ಎಷ್ಟೇ ನರದೃಷ್ಟಿ , ಭಯಂಕರವಾದ ಮಾಟ ಮಂತ್ರ ನಿಮ್ಮ ಮೇಲೆ ನಡೆಯಬಾರದು ಅಥವಾ ಅದರಿಂದ ಪರಿಣಾಮ ಆಗಬಾರದು ಅಂದ್ರೆ ನಿಂಬೆ ಹಣ್ಣಿನಿಂದ ಈ ಒಂದು ಪರಿಹಾರ ಮಾಡಿ…

Sanjay Kumar
2 Min Read

ಮನೆಗೆ ದೃಷ್ಟಿ ತಗಲಿದ್ದರೆ ಅದನ್ನ ನಿವಾರಣೆ ಮಾಡಿಕೊಳ್ಳಬೇಕು ಅಂದಲ್ಲಿ ದೊಡ್ಡ ದೊಡ್ಡ ಪೂಜೆ ಹೆಚ್ಚು ಖರ್ಚು ಮಾಡಿ ಪರಿಹಾರ ಮಾಡಿಕೊಳ್ಳುವ ಮಾಡಿಕೊಳ್ಳುವ ಅಗತ್ಯವಿಲ್ಲ. ನಾವು ಹೇಳುವ ಸರಳ ಹರಿಹರ ಮಾಡಿಕೊಂಡರೆ ಸಾಕು ನಿಮ್ಮ ಮನೆಯ ದೇವರ ಆಶೀರ್ವಾದದಿಂದ ನಿಮಗೆ ತಗುಲಿರುವ ದೃಷ್ಟಿ ದೋಷ ನಿವಾರಣೆಯಾಗುತ್ತದೆ.

ಹೌದು ಸಾಮಾನ್ಯವಾಗಿ ಕಷ್ಟಪಟ್ಟು ದುಡಿಯುವ ಕೆಲವರಲ್ಲಿ ಇಂಥದೊಂದು ನಂಬಿಕೆ ಇರುತ್ತದೆ ಅಂದರೆ ಆಧ್ಯಾತ್ಮಿಕದ ಕಡೆಗೆ ಒಲವು ಇಲ್ಲದಿರುವವರು ದೇವರನ್ನ ಆಚಾರವಿಚಾರಗಳ ನಂಬದೇ ಇರುವವರು ಈ ದೃಷ್ಟಿ ದೋಷ ಇವುಗಳನ್ನೆಲ್ಲಾ ನಂಬುವುದಿಲ್ಲ ಇನ್ನೂ ಮನೆಯಲ್ಲಿ ನಕಾರಾತ್ಮಕ ಶಕ್ತಿ ನೆಲೆಸಿದೆ ಅದರಿಂದಲೇ ಮನೆಯಲ್ಲಿ ಕೆಲವೊಂದು ಸಮಸ್ಯೆಗಳು ಎದುರಾಗುತ್ತಿದೆ ಇದನ್ನೆಲ್ಲಾ ನಂಬುವುದಿಲ್ಲ ಮತ್ತು ಅದಕ್ಕೆ ತಕ್ಕ ಪರಿಹಾರಗಳನ್ನು ಕೂಡ ಮಾಡಿಕೊಳ್ಳುವುದಿಲ್ಲ.

