ಇದನ್ನ ತಿನ್ನಿ ಸಾಕು ನಿಮ್ಮ ದೇಹ ವಜ್ರಕಾಯ ಆಗುತ್ತೆ , ನಿಮ್ಮ ಸ್ಟಾಮೀನ ಉತ್ತುಂಗದ ಶಿಖರಕ್ಕೆ ಎದ್ದು ನಿಲ್ಲುತ್ತದೆ…

160

ವೆಲ್ಲಕಾಳು ಗೊತ್ತಿದೆಯಾ ನಿಮಗೆ ಈ ಪದಾರ್ಥದ ಪರಿಚಯ ಇದ್ರೆ ಕ್ಯಾಲ್ಷಿಯಂ ಕೊರತೆಯಿಂದ ಪರಿಹಾರ ಪಡೆದುಕೊಳ್ಳಬಹುದು ಬಹುಬೇಗ! ನಮಸ್ಕಾರಗಳು ಕೆಲವರಿಗೆ ಕ್ಯಾಲ್ಷಿಯಂ ಕೊರತೆ ಕಾಡುತ್ತಿದ್ದರೆ ಇನ್ನೂ ಕೆಲವರಿಗೆ ತಮಗೆ ಸಮಸ್ಯೆ ಕಾಡುತ್ತಾ ಇದೆ ಎಂದೇ ತಿಳಿಯುವುದಿಲ್ಲ ಕೆಲವರು ಮೂಳೆ ವಿಪರೀತ ನೋವು ಸೆಳೆತ ಎಂದು ಡಾಕ್ಟರ್ ಬಳಿ ಪರೀಕ್ಷಿಸಿಕೊಳ್ಳಲು ಹೊತ್ತರೆ ಆಗ ತಿಳಿಯುತ್ತೆ ಕ್ಯಾಲ್ಷಿಯಂ ಕೊರತೆ ಇದೆ ಎಂದು ಆಗ ಅವರು ಮಾಡುವ ಪರಿಹಾರ ಕ್ಯಾಲ್ಷಿಯಂ ಮಾತ್ರೆ ತೆಗೆದುಕೊಳ್ಳುವುದು

ಹೌದು ಇನ್ನೇನು ಮಾಡಲು ಸಾಧ್ಯ ಹೇಳಿ ಕ್ಯಾಲ್ಷಿಯಂ ಕೊರತೆ ಉಂಟಾದಾಗ ಮಾತ್ರೆ ತೆಗೆದುಕೊಳ್ಳುತ್ತೇವೆ ಆದರೆ ಈ ಕ್ಯಾಲ್ಸಿಯಂ ಮಾತ್ರೆಯನ್ನು ಕೂಡ ವಿಪರೀತವಾಗಿ ತೆಗೆದುಕೊಳ್ಳುವಂತಿಲ್ಲ. ಯಾಕೆಂದರೆ ಈ ಕ್ಯಾಲ್ಸಿಯಂ ಮಾತ್ರೆಯನ್ನು ಹೆಚ್ಚಾಗಿ ತೆಗೆದುಕೊಂಡರೆ ದೇಹದಲ್ಲಿ ಕ್ಯಾಲ್ಸಿಯಂ ಅಂಶವು ವಿಪರೀತವಾದರೂ ಕೂಡ ಕಷ್ಟವಾಗುತ್ತದೆ, ಆಗಲೂ ಕೂಡ ಕೆಲವೊಂದು ಸೈಡ್ ಎಫೆಕ್ಟ್ ಗಳು ಬರುವ ಸಾಧ್ಯತೆಗಳಿರುತ್ತದೆ

ಹಾಗಾಗಿ ನಾವು ಈ ದಿನದ ಲೇಖನಿಯಲ್ಲಿ ಮಾತ್ರೆಯೇ ತೆಗೆದುಕೊಳ್ಳದೆ ಹೇಗೆ ಮೂಳೆಗಳನ್ನು ಬಲಪಡಿಸುವುದು ಕೀಲುನೋವು ಮಂಡಿನೋವು ಸಮಸ್ಯೆಯನ್ನು ನಿವಾರಣೆ ಮಾಡಿಕೊಳ್ಳುವುದು, ಹೇಗೆಂಬುದನ್ನು ತಿಳಿಸಿಕೊಡುತ್ತೇನೆ ಬನ್ನಿ ಈ ಮನೆಮದ್ದನ್ನು ತಿಳಿದು, ನೀವು ಕೂಡ ಈ ಕ್ಯಾಲ್ಸಿಯಂ ಕೊರತೆ ಉಂಟಾಗಬಾರದು ಅಂದರೆ ಅಥವಾ ಕ್ಯಾಲ್ಸಿಯಂ ಕೊರತೆಯಿಂದ ಮಂಡಿ ನೋವು ಸಮಸ್ಯೆ ಬರಬಾರದು ಅಥವಾ ಈ ಸಮಸ್ಯೆ ಇದ್ದರೆ ಅದು ನಿವಾರಣೆ ಆಗಬೇಕು

ಅಂತ ಅಂದಲ್ಲಿ ಈ ಪರಿಹಾರ ಪಾಲಿಸಿ ಆರೋಗ್ಯದ ಮೇಲೆ ಯಾವುದೇ ಸೈಡ್ ಎಫೆಕ್ಟ್ ಆಗುವುದಿಲ್ಲ ಹಾಗೂ ಹೆಚ್ಚು ಖರ್ಚು ಇಲ್ಲದೆ ನೀವು ಸಮಸ್ಯೆಯಿಂದ ಹೊರಬರಬಹುದು. ಹಾಗಾದರೆ ಬನ್ನಿ ಮದ್ದು ಮಾಡೋದು ಹೇಗೆ ತಿಳಿಯೋಣ ಇದಕ್ಕೆ ಬೇಕಾಗುವ ಪದಾರ್ಥಗಳು ಏನು ಎಂಬುದನ್ನ ಸಹ ತಿಳಿಯೋಣ.

