Sanjay Kumar
By Sanjay Kumar ಎಲ್ಲ ನ್ಯೂಸ್ ಕಥೆ 14 Views 2 Min Read
2 Min Read

ಸೀರೆ ಉಟ್ಟು ಬುಲೆಟ್ ಹಾಗೂ ಕುದುರೆ ರೈಡ್ ಮಾಡುವ ಈ ಮಹಿಳೆ ಬಗ್ಗೆ ನೀವು ಕೇಳಿದರೆ ಅಚ್ಚರಿ ಪಡ್ತೀರಾ ಎಷ್ಟೋ ಜನ ಹೆಣ್ಣು ಮಕ್ಕಳು ತಮ್ಮಲ್ಲಿ ಉತ್ತಮವಾದ ಅದ್ಭುತವಾದ ಹವ್ಯಾಸಗಳು ಇದ್ದರೂ ಸಹ ಅದನ್ನು ಅನಾವರಣ ಮಾಡದೆ ಸಮಾಜ ಏನು ಅಂದುಕೊಳ್ಳುತ್ತದೆ ಅವರಿವರು ಏನು ಅಂದುಕೊಳ್ಳುತ್ತಾರೆ ಎಂದು ತಮ್ಮ ಆಸೆ ಅಭಿಲಾಷೆಗಳನ್ನು ಹವ್ಯಾಸಗಳನ್ನು ಮುಚ್ಚಿಟ್ಟು ಬಾಳುತ್ತಾರೆ ಆದರೆ ಇಲ್ಲೊಬ್ಬ ಮಹಿಳೆ ಮಾಡಿದ ಈ ಅದ್ಭುತವಾದ ಕೆಲಸ ನೀವು ನೋಡಿದರೆ ನಿಮಗೂ ಕೂಡ ಅಚ್ಚರಿ ಆಗುತ್ತದೆ ಹಾಗಾದರೆ ಇವರು ಯಾರು ಇವರು ಮಾಡುತ್ತಿರುವ ಕೆಲಸವೇನೊ ಹಾಗೂ ಇವರ ತಿಂಗಳ ಆದಾಯ ಎಷ್ಟಿರಬಹುದು ಎಂಬೆಲ್ಲ ಮಾಹಿತಿಯನ್ನು ತಿಳಿದುಕೊಳ್ಳೋಣ ಇಲ್ಲಿನ ಈ ಲೇಖನದಲ್ಲಿ.

ಹೌದು ಭೂಮಿ ಮೇಲೆ ಅದ್ಭುತವಾದ ಸೃಷ್ಟಿಯೆಂದರೆ ಅದು ಮಹಿಳೆ ಎಂದು ಹೇಳಬಹುದು ಈಕೆಯನ್ನು ಸಹನಾಭೂತಿ ಅಂತ ಕರಿತಾರೆ ಮತ್ತೊಂದು ಜೀವಿಗೆ ಜನ್ಮ ನೀಡುವ ಸಾಮರ್ಥ್ಯ ಸಹನೆ ಧೈರ್ಯ ಇವೆಲ್ಲವೂ ಇರುವ ಈಕೆಯನ್ನು ಆದಿಶಕ್ತಿಗೆ ಹೋಲಿಸುತ್ತಾರೆ. ಇವತ್ತಿನ ಕಾಲಮಾನದಲ್ಲಿ ಹೆಣ್ಣುಮಕ್ಕಳು ತಾವು ಅಂದುಕೊಂಡದ್ದನ್ನೆಲ್ಲ ಸಾಧಿಸುತ್ತಾರೆ ಆದರೂ ಸಹ ತಮ್ಮಲ್ಲಿರುವ ಎಷ್ಟು ಆಸೆಗಳನ್ನು ಮುಚ್ಚಿಟ್ಟು ಸಮಾಜದ ಎದುರು ಸಮಾಜಕ್ಕೆ ಹೆದರಿ ಬಾಳುತ್ತಾರೆ ಆದರೆ ಇಲ್ಲೊಬ್ಬ ಮಹಿಳೆ ಯಾರು ಏನೇ ಅಂದುಕೊಂಡರೂ ಪರವಾಗಿಲ್ಲ ತಾನಿರುವುದೇ ಹೀಗೆ ಎಂದು ತನ್ನ ಹವ್ಯಾಸವನ್ನು ಸಮಾಜಕ್ಕೆ ತಿಳಿಸುತ್ತಾ ಇರುವಂತಹ ಈಕೆ ಯಾರು ಎಂದರೆ ಒಡಿಸ್ಸಾಗೆ ಸೇರಿದ ಈ ಮಹಿಳೆ ಜಯಪುರ ಎಂಬ ಪ್ರಾಂತ್ಯದಲ್ಲಿ ವಾಸಿಸುತ್ತಿದ್ದಾರೆ ಇವರ ಹೆಸರು ಮೋನಾಲಿಸಾ ಎಂದು ಹಾಗೂ ಇವರ ಪತಿ ಸಮಾಜ ಸೇವಕರಾಗಿದ್ದಾರೆ ಇವರ ಹೆಸರು ಬದ್ರಿನಾಥ್.

