ಈ ಸಣ್ಣ ವಸ್ತುವನ್ನ ನೀವೇನಾದರೂ ಧಾನ ಮಾಡಿದ್ದೆ ಆದಲ್ಲಿ ನಿಮ್ಮ ಮಕ್ಕಳು ಸೂಪರ್ ಪವರ್ ಆಗುತ್ತಾರೆ… ಮಕ್ಕಳ ವಿದ್ಯಾಭ್ಯಾಸದಲ್ಲಿ ಭಾರಿ ಬದಲಾವಣೆ ಆಗುತ್ತದೆ…. ಅಷ್ಟಕ್ಕೂ ಏನನನ್ನ ಯಾರಿಗೆ ಧಾನ ಮಾಡಬೇಕು ಗೊತ್ತ ..

Sanjay Kumar
3 Min Read

ನಮಸ್ಕಾರಗಳು ಪ್ರಿಯ ಓದುಗರೆ ಇವತ್ತಿನ ಮಾಹಿತಿಯಲ್ಲಿ ಮಕ್ಕಳಿಗೆ ವಿದ್ಯಾಭ್ಯಾಸದಲ್ಲಿ ಸಮಸ್ಯೆ ಇದೆ ಅನ್ನುವವರು ಈ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ ಹೌದು ಸಮಸ್ಯೆಗಳು ಅಂದರೆ ಕೇವಲ ನಮ್ಮ ಆರ್ಥಿಕ ಸಮಸ್ಯೆಗಳು ಅಥವಾ ಕುಟುಂಬ ಸಮಸ್ಯೆಗಳು ಅದು ಮಾತ್ರವಾಗಿರುವುದಿಲ್ಲ ಮಕ್ಕಳ ವಿದ್ಯಾಭ್ಯಾಸ ದಲ್ಲಿಯೂ ಕೂಡ ನಾವು ಕೆಲವೊಂದು ಸಮಸ್ಯೆಗಳನ್ನು ಎದುರಿಸುತ್ತಲೇ ಇರುತ್ತೇವೆ. ಹೌದು ಸ್ನೇಹಿತರೆ ಮಕ್ಕಳು ಚೆನ್ನಾಗಿ ಓದುತ್ತಾ ಇಲ್ಲ ಅಥವಾ ಮಕ್ಕಳು ಓದುವುದಕ್ಕೆ ಆಸಕ್ತಿ ತೋರುತ್ತಾ ಇಲ್ಲ ಅಂದಾಗ ಅದು ತಂದೆ ತಾಯಿಗೆ ದೊಡ್ಡ ಕಷ್ಟವಾಗಿರುತ್ತದೆ ನಮ್ಮ ಮಕ್ಕಳು ಭವಿಷ್ಯದಲ್ಲಿ ಉತ್ತಮವಾಗಿರಬೇಕು ಅಂತ ಶ್ರಮಪಡುತ್ತಿದ್ದೇವೆ ಆದರೆ ಮಕ್ಕಳು ಯಾಕೆ ಶ್ರಮವಹಿಸುತ್ತಾ ಇಲ್ಲ ಯಾಕೆ ಅವರಿಗೆ ಇದರ ಕುರಿತು ಯೋಚನೆ ಇಲ್ಲ ಅವರು ಯಾಕೆ ಓದುತ್ತಾ ಇಲ್ಲ ಅನ್ನುವುದೇ ದೊಡ್ಡ ಚಿಂತೆಯಾಗಿ ಬಿಟ್ಟಿರುತ್ತದೆ.

