ಈ ಒಂದು ವಸ್ತುವಿನಿಂದ ನೀವು ಪಾಯಸ ಮಾಡಿ ಸೇವಿಸಿದರೆ ದೇಹ ತಂಪಾಗುವುದರ ಜೊತೆಗೆ ಸುಸ್ತು , ನಿಶ್ಯಕ್ತಿ ದೂರ ಆಗುತ್ತದೆ…

170

ದೇಹವನ್ನು ತಂಪಾಗಿರಿಸಿಕೊಳ್ಳಲು ಮಖಾನ ಮತ್ತು ಸಬ್ಬಕ್ಕಿ ಕಾಂಬಿನೇಶನ್ ಎಂತಹ ಅದ್ಭುತವಾದ ಪ್ರಯೋಜನಗಳನ್ನು ಹೊಂದಿದೆ ಗೊತ್ತಾ? ಇದನ್ನು ಬಳಕೆ ಮಾಡುವ ವಿಧಾನವನ್ನು ಕೂಡ ತಿಳಿಸಿದ್ದೇವೆ ಈ ಕೆಳಗಿನ ಪುಟವನ್ನ ಸಂಪೂರ್ಣವಾಗಿ ಓದಿರಿ…ನಮಸ್ಕಾರಗಳು ಪ್ರಿಯಾ ಓದುಗರೆ ಸಾಮಾನ್ಯವಾಗಿ ಬೇಸಿಗೆಯಲ್ಲಿ ದೇಹದ ಉಷ್ಣಾಂಶ ಹೆಚ್ಚುತ್ತದೆ ಈ ಸಮಯದಲ್ಲಿ ಏನೆಲ್ಲಾ ಉಂಟಾಗಬಹುದು ಅಂತ ನಿಮಗೂ ಕೂಡ ಗೊತ್ತಿದೆ ಅಲ್ವಾ ಹೌದು ದೇಹದ ಉಷ್ಣಾಂಶ ಹೆಚ್ಚಾದಾಗ ಉರಿಮೂತ್ರ ಸಮಸ್ಯೆ ಕಾಣಿಸಿಕೊಳ್ಳುವುದು ಹೊಟ್ಟೆ ಉರಿ ಅಥವಾ ಕೆಲವರಿಗೆ ಚರ್ಮ ಮೇಲ್ಭಾಗದಲ್ಲಿ ಚರ್ಮ ಗೆದ್ದು ಬಂದ ಹಾಗೆ ಹಾಕುವುದು ಅಷ್ಟೆಲ್ಲಾ ಇನ್ನೂ ಕೆಲವರಿಗೆ ಕಣ್ಣುರಿ ಹೊಟ್ಟೆ ಉರಿ ಕೈಕಾಲೂರಿ ಇಂತಹ ಎಲ್ಲ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ.

ಹೌದು ಕೆಲವರು ದೇಹದ ಉಷ್ಣಾಂಶ ಬಹಳ ಬೇಗ ಹೆಚ್ಚುತ್ತದೆ ಹಾಗೂ ಅದನ್ನು ಎಷ್ಟೇ ಪ್ರಯತ್ನ ಪಟ್ಟರೂ ಕಂಟ್ರೋಲ್ ಗೆ ತರಲು ಸಾಧ್ಯವಾಗುತ್ತಾ ಇರುವುದಿಲ್ಲ. ಅದಕ್ಕಾಗಿ ನಾವು ಸದಾ ದೇಹ ತಂಪಾಗಿರುವಂತೆ ಆಹಾರ ಪದಾರ್ಥಗಳನ್ನು ತಿನ್ನಬೇಕು. ಹೌದು ಉದಾಹರಣೆಗೆ ಎಳನೀರು ಯಾರ ದೇಹದ ಉಷ್ಣಾಂಶ ಸದಾ ಹೆಚ್ಚು ಇರುತ್ತದೆ, ಅಂಥವರು ಪ್ರತಿದಿನ ಎಳನೀರು ಕುಡಿಯಬಹುದು ಅಥವಾ ಸಬ್ಬಕ್ಕಿ ನೆನೆಸಿಟ್ಟು ಅದರಿಂದ ಖಾದ್ಯ ತಯಾರಿಸಿ ತಿನ್ನಬಹುದು ಖಂಡಿತವಾಗಿಯೂ ದೇಹದ ಉಷ್ಣಾಂಶ ಬಹಳ ಬೇಗ ಕಂಟ್ರೋಲಿಗೆ ಬರುತ್ತದೆ.

ಹಾಗಾದರೆ ಈ ಸಬ್ಬಕ್ಕಿ ಜತೆಗೆ ಮಕನ ಬೀಜಗಳನ್ನು ಹಾಕಿ ರುಚಿಕರವಾದ ಖಾದ್ಯವನ್ನು ಹೇಗೆ ತಯಾರಿಸುವುದು ಅಂತ ಈ ಪುಟದಲ್ಲಿ ತಿಳಿಸಿಕೊಡುತ್ತೇವೆ ನೀವು ಕೂಡ ಮನೆಯಲ್ಲಿ ಈ ಸಬ್ಬಕ್ಕಿ ಪಾಯಸ ಮಾಡಿ ತಿನ್ನಿ ಇದರಿಂದ ಏನೆಲ್ಲಾ ಸಮಸ್ಯೆಗಳು ನಿವಾರಣೆ ಆಗುವುದು ಎಂಬುದನ್ನ ಕೊನೆಯಲ್ಲಿ ತಿಳಿಯೋಣ.ಮೊದಲಿಗೆ ಸಬ್ಬಕ್ಕಿಯನ್ನು ನಿಮಗೆ ಎಷ್ಟು ಬೇಕೋ ಅಷ್ಟು ಪ್ರಮಾಣದಲ್ಲಿ ನೆನಸಿಡಿ, ಹಾಗೆ ಇದೇ ವೇಳೆ ಸ್ವಲ್ಪ ತುಪ್ಪವನ್ನು ಪಾತ್ರೆಗೆ ಹಾಕಿ ಇದಕ್ಕೆ ಮಕಾನ ಬೀಜಗಳನ್ನು ಹಾಕಿ ಸ್ವಲ್ಪ ಸಮಯ ಹುರಿದುಕೊಳ್ಳಿ. ನಂತರ ಆ ಮಖಾನ ಬೀಜಗಳನ್ನು ಕೂಡ ನೀರಿನಲ್ಲಿ ನೆನೆಸಿಡಬೇಕು.

