ಎಷ್ಟು ಪ್ರಯತ್ನ ಮಾಡಿದರು ನಿದ್ದೆ ಸರಿಯಾಗಿ ಬರುತ್ತಿಲ್ಲ ಅಂದ್ರೆ ಈ ಒಂದು ಮನೆಮದ್ದು ಮಾಡಿ ನೋಡಿ ಸಾಕು … ಹಾಸಿಗೆ ನೋಡಿದ ತಕ್ಷಣ ನಿದ್ರೆಗೆ ಜಾರುತ್ತೀರಾ…

434

ನಿದ್ರಾಹೀನತೆಗೆ ಪರಿಣಾಮಕಾರಿ ಮನೆಮದ್ದು ಏನು ಗೊತ್ತಾ ಹೌದು ಮಾತ್ರೆ ತೆಗೆದುಕೊಳ್ಳಬೇಡಿ ಈ ಡ್ರಿಂಕ್ ಕುಡಿಯಿರಿ ಸಾಕು…ನಮಸ್ಕಾರ ಎಲ್ಲರಿಗೂ ಕೂಡ ನಿದ್ರೆ ಎಷ್ಟು ಮುಖ್ಯ ಅಲ್ವಾ ಹೌದು ಒಬ್ಬ ಮನುಷ್ಯ ವಾರದವರೆಗೂ ನಿರಂತರವಾಗಿ ನಿದ್ದೆಗೆಟ್ಟರೆ ಆ ಮನುಷ್ಯನಿಗೆ ಸಾವು ಕೂಡ ಸಂಭವಿಸಬಹುದು ಅಂತ ಹೇಳ್ತಾರೆ ಹಾಗಾಗಿ ಒಬ್ಬ ಮನುಷ್ಯನಿಗೆ ನಿದ್ರೆ ಬಹಳ ಅವಶ್ಯಕವಾಗಿರುತ್ತದೆ ಹಾಗೆಯೇ ನಿದ್ರಾಹೀನತೆ ಸಮಸ್ಯೆ ಗೆ ಇಷ್ಟೊಂದು ಮಂದಿ ಮಾತ್ರೆಗಳನ್ನು ತೆಗೆದುಕೊಳ್ಳುವ ಮೂಲಕ ಸಮಸ್ಯೆ ನಿವಾರಣೆ ಮಾಡಿಕೊಳ್ಳುತ್ತಿದ್ದೇವೆ ಅಂದುಕೊಳ್ಳುತ್ತಿದ್ದಾರೆ. ಆದರೆ ನಿದ್ರೆ ಬರಲಿ ಎಂದು ನಿದ್ರೆ ಮಾತ್ರೆ ತೆಗೆದುಕೊಳ್ಳುತ್ತಲೇ ಇದ್ದರೆ ಇದು ನರಮಂಡಲದ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ ಅಷ್ಟೇ ಮಾತ್ರವಲ್ಲ ಹೆಚ್ಚು ಸ್ಟ್ರೆಸ್ ಹೃದಯ ಸಂಬಂಧಿ ಸಮಸ್ಯೆಗಳು ಉಂಟಾಗುವುದು ಹೀಗೆಲ್ಲ ಆಗುತ್ತದೆ.

ಆದ್ದರಿಂದ ನಿದ್ರೆ ಬರುವುದಕ್ಕೆ ನಿದ್ರೆ ಮಾತ್ರೆ ಮಾತ್ರ ಪರಿಹಾರವಲ್ಲ ಬೇರೆ ಪರಿಹಾರಗಳು ಕೂಡ ಈಗ ಹಾಗೆ ಅದರಲ್ಲಿ ನೀವು ಮನೆಯಲ್ಲಿಯೇ ಮಾಡಿಕೊಳ್ಳಬಹುದಾದ ಸರಳ ಮನೆಮದ್ದಿನ ಬಗ್ಗೆ ತಿಳಿಸಿಕೊಡುತ್ತೇವೆ. ಹಲವರಿಗೆ ತಕ್ಷಣವೇ ಇದು ಕೆಲಸ ಮಾಡದೇ ಇರಬಹುದು ಆದರೆ ನೆನಪಿನಲ್ಲಿ ಇಡೀ ಈ ಪರಿಹಾರ ನೀವು ನಿರಂತರವಾಗಿ ಪಾಲಿಸುತ್ತಾ ಬಂದ ಖಂಡಿತವಾಗಿಯೂ ನಿದ್ರಾಹೀನತೆ ಸಮಸ್ಯೆಯಿಂದ ನೀವು ಹೊರಬರಬಹುದು ಕಣ್ತುಂಬ ನಿದ್ರೆ ಮಾಡಬಹುದು.

