Sanjay Kumar
2 Min Read

ಸೊಂಟ ನೋವು ಕೈಕಾಲು ವಿಪರೀತ ನೋವು ಎಂಬ ತೊಂದರೆ ಇದ್ದವರಿಗೆ ಮನೆಯಲ್ಲಿಯೇ ಮಾಡಬಹುದಾದಂತಹ ಪರಿಹಾರ ಇದು, ಚಿಟಿಕೆ ಹೊಡೆಯುವಷ್ಟರಲ್ಲಿ ಮಾಡಬಹುದು ಈ ಮನೆ ಮದ್ದನ್ನೂ, ಅದರ ಬಗ್ಗೆ ನಾವು ಈ ದಿನದ ಲೇಖನದಲ್ಲಿ ತಿಳಿದುಕೊಳ್ಳೋಣ.ಮನುಷ್ಯನ ದೇಹ ಎಷ್ಟೇ ದುಡಿದರೂ ಆತನಿಗೆ ದಣಿವೆಂಬುದೇ ಆಗುತ್ತಿಲ್ಲ ಅಂದರೆ ಆತ ಸಂಪೂರ್ಣವಾಗಿ ಆರೋಗ್ಯಕರ ವ್ಯಕ್ತಿಯಾಗಿದ್ದಾನೆ ಅಂತ ಅರ್ಥ, ಅದಕ್ಕೆ ಅವನ ಆಹಾರ ಪದ್ಧತಿ ಜೀವನಶೈಲಿ ಮುಖ್ಯ ಕಾರಣ ಆಗಿರತ್ತೆ.

ಹೀಗಿರುವಾಗ ಸ್ವಲ್ಪ ಕೆಲಸ ಮಾಡಿದರೂ ಮೈಕೈ ನೋವು ಬರುತ್ತ ಇದೆ, ಸೊಂಟ ನೋವು ಉಂಟಾಗುತ್ತಿದೆ ಅಂದಾಗ ನಾವು ಉತ್ತಮ ಆಹಾರ ಪದ್ಧತಿಯನ್ನು ಪಾಲಿಸಲೇಬೇಕು. ಎಷ್ಟು ಅಂತ ಮಾತ್ರೆ ತೆಗೆದುಕೊಳ್ಳಬಹುದು ಹೇಳಿ.ಹಾಗಾಗಿ ನಿಮ್ಮ ಈ ಸಮಸ್ಯೆಗೆ ನಾವು ಪರಿಹಾರ ಕೊಡುತ್ತೇವೆ ಮೊದಲಿಗೆ ಸೊಂಟ ನೋವು ಕೈಕಾಲು ನೋವು ವಿಪರೀತವಾಗಿ ಕಾಣಿಸಿಕೊಳ್ಳುತ್ತಿದೆ ಅಂದರೆ ಪ್ರತಿದಿನ ಹಾಲು ಕುಡಿಯುವ ಅಭ್ಯಾಸ ಮಾಡಿಕೊಳ್ಳಿ ಮತ್ತು ಒಣ ಹಣ್ಣುಗಳಲ್ಲಿ ಯಾವುದಾದರೂ ಹಣ್ಣನ್ನು ನೆನೆಸಿಟ್ಟು ತಿನ್ನುತ್ತಾ ಬನ್ನಿ, ಇದರಿಂದ ದೇಹಕ್ಕೆ ಬಲ ದೊರೆಯುತ್ತದೆ ಮತ್ತು ಕ್ಯಾಲ್ಸಿಯಂ ಕೊರತೆ ಕೂಡ ಪರಿಹಾರ ಆಗುತ್ತದೆ.

ಇದರ ಜೊತೆಗೆ ಆ ನೋವು ನಿವಾರಣೆ ಮಾಡಿಕೊಳ್ಳದೇ ಬೇಕಲ್ಲ ಅದಕ್ಕಾಗಿ ಮನೆಯಲ್ಲಿಯೇ ಚಿಟಿಕೆ ಹೊಡೆಯುವಷ್ಟರಲ್ಲಿ ನೋವು ನಿವಾರಣೆ ಮಾಡುವ ಎಣ್ಣೆಯನ್ನು ಮಾಡಿಕೊಳ್ಳಬಹುದು ಇದಕ್ಕೆ ಮಾಡಬೇಕಿರುವುದು ಸಾಸಿವೆ ಎಣ್ಣೆಯನ್ನು ತೆಗೆದುಕೊಳ್ಳಿ ಇದನ್ನು ಬಿಸಿ ಮಾಡಿ ಬಿಸಿಯಾದ ಮೇಲೆ ಇದಕ್ಕೆ ಬಿರಿಯಾನಿ ಎಲೆ ಅಥವಾ ಪಲಾವ್ ಎಲೆಯನ್ನು ಹಾಕಿ ಎಣ್ಣೆಯಲ್ಲಿ ಬಿಸಿ ಮಾಡಬೇಕು ಬಳಿಕ ಈ ಎಣ್ಣೆಯನ್ನು ಶೋಧಿಸಿಕೊಂಡು.