ಈಗ ಪಾತ್ರೆಯೊಂದಕ್ಕೆ ಸ್ವಲ್ಪ ನೀರನ್ನು ತೆಗೆದುಕೊಂಡು ಆ ನೀರು ಕುದಿಯಲು ಬಂದಾಗ ನೆನೆಸಿಟ್ಟ ಸಬ್ಬಕ್ಕಿಯನ್ನು ತೆಗೆದು ಈ ನೀರಿಗೆ ಹಾಕಿ ಕುದಿಸಬೇಕು, ಇದೇ ವೇಳೆ ನೆನೆಸಿಟ್ಟುಕೊಂಡಂತಹ ಮಕನ ಬೀಜಗಳನ್ನು ಸಬ್ಬಕ್ಕಿಯೊಂದಿಗೆ ಹಾಕಿ ನೀರಿನಲ್ಲಿ 2 ಪದಾರ್ಥಗಳು ಬೆಂದ ಮೇಲೆ ಇದಕ್ಕೆ ಹಸುವಿನ ಹಾಲನ್ನು ಹಾಕಿ ಒಮ್ಮೆ ಕುದಿಸಿಕೊಳ್ಳಬೇಕು, ಈ ನೀರು ಕುದಿಯುವ ವೇಳೆ ಸಕ್ಕರೆಯನ್ನು ಹಾಕಿ ಸಕ್ಕರೆ ಕರಗುವವರೆಗೂ ಹಾಲನ್ನು ಕುದಿಸಬೇಕು.

ಇದಕ್ಕೆ ತುಪ್ಪದಲ್ಲಿ ಹುರಿದ ದ್ರಾಕ್ಷಿ ಗೋಡಂಬಿಯನ್ನು ತುಪ್ಪದ ಸಮೇತ ಈ ಹಾಲಿನ ಮಿಶ್ರಣಕ್ಕೆ ಹಾಕಿ ಆಮೇಲೆ ಮತ್ತೆ ಸ್ಪರ್ಧಿಸಬೇಕು ಇದೀಗ ತಯಾರಾಗಿದೆ ಸಬ್ಬಕ್ಕಿ ಮತ್ತು ಮಖಾನ ಬೀಜದ ಮಿಶ್ರಣದ ರುಚಿಕರವಾದ ಪಾಯಸ ಇದನ್ನು ಯಾರು ಬೇಕಾದರೂ ಸೇವಿಸಬಹುದು ಇದರಿಂದ ದೇಹದ ಉಷ್ಣಾಂಶ ನಿಯಂತ್ರಣಕ್ಕೆ ಬರುತ್ತದೆ ಮೂತ್ರನಾಳದಲ್ಲಿ ಉರಿ ಅಥವಾ ಇನ್ಫೆಕ್ಷನ್ ಆಗಿದ್ದಲ್ಲಿ ಅಥವಾ ಎದೆ ಉರಿ ಹೊಟ್ಟೆ ಉರಿ ಗಂಟಲು ಭಾಗದಲ್ಲಿ ಉರಿ ಅಂದರೂ ಕೂಡ ಈ ಪಾಯಸವನ್ನು ಹೊಡೆಯಿರಿ ಕ್ಷಣಮಾತ್ರದಲ್ಲಿ ಸಮಸ್ಯೆಯಿಂದ ಪರಿಹಾರ ದೊರೆಯುವುದು.

ಈ ಪರಿಹಾರದಿಂದ ಮಲಬದ್ಧತೆ ಮೂಲವ್ಯಾಧಿ ಅಂತಹ ಸಮಸ್ಯೆಗಳು ಬರುವುದಿಲ್ಲ ಹಾಗೆ ಮಖಾನ ಬೀಜ ತೂಕ ಇಳಿಕೆಗೂ ಕಾರಣವಾಗಿರುವುದರಿಂದ ಇದನ್ನು ತಿನ್ನುವುದರಿಂದ ನಿಮಗೆ ತೂಕ ಹೆಚ್ಚುವುದಿಲ್ಲ, ಅದರ ಬದಲಾಗಿ ತೂಕ ಇಳಿಕೆಗೂ ಕೂಡ ಇದು ಸಹಕಾರಿ. ಯಾಕೆಂದರೆ ಮಕಾನ ಬಹಳ ಬೇಗ ಹಸಿವನ್ನುಂಟು ಮಾಡುವುದಿಲ್ಲ. ಹಾಗಾಗಿ ಈ ಪಾಯಸ ಕುಡಿದಾಗ ನೀವು ದಿನದಲ್ಲಿ ಕಡಿಮೆ ಪ್ರಮಾಣದಲ್ಲಿ ಊಟ ಮಾಡ್ತೀರಾ ಇದರಿಂದ ನಿಮ್ಮ ದೇಹದಲ್ಲಿರುವ ಕೊಬ್ಬು ಕರಗಲು ಸಹಕಾರಿ ಆಗಿದೆ.