ಕಣ್ಣಿನ ಸುತ್ತ ಕಪ್ಪಾಗಿದ್ದರೆ ಹಾಗು ಕುತ್ತಿಗೆಯ ಸುತ್ತ ಕಪ್ಪಾಗಿದ್ದರೆ ಈ ಒಂದು ಸಸ್ಯವನ್ನ ಹೀಗೆ ಬಳಸಿ ಸಾಕು ಕೆಲವೇ ನಿಮಿಷದಲ್ಲಿ ನಿವಾರಣೆ ಆಗುತ್ತೆ..

297

ನಮಸ್ಕಾರಗಳು ಪ್ರಿಯ ಸ್ನೇಹಿತರೆ ನಿಮಗೇನಾದರೂ ಕಣ್ಣಿನ ಸುತ್ತ ಕಪ್ಪು ಕಲೆಗಳು ಇದೆಯೇ ಅಥವಾ ನಿಮಗೇನಾದರೂ ಈ ಕುತ್ತಿಗೆಯ ಭಾಗದಲ್ಲಿ ಹಿಂಬದಿಯಲ್ಲಿ ತುಂಬಾನೇ ಕಪ್ಪಾಗಿದೆಯಾ ಹಾಗಾದರೆ ನೀವು ಈ ಪರಿಹಾರವನ್ನ ಮಾಡಿ ಇದರಿಂದ ಖಂಡಿತವಾಗಿಯೂ ನಿಮಗೆ ನ್ಯಾಚುರಲ್ ಆಗಿ ನಿಮ್ಮ ಸಮಸ್ಯೆಗೆ ಪರಿಹಾರ ದೊರೆಯುವುದರ ಜೊತೆಗೆ, ಯಾವುದೇ ತರಹದ ಅಡ್ಡ ಪರಿಣಾಮಗಳು ಚರ್ಮದ ಮೇಲೆ ಉಂಟಾಗದೆ ನೀವು ಈ ಕಪ್ಪು ಕಲೆ ಸಮಸ್ಯೆಯಿಂದ ಪರಿಹಾರವನ್ನು ಪಡೆದು ಕೊಳ್ತೀರಾ.

ಪ್ರಿಯ ಸ್ನೇಹಿತರೆ ಇವತ್ತಿನ ದಿವಸಗಳಲ್ಲಿ ಎಲ್ಲದಕ್ಕೂ ಕೂಡ ಎಲ್ಲ ಸಮಸ್ಯೆಗಳಿಗೂ ಕೂಡ ಎಲ್ಲಾ ಚರ್ಮ ಸಂಬಂಧಿ ಸಮಸ್ಯೆಗಳಿಗೂ ಕೂಡ ಮಾರುಕಟ್ಟೆಯಲ್ಲಿ ಹಲವು ವಿಧದ ಮಾತ್ರೆಗಳು ಕ್ರೀಮ್ಗಳು ಪರಿಹಾರಗಳು ದೊರೆಯುತ್ತದೆ ಆದರೆ ಇದ್ಯಾವುದೂ ಕೂಡ ನಮಗೆ ನ್ಯಾಚುರಲ್ ಆಗಿ ಪರಿಹಾರ ಕೊಡುವುದಿಲ್ಲ ಇದರಲ್ಲಿ ಸ್ವಲ್ಪ ಪ್ರಮಾಣದಲ್ಲಿ ಆದರೂ ಕೆಮಿಕಲ್ಸ್ ಗಳು ಮಿಕ್ಸ್ ಆಗಿರುತ್ತದೆ ಅದನ್ನು ನೀವು ತಿಳಿದುಕೊಳ್ಳಬೇಕು

ಆದರೆ ಕೆಲವೊಂದು ಸಮಸ್ಯೆಗಳಿಗೆ ಹಳ್ಳಿಕಡೆ ಕೊಡ್ತಾರಲ್ಲ ಮನೆಮದ್ದುಗಳು ಮತ್ತು ಹಳ್ಳಿ ಕಡೆ ಮಾಡ್ತಾರಲ್ವ ಕೆಲವೊಂದು ಮನೆಮದ್ದು ಪರಿಹಾರಗಳು ಅದರಲ್ಲಿ ಯಾವುದೇ ತರಹದ ರಾಸಾಯನಿಕ ಅಂಶಗಳು ಇರುವುದಿಲ್ಲ ನೋಡಿಅಂತಹ ಸಮಸ್ಯೆಗಳು ನಿಮ್ಮ ಆರೋಗ್ಯದ ಮೇಲೆ ಆಗಲಿ ನಿಮ್ಮ ಚರ್ಮದ ಮೇಲೆ ಆಗಲಿ ಯಾವುದೇ ತರಹದ ಅಡ್ಡಪರಿಣಾಮಗಳನ್ನು ಮಾಡದೆ ನಿಮ್ಮ ಸಮಸ್ಯೆಗೆ ಪರಿಹಾರವನ್ನು ಕೊಡುತ್ತದೆ.

