ಇವರು ಮಾವಿನ ಮರವನ್ನು ನೆಟ್ಟು ಬೆಳಸಿ ಈ ಮರಕ್ಕೆ ಈಗ ಸೆಕ್ಯೂರಿಟಿ ಗಾರ್ಡ್ ಅನ್ನು ನೇಮಕ ಮಾಡಿದ್ದಾರೆ ಅಷ್ಟಕ್ಕೂ ಈ ಒಂದು ಮಾವಿನ ಹಣ್ಣಿನ ಬೆಲೆ ಕೇಳಿದ್ರೆ ನೀವು ತಲೆ ತಿರುಗಿ ಬೀಳ್ತೀರಾ … !!

126

ಫ್ರೆಂಡ್ಸ್ ಸಾಮಾನ್ಯವಾಗಿ ಬೇಸಿಗೆ ಸಮಯ ಬಂತು ಅಂದರೆ ನಮಗೆ ಮಾರುಕಟ್ಟೆಗೆ ಹೋದಾಗ ಹೆಚ್ಚಿನದಾಗಿ ನಮ್ಮ ಆಸಕ್ತಿ ಸೆಳೆಯುವುದೇ ಮಾವಿನ ಹಣ್ಣಿನ ಕಡೆಗೆ. ಮಾರುಕಟ್ಟೆಯಲ್ಲಿ ಹಲವು ವಿಧದ ಹಲವು ಜಾತಿಯ ಮಾವಿನ ಹಣ್ಣುಗಳು ಕಾಣಸಿಗುತ್ತದೆ ಹಾಗೂ ಇತರ ಘಮ ಮನುಷ್ಯರನ್ನು ಬಹಳ ಸೆಳೆಯುತ್ತದೆ ಹಾಗಾದರೆ ಇವತ್ತಿನ ಮಾಹಿತಿಯಲ್ಲಿ ನಿಮಗೆ ಅತ್ಯಂತ ದುಬಾರಿ ಬೆಲೆಯ ಮಾವಿನಹಣ್ಣಿನ ಬಗ್ಗೆ ತಿಳಿಸಿಕೊಡುತ್ತೇವೆ. ಇದನ್ಬು ಯಾರು ಬೆಳೆದಿದ್ದಾರೆ ಹಾಗೂ ಈ ಮಾವಿನ ಹಣ್ಣು ಹೇಗೆ ವೈರಲ್ ಆಯ್ತು ಎಂಬ ಮಾಹಿತಿಯನ್ನು ತಿಳಿಸಿ ಕೊಡುತ್ತವೆ ಈ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ.ಹೌದು ಯಾರಿಗೇ ಆಗಲಿ ಮಾವಿನ ಹಣ್ಣು ಅಂದ್ರೆ ಇಷ್ಟ ಆಗದೇ ಇರುವುದಿಲ್ಲ

ಅದೇ ರೀತಿ ಮಾವಿನ ಹಣ್ಣಿನ ಕಾಲದಲ್ಲಿ ಮಾವಿನಹಣ್ಣು ಬೆಳೆದವರಿಗೆ ಲಾಭ ಇದ್ದೇ ಇರುತ್ತದೆಆದರೆ ಇಲ್ಲೊಂದು ದಂಪತಿಗಳು ತಿಳಿಯದೆ ಬೆಳೆದ ಮಾವಿನ ಹಣ್ಣಿಗೆ ಲಕ್ಷ ಲಕ್ಷ ಹಣವನ್ನು ಪಡೆದುಕೊಂಡಿದ್ದಾರೆ ಹಾಗೂ ಕೇವಲ ನಾಲ್ಕೈದು ಹಣ್ಣಿಗೆ ಸೆಕ್ಯೂರಿಟಿ ಗಾರ್ಡ್ ಅನ್ನು ಕೂಡ ಕೂಡ ನೇಮಕ ಮಾಡಿದ್ದಾರೆ. ಮಧ್ಯಪ್ರದೇಶದ ಗ್ರಾಮವೊಂದಕ್ಕೆ ಸೇರಿದ ರಾಣಿ ಹಾಗೂ ಸಂಕಲ್ಪ್ ಎಂಬ ದಂಪತಿಗಳು ಈ ಮಾವಿನ ಹಣ್ಣನ್ನು ಬೆಳೆದಿದ್ದಾರೆ.ಮಾವಿನ ಹಣ್ಣನ್ನು ಬೆಳೆದು ಈ ಮಾವಿನ ಹಣ್ಣನ್ನು ಮಾರುಕಟ್ಟೆಗೆ ತೆಗೆದುಕೊಂಡು ಹೋಗಿ ಮಾರಾಟ ಮಾಡುವಾಗಲೆ ತಿಳಿದದ್ದು ಮಾವಿನ ಹಣ್ಣಿನ ಬೆಲೆ ಎರಡು ಲಕ್ಷ ರೂಪಾಯಿ ಎಂದು.

