ಈ ಕಾಳನ್ನ ಸೇವನೆ ಮಾಡುವುದರಿಂದ ಕುದುರೆಗಿಂತ ಹೆಚ್ಚು ಸವಾರಿ ಮಾಡುವಂಥ ಶಕ್ತಿ ನಿಮ್ಮ ದೇಹದಲ್ಲಿ ಉಕ್ಕಿ ಬರುತ್ತೆ …!

219

ಇವತ್ತಿನ ಮಾಹಿತಿಯಲ್ಲಿ ಹುರುಳಿ ಬಗ್ಗೆ ತಿಳಿಯೋಣ ಹೌದು ಹುರುಳಿಕಾಳಿನ ನಲ್ಲಿ ಹೆಚ್ಚಿನ ಪೋಷಕಾಂಶಗಳಿರುವ ಹೆಚ್ಚಿನ ಖನಿಜಾಂಶಗಳು ಪ್ರೋಟಿನ್ಸ್ ಗಳು ಕೂಡ ಇವೆ ಆದಕಾರಣವೇ ಹಿಂದಿನ ಕಾಲದಲ್ಲಿ ಈ ಹುರುಳಿ ಕಾಳುಗಳನ್ನು ಕೇವಲ ಮನುಷ್ಯರಿಗೆ ಮಾತ್ರ ಅಲ್ಲಾ ಕೆಲ ಪ್ರಾಣಿಗಳಿಗೂ ಕೂಡಾ ಮುಖ್ಯವಾದ ಆಹಾರವಾಗಿ ನೀಡುತ್ತಾ ಇದ್ದರು.

ಹೌದು ಕುದುರೆಗಳಿಗೆ ಮುಖ್ಯವಾದ ಆಹಾರವಾಗಿ ಹುರುಳಿ ಅನ್ನೂ ನೀಡುತ್ತಾ ಇದ್ದರು. ಇದರಿಂದ ಹೆಚ್ಚಿನ ಪೋಷಕಾಂಶಗಳು ದೊರೆತು ಸದೃಢವಾದ ಆರೋಗ್ಯವನ್ನು ಸದೃಢವಾದ ದೇಹವನ್ನು ಪಡೆದುಕೊಳ್ಳಬಹುದು. ಹಾಗಾದರೆ ಹುರುಳಿಯ ಪ್ರಕೃತಿಯನ್ನು ತಿಳಿಯೋಣ, ಇದರ ಜೊತೆಗೆ ಈ ಹುರುಳಿ ಕಾಳುಗಳನ್ನು ಬಳಸುವುದರಿಂದ ಆಗುವ ಆರೋಗ್ಯಕರ ಲಾಭಗಳನ್ನು ಕೂಡ ತಿಳಿದುಕೊಳ್ಳೋಣ.

ಹುರುಳಿ ಕಾಳುಗಳ ಬಗ್ಗೆ ಹೇಳಬೇಕೆಂದರೆ ಈ ಹುರುಳಿಕಾಳುಗಳನ್ನು ಪಿತ್ತ ಪ್ರಕೃತಿ ಯನ್ನು ಹೊಂದಿರುತ್ತದೆ ಅಂದರೆ ಉಷ್ಣತೆಯನ್ನು ಹೆಚ್ಚು ಮಾಡಬಲ್ಲ ಈ ಹುರುಳಿಕಾಳುಗಳನ್ನು ಯಾರು ಹೆಚ್ಚಾಗಿ ಸೇವಿಸಬಹುದು ಅಂದರೆ ಯಾರ ದೇಹ ಶೀತ ಪ್ರಕೃತಿ ಹೊಂದಿರುತ್ತದೆ ಅಂತಹವರು ಹುರುಳಿಕಾಳುಗಳನ್ನು ಸೇವಿಸಬಹುದು ಶೀತ ನೆಗಡಿ ಕೆಮ್ಮು ಆಗಾಗ ಉಂಟಾಗುತ್ತಲೇ ಇದೆ ಅನ್ನುವವರೂ ವಾರಕ್ಕೆ ಒಮ್ಮೆಯಾದರೂ ಈ ಹುರುಳಿಕಾಳು ಗಳ ಪ್ರಯೋಜನವನ್ನು ಪಡೆದುಕೊಳ್ಳುವುದರಿಂದ ಉತ್ತಮ .

