ಉತ್ತಮ ಗುಣಮಟ್ಟ ಮನೆಕಟ್ಟಲು ಕಡಿಮೆ ಬೆಲೆಯ ಯಾವ ಸಿಮೆಂಟ್ ಉತ್ತಮವಾದದ್ದು ನಿಮಗಿದು ತಿಳಿದಿರಲಿ..

381

ಪ್ರತಿಯೊಬ್ಬರಿಗೂ ತಮ್ಮದೇ ಆದ ಮನೆ ಕಟ್ಟಬೇಕು ಮತ್ತು ತಮ್ಮ ಕನಸಿನ ಮನೆ ತಾವು ಅಂದುಕೊಂಡಂತೆ ಆಗಬೇಕು ಅನ್ನುವ ಹಂಬಲ ಆಸೆ ಪ್ರತಿಯೊಬ್ಬ ರಲ್ಲಿಯೂ ಸಹ ಇರುತ್ತದೆ ಹಾಗೆ ನಮ್ಮದೇ ಆದ ಭವ್ಯವಾದ ಸ್ವಂತ ಮನೆ ಕಟ್ಟಬೇಕು ಅನ್ನೋ ಕನಸು ಸಾಮಾನ್ಯ ಆಗಿ ಪ್ರತಿಯೊಬ್ಬರಲ್ಲಿಯೂ ಇರುತ್ತದೆ ಹಾಗೂ ಮನೆ ಕಟ್ಟಲು ನಾವು ಕಬ್ಬಿಣ ಸಿಮೆಂಟ್ ಮರಳು ಇಟ್ಟಗಿ ಮುಂತಾದ ವಸ್ತುಗಳನ್ನು ಬಳಕೆ ಮಾಡುತ್ತೇವೆ ಹಾಗೆ ಹೆಚ್ಚಿನ ಜನರಿಗೆ ಉಳಿಯುವ ಸಂಶಯ ಏನೆಂದರೆ ಮನೆ ಕಟ್ಟುವಾಗ ಯಾವ ಸಿಮೆಂಟ್ ಬಳಕೆ ಮಾಡಿದರೆ ಉತ್ತಮ ಎಂದು ತಿಳಿದುಕೊಳ್ಳಬೇಕೆಂಬ ಆಸಕ್ತಿ ಇದ್ದೇ ಇರುತ್ತದೆ ಎನ್ನುವ ಸಿಮೆಂಟ್ ಇಲ್ಲದೆ ಮನೆ ಕಟ್ಟಲು ಅಸಾಧ್ಯ ಅನ್ನೋ ಹಾಗೆ ನಮ್ಮ ಭಾರತ ದೇಶದಲ್ಲಿ ಹೆಚ್ಚು ಮಾರಾಟವಾಗುವ ಸಿಮೆಂಟ್ ಕಂಪೆನಿಗಳ ಲಿಸ್ಟ್ ಅಲ್ಲಿ ಯಾವೆಲ್ಲ ಸಿಮೆಂಟ್ ಕಂಪೆನಿಗಳು ಉತ್ತಮ ಹೆಸರು ಪಡೆದುಕೊಂಡಿದೆ ಯಾವ ಸಿಮೆಂಟ್ ಬಳಸಿದರೆ ಉತ್ತಮ ತಿಳಿಯೋಣ ಬನ್ನಿ.