ಇವತ್ತಿನ ಲೇಖನಿಯಲ್ಲಿ ನಾವು ಚರ್ಮ ಸಂಬಂಧಿ ತೊಂದರೆಯಾಗಿರುವ ಈ ಕತ್ತಿನ ಭಾಗದಲ್ಲಿ ಕಪ್ಪು ಕಲೆಗಳು ಕಣ್ಣಿನ ಸುತ್ತ ಇರುವ ಕಪ್ಪು ಕಲೆಗಳನ್ನು ನಿವಾರಣೆ ಮಾಡುವುದಕ್ಕೆ ಮಾಡಬಹುದಾದ ಸರಳ ಮನೆಮದ್ದು ತಿಳಿಸುತ್ತಿದ್ದೇವೆ. ಈ ಪರಿಹಾರವನ್ನು ಯಾವುದರಿಂದ ಮಾಡುತ್ತಿದ್ದೇವೆ ಅಂದರೆ ಬನ್ನಿ ಅದೇ ನ್ಯಾಚುರಲ್ ಆಗಿ ದೊರೆಯುವ ಈ ಹಾಲಿವಾಣ ಗಿಡದ ಎಲೆಯಿಂದ

ಹಾಲಿವಾಣ ಗಿಡ ಇದರ ಹೆಸರು ಕೇಳಿದ್ದೀರಾ ಇಲ್ಲಾಂದ್ರೆ ನೋಡಿ ಇದೊಂದು ಪ್ರಕೃತಿಯಲ್ಲಿ ಪ್ರಕೃತಿಯ ಭಾಗವಾಗಿರುವ ಸಣ್ಣಗಿಡ ಆಗಿರಬಹುದು ಇದರ ಎಲೆ ಎಂತಹ ಅದ್ಬುತ ಶಕ್ತಿ ಹೊಂದಿದೆ ಅಂದರೆ ಇದರ ಸಣ್ಣದಾದ ಎಲೆಯ ರಸವನ್ನು ತೆಗೆದುಕೊಂಡು ಕಣ್ಣಿನ ಸುತ್ತ ಆಗಿರುವ ಕಪ್ಪು ಕಲೆಗೆ ಹಚ್ಚಿ ನೋಡಿ, ನಿಮ್ಮ ಕಣ್ಣಿನ ಸುತ್ತ ಆಗಿರುವ ಕಪ್ಪು ಕಲೆಗೆ ಎಷ್ಟು ಬೇಗ ಪರಿಹಾರ ದೊರೆಯುತ್ತದೆ ಎಂದು

ಹೌದು ಈ ಕಣ್ಣಿನ ಸುತ್ತ ಇರುವ ಕಪ್ಪು ಕಲೆಗೆ ಅಥವಾ ಕುತ್ತಿಗೆಯ ಸುತ್ತ ಇರುವ ಕಪ್ಪು ಕಲೆಗೆ ಹಾಲಿವಾಣ ಗಿಡದ ಎಲೆಯ ರಸವನ್ನು ತೆಗೆದುಕೊಂಡು, ಅದನ್ನು ಜಜ್ಜಿ ಅದರಿಂದ ರಸವನ್ನು ಬೇರ್ಪಡಿಸಿ ಕೊಳ್ಳಬೇಕುಈಗ ಆ ರಸಕ್ಕೆ ಅರಿಶಿನ ಮಿಶ್ರಣ ಮಾಡಬಹುದು ಅಥವಾ ಕೊಬ್ಬರಿ ಎಣ್ಣೆ ಮಿಶ್ರಣ ಮಾಡಬಹುದು ನಿಮ್ಮ ಚರ್ಮಕ್ಕೆ ಯಾವುದು ಹೊಂದುತ್ತದೆಯೊ ಅದನ್ನ ಮಿಶ್ರ ಮಾಡಿ ಅದು ಗಂಧದ ಪುಡಿ ಆಗಲಿ ಅಥವಾ ಕಡಲೆಹಿಟ್ಟು ಆಗಲಿ ಈ ರಸರೊಂದಿಗೆ ಮಿಶ್ರಮಾಡಿ ಕುತ್ತಿಗೆಯ ಭಾಗಕ್ಕೆ ಲೇಪ ಮಾಡಿ.

ಕಣ್ಣಿನ ಸುತ್ತ ಲೇಪ ಮಾಡುವುದಾದರೆ ಆ ಎಲೆಯ ರಸಕ್ಕೆ ಸ್ವಲ್ಪವೇ ಸ್ವಲ್ಪ ನೀರನ್ನು ಮಿಶ್ರ ಮಾಡಿ ಬಳಿಕ ಕಣ್ಣಿನ ಸುತ್ತ ಲೇಪ ಮಾಡಿ ಬಳಿಕ ತಣ್ಣೀರಿನಿಂದ ಸ್ವಚ್ಚ ಮಾಡಿಇದನ್ನು ನೀವು ದಿನಬಿಟ್ಟು ದಿನ ಈ ಪರಿಹಾರವನ್ನು ಪಾಲಿಸುತ್ತ ಬಂದರೆ ಕಣ್ಣಿನ ಸುತ್ತ ಇರುವ ಕಲೆಯು ಬಹು ಬೇಗ ಪರಿಹಾರವಾಗುತ್ತದೆ ಮತ್ತು ಕಪ್ಪು ಕಲೆಗೆ ಅದಷ್ಟು ಬೇಗ ಪರಿಹಾರವನ್ನು ಪಡೆದುಕೊಳ್ಳಬಹುದು ನೀವು.