈ ಗಜಕರ್ಣದಂಥ ಸಮಸ್ಯೆ ಬೇಗ ಪರಿಹಾರ ಆಗುತ್ತದೆ ಮತ್ತು ನೆನಪಿನಲ್ಲಿಡಿ ನೀವು ಕೈಕಾಲುಗಳನ್ನು ಸ್ವಚ್ಛಗೊಳಿಸುವಾಗ ಅಂದರೆ ಗಜಕರ್ಣವನ್ನು ಸ್ವಚ್ಛಗೊಳಿಸುವಾಗ ಬಿಸಿ ನೀರನ್ನೆ ಬಳಸಿ ತುಂಬಾ ಒಳ್ಳೆಯದು. ಇನ್ನು ಸ್ನಾನ ಮಾಡುವಾಗ ನೀರಿಗೆ ಕಲ್ಲುಪ್ಪು ಬೆರೆಸಿ ಸ್ನಾನ ಮಾಡುತ್ತಾ ಬರುವುದರಿಂದ ಚರ್ಮಕ್ಕೆ ಸಂಬಂಧಪಟ್ಟ ಸಮಸ್ಯೆಗಳು ವ್ಯಾಧಿಗಳು ದೂರವಾಗುತ್ತದೆ.