ನಮ್ಮದೇ ಆದ ಕನಸಿನ ಮನೆ ಕಟ್ಟಬೇಕು ಅಂದರೆ ಅಲ್ಲಿ ನಾವು ಬಹಳಷ್ಟು ಯೋಚನೆ ಮಾಡಿಯೇ ಮನೆಗೆ ಬೇಕಾಗುವ ಪ್ರತಿಯೊಂದು ವಸ್ತುಗಳನ್ನು ಖರೀದಿ ಮಾಡುತ್ತೇವೆ ಹಾಗೆ ಯಾವ ಕಂಪನಿ ವಸ್ತುಗಳು ಉತ್ತಮ ಎಂಬ ವಿಚಾರವನ್ನು ತಿಳಿಯಲು ಮುಂದಾಗುತ್ತೇವೆ. ಇನ್ನು ಭಾರತ ದೇಶದಲ್ಲಿ ಇರುವ ಸಿಮೆಂಟ್ ಕಂಪೆನಿ ಗಳ ಬಗ್ಗೆ ಕುರಿತು ಹೇಳುವುದಾದರೆ ಬಹುತೇಕ ಎಲ್ಲ ಸಿಮೆಂಟ್ ಕಂಪೆನಿಗಳು ಸ್ಟ್ಯಾಂಡರ್ಡ್ ಮೇಂಟೇನ್ ಮಾಡಿಕೊಂಡು ಸಿಮೆಂಟ್ ಉತ್ಪಾದನೆ ಮಾಡುತ್ತಾ ಇದೆ ಆದ್ದರಿಂದ ಎಲ್ಲ ಕಂಪೆನಿಗಳು ಒಂದಲ್ಲ ಒಂದು ರೀತಿಯಲ್ಲಿ ಉತ್ತಮ ಗುಣಮಟ್ಟ ಹೊಂದಿದೆ. .

ಇಂಡಿಯನ್ ಸಿಮೆಂಟ್ ಮೆನುಪೆಕ್ಚರ್ ನ ಟಾಪ್ ಲೀಸ್ಟ್ ನಲ್ಲಿ ಅಲ್ಟ್ರಾಟೆಕ್ ಸಿಮೆಂಟ್ ಇದೆ, 31% ನಷ್ಟು ಈ ಕಂಪನಿ ಸಿಮೆಂಟನ್ನು ಉತ್ಪಾದಿಸುತ್ತ ಇದೆ ಹಾಗೂ ಎರಡನೆ ಸ್ಥಾನದಲ್ಲಿ ಅಂಬುಜಾ ಸಿಮೆಂಟ್ ಇದ್ದು 21% ನಷ್ಟು ಸಿಮೆಂಟ್ ಉತ್ಪಾದಿಸುತ್ತದೆ, ಮೂರನೆ ಸ್ಥಾನದಲ್ಲಿ ಎಸಿಸಿ ಸಿಮೆಂಟ್, 12% ರಷ್ಟು ಸಿಮೆಂಟ್ ಉತ್ಪಾದನೆಯನ್ನು ಈ ಕಂಪನಿ ಮಾಡುತ್ತದೆ. ನಾಲ್ಕನೆ ಸ್ಥಾನದಲ್ಲಿ ಇರುವ ಕಂಪನಿ ಶ್ರೀ ಸಿಮೆಂಟ್ ಲಿಮಿಟೆಡ್ ಇದ್ದು, 10% ನಷ್ಟು ಸಿಮೆಂಟ್ ಉತ್ಪಾದನೆ ಮಾಡುತ್ತದೆ. 8% ಸಿಮೆಂಟ್ ದಾಲ್ಮಿಯಾ ಸಿಮೆಂಟ್ ಕಂಪನಿಯವರು ಮೆನುಪೆಕ್ಚರ್ ಮಾಡುತ್ತದೆ. ಬಿರ್ಲಾ ಕಾರ್ಪೊರೇಷನ್ ಲಿಮಿಟೆಡ್ 5% ನಷ್ಟು ಸಿಮೆಂಟ್ ಮೆನುಫೆಕ್ಚರ್ ಮಾಡುತ್ತ ಇದೆ. ಏಳನೆ ಸ್ಥಾನದಲ್ಲಿ ಇರುವ ಸಿಮೆಂಟ್ ಕಂಪನಿ ಅದು ಇಂಡಿಯಾ ಸಿಮೆಂಟ್ ಲಿಮಿಟೆಡ್ ಇದ್ದು, ಇನ್ನೂ ಕೊನೆಯದಾಗಿ ಎಂಟನೆ ಸ್ಥಾನದಲ್ಲಿ ಇರುವುದು ರಾಮ್ಕೋ ಸಿಮೆಂಟ್ ಲಿಮಿಟೆಡ್ ಕಂಪನಿ ಬರುತ್ತದೆ.

