ಉದ್ದವಾದ ದಪ್ಪವಾದ ತಲೆಕೂದಲು ನಿಮ್ಮದಾಗಬೇಕಾ ಹಾಗಾದರೆ ಈ ಒಂದು ಎಣ್ಣೆಯನ್ನ ಬಳಸಿ ಸಾಕು … ಎಲ್ರು ನಿಮ್ಮ ಕೂದಲು ನೋಡೋಕೆ ಮುಗಿ ಬೀಳುತ್ತಾರೆ…

157

ಕೂದಲನ್ನ ಬೆಳೆಸಬೇಕು ಕೂದಲಿನ ಕಾಳಜಿ ಮಾಡಬೇಕು ಕೂದಲು ಉದುರುವ ಸಮಸ್ಯೆ ನಿವಾರಣೆ ಮಾಡಬೇಕು ಇದಕ್ಕೆಲ್ಲಾ ಮಾಡಿ ಈ ಪರಿಹಾರ, ಇದನ್ನು ಪಾಲಿಸುವುದು ತುಂಬಾ ಸುಲಭ ಮಾಡುವ ವಿಧಾನ ತಿಳಿಯೋಣ ಬೇಕೆಂದಲ್ಲಿ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ ಹಾಗೂ ಕೇರಳ ಮಂದಿ ತಮ್ಮ ಕೂದಲಿನ ಕಾಳಜಿ ಹೇಗೆ ಮಾಡ್ತಾರೆ ಹಾಗೆ ಈ ಎಣ್ಣೆಯ ಸಹಾಯದಿಂದ ನಿಮ್ಮ ಕೂದಲಿನ ಕಾಳಜಿ ಮಾಡಬಹುದು.

ನಮಸ್ಕಾರ ಎಲ್ಲಾ ಹೆಣ್ಣುಮಕ್ಕಳಿಗೂ ಕೂದಲು ಅವರ ಅಂದವನ್ನು ಇನ್ನಷ್ಟು ಹೆಚ್ಚಿಸುತ್ತವೆ ಮತ್ತು ಹೆಣ್ಣು ಮಕ್ಕಳು ತಮ್ಮ ಅಂದವನ್ನು ಹೆಚ್ಚಿಸಿಕೊಳ್ಳಲು ಕೂದಲಿನಿಂದ ಮಾಡುವ ಹಲವು ಹೇರ್ ಸ್ಟೈಲ್ ಅವರ ಅಂದವನ್ನು ಮತ್ತು ಅವರ ಕಾನ್ಫಿಡೆನ್ಸ್ ಲೆವೆಲ್ ಅನ್ನು ಇನ್ನಷ್ಟು ಹೆಚ್ಚಿಸುತ್ತದೆ.

ಹಾಗಾಗಿ ಕೂದಲು ಉದುರುವ ಸಮಸ್ಯೆ ಹಾಗೆ ನಿರ್ಲಕ್ಷ್ಯ ಮಾಡದೆ ಈ ಸಮಸ್ಯೆಯನ್ನು ಪರಿಹಾರ ಮಾಡಿಕೊಳ್ಳುವುದಕ್ಕಾಗಿ ಮಾಡಿ ಸರಳ ಪರಿಹಾರ ಇದನ್ನ ಮಾಡುವುದಕ್ಕೆ ನಮಗೆ ಬೇಕಾಗಿರುವಂತಹ ಪದಾರ್ಥಗಳು ಯಾವುವು ಹಾಗೂ ಯಾವುದೇ ಕೆಮಿಕಲ್ ಬಳಸದೆ ಹೇಗೆ ನಮ್ಮ ಕೂದಲಿನ ಕಾಳಜಿ ಮಾಡುವುದು ಎಲ್ಲವನ್ನೂ ತಿಳಿಯೋಣ ಇಂದಿನ ಲೇಖನದಲ್ಲಿ ಮತ್ತು ಪುರುಷರು ಸಹ ಈ ಎಣ್ಣೆಯಿಂದ ತಮ್ಮ ಕೂದಲಿನ ಕಾಳಜಿ ಮಾಡಬಹುದು ಇದರಿಂದ ಸ್ಟ್ರೆಸ್ ಸಹ ಪರಿಹಾರ ಆಗುತ್ತದೆ.

ಬನ್ನಿ ಮಾಹಿತಿಯನ್ನ ತಿಳಿಯೋಣ ಮೊದಲಿಗೆ ಈ ಎಣ್ಣೆಯ ನಾತ ಬೇಕಾಗುವ ಪದಾರ್ಥಗಳು ನಾವು ಈ ಲೇಖನದಲ್ಲಿ ಕೇವಲ ಒಂದೇ ದಿನ ಈ ಎಣ್ಣೆಯನ್ನು ಬಳಸುವುದಕ್ಕೆ ಆ ಪ್ರಮಾಣದಲ್ಲಿ, ಪದಾರ್ಥಗಳನ್ನು ತಿಳಿಸಿರುತ್ತೇವೆ ನಿಮಗೆ ಹೆಚ್ಚು ಪ್ರಮಾಣದಲ್ಲಿ ಎಣ್ಣೆ ಬೇಕೆಂದಲ್ಲಿ ಇದೇ ಪದಾರ್ಥಗಳನ್ನ ಇನ್ನೂ ಹೆಚ್ಚು ಪ್ರಮಾಣದಲ್ಲಿ ಬಳಸಿ ಎಣ್ಣೆಯನ್ನು ತಯಾರಿಸಿಕೊಳ್ಳಿ.

