ಈ ಎಲೆಯ ರಸವನ್ನ ಕಷಾಯ ಮಾಡಿ ಕುಡಿಯಿರಿ ಸಾಕು ಅಥ್ರೈಟಿಕ್ಸ್ ಸಮಸ್ಯೆ ,ಮಲಬದ್ಧತೆ, ಕೆಮ್ಮು,ಕಫ, ಶೀತ ,ತಲೆನೋವು ಏನು ಇರಲ್ಲ…

172

ನಮಸ್ಕಾರ ಸ್ನೇಹಿತರೆ ಶುಂಠಿ ಬಗ್ಗೆ ಕೇಳಿದ್ದೀರಾ ಅಲ್ವಾ! ಹೌದು ಅಡುಗೆ ಮಾಡುವಾಗ ಮಸಾಲಾ ಪದಾರ್ಥಗಳಿಗೆ ಬಳಸುವ ಈ ಶುಂಠಿ ಇದು ಆಹಾರದ ರುಚಿ ಹೆಚ್ಚಿಸುವುದಲ್ಲದೆ ಆಹಾರದ ಘಮ ಕೂಡ ಹೆಚ್ಚು ಮಾಡಿ ಆಹಾರದ ರುಚಿ ಸವಿಯುವಂತೆ ಮಾಡುತ್ತದೆ…

ಆದರೆ ಶುಂಠಿ ಬಗ್ಗೆ ಈ ದಿನದ ಮಾಹಿತಿಯಿದೆ ತಿಳಿದುಕೊಳ್ಳುವುದಕ್ಕಿಂತ ಈ ದಿನದ ಲೇಖನದಲ್ಲಿ ನಾವು ಶುಂಠಿ ಎಲೆಯ ಪ್ರಯೋಜನಗಳ ಬಗ್ಗೆ ನಿಮಗೆ ಮಾಹಿತಿ ತಿಳಿಸಿಕೊಡಲು ಬಂದಿದ್ದೇವೆ, ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ ಹಾಗೂ ನೀವು ಅಚ್ಚರಿ ಪಡ್ತೀರಿ ಶುಂಠಿ ಎಲೆಗಳಿಂದ ಇಷ್ಟೆಲ್ಲಾ ಅಗಾಧವಾದ ಆರೋಗ್ಯಕರ ಪ್ರಯೋಜನಗಳಿವೆಯೆ ಎಂದು. ಹೌದು ಶುಂಠಿ ಎಲೆಯನ್ನ ಹುಡುಕಿಕೊಂಡು ನೀವು ಎಲ್ಲಿಯೂ ಹೋಗಬೇಕಾಗಿಲ್ಲ ಮನೆಯಲ್ಲಿಯೇ ಮನೆಯ ಹಿತ್ತಲಿನಲ್ಲಿಯೇ ಈ ಶುಂಠಿ ಎಲೆಯನ್ನ ಸುಲಭವಾಗಿ ಬೆಳೆಸಿಕೊಳ್ಳಬಹುದು.

