ಕನ್ನಡ ತಿಂಡಿ ಮಾಡೋದ್ರಲ್ಲಿ ಖ್ಯಾತಿ ಸಿಹಿ ಕಹಿ ಚಂದ್ರು ರವರ ಇಬ್ಬರು ಮಕ್ಕಳ ಸಖತ್ ಡಾನ್ಸ್ ಹೇಗಿದೆ ನೋಡಿ.. ಅಬ್ಬಬ್ಬಾ ಇವರು ಕೂಡ ಯಾವ ಹೀರೋಯಿನ್ ಗಳಿಗೂ ಕಮ್ಮಿ ಇಲ್ಲ ಕಣ್ರೀ…

204

ಸಿಹಿಕಹಿ ಚಂದ್ರು ಅವರ ಮಕ್ಕಳು ನೋಡಿ ಎಷ್ಟು ಸೊಗಸಾಗಿ ನೃತ್ಯ ಮಾಡುತ್ತಿದ್ದಾರೆ ಹೌದು ಈ ಅಕ್ಕ ತಂಗಿಯ ಭಾಂದವ್ಯ ನೋಡುತ್ತಿದ್ದರೆ ಕಣ್ತುಂಬಿ ಬರುತ್ತದೆ. ಹಾಗಾದರೆ ಸಿಹಿಕಹಿ ಚಂದ್ರು ಅವರ ಮಕ್ಕಳ ಕುರಿತು ನೀವು ಕೂಡ ತಿಳಿಯಬೇಕಾ, ಇಲ್ಲಿದೆ ನೋಡಿ ಈ ಕುರಿತು ಹೆಚ್ಚಿನ ಮಾಹಿತಿ.

ಹೌದು ನಟ ಸಿಹಿಕಹಿ ಚಂದ್ರು ಇವರು ಕನ್ನಡ ಸಿನಿಮಾರಂಗಕ್ಕೆ ಕೊಟ್ಟಿರುವ ಕೊಡುಗೆ ಅಪಾರವಾದದ್ದು ಇವರು ಸಿನಿಮಾರಂಗದಲ್ಲಿ ಮಾತ್ರವಲ್ಲದೇ ಕಿರುತೆರೆಯಲ್ಲಿಯೂ ಕೂಡ ಅಪಾರ ಯಶಸ್ಸು ಪಡೆದುಕೊಂಡಿರುವಂತಹ ನಟ ಸಿಹಿಕಹಿ ಚಂದ್ರು ನಟರಾಗಿ ಜೊತೆಗೆ ಪೋಷಕ ಪಾತ್ರಗಳಲ್ಲಿ ಅಭಿನಯಿಸುವ ಮೂಲಕ ಅಪಾರ ಅಭಿಮಾನಿಗಳ ಮನ ಗೆದ್ದಿದ್ದಾರೆ. ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸುವ ನಟ ಸಿಹಿಕಹಿ ಚಂದ್ರು ಅವರು ಕಿರುತೆರೆಯಲ್ಲಿ ನಿರ್ದೇಶಕರಾಗಿ ಜೊತೆಗೆ ನಟರಾಗಿ ಕೂಡ ಅಭಿನಯ ಮಾಡಿದ್ದು ನಿರೂಪಕರಾಗಿಯೂ ಕೂಡ ತಮ್ಮದೇ ಆದ ಸ್ವಂತ ಕುಕ್ಕರಿ ಶೋ ಅನ್ನು ಕೂಡ ನಡೆಸುತ್ತಿದ್ದಾರೆ ಸಿಹಿಕಹಿ ಚಂದ್ರು

ಬಹಳಷ್ಟು ಮಂದಿಗೆ ನಟ ಸಿಹಿಕಹಿ ಚಂದ್ರು ಅವರಿಗೆ ಯಾಕೆ ಸಿಹಿ ಕಹಿ ಎಂಬ ಹೆಸರು ಬಂತು ಅನ್ನೋದೇ ಗೊತ್ತಿಲ್ಲ. ಹೌದು ಸಾಮಾನ್ಯವಾಗಿ ಯಾವುದೇ ನಟನಾಗಲೀ ನಟಿಯರಾಗಲಿ ಯಾವುದೇ ಕಲಾವಿದರುಗಳಾಗಲೀ ಅವರು ಅಭಿನಯಿಸುವ ಪಾತ್ರಗಳ ಮೂಲಕ ಅವರನ್ನು ಜನರು ಹೆಚ್ಚಾಗಿ ಗುರುತಿಸುತ್ತಾರೆ ಹಾಗಾಗಿ ನಟ ಸಿಹಿಕಹಿ ಚಂದ್ರು ಅವರು ಕೂಡ ಸಿಹಿ ಕಹಿ ಎಂಬ ಧಾರಾವಾಹಿಯಲ್ಲಿ ಅಭಿನಯ ಮಾಡುತ್ತಿದ್ದ ಕಾರಣ ಅವರನ್ನು ಸಿಹಿಕಹಿ ಚಂದ್ರು ಎಂದೂ ಜನರು ಇವತ್ತಿಗೂ ಅವರನ್ನು ಗುರುತಿಸುತ್ತಾರೆ .