1 ಚಮಚ ಹರಳೆಣ್ಣೆ 1 ಚಮಚ ಕೊಬ್ಬರಿ ಎಣ್ಣೆ 3 ಚಮಚ ಸಾಸಿವೆ ಎಣ್ಣೆ ಕಾಲು ಚಮಚದಷ್ಟು ಮೆಂತ್ಯೆಕಾಳು ಕಾಲು ಚಮಚದಷ್ಟು ಕಾಮಕಸ್ತೂರಿ ಬೀಜ ಕಾಲು ಚಮಚದಷ್ಟು ಈರುಳ್ಳಿ ಬೀಜ ಮತ್ತು ಈ ಪರಿಹಾರ ಮಾಡುವುದಕ್ಕೆ ಬೇಕಾಗಿರುವುದು ಬೆಳ್ಳುಳ್ಳಿ ಗುಲಾಬಿ ಎಲೆ ದಾಸವಾಳದ ಹೂವು ಮತ್ತು ಎಲೆಗಳು.

ಮೊದಲಿಗೆ ಕಬ್ಬಿಣದ ಬಾಣಲೆ ತೆಗೆದುಕೊಂಡು ಎಣ್ಣೆ ಹಾಕಿಕೊಳ್ಳಿ ನಂತರ ಇದಕ್ಕೆ ಈರುಳ್ಳಿ ಬೀಜ ಮೆಂತೆ ಕಾಳುಗಳು ಕಾಮಕಸ್ತೂರಿ ಬೀಜ ಇವೆಲ್ಲವನ್ನ ಪುಡಿ ಮಾಡಿಕೊಂಡು ಎಣ್ಣೆಗೆ ಹಾಕಿ ಬಳಿಕ ಬೆಳ್ಳುಳ್ಳಿ ಗುಲಾಬಿ ಎಲೆ ದಾಸವಾಳದ ಹೂ ಎಲೆಗಳು ಇವೆಲ್ಲವನ್ನ ಸಣ್ಣಗೆ ಕತ್ತರಿಸಿಕೊಂಡು ಎಣ್ಣೆ ಬಿಸಿ ಆಗುತ್ತಿರುವ ಸಮಯದಲ್ಲಿ ಈ ಎಣ್ಣೆಯೊಂದಿಗೆ ಮಿಶ್ರ ಮಾಡಿ ಎಣ್ಣೆಯನ್ನು ಚೆನ್ನಾಗಿ ಕಾಯಿಸಿಕೊಳ್ಳಬೇಕು ಅಂದರೆ ಮಧ್ಯಮ ಉರಿಯಲ್ಲಿ ಮಾತ್ರ ಈ ಎಣ್ಣೆಯನ್ನು ಬಿಸಿ ಮಾಡಿ ಕೊಳ್ಳಬೇಕು.

ಈ ಪರಿಹಾರ ಪಾಲಿಸುವುದರಿಂದ ಡ್ಯಾಂಡ್ರಫ್ ಸಮಸ್ಯೆ ನಿವಾರಣೆಯಾಗುತ್ತದೆ ಮತ್ತು ಕೂದಲಿನ ಬುಡದಲ್ಲಿ ಸಮಸ್ಯೆ ಇದ್ದರೆ ಅದು ನಿವಾರಣೆಯಾಗುತ್ತದೆ ಮುಖ್ಯವಾಗಿ ಈ ಪರಿಹಾರ ಮಾಡಿಕೊಳ್ಳುವುದರಿಂದ ಕೂದಲಿನ ಬುಡ ದೃಢವಾಗುತ್ತದೆ ಇದರಿಂದ ಕೂದಲು ಉದುರುವ ಸಮಸ್ಯೆ ಕೂಡ ನಿವಾರಣೆ ಆಗುತ್ತದೆ.

ಹಾಗಾಗಿ ಈ ಸಂಪೂರ್ಣ ಮಾಹಿತಿಯನ್ನು ತಿಳಿದ ಮೇಲೆ ನೀವು ಕೂಡಾ ನಿಮ್ಮ ಕೂದಲಿನ ಕಳಚಿ ಮಾಡುವುದಕ್ಕೆ ಈ ವಿಧಾನವನ್ನು ಪಾಲಿಸಿ ಹಾಗೂ ಈ ಪದಾರ್ಥಗಳು ಮುಖ್ಯವಾಗಿ ಈರುಳ್ಳಿ ಬೀಜ ಮೆಂತೆ ಕಾಳುಗಳು ಕೂದಲಿನ ಬುಡವನ್ನು ಸದೃಢ ಮಾಡುವುದರಿಂದ ಕೂದಲು ಉದುರುವಂತಹ ಸಮಸ್ಯೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತ ಬರುತ್ತದೆ ವಾರದಲ್ಲಿ 3 ಬಾರಿ ಈ ಎಣ್ಣೆಯನ್ನು ಬಳಸಿ ನಿಮ್ಮ ಕೂದಲನ್ನು ಮಸಾಜ್ ಮಾಡಿಕೊಳ್ಳಿ ಧನ್ಯವಾದ.