ಹೀಗಿರುವಾಗ ಮಕ್ಕಳಿಗೂ ಕೂಡ ಕೆಲ ಸಮಸ್ಯೆಗಳಿರುತ್ತವೆ ನಾವು ಎಷ್ಟು ಶ್ರಮ ವಹಿಸಿದರೂ ನಮಗೆ ಓದು ತಲೆಗೆ ಹತ್ತುತ್ತಿಲ್ಲ ನಾವು ಓದುತ್ತ ಇದ್ದೆವು ಆದರೆ ಓದಿದ್ದು ನೆನಪಿನಲ್ಲಿ ಉಳಿಯುತ್ತಾ ಇಲ್ಲ ಅನ್ನುವ ಸಮಸ್ಯೆ ಮಕ್ಕಳಲ್ಲಿ ಹೆಚ್ಚಾಗಿ ಕಾಡುತ್ತಾ ಇರುತ್ತದೆ ಹಾಗಾಗಿ ಇಂತಹ ಕೆಲವೊಂದು ಸಮಸ್ಯೆಗಳನ್ನು ಮಕ್ಕಳು ಅನುಭವಿಸುವಾಗ ಪೋಷಕರು ಅದನ್ನು ಅರಿತು ಅದಕ್ಕೆ ತಕ್ಕ ಪರಿಹಾರಗಳನ್ನು ಮಾಡಿಸಬೇಕಿರುತ್ತದೆ. ಹೌದು ಮಕ್ಕಳಿಗೆ ಓದಿದ್ದು ನೆನಪಿನಲ್ಲಿ ಉಳಿಯುತ್ತಿಲ್ಲ ಅಂದಾಗ ನಾವು ಕೆಲವೊಂದು ಪರಿಹಾರಗಳನ್ನು ಮಾಡುತ್ತವೆ ಅದೇನೆಂದರೆ ಬಾದಾಮಿ ತಿನಿಸುವುದು ಒಂದೆಲಗ ತಿನಿಸುವುದು ಹೀಗೆ ಈ ಪರಿಹಾರಗಳು ಒಂದೆಡೆ ನಮಗೆ ಸಮಸ್ಯೆಗಳನ್ನು ಪರಿಹಾರ ಮಾಡಿದರೂ ಮತ್ತೊಂದೆಡೆ ಮಕ್ಕಳಿಗೆ ಕೆಲವೊಂದು ಆಧ್ಯಾತ್ಮಿಕ ಸಮಸ್ಯೆಗಳು ಕೂಡ ಇರುತ್ತದೆ ಅದನ್ನು ನಾವು ಅರಿಯಬೇಕಾಗುತ್ತದೆ.

ಹೌದು ಮಕ್ಕಳ ಜಾತಕದಲ್ಲಿ ಯಾವುದಾದರೂ ದೋಷ ಇರುವುದು ಗ್ರಹಗಳ ಕಾಟ ಇರುವುದು ಯಾವುದಾದರೂ ಸಮಸ್ಯೆಗಳು ಕಂಡು ಬರುತ್ತಾ ಇರುವುದು ಇಂತಹ ಸಮಸ್ಯೆಗಳು ಎದುರಾದಾಗ ಕೂಡ ಮಕ್ಕಳು ಓದಿದ್ದು ಅವರಿಗೆ ನೆನಪಿನಲ್ಲಿ ಉಳಿಯುತ್ತ ಇರುವುದಿಲ್ಲ. ಹೀಗೆ ಇಂತಹ ಸಮಸ್ಯೆಗಳಿಂದ ಮಕ್ಕಳು ಏನಾದರೂ ಬಳಲುತ್ತಾ ಇದ್ದಲ್ಲಿ ಖಂಡಿತ ಪೋಷಕರಾದವರು ಅದಕ್ಕೆ ತಕ್ಕ ಪರಿಹಾರವನ್ನು ಮಾಡಬೇಕಿರುತ್ತದೆ. ಮಕ್ಕಳೇನಾದರೂ ಇಂತಹ ಸಮಸ್ಯೆಯಿಂದ ಬಳಲಿದ್ದ ಇದ್ದಲ್ಲಿ ಅದಕ್ಕೆ ಇಲ್ಲಿದೆ ನೋಡಿ ಪರಿಹಾರ ನಿಮ್ಮ ಮನೆಯ ಬಳಿ ಅಥವಾ ನಿಮ್ಮ ಸುತ್ತಮುತ್ತ ಇಲ್ಲದ ಊರಿನಲ್ಲಿ ಹಯಗ್ರೀವನ ದೇವಸ್ಥಾನ ಇದ್ದಲ್ಲಿ ಆ ಭಗವಂತನ ಮೊರೆ ಹೋಗಿ ಆ ಭಗವಂತನಿಗೆ ನೀವು ಗಂಧದ ಚಕ್ಕೆಯನ್ನು ದೇವರ ಹೆಸರಿನಲ್ಲಿ ದಾನ ಮಾಡಬೇಕಿರುತ್ತದೆ ಈ ರೀತಿ ನೀವು ಮಾಡಿದ್ದೇ ಆದಲ್ಲಿ ಮಕ್ಕಳ ಜಾತಕದಲ್ಲಿ ಇರುವ ಕೆಲ ದೋಷಗಳು ನಿವಾರಣೆಯಾಗುತ್ತವೆ.