ಹೌದು ಈ ಮಾವಿನ ಹಣ್ಣು ನಮ್ಮ ದೇಶದ ತಳಿ ಅಲ್ಲ ಇದು ಜಪಾನಿಗೆ ಸೇರಿದ ತಳಿ ಆಗಿದ್ದು ರಾಣಿ ಹಾಗೂ ಸಂಕಲ್ಪ್ ಎಂಬ ದಂಪತಿಗಳು ರೈಲಿನಲ್ಲಿ ಪ್ರಯಾಣ ಮಾಡುವಾಗ ಯಾವುದೋ ವ್ಯಕ್ತಿಯೊಬ್ಬರು ಇವರಿಗೆ ಈ ಮಾವಿನ ಹಣ್ಣಿನ ಸಸಿಗಳನ್ನು ನೀಡಿ ಇದನ್ನು ಮಕ್ಕಳಂತೆ ಜೋಪಾನ ಮಾಡಿ ಈ ಸಸಿಗಳನ್ನು ಬೆಳೆಸಿ ಎಂದು ಹೇಳಿ ಈ ಸಸಿ ಅನ್ನೋ ಅವರ ಕೈಗೆ ಇಟ್ಟು ಹೋಗಿದ್ದರು.ರೈಲಿನಲ್ಲಿ ಸಿಕ್ಕ ಪ್ರಯಾಣಿಕ ಈ ಸಸಿ ಅನ್ನು ನೀಡಿ ಯಾಕೆ ಆ ಮಾತನ್ನು ಹೇಳಿದರು ಎಂದು ಆಗ ಆ ದಂಪತಿಗಳಿಗೆ ತಿಳಿಯಲಿಲ್ಲ ಆದರೆ ಸಸಿ ಬೆಳೆದು ಹಣ್ಣು ಬಿಟ್ಟ ನಂತರವೇ ತಿಳಿದೆದ್ದು ಆ ವ್ಯಕ್ತಿ ಹೇಳಿದ ಮಾತಿನ ಅರ್ಥ. ಈ ಮಾವಿನ ಹಣ್ಣನ್ನು ಸಾಮಾನ್ಯವಾಗಿ ಜಪಾನಿನಲ್ಲಿ ದುಬಾರಿ ಬೆಲೆಯ ಗಿಫ್ಟ್ ಆಗಿ ನೀಡುತ್ತಾರೆ ಹಾಗೂ ಐರ್ಲೆಂಡ್ ಮತ್ತು ದಕ್ಷಿಣ ಜಪಾನಿನಲ್ಲಿ ಈ ಮಾವಿನ ಹಣ್ಣನ್ನು ಬೆಳೆಯಲಾಗುತ್ತದೆ,

ತಿನ್ನಲು ಬಹಳ ರುಚಿ ಆಗಿ ಇರುವ ಈ ಹಣ್ಣನ್ನು ನೋಡಿದರೆ ತಿನ್ನಬೇಕೆನಿಸುತ್ತದೆ. ಇನ್ನೂ ಈ ಹಣ್ಣಿನ ಬೆಲೆ ಜಪಾನಿನಲ್ಲಿ ಸುಮಾರು ಎರಡು ಲಕ್ಷದ ಎಪ್ಪತ್ತು ಸಾವಿರ ರೂಪಾಯಿಗಳು.ಕೇವಲ ಒಂದು ಹಣ್ಣಿಗೆ ಇಪ್ಪತ್ತೊಂದು ಸಾವಿರ ರೂಪಾಯಿ ಹಾಗೂ ಈ ತಳಿ ಒಂದು ಬಾರಿಗೆ ಮೂರ ರಿಂದ ನಾಲ್ಕು ಹಣ್ಣುಗಳು ಮಾತ್ರ ಬಿಡುವುದಂತೆ ನಿಜಕ್ಕೂ ಅಚ್ಚರಿ ಎನಿಸಬಹುದು ಹಾಗೂ ಇದರ ರುಚಿಯೂ ಕೂಡ ಅಷ್ಟೇ ಸಿಹಿ ಆಗಿ ಇರುತ್ತದೆ ಎಂದು ಹೇಳಲಾಗಿದೆ. ಫ್ರೆಂಡ್ಸ್ ಸದ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಚಾರ ವೈರಲ್ ಆಗಿದ್ದು ಈ ಮಾವಿನ ಹಣ್ಣನ್ನು ತಿಂದವರೇ ಪುಣ್ಯವಂತರು ಎಂದು ಜನರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತ ಇದ್ದಾರೆ ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ನಮ್ಮ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