ಎಲ್ಲರಿಗೂ ನಿದ್ರೆ ಬೇಕು, ಯಾಕೆಂದರೆ ದಿನವೆಲ್ಲ ದುಡಿದು ಆಯಾಸವಾದಾಗ ಹೇಗೆ ನಮಗೆ ಆಯಾಸವಾದಾಗ ಊಟ ಮಾಡಬೇಕು ಅನಿಸುತ್ತೆ ಹಾಗೆ ರಾತ್ರಿ ನಿದ್ರೆ ಮಾಡಬೇಕು ಅಂತಾನೂ ಅನಿಸದ ಹಾಗೆ ಆ ನಿದ್ರೆ ಬಹಳ ಅವಶ್ಯಕ.ಆದರೆ ಯಾವುದೇ ಕಾರಣಕ್ಕೂ ಮಧ್ಯಾಹ್ನದ ಸಮಯದಲ್ಲಿ ನಿದ್ರೆ ಮಾಡುವುದು ಅಥವಾ ಬೆಳಗಿನ ಸಮಯದಲ್ಲಿ ಹೆಚ್ಚು ವೇಳೆ ವರೆಗೂ ಮಲಗುವುದು ಹೀಗೆ ಮಾಡಬೇಡಿ ರಾತ್ರಿ ಬೇಗ ಮಲಗುವ ರೂಢಿ ಮಾಡಿಕೊಳ್ಳಿ ಹಾಗೆ ಬೆಳಗಿನ ಜಾವ ಬೇಗ ಎದ್ದೇಳುವ ರೂಢಿಯನ್ನು ಸಹ ಪಾಲಿಸಿ. ಇಂತಹ ಪದ್ಧತಿ ಪಾಲಿಸಿದರೆ ನಿಮ್ಮ ನಿದ್ರಾಹೀನತೆ ಕೂಡ ದೂರವಾಗುತ್ತೆ ಜೊತೆಗೆ ನಿಮ್ಮ ಜೀವನಶೈಲಿ ಕೂಡ ಆರೋಗ್ಯಕರವಾಗಿರುತ್ತದೆ ಉತ್ತಮವಾಗಿರುತ್ತದೆ.

ಈಗ ನಿಮಗೆ ತಿಳಿಸುವ ಈ ಮನೆಮದ್ದು ಮುಖ್ಯವಾಗಿ ನಿದ್ರಾಹೀನತೆಗೆ ಇದರಿಂದ ಪ್ರೇರಿತರಾದ ಆರೋಗ್ಯಕರ ಪ್ರಯೋಜನಗಳು ಕೂಡ ಇದೆ ಅದನ್ನ ನಂತರ ತಿಳಿಯೋಣ ಈಗ ಮನೆಮದ್ದಿನ ಕುರಿತು ಹೇಳುವುದಾದರೆ ಇದಕ್ಕೆ ಬೇಕಿರುವುದು ಕಲ್ಲುಸಕ್ಕರೆ ಸೋಂಪು ಮತ್ತು ಹಾಲು.

ತುಂಬ ಸರಳ ವಿಧಾನದಲ್ಲಿ ಇದನ್ನು ಮಾಡಿಕೊಳ್ಳಬಹುದು ಮೊದಲಿಗೆ ಅರ್ಧ ಲೋಟ ನೀರನ್ನು ತೆಗೆದುಕೊಂಡು ಇದಕ್ಕೆ ಸೋಂಪನ್ನು ಹಾಕಿ ಚೆನ್ನಾಗಿ ಕುದಿಸಬೇಕು ಈ ನೀರು ಕುದಿಯುವಾಗ ಸ್ವಲ್ಪ ಬೆಚ್ಚಗಿರುವ ಹಾಲನ್ನು ಈ ನೀರಿಗೆ ಹಾಕಿ ಸ್ವಲ್ಪ ಸಮಯ ಹಾಲಿನೊಂದಿಗೆ ನೀರನ ಕುದಿಸಿದ ಮೇಲೆ ಪುಡಿಮಾಡಿದ ಕಲ್ಲುಸಕ್ಕರೆಯನ್ನು ಈ ಹಾಲಿಗೆ ಮಿಶ್ರಣ ಮಾಡಿ ಶೋಧಿಸಿ ಕುಡಿಯಿರಿ ಅಥವಾ ಹಾಗೆ ಕೂಡ ನೀವು ಸೇವಿಸಬಹುದು ಸೋಂಪು ಆರೋಗ್ಯಕ್ಕೆ ಬಹಳ ಉತ್ತಮ ಮತ್ತು ರಾತ್ರಿ ಸಮಯದಲ್ಲಿ ಈ ಡ್ರಿಂಕ್ ಗಳನ್ನು ಕುಡಿಯುವುದರಿಂದ ಜೀರ್ಣಕ್ರಿಯೆಯು ಉತ್ತಮವಾಗಿ ಆಗುತ್ತದೆ ಹಾಗೂ ತೂಕ ಇಳಿಕೆಗೂ ಇದು ಸಹಕಾರಿಯಾಗಿದೆ.

ಹಾಗಾಗಿ ಈ ಸರಳ ವಿಧಾನದಲ್ಲಿ ಮಾಡಿಕೊಳ್ಳುವ ಈ ಮನೆ ಮದ್ದನ್ನು ನೀವು ಕೂಡ ಪಾಲಿಸಿ ನಿದ್ರಾಹೀನತೆ ಯಿಂದ ಪರಿಹಾರ ಪಡೆದುಕೊಳ್ಳಿ. ಅಷ್ಟೇ ಅಲ್ಲ ಹಾಲು ಮತ್ತು ಸೋಂಪು ಜತೆಗೆ ಕಲ್ಲುಸಕ್ಕರೆ ಇದು ಒಳ್ಳೆಯ ನಿದ್ರೆ ತರುವಲ್ಲಿ ಸಹಕಾರಿ ಮಾತ್ರವಲ್ಲಾ, ಹೃದಯದ ಆರೋಗ್ಯ ಜೊತೆಗೆ ಕರುಳಿನ ಆರೋಗ್ಯ ಮತ್ತು ಚರ್ಮಕ್ಕೂ ಒಳ್ಳೆಯದು, ಹಾಗಾಗಿ ಈ ಅಧಿಕ ಪ್ರಯೋಜನಗಳನ್ನು ಹೊಂದಿರುವ ಡ್ರಿಂಕ್ ಅನ್ನು ಮಾಡಿ ಕುಡಿಯಿರಿ ಉತ್ತಮ ಫಲಿತಾಂಶ ಪಡೆದುಕೊಳ್ಳಿ ಧನ್ಯವಾದ.