ಕನ್ನಡದ ಮುತ್ತು ರತ್ನ ಶುಭ ಪುಂಜ ಅವರ ಮದುವೆಯ ಮಧುರ ಕ್ಷಣಗಳು ಹೇಗಿತ್ತು ನೋಡಿ … ನೋಡೋಕೆ ನಿಮ್ಮ ಎರಡು ಕಣ್ಣು ಸಾಲದು

142

ಕನ್ನಡ ಚಿತ್ರರಂಗದಲ್ಲಿ ಕೆಲವೊಂದು ಸಿನಿಮಾಗಳಲ್ಲಿ ಅಭಿನಯ ಮಾಡುವ ಮೂಲಕ ತಮ್ಮದೇ ಆದ ಛಾಪು ಮೂಡಿಸಿದ ನಟಿ ಶುಭಾ ಪೂಂಜಾ ಅವರಿಗೆ ಸ್ವಲ್ಪ ದಿನಗಳ ಹಿಂದೆ ಮದುವೆಯಾಗಿದ್ದು, ತಾವು ಪ್ರೀತಿಸಿದ ಹುಡುಗನ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಶುಭಾ ಪೂಂಜಾ ಸದ್ಯ ಸಿನಿಮಾ ರಂಗದಿಂದ ದೂರವುಳಿದಿದ್ದಾರೆ. ಹೌದು ಕನ್ನಡ ಸಿನಿಮಾರಂಗದಲ್ಲಿ ಕೆಲವೊಂದು ಉತ್ತಮ ಸಿನಿಮಾಗಳಲ್ಲಿ ಅಭಿನಯ ಮಾಡುವ ಮೂಲಕ ಶುಭಾ ಪೂಂಜಾ ಕನ್ನಡ ಸಿನಿಮಾರಂಗದಲ್ಲಿ ಖ್ಯಾತಿ ಪಡೆದುಕೊಂಡಿದ್ದರು. ಬಳಿಕ ಇವರು ಆಯ್ಕೆ ಮಾಡಿಕೊಳ್ಳುವ ಕಥೆಗಳು ಫ್ಲಾಪ್ ಆಗುತ್ತಿದ್ದ ಕಾರಣ ಇವರು ಮಾಡುವ ಸಿನಿಮಾಗಳು ಅಷ್ಟಾಗಿ ಹಿಟ್ ಆಗುತ್ತಾ ಇರಲಿಲ್ಲ ಬಳಿಕ ಇವರಿಗೆ ಅವಕಾಶಗಳು ಕೂಡ ಕಡಿಮೆ ಆಗುತ್ತಾ ಬಂತು. ಆಗ ಸಮಯದಲ್ಲಿ ಸಿನಿಮಾರಂಗದಿಂದ ಕೊಂಚ ದೂರ ಉಳಿದಿದ್ದ ಶುಭಾ ಪೂಂಜಾ ಅವರು ಮತ್ತೆ ಅಭಿಮಾನಿಗಳ ಎದುರು ಬಂದದ್ದು ಬಿಗ್ ಬಾಸ್ ಕಾರ್ಯಕ್ರಮದ ಮೂಲಕ.

ಹಲವು ದಿನಗಳ ಕಾಲ ತೆರೆ ಮೇಲೆ ಎಲ್ಲಿಯೂ ಕಾಣಿಸಿಕೊಳ್ಳದ ಶುಭಾ ಪೂಂಜಾ ಅವರು ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಅವಕಾಶ ಪಡೆದು ತಮ್ಮ ಮದುವೆಯ ದಿನಾಂಕವನ್ನು ಮುಂದೂಡಿ ಈ ಕಾರ್ಯಕ್ರಮಕ್ಕೆ ತಾವು ಎಂದು ಪ್ರೂವ್ ಮಾಡಿ ಕೊಂಡಿದ್ದರೂ. ಮನೆಯ ಒಳಗೂ ಕೂಡ ಎಲ್ಲ ಸ್ಪರ್ಧಿಗಳ ಜೊತೆ ಒಳ್ಳೆಯ ಬಾಂಧವ್ಯವನ್ನು ಹೊಂದಿ ಚೆನ್ನಾಗಿ ಆಟವಾಡುತ್ತಾ ಮಗುವಿನಂತೆ ಮಾತನಾಡುತ್ತಾ ಎಲ್ಲರ ಮನಸ್ಸು ಗೆದ್ದು ಕರ್ನಾಟಕದ ಜನತೆಯ ಮನೆಮಾತಾಗಿದ್ದ ಶುಭಾ ಪೂಂಜಾ ಅವರಿಗೆ ಬಿಗ್ ಬಾಸ್ ಮನೆಯೊಳಗೆ ಬರುವ ಮುಂಚೆಯೇ ಎಂಗೇಜ್ ಮೆಂಟ್ ಸಹ ಆಗಿತ್ತು. ಅಂದು ತಮ್ಮ ಹುಡುಗನನ್ನು ಮಿಸ್ ಮಾಡಿಕೊಳ್ಳುತ್ತಾ ಮನೆಯೊಳಕ್ಕೆ ತಮ್ಮ ಹುಡುಗನ ಬಗ್ಗೆ ನೆನಪಾದಾಗಲೆಲ್ಲ ಮಾತನಾಡುತ್ತಾ ನಟಿ ಶುಭಾ ಪೂಂಜಾ ಅವರು ಮನೆಯೊಳಗೂ ಕೂಡ ಅಚ್ಚುಕಟ್ಟಾಗಿ ಆಟವಾಡಿ ಮನೆಯಿಂದ ಹೊರಬಂದಿದ್ದರು.