ಅಷ್ಟೇ ಅಲ್ಲ ಅದೇ ಧಾರಾವಾಹಿಯಲ್ಲಿ ಗೀತಾ ಅವರು ಕೂಡಾ ಅಭಿನಯಿಸುತ್ತಿದ್ದು, ಅವರಿಗೂ ಕೂಡ ಸಿಹಿಕಹಿ ಗೀತಾ ಅಂತಾನೇ ಹೆಸರು ಬಂದಿದೆ. ಅಂದು ಸಿಹಿ ಕಹಿ ಧಾರಾವಾಹಿಯಲ್ಲಿ ಅಭಿನಯಿಸುವಾಗ ಚಂದ್ರು ಮತ್ತು ಗೀತಾ ಅವರು ಸ್ನೇಹಿತರಾಗಿದ್ದರು ಬಳಿಕ 1990ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿ ಇವರಿಗೆ ಇಬ್ಬರು ಹೆಣ್ಣುಮಕ್ಕಳು ಒಬ್ಬರ ಹೆಸರು ಹಿತಾ ಚಂದ್ರಶೇಖರ್ ಮತ್ತೊಬ್ಬರ ಹೆಸರು ಖುಷಿ ಚಂದ್ರಶೇಖರ್.

ಹಿತಾ ಚಂದ್ರಶೇಖರ್ ಅವರು ಚಂದನವನದಲ್ಲಿ ನಟಿಯಾಗಿಯೂ ಕೂಡ ಅಭಿನಯಿಸಿದ್ದಾರೆ ಹಾಗೂ ಜಾಹೀರಾತುಗಳಲ್ಲಿಯೂ ಕೂಡ ಕಾಣಿಸಿಕೊಳ್ಳುವ ಹಿತ ಕಿರುತೆರೆಯಲ್ಲಿ ಸದ್ಯ ಧಾರಾವಾಹಿಗಳಲ್ಲಿಯೂ ಕೂಡ ಬ್ಯುಸಿಯಾಗಿದ್ದಾರ ಮತ್ತು ಖುಷಿ ಚಂದ್ರಶೇಖರ್ ವಿದ್ಯಾಭ್ಯಾಸ ನಡೆಸುತ್ತಿದ್ದು ಈ ಇಬ್ಬರು ಅಕ್ಕ ತಂಗಿಯರು ಬಹಳ ಒಳ್ಳೆಯ ಬಾಂಧವ್ಯವನ್ನ ಹೊಂದಿದ್ದಾರೆ ಮತ್ತು ಇವರಿಬ್ಬರೂ ಕೂಡ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಆ್ಯಕ್ಟಿವ್ ಇದು ಸೋಶಿಯಲ್ ಮೀಡಿಯಾ ಇನ್ ಫ್ಲುಯೆನ್ಸರ್ ಆಗಿದ್ದಾರೆ. ಹಿತಾ ಚಂದ್ರಶೇಖರ್ ಅವರು ಚಂದನವನದಲ್ಲಿ ನಟರಾಗಿರುವ ಕಿರಣ್ ಶ್ರೀನಿವಾಸ್ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಮುಂಬೈನಲ್ಲಿ ಸೆಟಲ್ ಆಗಿದ್ದಾರೆ.

ಅಕ್ಕ ತಂಗಿ ಇಬ್ಬರೂ ಹೆಚ್ಚಾಗಿ ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಎದ್ದು ಇವರು ಆಗಾಗ ಮಾಡುವ ಕೆಲವೊಂದು ವೀಡಿಯೊಗಳು ಮತ್ತು ಬ್ಯೂಟಿ ರಿಲೇಟೆಡ್ ವಿಡಿಯೊಗಳು ಹಾಗೆ ಹಿತ ಜನರನ್ನು ಪ್ರೋತ್ಸಾಹಿಸುವ ಪ್ರಯತ್ನವನ್ನು ಮಾಡುವಂತಹ ಕೆಲವೊಂದು ಗ್ರಾಟಿಟ್ಯೂಡ್ ಎಂಬ ವೀಡಿಯೊಗಳು ಜನರಿಗೆ ಬಹಳ ಇಷ್ಟವಾಗಿ ಜನರಿಗೆ ಒಳ್ಳೆಯ ಪ್ರೋತ್ಸಾಹ ವನ್ನು ಕೂಡ ನೀಡುತ್ತಿದೆ. ಖುಷಿ ಚಂದ್ರಶೇಖರ್ ಕೂಡ ಕೆಲವೊಂದು ಟ್ರೆಂಡಿ ಹಾಡುಗಳಿಗೆ ಕೊರಿಯಾಗ್ರಫಿ ಮಾಡುವ ಮೂಲಕ ತಮ್ಮ ಡಾನ್ಸ್ ನಿಂದಲೇ ಬಹಳಷ್ಟು ಮಂದಿಯ ಮನಸ್ಸನ್ನು ಗೆದ್ದಿದ್ದಾರೆ ಹಾಗೂ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚಿನ ಫಾಲೋವರ್ಸ್ ಅನ್ನು ಕೂಡ ಹೊಂದಿದ್ದಾರೆ.

ಈಗ ಅಕ್ಕ ತಂಗಿಯರು ತಾವೇ ಕೋರಿಯಾಗ್ರಫಿ ಮಾಡಿ ಡ್ಯಾನ್ಸ್ ಮಾಡಿರುವಂತಹ ಈ ವಿಡಿಯೋ ಭಾರಿ ಸೊಗಸಾಗಿದ್ದು ಇವರ ಈ ಡಾನ್ಸ್ ನೋಡುತ್ತಿದ್ದರೆ ನಿಜಕ್ಕೂ ಮುಖದ ಮೇಲೆ ಸಂತಸ ಮೂಡುತ್ತದೆ ಆ ವೀಡಿಯೋ ನೀವು ಕೂಡ ನೋಡ್ಬೇಕಾ ಹಾಗಾದ್ರೆ ತಪ್ಪದೆ ವೀಡಿಯೋ ವೀಕ್ಷಿಸಿ ಮತ್ತು ಈ ಅಕ್ಕ ತಂಗಿಯ ಬಾಂಧವ್ಯದ ಕುರಿತು ನಿಮ್ಮ ಅನಿಸಿಕೆ ಕಮೆಂಟ್ ಮಾಡಿ…