ಇನ್ನೂ ಹೆಚ್ಚಿನದಾಗಿ ಮಾರಾಟವಾಗುವ ಸಿಮೆಂಟ್ ಯಾವುದು ಅಂತ ನೀವು ಹೇಳುವುದಾದರೆ ಅದು ಅಲ್ಟ್ರಾಟೆಕ್ ಸಿಮೆಂಟ್ ಅಂಬುಜಾ ಸಿಮೆಂಟ್ ಮತ್ತು ಎಸಿಸಿ ಸಿಮೆಂಟ್ ಹೀಗೆ ಹೆಚ್ಚು ಸ್ಟಾಕ್ ಇರುವ ಕಂಪೆನಿಯ ಸಿಮೆಂಟ್ ಖರೀದಿಸುವುದರಿಂದ ನಮಗೆ ನಷ್ಟ ಆಗುತ್ತದೆ ಎಂದು ತಜ್ಞರು ತಿಳಿಸುತ್ತಾರೆ. ಆದ್ದರಿಂದ ಹೆಚ್ಚು ಮಾರಾಟವಾಗುವ ಕಂಪನಿಗಳಿಂದ ಸಿಮೆಂಟ್ ಖರೀದಿಸುವುದು ಸೂಕ್ತ. ಸಿಮೆಂಟ್ ಖರೀದಿಸಿ ಬಹಳ ದಿನಗಳವರೆಗೆ ಅದನ್ನು ಹಾಗೆಯೇ ಸ್ಟಾಕ್ ಮಾಡಿ ಇಡಬಾರದು ಹೌದು ಈ ಮಾಹಿತಿ ತಿಳಿದಿರುವುದು ಅತ್ಯವಶ್ಯಕ ಹಾಗೂ ಇದರಿಂದ ಸಿಮೆಂಟ್ ಗಟ್ಟಿಯಾಗೇ ಮರಳಿಗೆ ಸರಿಯಾಗಿ ಅಂಟಿಕೊಳ್ಳುವುದಿಲ್ಲ .

ಈ ಕಾರಣದಿಂದಾಗಿ ಸಿಮೆಂಟ್ ಖರೀದಿಸಿ ತಕ್ಷಣವೇ ಅದನ್ನು ಸದ್ಬಳಕೆ ಮಾಡುವುದು ಬಹಳ ಒಳ್ಳೆಯದು ಮತ್ತು ನಿಮಗೆ ಮನೆ ಕಟ್ಟುವಾಗ ನಷ್ಟ ಅನುಭವಿಸುವುದು ಸಹ ಆದಷ್ಟು ಕಡಿಮೆ ಇರುತ್ತದೆ. ಮನೆ ಕಟ್ಟುವಾಗ ಒಳ್ಳೆಯ ಕಂಪನಿಯ ಸಿಮೆಂಟ್ ಖರೀದಿಸುವುದರ ಜೊತೆಗೆ ಉತ್ತಮವಾದ ಮರಳನ್ನು ಖರೀದಿಸಬೇಕು, ಇದನ್ನು ಸರಿಯಾಗಿ ತಿಳಿದರೆ ಹಾಗೂ ಮರಳು ಅಥವಾ ಸಿಮೆಂಟ್ ಉತ್ತಮವಾಗಿ ಇಲ್ಲವಾದಲ್ಲಿ ಗೋಡೆಗಳು ಬಿರುಕು ಬಿಡುವ ಸಾಧ್ಯತೆ ಬಹಳಷ್ಟು ಇರುತ್ತದೆ ಒಟ್ಟಾರೆಯಾಗಿ ಬಹುಬೇಗನೆ ಮಾರಾಟವಾಗುವ ಕಂಪೆನಿಯ ಸಿಮೆಂಟ್ ಅನ್ನು ನೀವು ಬಳಸುವುದು ಉತ್ತಮ ಎಂದು ಹೇಳಬಹುದು. ಈ ಮಾಹಿತಿ ನಿಮಗೆ ಉಪಯುಕ್ತವಾಗಿದೆ ಎಂದು ಭಾವಿಸುತ್ತೇನೆ ಧನ್ಯವಾದ.

WhatsApp Channel Join Now
Telegram Channel Join Now