ಆರೋಗ್ಯವನ್ನು ನಮ್ಮದಾಗಿಸಿಕೊಳ್ಳಬಹುದು. ಹೀಗೆ ಉಸಿರಾಟಕ್ಕೆ ಸಂಬಂಧಿಸಿದಂತೆ ಅಥವಾ ಶ್ವಾಸಕೋಶಕ್ಕೆ ಸಂಬಂಧಪಟ್ಟಂತೆ ಸಮಸ್ಯೆಗಳಿಂದ ಬಳಲುತ್ತಾ ಇರುವವರು ಕೂಡ ಹುರುಳಿಯ ಪ್ರಯೋಜನವನ್ನು ಪಡೆದುಕೊಳ್ಳುವುದರಿಂದ ಕಸದ ಬಾಧೆ ಮತ್ತು ಉಸಿರಾಟಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಶೀತ ಇವನ್ನೆಲ್ಲಾ ಪರಿಹಾರ ಮಾಡಿಕೊಳ್ಳಬಹುದು.

ಯಾರಿಗೆ ಲಿವರ್ ಗೆ ಸಂಬಂಧಪಟ್ಟ ಸಮಸ್ಯೆಗಳು ಅಂದರೆ ಯಕೃತ್ತಿಗೆ ಸಂಬಂಧಿಸಿದ ಸಮಸ್ಯೆಗಳು ಉಂಟಾಗಿರುತ್ತದೆ ಅಂತಹವರು ಉರುಳಿ ಪ್ರಯೋಜನವನ್ನು ಪಡೆದುಕೊಳ್ಳಬಹುದು ಉದಾಹರಣೆಗೆ ಜಾಂಡಿಸ್ ನಿಂದ ಬಳಲುವವರು ಈ ಹುರುಳಿಕಟ್ಟನ್ನು ಸೇವಿಸಬಹುದು, ಈ ಹುರುಳಿಕಟ್ಟಿಗೆ ಬೆಲ್ಲದ ಮಿಶ್ರಣವನ್ನು ಮಾಡಿ ಸೇವನೆ ಮಾಡುವುದರಿಂದ ಜಾಂಡೀಸ್ ಸಮಸ್ಯೆ ಅನ್ನೂ ಕೂಡ ಪರಿಹಾರ ಮಾಡಿಕೊಳ್ಳಬಹುದು. ವಾರಕ್ಕೊಮ್ಮೆ ಹುರುಳಿಕಟ್ಟಿನ ಸೇವನೆ ಅಥವಾ ಹುರುಳಿಯಿಂದ ಮಾಡಿದ ಖಾದ್ಯಗಳನ್ನು ಸೇವನೆ ಮಾಡುವುದರಿಂದ ಯಕೃತ್ತಿನ ಶುದ್ಧಿಯಾಗುತ್ತದೆ ಯಕೃತ್ತಿನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ಇನ್ನೂ ಹೆಣ್ಣುಮಕ್ಕಳು ಮುಟ್ಟಿನ ಸಮಯದಲ್ಲಿ ಹುರುಳಿಕಾಳುಗಳನ್ನು ಈ ರೀತಿ ಸೇವನೆ ಮಾಡಬಹುದು ಹುರುಳಿ ಕಾಳುಗಳನ್ನು ರಾತ್ರಿ ನೆನೆಸಿಟ್ಟು ಮಾರನೇ ದಿವಸ ಆ ಕಾಳುಗಳನ್ನು ಬೇಯಿಸಿ ಸೇವನೆ ಮಾಡುವುದರಿಂದ ಹೊಟ್ಟೆ ನೋವಿನ ಸಮಸ್ಯೆ ನಿವಾರಣೆಯಾಗುತ್ತದೆ ಮತ್ತು ಈ ಹುರುಳಿಯ ಪ್ರಕೃತಿ ಹೇಗೆ ಅಂದರೆ ದೇಹದಲ್ಲಿರುವ ಅಧಿಕ ನೀರಿನ ಅಂಶವನ್ನು ಹೊರಹಾಕಲು ಸಹಕರಿಸುತ್ತದೆ ಮತ್ತು ದೇಹದಲ್ಲಿ ನೀರಿನಂಶವನ್ನು ಹಿಡಿದಿಡುವುದರಲ್ಲಿ ಕೂಡ ಸಹಕಾರಿಯಾಗಿರುತ್ತದೆ ಆದಕಾರಣ ವಾಂತಿ ಭೇದಿ ಸಮಸ್ಯೆ ಉಂಟಾದಾಗ ಹುರುಳಿ ಕಾಳಿನ ಕಟ್ಟನ್ನು ಸೇವಿಸುವುದು ಉತ್ತಮ.