ಆದರೆ ದಿನದಿಂದ ದಿನಕ್ಕೆ ಮನೆಯಲ್ಲಿ ಸಂಕಷ್ಟಗಳು ತೊಂದರೆಗಳು ಹೆಚ್ಚುತ್ತಾ ಹೋಗುತ್ತೆ ಹೃದಯ ಸಮಸ್ಯೆಗಳು ಹೆಚ್ಚಾಗುತ್ತಾ ಹೋಗುತ್ತಾ ಇರುತ್ತದೆ ಅದಕ್ಕೆ ಏನು ಪರಿಹಾರ ಮಾಡಿಕೊಳ್ಳಬೇಕು ಎಂಬುದು ಮಾತ್ರ ಅವರಿಗೆ ತಿಳಿದಿರುವುದಿಲ್ಲ ಎಲ್ಲವೂ ಸರಿಹೋಗುತ್ತದೆ ಮುಂದೊಂದು ದಿನ ಅನ್ನುತ್ತವೆ ದಿನ ಕಳೆಯುತ್ತಾರೆ. ಆದರೆ ಅದು ಮುಂದಿನ ದಿನಗಳಲ್ಲಿ ಎಷ್ಟರ ಮಟ್ಟಿಗೆ ಮನೆಯನ್ನು ಆವರಿಸುತ್ತದೆ ಅಂದರೆ ಮನೆಯಲ್ಲಿರುವ ಸದಸ್ಯರ ಆರೋಗ್ಯದ ಮೇಲೆ ಕೆಟ್ಟ ಪ್ರಭಾವ ಬೀರುತ್ತದೆ.

ಹಾಗಾಗಿ ಇಂದಿನ ಲೇಖನದಲ್ಲಿ ನಾವು ಹೇಳುವ ಈ ಸರಳ ಪರಿಹಾರವನ್ನು ಮಾಡಿಕೊಂಡರೆ ಸಾಕು ಇದರಿಂದ ಮನೆಗೆ ಆಗಿರುವಂತಹ ದೃಷ್ಟಿದೋಷ ನಿವಾರಣೆಯಾಗುತ್ತದೆ ಮತ್ತು ಮನೆಯಲ್ಲಿ ಇರುವ ನೆಗೆಟಿವ್ ಎನರ್ಜಿ ನಿವಾರಣೆ ಆಗುತ್ತದೆ ಹಾಗಾದರೆ ಮಾಡುವ ಪರಿಹಾರದ ಬಗ್ಗೆ ತಿಳಿಯೋಣ ಬನ್ನಿ ಕೆಳಗಿನ ಲೇಖನಿಯಲ್ಲಿ.

ಹೌದು ಕೆಲವೊಂದು ಬಾರಿ ಮನೆಯಲ್ಲಿ ನಡೆಯುವ ಘಟನೆಗಳಿಗೆ ಕೈಕಾಲು ಓಡದಿರುವ ಹಾಗೆ ಆಗುತ್ತೆ ಅದಕ್ಕೆ ಏನು ಮಾಡಬೇಕು ಅಂತಾನೆ ಗೊತ್ತಾಗೋದಿಲ್ಲ ದೇವಸ್ಥಾನಗಳಿಗೆ ಹೋಗುತ್ತೇವೆ, ಮನೆಯಲ್ಲಿಯೂ ಕೆಲವೊಂದು ಪರಿಹಾರಗಳನ್ನು ಮಾಡಿಕೊಳ್ಳಲು ಮುಂದಾಗುತ್ತಾರೆ ಆದರೆ ಮನೆಗೆ ತಗಲಿರುವ ದೃಷ್ಟಿ ಮಾತ್ರ ಕಲಿಯುವುದಿಲ್ಲ.

