Sanjay Kumar
By Sanjay Kumar ಎಲ್ಲ ನ್ಯೂಸ್ ಕಥೆ 22 Views 2 Min Read
2 Min Read

ಭಾರತ ದೇಶ ಅಂದರೆ ನಮಗೆ ನೆನಪಿಗೆ ಬರುವುದು ಇಲ್ಲಿರುವ ಸುಂದರವಾದ ತೋಟ ಗದ್ದೆ ಹೊಲಗಳು ಮತ್ತು ನಮ್ಮ ರೈತರುಗಳು ಕಷ್ಟಪಟ್ಟು ಬೆಳೆಯುವಂತಹ ಬೆಳೆಗಳು ಅಲ್ವಾ ಭಾರತ ದೇಶದಲ್ಲಿ ಬೆಳೆಯುವ ಬೆಳೆಗಳಿಗೆ ತುಂಬಾನೇ ಬೆಲೆ ಕೂಡ ಇರುತ್ತದೆ , ರೈತರುಗಳು ಬೆಳೆ ಬೆಳೆದು ತಮ್ಮ ಮನೆಯನ್ನು ಸಾಗಿಸಬೇಕಾಗುತ್ತದೆ ಮಳೆಗಾಲದಲ್ಲಿ ರೈತರಿಗೆ ಕೆಲಸ ಹೆಚ್ಚಾಗಿರುತ್ತದೆ ಆದರೆ ಬೇರೆ ಕಾಲಗಳಲ್ಲಿ ಅಷ್ಟು ಕೆಲಸ ಇರುವುದಿಲ್ಲ .ಈ ಸಮಯದಲ್ಲಿ ರೈತರು ಸಾಕುಪ್ರಾಣಿಗಳನ್ನು ಸಾಕುತ್ತಾ ತಮ್ಮ ಜೀವನವನ್ನು ನಡೆಸುತ್ತಾರೆ ಇನ್ನು ಬೇರೆ ರೀತಿಯ ಬೆಳೆಗಳನ್ನು ಬೆಳೆಯುತ್ತ ಕೂಡ ಜೀವನವನ್ನು ನಡೆಸಬೇಕಾಗುತ್ತದೆ, ಈ ವೇಳೆಯಲ್ಲಿ ಸಾಕು ಪ್ರಾಣಿಗಳನ್ನು ಸಾಗಾಣಿಕೆ ಮಾಡುವುದು ಇತ್ತೀಚಿನ ದಿನಗಳಲ್ಲಿ ತುಂಬಾನೇ ಹೆಚ್ಚಾಗಿದೆ.

ಮತ್ತು ರೈತರುಗಳು ಕೂಡ ಸಾಕು ಪ್ರಾಣಿಗಳನ್ನು ಸಾಕುತ್ತಾ ತಮ್ಮ ಆರ್ಥಿಕ ಪರಿಸ್ಥಿತಿಯನ್ನು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗುದ್ದಾರೆ . ಈ ಒಂದು ಸಾಕುಪ್ರಾಣಿ ಸಾಗಾಣಿಕೆ ಹೆಚ್ಚಾಗಿ ಬಳಕೆಯಲ್ಲಿರುವುದು ನಮ್ಮ ಭಾರತ ದೇಶದಲ್ಲಿಯೇ ಅನ್ನಬಹುದು ಈ ರೀತಿ ಸಾಕು ಪ್ರಾಣಿಗಳನ್ನು ಸಾಗಾಣಿಕೆ ಮಾಡುವುದರಿಂದ ರೈತರುಗಳು ಹೆಚ್ಚಿನ ಲಾಭವನ್ನು ಪಡೆದುಕೊಳ್ಳುತ್ತಾ ಇದ್ದಾರೆ ಮತ್ತು ಸಾಕು ಪ್ರಾಣಿಗಳು ಅಂದರೆ ಕುರಿ ದನ ಹಸು ಆಕಳು ಕೋಳಿಗಳು ಮತ್ತು ಇತ್ತೀಚಿನ ದಿನಗಳಲ್ಲಿ ಜನರು ಹಂದಿಗಳನ್ನು ಕೂಡ ಸಾಕುತ್ತಾರೆ ಇದರಲ್ಲಿಯೂ ಕೂಡ ಹೆಚ್ಚಿನ ಲಾಭವನ್ನು ರೈತರುಗಳು ಪಡೆದುಕೊಳ್ಳುತ್ತಾ ಇದ್ದಾರೆ .

