ಇದನ್ನ ಹಚ್ಚಿದರೆ ಸಾಕು ಎಲ್ಲಿ ಕೂದಲು ಬೇಡ ಅಂದುಕೊಂಡಿದ್ದೀರೋ ಅಲ್ಲಿ ಉದರಿ ಹೋಗುತ್ತವೆ ಅಷ್ಟೊಂದು ಪರಿಣಾಮಕಾರಿ ಪರಿಹಾರ ಇದು..

Sanjay Kumar
2 Min Read

ಹೆಣ್ಣು ಮಕ್ಕಳು ಈ ಒಂದು ಪರಿಹಾರವನ್ನು ತಪ್ಪದೆ ತಿಳಿದುಕೊಳ್ಳಿ ನೀವು ಮುಖದ ಮೇಲಿರುವಂತಹ ಕೂದಲನ್ನು ತೆಗೆಸುವುದಕ್ಕಾಗಿ ಥ್ರೆಡ್ಡಿಂಗ್ ವ್ಯಾಕ್ಸಿಂಗ್ ಮತ್ತು ಶೇವಿಂಗ್ ಮೊರೆ ಹೋಗುತ್ತೀರಾ, ಆದರೆ ನೀವೇ ಮನೆಯಲ್ಲಿ ನಿಮ್ಮ ಈ ಒಂದು ತ್ವಚೆಗೆ ಸಂಬಂಧಪಟ್ಟ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದಾಗಿದೆ,

ಅದರಲ್ಲಿಯು ಹೆಚ್ಚು ಖರ್ಚು ಇಲ್ಲದೆ ಮತ್ತು ಆಚೆ ಹೋಗದೆ. ನಿಮಗೂ ಕೂಡ ಮುಖದ ಮೇಲೆ ಹೆಚ್ಚು ಕೂದಲಿದ್ದರೆ ಈ ಕೂದಲನ್ನು ಹೋಗಲಾಡಿಸುವುದಕ್ಕೆ ಎಲ್ಲಾ ತರಹದ ಪರಿಹಾರ ಮಾಡಿ ಮಾಡಿ ಸಾಕಾಯಿತು ಅನ್ನುವವರು, ಒಮ್ಮೆ ಇದನ್ನು ಮನೆಯಲ್ಲಿಯೇ ಮಾಡಿ ನೋಡಿ ಹೇಗೆ ನಿಮ್ಮ ಸಮಸ್ಯೆ ಪರಿಹಾರ ಆಗುತ್ತದೆ ಎಂದು.

ಹೌದು ಮುಖದ ಮೇಲೆ ಇರುವಂತಹ ಕೂದಲು ಹೆಚ್ಚಾಗಿದ್ದರೆ ಅಥವಾ ಈ ತುಟಿಯ ಮೇಲ್ಭಾಗದಲ್ಲಿ ಇರುವಂತಹ ಕೂದಲು ಹೆಚ್ಚು ಕಾಣುತ್ತಿದ್ದರೆ, ಅದೊಂತರ ಮುಜುಗರದ ಅನುಭವ ಆಗುತ್ತಾ ಇರುತ್ತದೆ, ಇನ್ನು ಕೆಲವರಂತೂ ಈ ತುಟಿಯ ಮೇಲ್ಭಾಗದ ಕೂದಲು ಶೇವ್ ಮಾಡಿ ತೆಗೆಯುತ್ತಾರೆ ಇನ್ನು ಕೆಲವರು ಟ್ರೆಂಡ್ ಮಾಡಿ ತೆಗೆಸುತ್ತಾರೆ ಇದರಿಂದ ಬಹಳಷ್ಟು ನೋವು ಅನುಭವಿಸಬೇಕಾಗುತ್ತದೆ ಜೊತೆಗೆ ಈ ಒಂದು ವಿಧಾನದಲ್ಲಿ ಕೂದಲನ್ನು ತೆಗೆಸುವುದರಿಂದ, ಕೂದಲು ಇನ್ನೂ ಬೇಗ ಬೇಗನೆ ಬೆಳೆಯುತ್ತಿರುತ್ತದೆ.

ಇವತ್ತಿನ ಈ ಮಾಹಿತಿಯಲ್ಲಿ ಹೇಗೆ ಮುಖದ ಮೇಲಿರುವ ಕೂದಲನ್ನು ಸುಲಭವಾಗಿ ತೆಗೆಯಬಹುದು ಕಡಿಮೆ ಸಮಯದಲ್ಲಿ ಎಂಬುದನ್ನು ತಿಳಿಯೋಣ ಇದಕ್ಕಾಗಿ ಬೇಕಾಗಿರುವುದು ನಿಮಗೆ ಮೊದಲನೆಯದಾಗಿ ಟೊಮೇಟೊ ಹಣ್ಣಿನ ರಸ ಹೌದು ಟೊಮೇಟೊ ಹಣ್ಣಿನ ರಸವನ್ನು ಅರ್ಧ ಹಾಲಿನಷ್ಟು ರಸವನ್ನು ತೆಗೆದುಕೊಂಡು, ಅದನ್ನು ಪೂರ್ತಿಯಾಗಿ ಹಿಂಡಿಕೊಳ್ಳಿ, ಇದರಲ್ಲಿ ಇರುವಂತಹ ಬೀಜವನ್ನು ಪೂರ್ತಿಯಾಗಿ ಹಣ್ಣಿನ ರಸದಿಂದ ಬೇರ್ಪಡಿಸಿ.