ಸ್ನೇಹಿತರೆ ಎಷ್ಟೊ ಅನಾರೋಗ್ಯ ಸಮಸ್ಯೆಗಳು ಇಂಗ್ಲಿಷ್ ಮೆಡಿಸಿನ್ ನಿಂದ ಪರಿಹಾರ ಮಾಡಿಕೊಳ್ಳುವುದಕ್ಕಿಂತ ಕೆಲವೊಂದು ಆಯುರ್ವೇದಿಕ್ ಔಷಧಿಗಳಿಂದ ಮನೆಮದ್ದುಗಳಿಂದಲೇ ಪರಿಹಾರ ಆಗಿರುತ್ತದೆ. ಹಾಗಾಗಿ ನಾವು ಕೇವಲ ಇಂಗ್ಲಿಷ್ ಮೆಡಿಸಿನ್ ಗಳನ್ನ ಮಾತ್ರ ನಂಬುವುದಕ್ಕಿಂತ ಕೆಲವೊಂದು ಚಿಕ್ಕಪುಟ್ಟ ಅನಾರೋಗ್ಯ ಸಮಸ್ಯೆಗಳಿಗೆ ಆಸ್ಪತ್ರೆಯ ಮೆಟ್ಟಿಲೇರುವುದರ ಬದಲು ಮನೆಯಲ್ಲಿಯೇ ಚಿಕ್ಕಪುಟ್ಟ ಔಷಧಿಗಳನ್ನು ಮಾಡಿಕೊಳ್ಳುವ ಮೂಲಕ ಪ್ರಕೃತಿದತ್ತವಾಗಿ ದೊರೆಯುವಂತಹ ಗಿಡ ಮರಗಳ ತೊಗಟೆ ಗಳ ಪ್ರಯೋಜನ ಪಡೆದುಕೊಳ್ಳುವ ಮೂಲಕವೇ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದು ಹಾಗೂ ಹಲವು ಸಮಸ್ಯೆಗಳಿಗೆ ಗುಡ್ ಬೈ ಹೇಳಬಹುದು.

ನಿಮಗೆ ನಂಬಿಕೆ ಇಲ್ಲವಾದರೆ ಶುಂಠಿಯ ಎಲೆಗಳನ್ನು ತೆಗೆದುಕೊಂಡು ಕೇವಲ ಆ ಶುಂಠಿಯ ಎಲೆಗಳಿಂದ ವಾರಕ್ಕೆ ಒಮ್ಮೆಯಾದರೂ ಸ್ಟೀಮ್ ತೆಗೆದುಕೊಳ್ಳುತ್ತಾ ಬನ್ನಿ ಇದರಿಂದ ನೋಡಿ ಉಸಿರಾಟಕ್ಕೆ ಸಂಬಂಧಿಸಿದ ಸಮಸ್ಯೆಗಳು ಹಾಗೂ ಶೀತ ಕೆಮ್ಮು ಆದಾಗ ಬಾಧಿಸುತ್ತಲೇ ಇದೆ ಅಂದರೆ ಎಷ್ಟು ಬೇಗ ಈ ಸಮಸ್ಯೆಗೆ ನಿಮಗೆ ಶಮನ ಸಿಗುತ್ತದೆ ಎಂದು ಅಚ್ಚರಿ ಪಡ್ತೀರಾ ಈ ಪರಿಹಾರವನ್ನು ನೀವು ಸಹ ಪಾಲಿಸಿದ್ದಲ್ಲಿ.

ಹೌದು ಇದೀಗ ಮಳೆಗಾಲ ಸ್ವಲ್ಪ ಮಳೆಯಲ್ಲಿ ನೆಂದರೂ ಬೇಗನೆ ಶೀತ ಆಗಿಬಿಡುತ್ತದೆ ಕೆಲವೊಂದು ಬಾರಿ ಮಳೆಯಲ್ಲಿ ನೆಂದರೆ ತಲೆಭಾರ ತಲೆ ಹಿಡಿಯುವುದು ಹೇಗೆ ಕೂಡ ಆಗುತ್ತೆ ಆ ಸಮಯದಲ್ಲಿ ಈ ಶುಂಠಿ ಎಲೆಯಿಂದ ಈ ಪರಿಹಾರವನ್ನು ಪಾಲಿಸಿ ಖಂಡಿತವಾಗಿಯೂ ಉತ್ತಮವಾದ ಫಲಿತಾಂಶವನ್ನು ನೀವು ಪಡೆದುಕೊಳ್ಳಬಹುದು.