ಹುರುಳಿಕಾಳಿನ ಐರನ್ ಮತ್ತು ಪೋಲಿಕ್ ಆಮ್ಲ ಇದೆ ಇದು ರಕ್ತಹೀನತೆಯನ್ನು ದೂರ ಮಾಡುತ್ತದೆ ಹಾಗೆ ಕ್ಯಾಲ್ಸಿಯಂ ಅಂಶ ಮತ್ತು ಬೇರೆ ಖನಿಜಾಂಶಗಳು ಇರುವ ಕಾರಣ ಈ ಹುರುಳಿ ಕಾಳುಗಳನ್ನು ಗಂಡಸರು ಸೇವನೆ ಮಾಡುವುದರಿಂದ ವೀರ್ಯಾಣು ವೃದ್ಧಿಯಾಗುತ್ತದೆ. ಇದರ ಮುಖ್ಯವಾದ ಮತ್ತೊಂದು ಪ್ರಯೋಜನವೇನು ಅಂದರೆ ಕಿಡ್ನಿ ಕಸಿಗೆ ಸಂಬಂಧಿಸಿದಂತೆ ಕಿಡ್ನಿಯಲ್ಲಿ ಕಲ್ಲು ಆಗುವ ಸಮಸ್ಯೆ ಇದ್ದರೆ ಅದನ್ನು ಪರಿಹರಿಸುವಲ್ಲಿ ಹೆಚ್ಚು ಪ್ರಾಮುಖ್ಯತೆಯನ್ನು ಹೊಂದಿದೆ ಹುರುಳಿ. ಹೌದು ಕಿಡ್ನಿಯಲ್ಲಿ ಉಂಟಾಗಿರುವ ಕಲ್ಲನ್ನು ಕರಗಿಸುವಲ್ಲಿ ಹೆಚ್ಚು ಪ್ರಯೋಜನಕಾರಿಯಾಗಿದೆ ಈ ಹುರಳಿ.

ಈ ರೀತಿ ಉತ್ತಮ ಆರೋಗ್ಯಕರ ಪ್ರಯೋಜನಗಳನ್ನು ಹೊಂದಿರುವ ಹುರುಳಿಯ ಪ್ರಕೃತಿ ಉಷ್ಣಾಂಶದಲ್ಲೂ ಆದರೆ ಬೇಸಿಗೆ ಸಮಯದಲ್ಲಿ ಅಥವಾ ಈ ಬೇಸಿಗೆ ಸಮಯದಲ್ಲಿ ಅಧಿಕ ರಕ್ತಸ್ರಾವ ಆಗುವಾಗ ಹುರುಳಿಯ ಪ್ರಯೋಜನವನ್ನು ಆದಷ್ಟು ಕಡಿಮೆ ಮಾಡಬೇಕು ಯಾಕೆಂದರೆ ಇದು ದೇಹದ ಉಷ್ಣಾಂಶವನ್ನು ಹೆಚ್ಚು ಮಾಡುವ ಕಾರಣ ಕೆಲವೊಂದು ಸಮಸ್ಯೆಗಳು ಉಂಟಾಗಬಹುದು ಆದ ಕಾರಣ ಬೇಸಿಗೆಯಲ್ಲಿ ಈ ಹುರುಳಿಯ ಪ್ರಯೋಜನವನ್ನು ಆದಷ್ಟು ಕಡಿಮೆ ಮಾಡಬೇಕು ಇನ್ನು ಯಾರ ದೇಹಪ್ರಕೃತಿ ಪಿತ್ತಪ್ರಕೃತಿ ಆಗಿರುತ್ತದೆ ಅಂತಹವರು ಹುರುಳಿ ಪ್ರಯೋಜನವನ್ನು ಕಡಿಮೆ ಮಾಡಿದರೆ ಆರೋಗ್ಯಕ್ಕೆ ಒಳ್ಳೆಯದು.