ಆ ಎಣ್ಣೆ ಬೆಚ್ಚಗಿರುವಾಗ ನೋವಿರುವ ಭಾಗಕ್ಕೆ ಹಚ್ಚಿ ಸುಮಾರು 5 ನಿಮಿಷಗಳಾದರೂ ಮಸಾಜ್ ಮಾಡಿಕೊಳ್ಳಿ, ಇದರಿಂದ ಆ ಭಾಗದಲ್ಲಿ ರಕ್ತ ಸಂಚಾರ ಕೂಡ ಸರಿಯಾಗಿ ನಡೆಯುತ್ತದೆ ಮತ್ತು ನಾವು ಕೂಡ ಬಹಳ ಬೇಗ ನಿವಾರಣೆ ಆಗುತ್ತೆ. ನೀವು ಅಂದುಕೊಂಡೆ ಇರುವುದಿಲ್ಲ ಇಷ್ಟು ಬೇಗ ನಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತೆ ಅಂತ ಆ ರೀತಿಯಾಗಿ ಈ ನೋವು ನಿವಾರಕ ಎಣ್ಣೆ ನಿಮಗೆ ಬಹಳ ಬೇಗ ನೋವಿನಿಂದ ಶಮನ ಕೊಡುತ್ತದೆ.

ಈ ರೀತಿಯಾಗಿ ನೋವು ಕಾಣಿಸಿಕೊಂಡಾಗ ತಕ್ಷಣವೇ ಈ ಎಣ್ಣೆಯನ್ನು ಮಾಡಿ ಮಸಾಜ್ ಮಾಡಿಕೊಳ್ಳಿ, ಜೊತೆಗೆ ಈ ನೀರನ್ನು ಬಿಸಿ ಮಾಡಲು ಇಟ್ಟು ಅದಕ್ಕೆ ಅರ್ಧ ಚಮಚ ಅಜ್ವೈನ ಅರ್ಧ ಚಮಚ ಸೋಂಪು ಹಾಕಿ ಇದಕ್ಕೆ ಚಿಕ್ಕ ತುಂಡು ಪಲಾವ್ ಎಲೆ ಅನ್ನು ಕೂಡ ಹಾಕಿ ನೀರನ್ನು ಬಿಸಿ ಮಾಡಿ ನಂತರ ಅದನ್ನು ಶೋಧಿಸಿ ಕುಡಿಯುತ್ತಾ ಬನ್ನಿ.

ಈ ಪರಿಹಾರ ಮಾಡಿಕೊಳ್ಳುವುದು ಯಾಕೆ ಅಂದರೆ ನಿಮಗೇನಾದರೂ ವಾಯು ಸಮಸ್ಯೆಗೆ ಕಾಲು ಹಿಡಿಯುತ್ತಿದೆ ಕಾಲು ನೋವು ಸೊಂಟ ನೋವು ಬರುತ್ತಾ ಇದೆ ಅಂದರೆ, ಈ ಮೇಲಿನ ಪರಿಹಾರವನ್ನೂ ಮಾಡುವುದರಿಂದ ಸಮಸ್ಯೆ ಬೇಗ ಪರಿಹಾರ ಆಗುತ್ತದೆ.

ಈ ರೀತಿಯಾಗಿ ಸೊಂಟ ನೋವು ಅಥವಾ ಕಾಲು ನೋವು ಕೈ ಕಾಲು ನೋವು ಮೈಕೈ ನೋವು ಕಾಣಿಸಿಕೊಂಡಾಗ ಈ ಸುಲಭ ಪರಿಹಾರವನ್ನು ಪಾಲಿಸಿ ಈ ಮೇಲೆ ತಿಳಿಸಿದ ಎರೆಡೂ ವಿಧಾನವನ್ನು ಕೂಡ ಪಾಲಿಸುತ್ತಾ ಬನ್ನಿ, ನಿಮ್ಮ ಮೈ ಕೈ ನೋವು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ.ಈ ವಿಧಾನವು ಯಾವುದೇ ಅಡ್ಡಪರಿಣಾಮಗಳಿಲ್ಲದೆ ಮೈಕೈ ನೋವು ಕಾಲು ನೋವು ನಿವಾರಿಸಲು ಸಹಕಾರಿಯಾಗಿರುತ್ತೆ ಹಾಗೂ ಹೆಚ್ಚು ಖರ್ಚು ಇಲ್ಲದೆ ನಿಮ್ಮ ಆರೋಗ್ಯ ವೃದ್ಧಿಯೂ ಆಗುತ್ತದೆ ಧನ್ಯವಾದ

Share This Article

ಓದುಗರ ಗಮನಕ್ಕೆ: ನಮ್ಮ ವೆಬ್ಸೈಟ್  ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.