Categories
ಭಕ್ತಿ ಮಾಹಿತಿ ಸಂಗ್ರಹ

ಎಂಜಿನಿಯರ್ ಓದಿದ್ರೂ ಕೆಲಸ ಬಿಟ್ಟು ಪ್ರಗತಿಪರ ರೈತರಾದ್ರು.. ಇವರು ಪಬ್ಲಿಕ್ ಟಿವಿ ಪಬ್ಲಿಕ್ ಹೀರೋ ಅಂತ ಗುರುತಿಸಿಕೊಂಡ ವ್ಯಕ್ತಿ

ಎಂಜಿನಿಯರ್ ಓದಿದ್ರೂ ಒಳ್ಳೆಯ ಕೆಲಸ ಬಿಟ್ಟು ಪ್ರಗತಿ ಪರ ರೈತರಾಗಿರುವ ಬಾಗಲಕೋಟೆಯ ಬಸನಗೌಡ ಪೊಲೀಸ್ ಪಾಟೀಲ್ ಅವರು ಇವತ್ತಿನ ನಮ್ಮ ಪಬ್ಲಿಕ್ ಹೀರೋ. ಗ್ರಾಮದ ಸುತ್ತಮುತ್ತಲ ರೈತರಿಗೆ ಇವರು ಕೃಷಿ ಡಿಕ್ಷನರಿ ಎಂದು ಫೇಮಸ್. ಕೃಷಿ ಬಗ್ಗೆ ಏನೇ ಮಾಹಿತಿ ಕೇಳಿದ್ರೂ ಥಟ್ ಅಂತ ಉತ್ತರಿಸುತ್ತಾರೆ.

ಬಸನಗೌಡ ಅವರು ಜಿಲ್ಲೆಯ ಮುಧೋಳ ತಾಲೂಕಿನ ಮಿರ್ಜಿ ಗ್ರಾಮದ ನಿವಾಸಿ. ಇವರನ್ನು ಕೃಷಿಯಲ್ಲಿ ಸಾಧಕ, ಕೃಷಿ ವಿಜ್ಞಾನಿ, ಕೃಷಿ ಪಂಡಿತ ಹೀಗೆ ಇವರನ್ನ ಏನಂತಾ ಕರೀಬೇಕು ಅನ್ನೋದೇ ಗೊತ್ತಾಗಲ್ಲ. ಅಷ್ಟರ ಮಟ್ಟಿಗೆ ಕೃಷಿಯಲ್ಲಿ ಪಾಂಡಿತ್ಯ ಸಂಪಾದಿಸಿದ್ದಾರೆ.

ಕೃಷಿ ಬಗ್ಗೆ ಎರಡೂವರೆ ಸಾವಿರದಷ್ಟು ಪುಸ್ತಕ ಹಾಗೂ ಮ್ಯಾಗಜಿನ್ ಖರೀದಿಸಿದ್ದು ಮನೆಯನ್ನೇ ಕೃಷಿ ಗ್ರಂಥಾಲಯ ಮಾಡಿಕೊಂಡಿದ್ದಾರೆ. 180 ಕೃಷಿ ಪಂಡಿತರ ಜೀವನ ಚರಿತ್ರೆಯ ಅಲ್ಬಂ, 150 ಕೃಷಿ ಸಂಬಂಧಿ ಸಿಡಿ ಕಲೆಹಾಕಿ ಸುತ್ತಮುತ್ತಲ ರೈತರಿಗೆ ವಿಭಿನ್ನ ಕೃಷಿ ಪದ್ದತಿಯ ಬಗ್ಗೆ ಉಪಯುಕ್ತ ಮಾಹಿತಿ ನೀಡ್ತಿದ್ದಾರೆ.

ಪಬ್ಲಿಕ್ ಟಿವಿ ಅಭಿಮಾನಿಯಾಗಿರುವ ಬಸನಗೌಡ್ರು, ಕೃಷಿಯಲ್ಲಿ ಸಾಧನೆ ಮಾಡಿ ಪಬ್ಲಿಕ್ ಟಿವಿಯಲ್ಲಿ ಗುರುತಿಸಿಕೊಂಡ ಪಬ್ಲಿಕ್ ಹೀರೋಗಳ ಮನೆಗೆ ಭೇಟಿ ನೀಡ್ತಾರೆ. ಅವರಿಂದ ಕೃಷಿ ಬಗ್ಗೆ ಮಾಹಿತಿ ಪಡೆದು ಜಿಲ್ಲೆಯ ರೈತರಿಗೆ ತಿಳಿಸಿಕೊಡ್ತಾರೆ. ಹೆಬ್ಬೇವು, ಮೆಣಸು, ತರಕಾರಿ ಬೆಳೆಗಳು, ತೊಗರಿ, ದಾಳಿಂಬೆ, ಈರುಳ್ಳಿ ಹೀಗೆ ವಿವಿಧ ಬೆಳೆ ಬೆಳೆದು ವಿಭಿನ್ನ ರೈತ ಎನಿಸಿಕೊಂಡಿದ್ದಾರೆ.