ಮೊನಾಲಿಸಾ ಬುಲೆಟ್ ಓಡಿಸುತ್ತಾರೆ ಹಾಗೂ ಸೀರೆ ತೊಟ್ಟು ಟ್ರ್ಯಾಕ್ಟರ್ ಓಡಿಸುವ ಮೂಲಕ ಜಮೀನನ್ನು ಹೂಳುತ್ತಾರೆ ಅಷ್ಟೆ ಅಲ್ಲ ವೋಲ್ವೋ ಬಸ್ ಗಳನ್ನು ಓಡಿಸುವ ಮೋನಾಲಿಸಾ ಈಕೆ ತಿಂಗಳಿಗೆ ಲಕ್ಷ₹ದುಡಿಯುತ್ತಾಳೆ ಹಾಗೂ ಈಕೆಯ ಹೆಸರಿನಲ್ಲಿ ಯೂಟ್ಯೂಬ್ ಚಾನಲ್ ವೊಂದು ಕೂಡ ಇದೆ ಈಕೆಗೆ ಸುಮಾರು ಇಪ್ಪತ್ತೆರಡು ಲಕ್ಷ ಸಬ್ ಸ್ಕ್ರೈಬರ್ಸ್ ಕೂಡ ಇದ್ದಾರೆ. ಈಕೆ ಮಾಡುವ ಎಲ್ಲ ಕೆಲಸದ ವೀಡಿಯೊಗಳನ್ನು ತಮ್ಮ ಯೂಟ್ಯೂಬ್ ಚಾನಲ್ ಗೆ ಹಾಕುತ್ತಾರೆ, ಹಾಗೂ ಇವರ ವೀಡಿಯೋ ಲಕ್ಷಾಂತರ ವೀವ್ಸ್ ಪಡೆದುಕೊಳ್ಳುತ್ತದೆ.

ಈ ರೀತಿಯ ಮೋನಾಲಿಸಾ ಸಮಾಜಿಕ ಜಾಲತಾಣಗಳಲ್ಲಿ ಸಕತ್ ಫೇಮಸ್ ಆಗಿದ್ದು ಇತ್ತೀಚಿನ ದಿವಸಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಬಹಳ ವೈರಲ್ ಆಗಿದ್ದಾರೆ ಮೊನಾಲಿಸಾ ಸೀರೆ ತೊಟ್ಟು ಕುದುರೆ ಸವಾರಿ ಮಾಡಿದ ಈಕೆಯ ವಿಡಿಯೋ ಸದ್ಯ ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆಗಿದ್ದು ನೀವು ಕೂಡ ಮೊನಾಲಿಸಾಳ ಹಾರ್ಸ್ ರೈಡ್ ವೀಡಿಯೋ ನೋಡಿಲ್ಲವಾದರೆ ತಪ್ಪದೆ ವಿಡಿಯೋವನ್ನು ನೋಡಿ ಹಾಗೂ ಈ ಮಹಿಳೆಯ ದಿಟ್ಟತನ ಧೈರ್ಯಕ್ಕೆ ನಮ್ಮದೊಂದು ಮೆಚ್ಚುಗೆಯಿರಲಿ ಹಾಗೂ ಈ ಮಹಿಳೆ ಬಗ್ಗೆ ಪ್ರತಿಯೊಬ್ಬರಿಗೂ ತಿಳಿಸಿಕೊಡಿ ಧನ್ಯವಾದಗಳು.

Share This Article

ಓದುಗರ ಗಮನಕ್ಕೆ: ನಮ್ಮ ವೆಬ್ಸೈಟ್  ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.