ಈ ಎಲೆಯನ್ನು ಒಣಗಿಸಿ ಪುಡಿಮಾಡಿ ಶೇಖರಣೆ ಮಾಡಿ ಇಟ್ಟುಕೊಂಡು ವರುಷವೆಲ್ಲ ಬಳಕೆ ಮಾಡಬಹುದು ನೀವು ಟೀ ಮಾಡುವಾಗ ಚಿಟಕಿಯಷ್ಟು ಅಥವಾ ಸ್ವಲ್ಪ ಪ್ರಮಾಣದಲ್ಲಿ ಟಿ ಪುಡಿಯೊಂದಿಗೆ ಈ ಶುಂಠಿಯ ಎಲೆಯ ಪುಡಿಯನ್ನು ಮಿಶ್ರ ಮಾಡಿ ಟೀ ತಯಾರಿಸಿಕೊಂಡು ಕುಡಿಯಿರಿ ಇದರಿಂದ ಗಂಟಲು ನೋವು ಗಂಟಲು ಬ್ಯಾನಿ ಅಥವಾ ಗಂಟಲು ಊದಿಕೊಂಡಿರುವುದು ಇಂತಹ ಸಮಸ್ಯೆಗಳೆಲ್ಲ ಪರಿಹಾರವಾಗುತ್ತವೆ.

ಹೌದು ಶುಂಠಿ ಬಹಳಷ್ಟು ಔಷಧಿಗಳಲ್ಲಿ ಬಳಕೆಯಾಗುತ್ತದೆ ಇದು ಹಸಿಯಾಗಿದ್ದಾಗ ಅಡುಗೆಯಲ್ಲಿ ಹೆಚ್ಚಾಗಿ ಬಳಕೆ ಮಾಡ್ತಾರೆ ಹಾಗೆ ಈ ಶುಂಠಿಯನ್ನ ಒಣಗಿಸಿದಾಗ ಒಣಶುಂಠಿ ಆಗುತ್ತದೆ ಇದನ್ನು ಕೆಲವೊಂದು ಸಿಹಿ ತಯಾರಿಸುವಲ್ಲಿ ಮತ್ತು ಬಹಳಷ್ಟು ಮನೆಮದ್ದುಗಳಲ್ಲಿ ಕೂಡ ಈ ಒಣ ಶುಂಠಿಯನ್ನು ಬಳಕೆ ಮಾಡ್ತಾರೆ ಹೀಗಾಗಿ ಶುಂಠಿಯ ಹಲವು ಪ್ರಯೋಜನಗಳೊಂದಿಗೆ ಈ ಶುಂಠಿಯ ಎಲೆಗಳನ್ನು ಕೂಡ ನಾವು ಮನೆಮದ್ದು ಮಾಡುವುದಕ್ಕೆ ಬಳಸಬಹುದು. ಈ ಎಲೆಗಳನ್ನು ನೀರಿನಲ್ಲಿ ಕುದಿಸಿ ಇದಕ್ಕೆ ನಿಂಬೆರಸ ಜೇನುತುಪ್ಪವನ್ನು ಮಿಶ್ರಮಾಡಿ ಕುಡಿಯುವುದರಿಂದ ಕೂಡ ಗಂಟಲು ಕೆರತ ದಂತಹ ಸಮಸ್ಯೆ ಕೆಮ್ಮಿನ ಸಮಸ್ಯೆಗೆ ಶಮನ ದೊರೆಯುತ್ತದೆ ಹಾಗೂ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.

ಶುಂಠಿ ಎಲೆಯನ್ನು ಎಲ್ಲಿ ಹುಡುಕುವುದು ಅಂತ ಯೋಚಿಸಬೇಡಿ ಮನೆಗೆ ತಂದ ಶುಂಠಿಯನ್ನ ಮಣ್ಣಿನಲ್ಲಿ ಹಾಕಿ ಮುಚ್ಚಿ ಸ್ವಲ್ಪ ದಿನದ ಬಳಿಕ ಶುಂಠಿ ಗಿಡ ಬೆಳೆಯುತ್ತದೆ ಆ ಎಲೆಯನ್ನು ನೀವು ಮನೆ ಮದ್ದಿಗಾಗಿ ಕೆಲವೊಂದು ಔಷಧಿಗಳಿಗಾಗಿ ಬಳಕೆ ಮಾಡಬಹುದು…