ಎಂಜಿನಿಯರಿಂಗ್ ಕ್ಷೇತ್ರವು ಇಚ್ಛಿತ ಉದ್ದೇಶ ಅಥವಾ ಸಂಶೋಧನೆಗಳ ಸುರಕ್ಷಿತ ನೆರವೇರಿಕೆಗೆ ಸಾಮಗ್ರಿಗಳು, ರಚನೆಗಳು, ಯಂತ್ರಗಳು, ಉಪಕರಣಗಳು, ವ್ಯವಸ್ಥೆಗಳು ಮತ್ತು ಕಾರ್ಯವಿಧಾನಗಳ ವಿನ್ಯಾಸ ಮತ್ತು ಅನುಷ್ಠಾನಕ್ಕೆ ತಾಂತ್ರಿಕ, ವೈಜ್ಞಾನಿಕ ಮತ್ತು ಗಣಿತದ ಜ್ಞಾನವನ್ನು ಸಂಪಾದಿಸುವ ಮತ್ತು ಅಳವಡಿಸುವ ಶಿಕ್ಷಣ, ಕಲೆ ಮತ್ತು ವೃತ್ತಿಯಾಗಿದೆ. ವೃತ್ತಿಪರ ಅಭಿವೃದ್ಧಿ ಕುರಿತ ಅಮೆರಿಕನ್ ಎಂಜಿನಿಯರ್ಸ್ ಮಂಡಳಿಯು(ECPD, ABETಗಿಂತ ಪೂರ್ವದಲ್ಲಿದ್ದ ಮಂಡಳಿ)ಎಂಜಿನಿಯರಿಂಗ್ ಶಬ್ದವನ್ನು ಕೆಳಗಿನಂತೆ ವ್ಯಾಖ್ಯಾನಿಸಿದೆ:

ರಚನೆಗಳು, ಯಂತ್ರಗಳು,ಉಪಕರಣ ಅಥವಾ ಉತ್ಪಾದನೆ ಕಾರ್ಯವಿಧಾನಗಳು ಅಥವಾ ಕೆಲಸಗಳ ವಿನ್ಯಾಸ ಅಥವಾ ಅಭಿವೃದ್ಧಿಗೆ ವೈಜ್ಞಾನಿಕ ತತ್ವಗಳ ಸೃಜನಾತ್ಮಕ ಅಳವಡಿಕೆಯಿಂದ ಅವುಗಳನ್ನು ಪ್ರತ್ಯೇಕವಾಗಿ ಅಥವಾ ಸಾಮೂಹಿಕವಾಗಿ ಬಳಸಿಕೊಳ್ಳುವುದು.

ಅಥವಾ ಅವುಗಳ ವಿನ್ಯಾಸದ ಪೂರ್ಣ ಅರಿವಿನೊಂದಿಗೆ ಅದರ ನಿರ್ಮಾಣ ಅಥವಾ ನಿರ್ವಹಣೆ; ಅಥವಾ ನಿರ್ದಿಷ್ಟ ನಿರ್ವಹಣಾ ಪರಿಸ್ಥಿತಿಗಳ ಅಡಿಯಲ್ಲಿ ಅದರ ನಡವಳಿಕೆಯನ್ನು ಮುಂಗಾಣುವುದು;ಎಲ್ಲವೂ ಇಚ್ಛಿತ ನಿರ್ವಹಣೆ, ಕಾರ್ಯಾಚರಣೆಯ ಆರ್ಥಿಕತೆ ಮತ್ತು ಜೀವ ಮತ್ತು ಆಸ್ತಿಪಾಸ್ತಿಯ ಸುರಕ್ಷತೆಗೆ ಸಂಬಂಧಿಸಿದೆ.

ಎಂಜಿನಿಯರಿಂಗ್ ಅಭ್ಯಸಿಸುವ ವ್ಯಕ್ತಿಯನ್ನು ಎಂಜಿನಿಯರ್ ಎಂದು ಕರೆಯುತ್ತಾರೆ.ಅದಕ್ಕೆ ಪರವಾನಗಿ ಪಡೆದಿರುವವರು ವೃತ್ತಿಪರ ಎಂಜಿನಿಯರ್,ಚಾರ್ಟರ್ಡ್ ಎಂಜಿನಿಯರ್, ಇನ್‌ಕಾರ್ಪೋರೇಟೆಡ್ ಎಂಜಿನಿಯರ್ ಅಥವಾ ಯುರೋಪಿಯನ್ ಎಂಜಿನಿಯರ್ ಮುಂತಾದ ಔಪಚಾರಿಕ ಹೆಚ್ಚಿನ ಹುದ್ದೆಗಳನ್ನು ಹೊಂದಿರುತ್ತಾರೆ. ಎಂಜಿನಿಯರಿಂಗ್ ವಿಶಾಲ ವಿಭಾಗವು ಹೆಚ್ಚು ವ್ಯಾಪ್ತಿಯ ವಿಶೇಷ ಉಪವಿಭಾಗಗಳನ್ನು ಒಳಗೊಂಡಿದೆ, ಪ್ರತಿಯೊಂದು ಕೆಲವು ಅಳವಡಿಕೆಯ ಕ್ಷೇತ್ರಗಳಿಗೆ ಮತ್ತು ತಂತ್ರಜ್ಞಾನದ ನಿರ್ದಿಷ್ಟ ಕ್ಷೇತ್ರಗಳಿಗೆ ಹೆಚ್ಚು ಮಹತ್ವ ನೀಡುವುದಾಗಿದೆ.