ಇದೀಗ ಈ ಟೊಮೆಟೊ ಹಣ್ಣಿನ ರಸಕ್ಕೆ ಎರಡು ಟೇಬಲ್ ಸ್ಪೂನ್ ಜೇನು ತುಪ್ಪವನ್ನು ಬೆರೆಸಿ ನೀವು ಆದಷ್ಟು ಶುದ್ಧವಾದ ಜೇನುತುಪ್ಪವನ್ನು ತೆಗೆದುಕೊಳ್ಳುವುದು ಉತ್ತಮ ಹಾಗೆ ಒಂದು ಚಮಚ ಜೆಲ್ಯಾಟಿನ್ ಪೌಡರನ್ನು ಈ ಒಂದು ಮಿಶ್ರಣಕ್ಕೆ ಬೆರೆಸಿಕೊಂಡು ಒಮ್ಮೆಲೇ ಚೆನ್ನಾಗಿ ಮಿಶ್ರಿತ ಮಾಡಬೇಕು.

ಈ ಜಿಲಾಟಿನ್ ಪೌಡರ್ ನಿಮಗೆ ಆನ್ ಲೈನ್ ನಲ್ಲಿ ದೊರೆಯುತ್ತದೆ ಮತ್ತು ಮಾರುಕಟ್ಟೆಯಲ್ಲಿ ಕೂಡ ದೊರೆಯುತ್ತದೆ ಇದನ್ನು ಅಡುಗೆಯಲ್ಲಿ ಬಳಸುತ್ತಾರೆ ಜೆಲ್ಲಿ ಆಹಾರ ಪದಾರ್ಥಗಳನ್ನು ಮಾಡುವುದಕ್ಕಾಗಿ ಇದನ್ನು ಬಳಸುತ್ತಾರೆ ನೀವು ಆನ್ಲೈನ್ನಲ್ಲಿ ಅಥವಾ ಮಾರುಕಟ್ಟೆಯಲ್ಲಿ ಈ ಜಿಲಾಟಿನ್ ಪೌಡರ್ ಅನ್ನು ಕೊಂಡು ಕೊಳ್ಳುವುದಾದರೆ, ಅನ್ ಫ್ಲೇವರ್ಡ್ ಜಿಲಾಟಿನ್ ಪೌಡರ್ ಅನ್ನು ಕೊಂಡುಕೊಂಡು ಬನ್ನಿ. ಇದು ತ್ವಚೆಗೆ ಹಾನಿಯನ್ನು ಉಂಟು ಮಾಡುವುದಿಲ್ಲ.

ಇದೀಗ ಈ ಮಿಶ್ರಣವನ್ನು ಒಮ್ಮೆಲೆ ನಿಮ್ಮ ಮನೆಯಲ್ಲಿ ಓವನ್ ಇದ್ದರೆ ಅದರೊಳಗೆ ಇಟ್ಟು ಬಿಸಿ ಮಾಡಿಕೊಳ್ಳಿ ಅಥವಾ ಒಂದು ಪಾತ್ರೆಯಲ್ಲಿ ನೀರನ್ನು ಇಟ್ಟು ನೀರು ಕುದಿಯುವಾಗ ಅದರ ಮೇಲೆ ಈ ಜೆಲಟಿನ್ ಮಿಶ್ರಣವನ್ನು ಇಟ್ಟು ಬಿಸಿ ಮಾಡಬೇಕು ಈ ರೀತಿ ಮಾಡುವುದರಿಂದ ಈ ಜಿಲಾಟಿನ್ ಪೌಡರ್ ಕರಗುತ್ತದೆ.

ಈ ಕರಗಿದಂತೆ ಮಿಶ್ರಣವನ್ನು ಮುಖದ ಭಾಗದಲ್ಲಿ ಎಲ್ಲಿ ಕೂದಲು ಇರುತ್ತದೆಯೋ ಅಲ್ಲಿ ಲೇಪಿಸಿಕೊಳ್ಳಬೇಕು ನಂತರ ಇದು ಪೂರ್ತಿಯಾಗಿ ಒಣಗಿದ ಮೇಲೆ ಕೈಗೆ ಅಂಟಬಾರದು ಆ ಸಮಯದಲ್ಲಿ ಇದನ್ನು ನಿಧಾನವಾಗಿ ತೆಗೆಯಬೇಕು, ಈ ರೀತಿ ಮಾಡುವುದರಿಂದ ಕೂದಲುಗಳು ಮುಖದಿಂದ ಹೊರ ಬರುತ್ತದೆ ಮತ್ತು ಈ ಮುಖದ ಮೇಲಿರುವ ಕೂದಲನ್ನು ಸುಲಭವಾಗಿ ಮನೆಯಲ್ಲಿಯೆ ಪರಿಹರಿಸಿಕೊಳ್ಳಬಹುದಾಗಿದೆ. ಹಾಗಾದರೆ ನಿಮಗೆ ಈ ಒಂದು ಮಾಹಿತಿ ಉಪಯುಕ್ತವಾಗಿದೆ ಎಂದರೆ ಮಾಹಿತಿಗೆ ಲೈಕ್ ಮಾಡಿ ಹಾಗೂ ಶೇರ್ ಮಾಡಿ ಧನ್ಯವಾದ.

Share This Article

ಓದುಗರ ಗಮನಕ್ಕೆ: ನಮ್ಮ ವೆಬ್ಸೈಟ್  ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.