ರೈತರು ಹಸುಗಳನ್ನು ಸಾಕಿ ಅದರ ಹಾಲನ್ನು ಮಾರಿ ತಮ್ಮ ಜೀವನವನ್ನು ನಡೆಸುತ್ತಿದ್ದಾರೆ ಈ ಒಂದು ಹಾಲು ಉತ್ಪನ್ನದಲ್ಲಿ ಕೂಡ ಇತ್ತೀಚಿನ ದಿನಗಳಲ್ಲಿ ರೈತರು ಹೆಚ್ಚಿನ ಲಾಭವನ್ನು ಪಡೆದುಕೊಳ್ಳುತ್ತಾ ಇದ್ದಾರೆ .ಹಸುಗಳು ಅಂದ ಕೂಡಲೇ ಒಂದು ವಿಷಯ ನೆನಪಿಗೆ ಬಂತು ಸ್ನೇಹಿತರೇ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನ ನಂದಿಪುರದಲ್ಲಿ ಒಂದು ಘಟನೆ ಸ್ವಲ್ಪ ದಿನಗಳ ಹಿಂದೆ ನಡೆದಿದೆ ಅದೇನೆಂದರೆ ಒಂದು ದೇಸಿ ಹಸು ಒಂದೇ ಸಲಕ್ಕೆ ಮೂರು ಕರುಗಳಿಗೆ ಜನ್ಮ ನೀಡಿದೆ ಹೌದು ಸ್ನೇಹಿತರ ಈ ಒಂದು ಘಟನೆ ಒಂದು ರೈತನ ಮನೆಯಲ್ಲಿ ಜರುಗಿದ ದೇಸಿ ಹಸು ಮೂರು ಕರುಗಳಿಗೆ ಜನ್ಮ ನೀಡಿದ್ದು ಆ ಮೂರು ಕಾರುಗಳಿಗೆ ರಾಮ ಲಕ್ಷ್ಮಣ ಮತ್ತು ಸೀತೆ ಎಂದು ಹೆಸರಿಡಲಾಗಿದೆ .

ಮೂರು ಕರುಗಳನ್ನು ಮತ್ತು ಹಸುವನ್ನು ನೋಡಲು ಜನರು ಜಾತ್ರೆ ರೀತಿಯಲ್ಲಿ ಬಂದು ನೋಡಿಕೊಂಡು ಹೋಗುತ್ತಾ ಇದ್ದರೆ ಇದರಿಂದ ರೈತ ಕುಟುಂಬದವರು ಕೂಡ ಖುಷಿಯಾಗಿದ್ದಾರೆ ಇದೊಂದು ಅಚ್ಚರಿಯೇ ಹೌದು ದೇಸಿ ಹಸು ಮೂರು ಕರುವಿಗೆ ಜನ್ಮ ನೀಡಿದೆ ಅಂದರೆ ಇದೊಂದು ಅಚ್ಚರಿ ಪಡುವಂತಹ ಸಂಗತಿಯೇ ಹೌದು ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಾ ಇದೆ .ಹಸು ಆ ಮೂರು ಕರುಗಳಿಗೆ ಮುದ್ದ ಡುವಂತಹ ದೃಶ್ಯವನ್ನು ನೋಡಲು ನಿಜಕ್ಕೂ ಕರುಳು ಕಿವುಚುತ್ತದೆ ತಾಯಿ ಏನೇ ಆದರೂ ತಾಯಿ ಅದು ಪ್ರಾಣಿಗಳೇ ಆಗಲಿ ಮನುಷ್ಯನೇ ಆಗಲಿ ಮನುಷ್ಯನಲ್ಲಿ ಮಾತ್ರ ತಾಯಿ ಪ್ರೀತಿ ಇರುವುದಿಲ್ಲ ಸ್ನೇಹಿತರೇ ಮೂಕ ಪ್ರಾಣಿಗಳಲ್ಲಿಯೂ ಕೂಡ ಈ ಒಂದು ತಾಯಿಯ ಪ್ರೀತಿ ಇರುತ್ತದೆ .ಈ ರೀತಿ ಈ ಒಂದು ಹಸುವಿನ ವಿಡಿಯೋ ವೈರಲ್ ಆಗುತ್ತಾ ಇದೆ ಮತ್ತು ದೇಸಿ ಹಸು ಮೂರು ಕರುವಿಗೆ ಜನ್ಮ ನೀಡಿತ್ತು ಅಂದರೆ ನಿಜಕ್ಕೂ ಅಚ್ಚರಿ ಪಡುವ ಸಂಗತಿ ಅಲ್ವಾ . ಯಾರೂ ಕೂಡ ಮೂಕ ಪ್ರಾಣಿಗಳಿಗೆ ತೊಂದರೆ ಕೊಡಬೇಡಿ ಅದಕ್ಕೂ ಕೂಡ ಮನಸ್ಸಿರುತ್ತದೆ ನಿಮ್ಮ ಪ್ರೀತಿಯನ್ನು ಕೊಟ್ಟರೆ ಅದು ಅದಕ್ಕಿಂತ ಹತ್ತು ಪಟ್ಟು ಪ್ರೀತಿಯನ್ನು ಕೊಡುತ್ತದೆ .

Share This Article

ಓದುಗರ ಗಮನಕ್ಕೆ: ನಮ್ಮ ವೆಬ್ಸೈಟ್  ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.