ಬಿಗ್ ಬಾಸ್ ಕಾರ್ಯಕ್ರಮದಲ್ಲಿ ತಾನು 4ತಿಂಗಳ ಗರ್ಭಿಣಿ ಈಗ ಅಂತ ಹೇಳುವ ಮೂಲಕ ಶಾಕ್ ಕೊಟ್ಟಿದ್ದ ಶುಭಾ ಪೂಂಜಾ ಅದು ನನ್ನ ಕನಸಿನಲ್ಲಿ ಅಂತ ಹೇಳಿ ಮನೆಯವರಿಗೆಲ್ಲ ಒಮ್ಮೆಲೆ ಶಾಕ್ ನೀಡಿದ್ದರು ಹಾಗೆ ಎಲ್ಲರ ಜೊತೆ ಚೆನ್ನಾಗಿ ಹೊಂದಿಕೊಂಡು ನಗುತ್ತಾ ಆಟವನ್ನು ಆಡುತ್ತಾ ಟಾಸ್ಕ್ ನಲ್ಲಿಯೂ ವಿಜೇತರಾಗುತ್ತಾರೆ. ಒಳ್ಳೆಯತನದಿಂದಲೇ ಆಡುತ್ತಾ ತಾನು ಏನು ಎಂದು ಪ್ರೂವ್ ಮಾಡಿಕೊಂಡು ಈ ವೇದಿಕೆಯಿಂದ ಹೊರ ಬಂದಿದ್ದ ನಟಿ ಶುಭಾ ಪೂಂಜಾ ಬಳಿಕ ಸ್ವಲ್ಪ ದಿನಗಳ ಕಾಲ ತಮ್ಮ ಹುಡುಗನ ಜೊತೆ ಸುತ್ತಾಡಿ ಸದ್ಯ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ದಾಂಪತ್ಯ ಜೀವನಕ್ಕೆ ಕಾಲಿಡುವ ಸಂಭ್ರಮದ ದಿನದಂದು ಮಾಡಿರುವ ಕೆಲವೊಂದು ವೀಡಿಯೊಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ ಹೌದು ಶುಭಾ ಪೂಂಜಾ ಅವರು ತಾವು ಇಷ್ಟಪಟ್ಟ ಹುಡುಗನ ಜೊತೆ ಮದುವೆ ಆಗಿದ್ದು ತನ್ನನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳುವ ಹುಡುಗ ತನಗೆ ಸಿಕ್ಕಿದ್ದಾನೆ ಅಂತಾ ಶುಭಾ ಪೂಂಜಾ ಅವರು ಬಿಗ್ ಬಾಸ್ ಮನೆಯೊಳಗೆ ಸಾಕಷ್ಟು ಬಾರಿ ಹೇಳಿಕೊಂಡಿದ್ದರು.

ತಮ್ಮ ಹುಡುಗರನ್ನು ಪ್ರೀತಿಯಿಂದ ಚಿನ್ನಿ ಬಾಂಬ್ ಅಂತ ಕರೆಯುತ್ತಿದ್ದ ಶುಭಾ ಪೂಂಜಾ ಅವರಿಗೆ ದಾಂಪತ್ಯ ಜೀವನ ಸುಖಮಯವಾಗಿರಲಿ ಹಾಗೂ ಶುಭಾ ಪೂಂಜಾ ಅವರ ಮದುವೆಯ ಸುಂದರ ಕ್ಷಣಗಳ ಈ ಕೆಲವೊಂದು ವೀಡಿಯೋಗಳು ನಿಮಗಾಗಿ ನೀವು ಕೂಡ ವಿಡಿಯೋ ನೋಡಿ ನಟಿ ಶುಭಾ ಪೂಂಜಾ ಅವರಿಗೆ ಶುಭ ಹಾರೈಸಿ ಮತ್ತೆ ಇವರು ಸಿನಿಮಾ ರಂಗಕ್ಕೆ ಬರ್ತಾರ ಅನ್ನೋದನ್ನ ನಾವು ಕಾದು ನೋಡಬೇಕಿದೆ ಇವರ ನಟನೆಯ ಯಾವ ಸಿನೆಮಾ ನಿಮಗೆ ಇಷ್ಟ ಅಂತ ಕಮೆಂಟ್ ಮೂಲಕ ಹಂಚಿಕೊಳ್ಳಿ ಧನ್ಯವಾದ…

 

LEAVE A REPLY

Please enter your comment!
Please enter your name here