ಹೌದು ಸ್ನೇಹಿತರ ಹಯಗ್ರೀವ ಅಂದರೆ ಅವರು ಸಾಕ್ಷಾತ್ ವಿದ್ಯೆಗೆ ದೇವತೆಯಾಗಿರುವ ಸರಸ್ವತಿ ಮಾತೆಗೆ ಶಾರದಾದೇವಿಗೆ ವೇದವನ್ನ ಒಪ್ಪಿಸಿದವರು ಅಂತಹವರಿಗೆ ನಾವು ಈ ಸಣ್ಣ ವಸ್ತುವನ್ನೂ ನಾವು ದಾನ ಮಾಡಿದ್ದೇ ಆದಲ್ಲಿ ಖಂಡಿತ ಹಯಗ್ರೀವನ ಆಶೀರ್ವಾದದಿಂದಾಗಿ ನಿಮ್ಮ ಮಕ್ಕಳ ಭವಿಷ್ಯದಲ್ಲಿ ಮಕ್ಕಳ ವಿದ್ಯಾಭ್ಯಾಸದಲ್ಲಿ ಇರುವ ಹಲವು ಸಮಸ್ಯೆಗಳನ್ನು ದೂರ ಮಾಡಲು ಪರಮಾತ್ಮ ಸಹಕಾರಿಯಾಗಿರುತ್ತಾರೆ ಆದ್ದರಿಂದ ನಾವು ತಿಳಿಸಿದ ಈ ಪರಿಹಾರವನ್ನು ಇದನ್ನು ನೀವು ಯಾವ ದಿನದಂದು ಬೇಕಾದರೂ ಕಳಿಸಬಹುದು ಶನಿವಾರ ಗುರುವಾರ ಮಂಗಳವಾರ ಯಾವುದೇ ದಿನದಲ್ಲಿ ಆಗಿರಬಹುದು ನಿಮ್ಮ ಮಕ್ಕಳ ಹೆಸರಿನಲ್ಲಿ ಚಕ್ಕೆಯನ್ನು ಆ ಪರಮಾತ್ಮನಿಗೆ ದಾನಮಾಡಿ ಮನಸಾರೆ ದೇವರಲ್ಲಿ ಬೇಡಿಕೊಳ್ಳುವ ಸಂಕಲ್ಪ ಮಾಡಿಕೊಳ್ಳಿ ನಮ್ಮ ಮಕ್ಕಳು ಅನುಭವಿಸುತ್ತಿರುವ ಕಷ್ಟಗಳ ನೆಲ ಆದಷ್ಟು ಬೇಗ ದೂರ ಮಾಡು ಎಂದು ಎಲ್ಲವೂ ಸರಿ ಹೋಗುತ್ತದೆ.

ಚಕ್ಕೆ ಕೊಡಬೇಕಾ ಅಥವ ಗಂಧವನ್ನು ತೇಯ್ದು ಪರಮಾತ್ಮನಿಗೆ ಸಮರ್ಪಣೆ ಮಾಡುವಂತಿಲ್ಲವಾ ಅಂತಾ ನೀವು ಅಂದುಕೊಳ್ಳಬಹುದು ಇಲ್ಲ ಆ ದೇವನಿಗೆ ಕೆಲವೊಂದು ಪದ್ಧತಿ ಇರುತ್ತದೆ ಆ ಚಕ್ಕೆಯನ್ನು ಕೊಟ್ಟಾಗ ದೇವರನ್ನು ಆರಾಧಿಸುವ ಪುರೋಹಿತರೆ ಗಂಧವನ್ನು ತೇದು ಅದನ್ನು ಪರಮಾತ್ಮನಿಗೆ ಸಮರ್ಪಣೆ ಮಾಡುತ್ತಾರೆ. ಆದ್ದರಿಂದ ಗಂಧದ ಚಕ್ಕೆಯನ್ನು ನೀವು ನಿಮ್ಮ ಮಕ್ಕಳ ಹೆಸರಿನಲ್ಲಿ ದಾನ ಮಾಡಿ ಎಲ್ಲವೂ ಸರಿ ಹೋಗುತ್ತದೆ ಧನ್ಯವಾದ…

Share This Article

ಓದುಗರ ಗಮನಕ್ಕೆ: ನಮ್ಮ ವೆಬ್ಸೈಟ್  ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.