ಹೌದು ಈ ಮನೆಮದ್ದು ಮಾಡುವುದಕ್ಕೆ ಬೇಕಾಗುವ ಪದಾರ್ಥಗಳು ಕೊಬ್ಬರಿ ಬೆಲ್ಲ ಕಾಳು ಗೋಡಂಬಿ ಹಾಗೂ ಕಲ್ಲು ಸಕ್ಕರೆ ಮತ್ತು ಹಾಲು.ಬೆಲ್ಲ ಕಾಳು ಇದೊಂದು ಅದ್ಭುತವಾದ ಪದಾರ್ಥ ದೇಹಕ್ಕೆ ಬಲ ನೀಡುತ್ತೆ ಕ್ಯಾಲ್ಸಿಯಂ ಕೊರತೆ ನಿವಾರಿಸುತ್ತೆ ಹಾಗೂ ಕೊಬ್ಬರಿ ಯಲ್ಲಿಯೂ ಸಹ ಸಾಕಷ್ಟು ಪೋಷಕಾಂಶಗಳಿವೆ ಕೊಬ್ಬರಿಯನ್ನು ತಿನ್ನುವುದರಿಂದ ಕೂಡ ತುಂಬಾನೇ ಒಳ್ಳೆಯದು ರಕ್ತ ಶುದ್ಧಿಯಾಗುತ್ತದೆ ಹಾಗೂ ಗೋಡಂಬಿ ಅಧಿಕ ಪೋಷಕಾಂಶಗಳನ್ನು ಹೊಂದಿದೆ ದೇಹಕ್ಕೆ ಪುಷ್ಟಿ ನೀಡುತ್ತದೆ ಹಾಲಿನಲ್ಲಿ ಕ್ಲಾಲ್ಶಿಯಂ ಇದೆ.

ಹಾಗಾಗಿ ಯಾರಿಗೆ ಕ್ಯಾಲ್ಶಿಯಂ ಕೊರತೆ ಇರುತ್ತದೆ ಅವರು ಈ ಪರಿಹಾರವನ್ನು ಪಾಲಿಸಿ ಮಾಡುವ ವಿಧಾನ ಹೇಗೆಂದರೆ ಗೋಡಂಬಿ ವೆಲ್ಲ ಕಾಳು ಕೊಬ್ಬರಿ ಇವೆಲ್ಲವನ್ನು ಮಿಶ್ರಮಾಡಿ ಪುಡಿ ಮಾಡಿಕೊಳ್ಳಬೇಕು, ನಂತರ ಇದಕ್ಕೆ ಕಲ್ಲು ಸಕ್ಕರೆ ಸೇರಿಸಿ ಮತ್ತೊಮ್ಮೆ ಬ್ಲೆಂಡ್ ಮಾಡಿಕೊಂಡು ಇದನ್ನು ಫ್ರಿಡ್ಜ್ ನಲ್ಲಿ ಇಟ್ಟು 3ದಿನಗಳ ಕಾಲ ಬಳಸಬಹುದು ಪ್ರತಿದಿನ ಅಥವಾ ದಿನ ಬಿಟ್ಟು ದಿನ ಹಾಲಿಗೆ ಈ ಮಿಶ್ರಣವನ್ನು ಹಾಕಿ ಹಾಲನ್ನು ಒಮ್ಮೆ ಕುದಿಸಿ

ಈ ಹಾಲನ್ನು ಪ್ರತಿ ದಿನ ಕುಡಿಯುತ್ತ ಬರಬೇಕು ಇದರಿಂದ ಕ್ಯಾಲ್ಷಿಯಂ ಕೊರತೆ ನಿವಾರಣೆಯಾಗುತ್ತದೆ ಮೂಳೆ ನೋವು ಮೂಳೆ ಸೆಳೆತ ಮಂಡಿನೋವು ಕೀಲುನೋವು ಇಂತಹ ಎಲ್ಲ ಸಮಸ್ಯೆಗಳಿಂದ ಬಹಳ ಬೇಗ ಪರಿಹಾರ ಪಡೆದುಕೊಳ್ಳಬಹುದು.

ಕಲ್ಲುಸಕ್ಕರೆ ಸಿಗದೇ ಹೋದರೆ ಬೆಲ್ಲವನ್ನು ಅಥವಾ ಆರ್ಗ್ಯಾನಿಕ್ ಬೆಲ್ಲವನ್ನು ಸಹ ಈ ಪರಿಹಾರದಲ್ಲಿ ನೀವು ಬಳಸಬಹುದು ಯಾಕೆಂದರೆ ಬೆಲೆಯಲ್ಲಿಯೂ ಕೂಡ ಉತ್ತಮ ಪೋಷಕಾಂಶಗಳಿರುತ್ತವೆ ಐರನ್ ಇರುತ್ತದೆ. ಆರೋಗ್ಯಕ್ಕೆ ಒಳ್ಳೆಯದು ಹಾಗಾಗಿ ಈ ಸರಳ ಪರಿಹಾರ ಪಾಲಿಸಿ, ಸಮಸ್ಯೆಯಿಂದ ಪರಿಹಾರ ಪಡೆದುಕೊಳ್ಳಿ ಧನ್ಯವಾದ.

LEAVE A REPLY

Please enter your comment!
Please enter your name here