ಈಗ ಮನೆಗೆ ಆಗಿರುವಂತಹ ಇಂತಹದ್ದೊಂದು ದೃಷ್ಟಿ ದೋಷ ನಿವಾರಣೆಗೆ ನಿಂಬೆಹಣ್ಣಿನ ಸಹಾಯದಿಂದ ಈ ಪರಿಹಾರವನ್ನು ಮಾಡಿಕೊಳ್ಳಿ ಇದನ್ನು ಮಾಡುವ ವಿಧಾನ ಮೊದಲಿಗೆ 2 ನಿಂಬೆ ಹಣ್ಣನ್ನು ತೆಗೆದುಕೊಳ್ಳಿ.ನಿಂಬೆ ಹಣ್ಣು ತೆಗೆದುಕೊಳ್ಳುವಾಗ ಆ ನಿಂಬೆಹಣ್ಣು ಹಳದಿ ಆಗಿ ಇರಬೇಕು ಅಂದರೆ ಪೂರ್ಣ ಹಣ್ಣಾಗಿರಬೇಕು ಮತ್ತು ನಿಂಬೆಹಣ್ಣಿನ ಮೇಲೆ ಗೆರೆ ಇರಬೇಕು, ಹೌದು ಆ ರೀತಿ ಗೆರೆ ಇದ್ದರೆ ಅಂದರೆ ನಿಂಬೆಹಣ್ಣಿನ ಮೇಲೆ ದಪ್ಪದಾದ ಒಂದೇ ಎಳೆಯ ಮಾರ್ಕ್ ರೀತಿ ಇರಬೇಕು ಅಂತಹ ನಿಂಬೆಹಣ್ಣಿನಲ್ಲಿ ಕೆಟ್ಟ ಶಕ್ತಿ ಕಳೆಯುವ ಶಕ್ತಿ ಇರುತ್ತದೆ ಎಂದು ಹೇಳಲಾಗುತ್ತದೆ.

ಈ ನಿಂಬೆ ಹಣ್ಣನ್ನು ತೆಗೆದುಕೊಂಡು ಒಂದಕ್ಕೆ ಪೂರ್ಣವಾಗಿ ಕುಂಕುಮ ದಿಂದ ಲೇಪ ಮಾಡಬೇಕು ಹೌದು ಕುಂಕುಮವನ್ನ ಪೇಸ್ಟ್ ಮಾಡಿಕೊಂಡು ಅದನ್ನು ನಿಂಬೆಹಣ್ಣಿಗೆ ಪೂರ್ಣವಾಗಿ ಲೇಪ ಮಾಡಬೇಕು ಮತ್ತೊಂದು ನಿಂಬೆಹಣ್ಣಿಗೆ ಕಣ್ಣಿಗೆ ಹಚ್ಚುವ ಕಾಡಿಗೆ ಅಂದರೆ ಕಣ್ಣುಕಪ್ಪು ಅದನ್ನು ಪೂರ್ಣವಾಗಿ ಲೇಪ ಮಾಡಿ ಇದನ್ನ ನಿಮ್ಮ ಬಲಗೈನಲ್ಲಿ ಇಟ್ಟುಕೊಂಡು ನಿಮ್ಮ ಮನೆಯ ಎಲ್ಲ ಕೋಣೆಗಳಿಗೂ ಹೋಗಿ ನಿಂಬೆಹಣ್ಣಿನ ತೂರಿಸಿಕೊಂಡು .

ಮತ್ತೆ ಮನೆಯಿಂದ ಆಚೆ ಹೋಗಿ ಯಾರು ಓಡಾಡುತ್ತಿರುವ ಜಾಗಕ್ಕೆ ಆ 2 ನಿಂಬೆ ಹಣ್ಣನ್ನು ಹೂತಿಟ್ಟು ಮತ್ತೆ ಹಿಂತಿರುಗಿ ನೋಡದೆ ಮನೆಗೆ ಬಂದು ಕೈಕಾಲು ತೊಳೆದುಕೊಂಡು ಮನೆಯೊಳಗೆ ಬರಬೇಕು.ಈ ಚಿಕ್ಕ ಪರಿಹರವನ್ನೂ ಗುರುವಾರ ಅಥವಾ ಭಾನುವಾರದ ರಾತ್ರಿ ಸಮಯದಲ್ಲಿ ಮಾಡುತ್ತ ಬಂದರೆ ಮನೆಗೆ ತಗುಲಿರುವ ದೃಷ್ಟಿದೋಷ ನಿವಾರಣೆಯಾಗುತ್ತದೆ.

Share This Article

ಓದುಗರ ಗಮನಕ್ಕೆ: ನಮ್ಮ ವೆಬ್ಸೈಟ್  ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.